ರಾಜಕಾರಣಿಗಳು ಕೊಟ್ಟ ಕುಕ್ಕರ್ ತಗೊಂಡ್ರೆ ಮನೇನೆ ಬ್ಲಾಸ್ಟ್ ಆಗುತ್ತೆ ಹುಷಾರ್…ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ರಾಜ್ಯದಲ್ಲಿ ಚುನಾವಣೆಗೆಂದು ಅಬ್ಬಬ್ಬಾ ಅಂದರೂ ಎರಡು ತಿಂಗಳು ಬಾಕಿ ಇದೆ ಯಾವತ್ತೂ ಎಂದಿಗೂ ನಿಮ್ಮ ಮನೆಯ ಬಳಿ ಬರದೇ ಇದ್ದಂತಹ ಯಾವತ್ತು ನಿಮ್ಮ ಮನೆಯನ್ನೇ ನೋಡದಂತಹ ರಾಜಕೀಯ ನಾಯಕರು ಈಗ ನಿಮ್ಮ ಮನೆಯ ಬಳಿ ಬರಲು.
ಶುರು ಮಾಡಿಕೊಂಡಿದ್ದಾರೆ ಅಮ್ಮ ತಾಯಿ ಎಂದು ನಮಸ್ಕಾರ ಮಾಡುತ್ತಾರೆ ನಿಮಗೆ ಆಮೀಷ ಒಡ್ಡುವಂತಹ ಕೆಲಸವನ್ನು ಮಾಡುತ್ತಾರೆ ಸೀರೆ ಕೊಡುವುದು ಕುಕ್ಕರ್ ಕೊಡುವುದು ಟಿವಿ ಹಂಚುವುದು ಇಂತಹ ಕೆಲಸವನ್ನು ಸಾಕಷ್ಟು ಕಡೆಗಳಲ್ಲಿ ಮಾಡುತ್ತಿದ್ದಾರೆ ಈ ರೀತಿಯಾಗಿ ಏನಾದರೂ ಮಾಡುವುದಕ್ಕೆ ಬಂದರೆ ಅವರ ಮುಖಕ್ಕೆ ತೆಗೆದು ಎಸಿರಿ ಏಕೆಂದರೆ ನಿಮ್ಮಂತೆ.
ಆಮಿಷ ಒಡ್ಡಿ ನಿಮ್ಮನ್ನು ಖರೀದಿ ಮಾಡುವಂತಹ ಕೆಲಸವನ್ನು ಮಾಡುತ್ತಿದ್ದಾರೆ ನೀವು ಕುಕ್ಕರ್ ಟಿವಿ ಸೀರೆ ತೆಗೆದುಕೊಂಡು ಅವರಿಗೆ ಏನಾದರೂ ವೋಟ್ ಹಾಕಿದರೆ ಅವರನ್ನು ಪ್ರಶ್ನೆ ಮಾಡುವಂತಹ ಯಾವುದೇ ನೈತಿಕತೆ ನಿಮಗೂ ಕೂಡ ಇರುವುದಿಲ್ಲ,ನಾನು ಇವತ್ತು ಕುಕ್ಕರ್ ನ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಏಳುತ್ತೇನೆ,ಈ ಜನನಾಯಕರು ಏನು ಮಾಡುತ್ತಿದ್ದಾರೆ.
ಗೊತ್ತಾ ನಿಜವಾಗಲೂ ಹೇಳುತ್ತೇನೆ ಅವರಿಗೆ ಕಾಳಜಿ ಇದ್ದಿದ್ದರೆ ನಿಮ್ಮ ಬಗ್ಗೆ ಜವಾಬ್ದಾರಿ ಇದ್ದಿದ್ದರೆ ಅವರು ಇಂತಹ ಕೆಲಸವನ್ನು ಮಾಡುವುದಕ್ಕೆ ಹೋಗುತ್ತಿರಲಿಲ್ಲ ಈಗ ನಿಮ್ಮ ಪ್ರಾಣ ತೆಗೆಯಲು ಹೊರಟಿದ್ದಾರೆ ನಮ್ಮ ಜನನಾಯಕರು ಈ ಕುಕ್ಕರ್ ವಿಷಯದಲ್ಲಿ ಅಸಲಿ ವಿಚಾರ ಏನು ಎನ್ನುವುದನ್ನು ಹೇಳುತ್ತೇನೆ ಕೇಳಿ ಒಂದು 5 ಲೀಟರ್ ಕುಕ್ಕರ್ ಗೆ ಕಡಿಮೆ ಎಂದರು ಕೂಡ 1,200 ರಿಂದ.
