ರಂಗಣ್ಣನವರ ಅಸಲಿ ಬದುಕು ಹೇಗಿತ್ತು ಗೊತ್ತಾ…. ಎಚ್ಚರ ರಂಗನಾಥ್ ಈ ಹೆಸರು ಅಷ್ಟಾಗಿ ತುಂಬಾ ಜನರಿಗೆ ಗೊತ್ತಿಲ್ಲ ಆದರೆ ಪಬ್ಲಿಕ್ ಟಿವಿ ರಂಗಣ್ಣ ಅಂದರೆ ಮಾತ್ರ ಎಲ್ಲರ ಕಿವಿ ನೆಟ್ಟಗಾಗುತ್ತದೆ ಏಕೆಂದರೆ ಅವರ ಮಾತಿಗೆ ಅಷ್ಟು ಪವರ್ ಇದೆ ಟಿವಿ ಮುಂದೆ ಕುಳಿತರೆ ಸಾಕು ನ್ಯೂಸ್ ಗಿಂತ ಹೆಚ್ಚಾಗಿ ರಂಗಣ್ಣನವರ ಮಾತು ಕೇಳುವುದಕ್ಕೆ ಎಂದು ಕುಳಿತಿರುತ್ತಿವಿ.

WhatsApp Group Join Now
Telegram Group Join Now

ಆದರೆ ರಂಗಣ್ಣ ಅವರ ಬಗ್ಗೆ ನಿಮಗೆ ಎಷ್ಟು ಗೊತ್ತು ಇಷ್ಟು ದೊಡ್ಡ ಮಟ್ಟದಲ್ಲಿ ಪಬ್ಲಿಕ್ ಟಿವಿ ಅನ್ನು ಸ್ಥಾಪನೆ ಮಾಡಿರುವಂತಹ ರಂಗಣ್ಣನವರಿಗೆ ಇಂಗ್ಲೀಷನ್ನು ಓದುವುದಕ್ಕೂ ಕೂಡ ಬರುತ್ತಿರಲಿಲ್ಲ ಅವಮಾನ ಮಾಡುತ್ತಾರೆ ಕೆಲವೊಂದಷ್ಟು ಜನ ಆಡಿಕೊಳ್ಳುತ್ತಾರೆ ರಂಗಣ್ಣವರು ಇನ್ನೆಲ್ಲೋ ರಿಜಿಸ್ಟರ್ ಮ್ಯಾರೇಜ್ ಆಗುತ್ತಾರೆ ಇನ್ನೆಲ್ಲೋ ದನ ಮೇಯಿಸುತ್ತಾರೆ ಏನೇನು ಆಸೆಗಳು.

ಇದ್ದರೂ ಎಲ್ಲವನ್ನೂ ತ್ಯಾಗ ಮಾಡುತ್ತಾರೆ ಯಾರ್ಯಾರೋ ಬಳಿಯೊ ಹಣ ಕೇಳುತ್ತಾರೆ ಈ ರೀತಿ ರಂಗಣ್ಣ ಅವರ ಬಗ್ಗೆ ನಾವು ತಿಳಿದುಕೊಳ್ಳಬೇಕಾಗಿರುವಂತಹ ಅಂಶಗಳು ತುಂಬಾನೇ ಇದೆ ಅವರ ಬಗ್ಗೆ ನಿಮಗೆ ತಿಳಿಸಬೇಕು ಎಂದು ವಿಷಯಗಳನ್ನು ಹುಡುಕುತ್ತಾ ಹೋದಾಗ ನನಗೆ ತುಂಬಾ ಬೇಜಾರಾಯ್ತು ಏಕೆಂದರೆ ಅವರ ಬಗ್ಗೆ ಅವರು ಎಲ್ಲಿಯೂ ಕೂಡ ಹೇಳಿಕೊಂಡಿಲ್ಲ.

ಕೆಲವೊಂದಿಷ್ಟು ಮಾಹಿತಿಗಳು ಇಲ್ಲ ಕೊನೆಗೆ ವಿಕಿಪೀಡಿಯಾದಲ್ಲಿ ಕೂಡ ಏನು ಬರೆದೆ ಇಲ್ಲ ಆದರೂ ನಿಮಗೆ ತಿಳಿಸಲೇಬೇಕು ಎಂದು ಅಂದುಕೊಂಡಿದ್ದೇನೆ ಹಾಗಾಗಿ ಅಲ್ಲಿ ಇಲ್ಲಿ ಹುಡುಕಾಡಿ ತಡಕಾಡಿ ಅವರ ಇಂಚಿಂಚು ಮಾಹಿತಿಯನ್ನು ಕಲೆಹಾಕಿ ಈ ವಿಡಿಯೋವನ್ನು ಮಾಡಿದ್ದೇನೆ. ರಂಗಣ್ಣ ಅವರ ನಿಜವಾದ ಹೆಸರು ಹೆಬ್ಬಾಳೆ ರಾಮಕೃಷ್ಣಯ್ಯ ರಂಗನಾಥ್ ಇವರು ಮೇ 12 1966ರಂದು.

