ಶಬರಿಮಲೆಯ ಆಭರಣಗಳ ಬಗ್ಗೆ ಹಾಗೂ ಅಲ್ಲಿನ ಮಕರ ಜ್ಯೋತಿಯ ರಹಸ್ಯಗಳು…ಈ ಹಿಂದೆ ಪುರಾಣದಲ್ಲಿ ಶ್ರೀ ವಿಷ್ಣು ಹೇಳುತ್ತಾರೆ ಆದರೆ ದೇವತೆಗಳು ರಾಕ್ಷಸರು ಇಬ್ಬರು ಸಮಾನವಾಗಿ ಅಮೃತವನ್ನು ಸ್ವೀಕರಿಸಬೇಕು ಎಂದು ರಾಕ್ಷಸರ ಮೇಲೆ ನಂಬಿಕೆ ಇಲ್ಲದಿರುವ ಕಾರಣ ಅವರೊಬ್ಬರೇ ಹೋಗಿ ಅಮೃತವನ್ನು ಪಡೆಯಲು ಪ್ರಾರಂಭಿಸುತ್ತಾರೆ ಆಗ ಅದರಿಂದ ಕೂಡ ರಾಕ್ಷಸರಿಗೆ ತಿಳಿದು ಜಗಳವಾಗುತ್ತದೆ ನಂತರ ಸ್ವಲ್ಪ ಉಪಾಯವಾಗಿ ಮಾತನಾಡಿ ಇಬ್ಬರು ಸಮಾನವಾಗಿ ತೆಗೆದುಕೊಳ್ಳೋಣ ಎಂದು ಯೋಚಿಸಿ ಆ ಕ್ಷೀರಸಾಗರವನ್ನು ಹೇಳೆಯಲು ಪ್ರಾರಂಭಿಸುತ್ತಾರೆ ಆಗ ಅದರಿಂದ ಅಮೃತ ಕಳಸವು ಕೂಡ ಮೇಲೆ ಬರುತ್ತದೆ ಅದಾದ ನಂತರ ಆ ಕ್ಷೀರದಿಂದ ಬರುವ ವಿಷವನ್ನು ಶ್ರೀ ಮಹಾಶಿವ ಅದನ್ನು ಸೇವಿಸಿ ಅಮೃತವನ್ನು ದೇವತೆಗಳಿಗೂ ಹಾಗೂ ರಾಕ್ಷಸರಿಗೂ ಕೊಡುತ್ತಾರೆ ಆಗ ಇದನ್ನು ರಾಕ್ಷಸರಿಗೆ ಕೊಡಲು ಮನಸ್ಸಿಲ್ಲದ ದೇವತೆಗಳು ವಿಷ್ಣುವಿನಲ್ಲಿ ಪರಿಹಾರ ಕೇಳಲು ಕೇಳಲು ಮತ್ತೊಮ್ಮೆ ಹೋಗಿದ್ದಾಗ ವಿಷ್ಣು ಮೋಹಿನಿ ಅವತಾರದಲ್ಲಿ ಹೋಗಿ ಕೇವಲ ದೇವತೆಗಳಿಗೆ ಅಮೃತವನ್ನು ಕೊಟ್ಟು ರಾಕ್ಷಸರಿಗೆ ಕೊಡುವುದಿಲ್ಲ ಇದರಿಂದ ಕೋಪಗೊಂಡ ರಾಕ್ಷಸರು ಮತ್ತೆ ದೇವತೆಗಳ ಮೇಲೆ ಯುದ್ಧಕ್ಕೆ ಹೋಗುತ್ತಾರೆ.
