ಮೇಷ ರಾಶಿ:- ವ್ಯಾಪಾರಸ್ಥರು ಈ ದಿನ ಹಣದ ವಿಷಯದಲ್ಲಿ ಜಾಗೃತಿಯನ್ನು ವಹಿಸಬೇಕಾಗಿರುತ್ತದೆ. ನೀವೇನಾದರೂ ಸಾಲವನ್ನು ತೆಗೆದುಕೊಳ್ಳಲು ಯೋಚನೆ ಮಾಡುತ್ತಾ ಇದ್ದರೆ ನಿಮ್ಮ ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಬೆಳಗ್ಗೆ 6:00 ರಿಂದ 11:30 ರವರೆಗೆ.
ವೃಷಭ ರಾಶಿ:- ಈ ದಿನ ನೀವು ಉದ್ಯೋಗ ಸ್ಥಳದಲ್ಲಿ ಆಗಿರಬಹುದು ವ್ಯಾಪಾರಸ್ಥಳದಲ್ಲಿ ಆಗಿರಬಹುದು. ಕೆಲಸದಲ್ಲಿ ಈ ದಿನದ ಆರಂಭವು ಉತ್ತಮವಾಗಿರುತ್ತದೆ. ಕುಟುಂಬ ಜೀವನವು ಈ ದಿನ ಸಂತೋಷ ಹಾಗೂ ನೆಮ್ಮದಿಯಿಂದ ಕೂಡಿರುತ್ತದೆ. ಅದೃಷ್ಟ ಸಂಖ್ಯೆ – 05 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 7:30 ರಿಂದ ಮಧ್ಯಾಹ್ನ 1:30 ರವರೆಗೆ.
ಮಿಥುನ ರಾಶಿ:- ನೀವು ಈ ದಿನ ನಿಮ್ಮ ಕೆಲಸದ ಬಗ್ಗೆ ಹೆಚ್ಚು ಗಮನ ವನ್ನು ಕೊಡಬೇಕು. ನೀವು ನಿಮ್ಮ ಕೆಲಸವನ್ನು ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ. ಸರ್ಕಾರಿ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿರುವ ಉದ್ಯೋಗಿಗಳಿಗೆ ಉತ್ತಮವಾದ ಫಲ ಸಿಗುತ್ತದೆ. ಅದೃಷ್ಟ ಸಂಖ್ಯೆ – 09 ಅದೃಷ್ಟ ಬಣ್ಣ – ಹಳದಿ ಬಣ್ಣ ಸಮಯ – ಸಂಜೆ 5:30 ರಿಂದ ರಾತ್ರಿ 8:00 ರವರೆಗೆ.
ಕರ್ಕಾಟಕ ರಾಶಿ:- ಹಣದ ವಿಷಯದಲ್ಲಿ ಈ ದಿನ ನಿಮಗೆ ಮಿಶ್ರಫಲವಾದ ದಿನವಾಗಿರುತ್ತದೆ. ನಿಮ್ಮ ಆದಾಯವು ಉತ್ತಮವಾಗಬೇಕೆಂದರೆ ನಿಮ್ಮ ಖರ್ಚನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಈ ದಿನ ನಿಮ್ಮ ಸಹ ಮನೆಯ ಸದಸ್ಯರ ಹಿರಿಯರ ಆರೋಗ್ಯದ ಕಡೆ ಗಮನ ಕೊಡಿ. ಅದೃಷ್ಟ ಸಂಖ್ಯೆ – 03 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಸಂಜೆ 6:00 ರಿಂದ 9:00 ರವರೆಗೆ.
ಸಿಂಹ ರಾಶಿ:- ಇಂದು ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಬದಲಾವಣೆಗಳು ಆಗುವ ಸಾಧ್ಯತೆ ಇದೆ. ಸಕಾರಾತ್ಮಕ ಫಲಿತಾಂಶವನ್ನು ಪಡೆಯುವ ಹೆಚ್ಚಿನ ಅವಕಾಶಗಳು ಇರುವುದರಿಂದ ಹೆಚ್ಚು ಚಿಂತೆ ಮಾಡುವುದು ಅಗತ್ಯವಿಲ್ಲ. ನೀವೇನಾದರೂ ಸ್ವಂತ ಉದ್ಯೋಗವನ್ನು ಪ್ರಾರಂಭಿಸಿದರೆ, ಅದರಿಂದ ಹೆಚ್ಚಿನ ಯಶಸ್ಸನ್ನು ಪಡೆಯುತ್ತೀರಿ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಸಂಜೆ 4:30 ರಿಂದ 7:30 ರವರೆಗೆ.