ಮೈಸೂರಿನ ರೈಲ್ವೆ ಆಸ್ಪತ್ರೆಯಲ್ಲಿ ಜನಿಸುತ್ತಾರೆ ರಂಗಣ್ಣ ಅವರಿಗೆ ನಾಲ್ಕು ಜನ ಅಕ್ಕ-ತಂಗಿಯರು ಇಬ್ಬರು ಅಣ್ಣ ತಮ್ಮಂದಿರು ರಂಗಣ್ಣ ಅವರ ತಂದೆ ರಾಮಕೃಷ್ಣಯ್ಯ ಇವರು ರೈಲ್ವೆ ಇಲಾಖೆಯಲ್ಲಿ ಕೆಲಸವನ್ನು ಮಾಡುತ್ತಿದ್ದರು ರಂಗಣ್ಣವರ ತಾಯಿ ಲೀಲಾ ರಂಗಣ್ಣನವರು ಬಾಲ್ಯದಲ್ಲಿ ತುಂಬಾ ಚೇಷ್ಟೆ ಮಾಡುತ್ತಿದ್ದರಂತೆ ರಂಗಣ್ಣ ಅವರ ಚೇಷ್ಟೆಯನ್ನು ಕಂಡು ಅವರ.

ತಂದೆ ಹೊಡೆಯುವುದಕ್ಕೆ ಎಂದು ಬಂದಾಗ ರಂಗಣ್ಣ ಅವರು ಅಪ್ಪನ ಕೈಗೆ ಸಿಗದಂತೆ ಓಡಿ ಹೋಗುತ್ತಿದ್ದರು ಆದರೂ ಕೆಲವೊಂದು ಬಾರಿ ಅಪ್ಪನ ಕೈಗೆ ಸಿಕ್ಕಿಹಾಕಿಕೊಂಡು ಚೆನ್ನಾಗಿ ಏಟುಗಳನ್ನು ತಿನ್ನುತ್ತಿದ್ದರಂತೆ ಇನ್ನು ರಂಗಣ್ಣನವರು ಮೂಲತಃ ಮೈಸೂರಿನವರೇ ಆಗಿದ್ದರಿಂದ ಭಾರತಿ ಸ್ತ್ರೀ ಸಮಾಜ ಎನ್ನುವಂತಹ ಒಂದು ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ.

ಓದುತ್ತಾರೆ ಇನ್ನೊಂದು ವಿಷಯ ಏನು ಎಂದರೆ ಸ್ನೇಕ್ ಶಾಮ ಅವರು ಕೂಡ ರಂಗಣ್ಣನವರ ಕ್ಲಾಸ್ಮೇಟ್ ಆಗಿದ್ದರು ರಂಗಣ್ಣನವರು ಶಾಲೆಯಲ್ಲಿಯೂ ಕೂಡ ತುಂಬಾ ತುಂಟರಾಗಿದ್ದರು ಕೆಲವೊಂದು ಬಾರಿ ಶಾಲೆಯಿಂದ ಮನೆಗೆ ಬೇಗ ಹೋಗಬೇಕು ಎಂದು ಶಾಲೆಯಲ್ಲಿ ಇದ್ದಂತಹ ಗಡಿಯಾರದ ಮುಳ್ಳುಗಳನ್ನು ಮುಂದಕ್ಕೆ ತಿರುಗಿಸಿದ್ದು ಕೂಡ ಉಂಟು.

ಜಾರುಬಂಡಿಗಳನ್ನು ಆಡುತ್ತ ಚಡ್ಡಿಯನ್ನು ಹರಿದಾ ಹಾಕಿಕೊಂಡು ಮನೆಗೆ ಹೋಗುತ್ತಿದ್ದರು ರಂಗಣ್ಣನವರು ಕನ್ನಡ ಮಾಧ್ಯಮದಲ್ಲಿ ಓದಿದ್ದರಿಂದ ಇಂಗ್ಲೀಷ್ ನಲ್ಲಿ ಕೆಲವು ಪದಗಳನ್ನು ಓದುವುದಕ್ಕೆ ಬರುತ್ತಾ ಇರಲಿಲ್ಲ ಆದರೂ ಹೇಗೋ ಶಾಲೆಯಲ್ಲಿ ಮುಗಿಸಿ ಕಾಲೇಜನ್ನು ಸಹ ಮುಗಿಸಿ ಜರ್ನಲಿಸಂ ಕಡೆಗೆ ಅವರ ಒಲವನ್ನು.

ತೋರಿಸಿದರು ಇದರಿಂದ ರಂಗಣ್ಣನವರು ಮಾಧ್ಯಮದಲ್ಲಿ ಕೆಲಸ ಮಾಡುವ ಆಸೆಯಿಂದ ಮೈಸೂರಿನಿಂದ ಬೆಂಗಳೂರಿಗೆ ಬಂದು ಕರ್ನಾಟಕದ ಸುಪ್ರಸಿದ್ಧ ವಾರ್ತಾಪತ್ರಿಕೆ ಆದಂತಹ ಕನ್ನಡಪ್ರಭದಲ್ಲಿ ವರದಿಗಾರರಾಗಿ ಕೆಲಸಕ್ಕೆ ಸೇರುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god