ವಿನಯ್ ಗುರೂಜಿ ಜನರಿಗೆ ಮೋಸ ಮಾಡ್ತಿದ್ದಾರಾ?ಅಸಲಿ ಸತ್ಯ ಏನು? ಗುರೂಜಿ ಹೇಳಿದ್ದೆಲ್ಲ ಸತ್ಯ ಆಗುತ್ತಾ? ಇಂಜಿನಿಯರ್ ಗುರುಜಿ ಆಗಿದ್ದೆಗೆ?ವಿನಯ್ ಗುರೂಜಿ ವಯಸ್ಸು 34 ವರ್ಷ ಅಷ್ಟೇ ಆದರೆ ಇಡೀ ರಾಜ್ಯದಾತ್ಯಂತ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಪ್ರತಿದಿನ ಟಿವಿ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚೆ ಆಗುತ್ತಾನೆ ಇರುತ್ತಾರೆ ಅವರ ಒಂದಲ್ಲ ಒಂದು ವಿಡಿಯೋ ವೈರಲ್ ಆಗುತ್ತಿರುತ್ತದೆ. ಸಾಕಷ್ಟು ವಿವಾದಗಳು ಸಹ ಅವರ ಸುತ್ತ ಸತ್ತುವರಿಯುತ್ತದೆ .ಇವರಿಗಿಂತ ಎರಡು ಮೂರು ಪಟ್ಟು ವಯಸ್ಸಾಗಿರುವಂತಹ ದೇವೇಗೌಡರಿಂದ ಸೇರಿ ಬೇರೆ ಬೇರೆ ರಾಜ್ಯದ ರಾಜಕಾರಣಿಗಳು ಸಹ ಘಟಾನು ಘಟಿಗಳು ಇವರ ಭಕ್ತರು ಇವರ ಫಾಲೋವರ್ಸ್ ಅಷ್ಟು ಮಾತ್ರವಲ್ಲದೆ ಅವರ ಪಾದ ಪೂಜೆಯನ್ನು ಮಾಡಿ ನಮಸ್ಕಾರ ಮಾಡಿ ಇವರು ಹೇಳಿದ ಹಾಗೆ ಕೇಳುತ್ತಾರೆ.ಹಾಗಾದರೆ ಈ ವಿನಯ್ ಗುರೂಜಿ ಯಾರು ವಿನಯ್ ಗುರೂಜಿ ಆಶ್ರಮದ ಹೆಸರಲ್ಲಿ ಜನರಿಗೆ ಮೋಸ ಮಾಡುತ್ತಿದ್ದಾರಾ.ಅಸಲಿಗೆ ಆಶ್ರಮದಲ್ಲಿ ನಡೆಯುತ್ತಿರುವುದಾದರೂ ಏನು ಯಾವ ಕಾರಣಕ್ಕಾಗಿ ಈ ಮನುಷ್ಯನ ಸುತ್ತ ವಿವಾದಗಳು ಸುತ್ತು ಬರುತ್ತಿದೆ.

ಇಂಜಿನಿಯರ್ ಆಗಿದ್ದಂತಹ ಈ ವ್ಯಕ್ತಿ ಇದ್ದಕ್ಕಿದ್ದ ಹಾಗೆ ಸ್ವಾಮೀಜಿ ಪಟ್ಟವನ್ನ ಅಥವಾ ಅವದೂತ ಪಟ್ಟವನ್ನು ಸ್ವೀಕರಿಸಿದ್ದು ಹೇಗೆ ಅವೆಲ್ಲವನ್ನು ಕೂಡ ಈ ವಿಡಿಯೋದಲ್ಲಿ ಹೇಳುತ್ತೇನೆ. ನಾವು ಇಲ್ಲಿ ಯಾರ ಪರವಾಗಿ ಅಥವಾ ಯಾರ ವಿರೋಧವಾಗಿಯೂ ಮಾತನಾಡುತ್ತಿಲ್ಲ ಇಲ್ಲಿಯವರೆಗೆ ಯಾವುದೇ ಸ್ವಾಮೀಜಿಗಳು ಸಹ ತಪ್ಪು ಮಾಡಿದರೆ ಅದನ್ನು ನಾನು ನಿಮ್ಮ ಮುಂದೆ ಹೇಳಿದ್ದೇನೆ ಖಂಡನೆ ಯೊಂದಿಗೆ. ವಿನಯ್ ಗುರೂಜಿಯ ವಿಚಾರದಲ್ಲಿ ನಾನು ಕೂಡ ಆ ಭಾಗದವನಾಗಿರುವ ಕಾರಣಕ್ಕಾಗಿ ಅಲ್ಪಸ್ವಲ್ಪ ವಿಚಾರಗಳು ತಿಳಿದಿದ್ದು ಅದನ್ನ ನಾನು ನಿಮ್ಮ ಮುಂದೆ ಹೇಳುತ್ತಾ ಹೋಗುತ್ತೇನೆ. ಬಹುತೇಕರಿಗೆ ಅವರ ಹಿನ್ನೆಲೆ ತಿಳಿದಿಲ್ಲ ಮುಂಚೆ ಅವರು ಏನಾಗಿದ್ದರು ಯಾವ ರೀತಿಯಾಗಿ ಸ್ವಾಮೀಜಿಯಾದರು ಯಾವ ವಿಚಾರವೂ ಸಹ ತಿಳಿದಿಲ್ಲ.( ಕೃಪೆ : Third Eye )