1,500 ಬೆಲೆ ಬಾಳುತ್ತದೆ ಕುಕ್ಕರ್ ಎಂದರೆ ಅದು ಸಾಮಾನ್ಯವಾಗಿ ಕುಕ್ಕರ್ ಗೆ ತುಂಬಾನೇ ಸೇಫ್ಟಿ ಮೆಜರ್ಮೆಂಟ್ ಇರಬೇಕು ಏಕೆಂದರೆ ನಾವು ತುಂಬಾ ಕಡೆಗಳಲ್ಲಿ ಗಮನಿಸಿದ್ದೇವೆ ಈ ಕುಕ್ಕರ್ ಬ್ಲಾಸ್ಟ್ ಆಗಿ ಗಾಯವಾಯಿತು ಕುಕ್ಕರ್ ಬ್ಲಾಸ್ಟ್ ಆಗಿ ಎಷ್ಟೋ ಕಡೆಗಳಲ್ಲಿ ಪ್ರಾಣವೇ ಹೋಗಿದೆ ಬೇರೆ ಬೇರೆ ರೀತಿಯ ಅನಾಹುತ ಆಗಿದೆ ಹೀಗಾಗಿ ಕುಕ್ಕರ್ ತಯಾರಾಗಿ ನಮ್ಮ ಕೈಗೆ ಸೇರಬೇಕೆಂದರೆ ಅದರ.
ನಡುವೆ ಸಾಕಷ್ಟು ಪ್ರಕ್ರಿಯೆ ಆಗುತ್ತದೆ ತುಂಬಾ ಸುರಕ್ಷಿತವಾಗಿದೆ ಎಂದು ನೋಡಿಕೊಂಡು ಒಂದು ಐಎಸ್ಐ ಮಾರ್ಕನ್ನ ಹಾಕಿ ನಮಗೆ ಕಳಿಸಿಕೊಡುತ್ತಾರೆ ಅಂದರೆ ಇದು ತುಂಬಾ ಸುರಕ್ಷಿತವಾಗಿದೆ ಯಾವುದೇ ಕಾರಣಕ್ಕೂ ಬ್ಲಾಸ್ಟ್ ಆಗುವುದಿಲ್ಲ ಇನ್ನೊಂದು ಏನು ಸಮಸ್ಯೆ ಆಗುವುದಿಲ್ಲ ಎಂದು ಅಷ್ಟೆಲ್ಲ ಮಾಡಿದರೂ ಕೂಡ ಯಾವಾಗಲಾದರೂ ಒಂದು ಬಾರಿ ಬ್ಲಾಸ್ಟ್.
ಆಗುವ ಸಾಧ್ಯತೆ ಇರುತ್ತದೆ ಕುಕ್ಕರ್ ಅಂದರೆ ಒಂದು ಒತ್ತಡವನ್ನು ತಡೆದುಕೊಳ್ಳುವ ವಸ್ತು ಅದು ಸ್ವಲ್ಪ ಎಡವಟ್ಟಾದರೂ ಏನು ಬೇಕಾದರೂ ಆಗುವ ಸಾಧ್ಯತೆ ಇರುತ್ತದೆ ಆದರೆ ರಾಜಕೀಯ ನಾಯಕರು ಏನು ಮಾಡುತ್ತಿದ್ದಾರೆ ಗೊತ್ತಾ ಹೋಲ್ ಸೇಲ್ ಆಗಿ ಕುಕ್ಕರ್ ಗಳಿಗೆ ಆರ್ಡರ್ ಕೊಡುತ್ತಿದ್ದಾರೆ 150 ರೂಪಾಯಿ 200 ರೂಪಾಯಿ ಕುಕ್ಕರ್ ಅಂದರೆ ಇವರ ಒಂದು ಕುಕ್ಕರ್ ಗೆ ಬೆಲೆ ರೂ.
100 ಇಂದ 200 ರೂಪಾಯಿ ಕಡಿಮೆ ಅಂದರೂ ನಾನು ಹೇಳಿದ ಹಾಗೆ 5 ಲೀಟರ್ ಕುಕ್ಕರ್ ಗೆ 1,200 ರಿಂದ 1,500 ರವರೆಗೆ ಇರುತ್ತದೆ ಆದರೆ ಇವರು ಕೊಡುತ್ತಿರುವುದು ಎಷ್ಟು ಮತ್ತೆ ಮತ್ತೆ ಹೇಳುತ್ತಿದ್ದೇನೆ 150 ರಿಂದ 200 ರೂಪಾಯಿ ಈ ಕಾಲದಲ್ಲಿ ನಿಮಗೆ 150 ರೂಪಾಯಿಗೆ ಚಿಕ್ಕ ಡಬ್ಬಿ ಕೂಡ ಬರುವುದಿಲ್ಲ.
ಅಂತಹದರಲ್ಲಿ 150 ರೂಪಾಯಿಗೆ ಪ್ರೆಶರ್ ತಡೆದುಕೊಳ್ಳುವಂತಹ 5 ಲೀಟರ್ ಕುಕ್ಕರನ್ನು ಕೊಡುತ್ತಿದ್ದಾರೆ ಎಂದರೆ ನೀವು ಯೋಚನೆ ಮಾಡಿ ಏನು ಆಗಬಹುದು ಆ ಕುಕ್ಕರ್ ಅನ್ನು ಬಳಸಿದರೆ ಎಂದು ಹೇಳಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.