ಕನ್ಯಾ ರಾಶಿ:- ಕೆಲಸದ ಜೊತೆಗೆ ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಕಾಳಜಿಯನ್ನು ವಹಿಸಿ. ಅಗತ್ಯಕ್ಕಿಂತ ಹೆಚ್ಚು ಖರ್ಚು ಮಾಡುವುದನ್ನು ತಪ್ಪಿಸಿ. ಈ ದಿನ ಕುಟುಂಬದ ಜೀವನದಲ್ಲಿ ಸಂತೋಷ ಇರುತ್ತದೆ. ವಿಶೇಷವಾಗಿ ಮನೆಯ ಹಿರಿಯರ ಆಶೀರ್ವಾದದೊಂದಿಗೆ ನಿಮ್ಮ ಧೈರ್ಯ ಇನ್ನೂ ಹೆಚ್ಚಾಗುತ್ತದೆ. ಅದೃಷ್ಟ ಸಂಖ್ಯೆ – 02 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಸಂಜೆ 4:30 ರಿಂದ 8:30 ರವರೆಗೆ.
ತುಲಾ ರಾಶಿ:- ನಿಮ್ಮ ಸ್ವಭಾವದಲ್ಲಿ ಸ್ವಲ್ಪ ಬದಲಾವಣೆಯನ್ನು ಮಾಡಿ ಕೊಂಡರೆ ನಿಮಗೆ ಬರುವಂತಹ ಅನೇಕ ತೊಂದರೆಗಳನ್ನು ನೀವು ನಿವಾರಿಸಬಹುದು. ನೀವು ಇಂದು ಆರಾಮಾಗಿ ಕೆಲಸ ಮಾಡಿದರೆ, ಕುಟುಂಬದ ಸದಸ್ಯರೊಂದಿಗೆ ನಿಮ್ಮ ಸಮಸ್ಯೆಯನ್ನು ಸುಧಾರಿಸ ಬಹುದು. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ಕೆಂಪು ಬಣ್ಣ ಸಮಯ – ಬೆಳಗ್ಗೆ 6:30 ರಿಂದ 11:00 ರವರೆಗೆ.
ವೃಶ್ಚಿಕ ರಾಶಿ:- ಈ ದಿನ ನಿಮ್ಮ ಎಲ್ಲ ಗಮನವೂ ಕೂಡ ನಿಮ್ಮ ಆರ್ಥಿಕ ಪರಿಸ್ಥಿತಿಯ ಮೇಲೆ ಇರುತ್ತದೆ. ಹಣಕಾಸಿನ ವಿಷಯಗಳಲ್ಲಿ ನೀವು ತುಂಬಾ ಗಂಭೀರವಾಗಿರುತ್ತೀರಿ. ನಿಮ್ಮ ಯೋಜನೆಗಳು ಸಹ ಬದಲಾ ಯಿಸಬಹುದು. ಆದರೆ ಹೆಚ್ಚು ಸಾಲ ಪಡೆಯುವುದನ್ನು ತಪ್ಪಿಸಬೇಕಾಗು ತ್ತದೆ. ಅದೃಷ್ಟ ಸಂಖ್ಯೆ – 04 ಅದೃಷ್ಟ ಬಣ್ಣ – ಬಿಳಿ ಬಣ್ಣ ಸಮಯ – ಬೆಳಗ್ಗೆ 7:00 ರಿಂದ ಮಧ್ಯಾಹ್ನ 1:00 ರವರೆಗೆ.