WhatsApp Group Join Now
Telegram Group Join Now

ಅದನ್ನು ನಾನು ಈಗ ನಿಮಗೆ ತಿಳಿಸುತ್ತೇನೆ ವಿನಯ್ ಗುರೂಜಿ ಹುಟ್ಟಿದ್ದು 1988ರಲ್ಲಿ ಆಗಸ್ಟ್ 7ನೇ ತಾರೀಕು ಶೃಂಗೇರಿಯ ಮಲ ಹಾನಿಕೇಶ್ವರ ಎಂಬ ಒಂದು ಭಾಗದಲ್ಲಿ. ಇವರ ತಂದೆ ಹೆಸರು ಶಿವಪ್ಪ ತಾಯಿಯ ಹೆಸರು ಗೀತಾ ಎಂದು ಇಬ್ಬರೂ ಸಹ ಕೆಲಸದಲ್ಲಿ ಇದ್ದರೂ ತಂದೆ ಹರಿಹರ ಪುರದ ಗೌರಿಗದ್ದೆಯವರು ತಾಯಿ ಶೃಂಗೇರಿ ಅವರು ಇವರ ತಂದೆ ತಾಯಿ ಇಬ್ಬರು ಸಹ ಕೆಲಸದಲ್ಲಿರುವ ಕಾರಣದಿಂದಾಗಿ ಅವರು ಎಲ್ಲಿ ಎಲ್ಲಿ ಟ್ರಾನ್ಸ್ಫರ್ ಆಗುತ್ತಿದ್ದರು ಅಲ್ಲೆಲ್ಲ ಗುರೂಜಿ ಅವರ ಶಿಕ್ಷಣ ಆಗುತ್ತಿತ್ತು ಹಾಗಾಗಿ ಪ್ರಾಥಮಿಕ ಶಿಕ್ಷಣ ಶೃಂಗೇರಿಯಲ್ಲಿ ಆಗುತ್ತೆ ಹೈಸ್ಕೂಲ್ ಕೊಪ್ಪದಲ್ಲಿ ಆಗುತ್ತೆ ಪಿಯುಸಿ ಶೃಂಗೇರಿಯಲ್ಲಿ ಆಗುತ್ತೆ ಅದಾದ ನಂತರ ಬಿಇಯನ್ನು ಮಾಡಿದ್ದಾರೆ ಅದು ಸುಳ್ಯದಲ್ಲಿ ಆಗುತ್ತದೆ ಬಿ ಇ ಆದ ನಂತರ ಇಂಜಿನಿಯರಿಂಗ್ ಸಹ ಮಾಡುತ್ತಿರುತ್ತಾರೆ.( ಕೃಪೆ : Third Eye )

ಅಬ್ರಾಡ್ನಲ್ಲಿ ಸಹ ಇವರಿಗೆ ಕೆಲಸದ ಆಫರ್ ಬರುತ್ತದೆ ಅದಕ್ಕಾಗಿ ವೀಸಾ ಎಲ್ಲವನ್ನು ತಯಾರಿ ಮಾಡಿಕೊಳ್ಳುತ್ತಿರುತ್ತಾರೆ. ಆದರೆ ನಂತರ ಮನಸ್ಸನ್ನ ಬದಲಾಯಿಸಿ ವಿನಯ್ ಗುರೂಜಿ ಶಿಕ್ಷಕರಾಗಿ ಕೆಲಸವನ್ನು ಮಾಡಿಕೊಳ್ಳುತ್ತಾರೆ ಸಹ್ಯಾದ್ರಿ ಪಾಲಿಟಿಕಲ್ ಕಾಲೇಜ್ ತೀರ್ಥಹಳ್ಳಿ ಇಲ್ಲಿ ಎರಡು ವರ್ಷಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ವಿನಯ್ ಗುರೂಜಿ ಅಲ್ಲಿಯವರೆಗೂ ಸಾಮಾನ್ಯ ಮನುಷ್ಯರಾಗಿ ಇದ್ದರೂ ಅವರೇ ಹೇಳಿಕೊಂಡಿದ್ದರೆ ಬೇರೆ ಬೇರೆ ಸಂದರ್ಶನಗಳಲ್ಲಿ ವೇದಿಕೆಗಳಲ್ಲಿ ಹೇಳಿಕೊಂಡಿದ್ದಾರೆ ನಾನು ಸಹ ಧೂಮಪಾನ ಮಾಡುತ್ತಿದ್ದೆ ಮದ್ಯಪಾನ ಮಾಡುತ್ತಿದ್ದೆ ನನಗೂ ಸಹ ಹುಡುಗಿಯರಿದ್ದರು ನಾನು ಸಹ ಯುವಕರು ಯಾವೆಲ್ಲ ಮೋಜು-ಮಸ್ತಿಗಳನ್ನು ಮಾಡುತ್ತಿದ್ದರು ಅವೆಲ್ಲವನ್ನು ಮಾಡಿದ್ದೇನೆ. ಸಾಮಾನ್ಯ ರೀತಿಯಲ್ಲೇ ಅವೆಲ್ಲ ಜೀವನವನ್ನು ನಾನು ಅನುಭವಿಸಿದ್ದೇನೆ ಎಂದು ಸ್ವತಃ ವಿನಯ್ ಗುರೂಜಿಯವರೇ ಹೇಳಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.( ಕೃಪೆ : Third Eye )