ಧನಸ್ಸು ರಾಶಿ:- ಮಾರ್ಕೆಟ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ಇದ್ದರೆ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಬಹುದು. ಈ ಸಮಯ ದಲ್ಲಿ ಉದ್ಯೋಗಿಗಳಿಗೆ ಕೆಲವು ಸವಾಲುಗಳು ಬರಬಹುದು. ನೀವು ಈ ದಿನ ತುಂಬಾ ಜಾಗರೂಕತೆಯನ್ನು ವಹಿಸಬೇಕಾಗುತ್ತದೆ. ಅದೃಷ್ಟ ಸಂಖ್ಯೆ – 06 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಬೆಳಗ್ಗೆ 8:00 ರಿಂದ ಮಧ್ಯಾಹ್ನ 1:00 ರವರೆಗೆ.
ಮಕರ ರಾಶಿ:- ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ ಇದ್ದರೆ ಇಂದು ನಿಮಗೆ ಬಹಳ ಮುಖ್ಯವಾದ ದಿನವಾಗಿರುತ್ತದೆ. ವ್ಯಾಪಾರಸ್ಥರು ಇಂದು ಉತ್ತಮವಾದ ಆರ್ಥಿಕ ಲಾಭವನ್ನು ಪಡೆಯಬಹುದು. ನಿಮ್ಮ ವ್ಯವ ಹಾರದ ಮುಂದಿನ ಕೆಲಸವನ್ನು ಬಗೆಹರಿಸಲು ಯೋಚನೆ ಮಾಡುವಿರಿ. ಅದೃಷ್ಟ ಸಂಖ್ಯೆ – 01 ಅದೃಷ್ಟ ಬಣ್ಣ – ಕೇಸರಿ ಬಣ್ಣ ಸಮಯ – ಬೆಳಗ್ಗೆ 6:30 ರಿಂದ ಮಧ್ಯಾಹ್ನ 1:30 ರವರೆಗೆ.
ಕುಂಭ ರಾಶಿ:- ಇಂದು ನೀವು ಸಾಕಷ್ಟು ಖಿನ್ನತೆಯನ್ನು ಹಾಗೂ ತೊಡಕು ಗಳನ್ನು ಅನುಭವಿಸುವಿರಿ. ನಿಮ್ಮ ಮೇಲೆ ಹೆಚ್ಚಿನ ಕೆಲಸದ ಹೊರೆ ಹಾಕುವುದನ್ನು ತಪ್ಪಿಸಿ. ಇದು ನಿಮ್ಮ ಆರೋಗ್ಯದ ಸ್ಥಿತಿಯನ್ನು ದುರ್ಬಲ ಗೊಳಿಸುತ್ತದೆ. ಅನಗತ್ಯ ವೆಚ್ಚಗಳನ್ನು ಮಾಡುವುದನ್ನು ತಪ್ಪಿಸಿ. ಅದೃಷ್ಟ ಸಂಖ್ಯೆ – 04 ಅದೃಷ್ಟ ಬಣ್ಣ – ಹಸಿರು ಬಣ್ಣ ಸಮಯ – ಸಂಜೆ 6:00 ರಿಂದ ರಾತ್ರಿ 8:00 ರವರೆಗೆ.
ಮೀನ ರಾಶಿ:- ನೀವು ಕಡಿಮೆ ಶ್ರಮದಿಂದ ಉತ್ತಮ ಯಶಸ್ಸನ್ನು ಪಡೆಯುವಿರಿ. ವ್ಯಾಪಾರ ಮಾಡಿದರೆ ಲಾಭ ಗಳಿಸುವ ಉತ್ತಮ ಅವಕಾಶಗಳು ಸಾಧ್ಯವಾಗುವ ಸಮಯವಿದೆ. ಕುಟುಂಬ ಜೀವನದ ಪರಿಸ್ಥಿತಿಯು ಸಾಮಾನ್ಯವಾಗಿರುತ್ತದೆ. ಅದೃಷ್ಟ ಸಂಖ್ಯೆ – 05 ಅದೃಷ್ಟ ಬಣ್ಣ – ನೀಲಿ ಬಣ್ಣ ಸಮಯ – ಸಂಜೆ 5:00 ರಿಂದ ರಾತ್ರಿ 8:00 ರವರೆಗೆ.