ಇದು ಹೀಗೆ ಹೋದ್ದರೆ ಸರಿಯಲ್ಲ ಇದಕ್ಕೆ ಒಂದು ಪರಿಹಾರ ಬೇಕೇ ಬೇಕು ಎಂದು ಶ್ರೀ ವಿಷ್ಣು ಇವರನ್ನು ಸಂಹರಿಸಲು ಒಂದು ಮಹಾ ಶಕ್ತಿಯನ್ನು ಸೃಷ್ಟಿಸಬೇಕು ಎಂದು ಯೋಚಿಸುತ್ತಾರೆ ಇದರಿಂದ ಶ್ರೀ ವಿಷ್ಣು ಮೋಹಿನಿ ಅವತಾರದಲ್ಲಿ ಶಿವನೊಂದಿಗೆ ಸಮ್ಮಿಲನ ಆಗಿ ಒಂದು ಮಗು ಜನಿಸುತ್ತದೆ ಆ ಮಗುವೆ ಶ್ರೀ ಅಯ್ಯಪ್ಪ ಸ್ವಾಮಿ ಹರಿಹರ ಸಮ್ಮಿಲನದಿಂದ ಸೃಷ್ಟಿಯಾದ ಈ ಮಗುವನ್ನು ಭೂಮಿಯಲ್ಲಿರುವ ಪಂಪಾ ನದಿ ತೀರದಲ್ಲಿ ಬಿಟ್ಟು ಇಲ್ಲಿಂದ ಈ ಮಗುವ ಆರಂಭ ಶುರು ಆಗಲಿ ಎಂದು ಬಿಟ್ಟುಬಿಡುತ್ತಾರೆ ಅದೇ ಸಮಯಕ್ಕೆ ಪಂಪಾ ನದಿಗೆ ಅಲ್ಲಿನ ರಾಜ ಬಂದಾಗ ಅವನೇ ಮಗುವನ್ನು ಕಂಡು ತಾನೇ ಅದನ್ನು ಸಾಕುತ್ತೇನೆ ಎಂದು ತೆಗೆದುಕೊಂಡು ಹೋಗುತ್ತಾನೆ ಏಕೆಂದರೆ ಆ ರಾಜನಿಗೆ ಮದುವೆಯಾಗಿ ತುಂಬಾ ವರ್ಷ ಆದರೂ ಮಕ್ಕಳಿರುವುದಿಲ್ಲ ಈ ಮಗು ಸಿಕ್ಕ ಒಂದು ವರ್ಷದಲ್ಲೇ ಅವರಿಗೆ ಮತ್ತೊಂದು ಗಂಡು ಮಗು ಜನಿಸುತ್ತದೆ ಹೀಗೆ ಅವರ ಸಾಮ್ರಾಜ್ಯ ಉತ್ತಮ ರೀತಿಯಲ್ಲಿ ಸಾಗುತ್ತಿರುತ್ತದೆ ಕಾಲಗಳು ಉರುಳುತ್ತಾ ಹೋಗುತ್ತಾ ಹೋಗುತ್ತಾ ಅಯ್ಯಪ್ಪ ಸ್ವಾಮಿ ಅವರು ಯವ್ವನಕ್ಕೆ ಬರುತ್ತಾರೆ ಅದಾದ ನಂತರ ಅವರ ತಾಯಿಯ ಕೆಲವು ಮಾತುಗಳಿಂದ ಅವರು ಕಾಡಿನಲ್ಲಿ ಹೋಗಿ ನೆಲೆಸಲು ತೀರ್ಮಾನಿಸುತ್ತಾರೆ ಈ ಒಂದು ಇತಿಹಾಸದ ಪುರಾಣ ನಮಗೆಲ್ಲರಿಗೂ ತಿಳಿದೇ ಇದೆ.
ಸರಿ ಸುಮಾರು ವರ್ಷಗಳಿಂದ ಈ ಅಯ್ಯಪ್ಪ ಸ್ವಾಮಿ ದೇಗುಲವು ಮೂರು ಬಾರಿ ಅಗ್ನಿಗೆ ಆಹುತಿಯಾಗಿದೆ ಈ ರೀತಿ ಆಗುವುದನ್ನು ಕಂಡ ಒಬ್ಬ ಮಹಾಮಹಿಮರು ಈ ಸ್ವಾಮಿ ದೇಗುಲವನ್ನು ಅನೇಕ ಜಾಗದಲ್ಲಿ ಸ್ಥಾಪಿಸಬೇಕು ಎಂದು ತೀರ್ಮಾನಿಸುತ್ತಾರೆ ಹಾಗಾಗಿ ಈಗ ಅಯ್ಯಪ್ಪ ಸ್ವಾಮಿ ದೇಗುಲವು ಅನೇಕ ಕಡೆ ನಿಮಗೆ ಕಾಣಲು ಸಿಗುತ್ತದೆ ಈಗ ಅಲ್ಲಿ ಅನೇಕ ರೀತಿಯ ಜೀರ್ಣೋದ್ಧಾರಗಳನ್ನು ಮಾಡಿದ್ದಾರೆ ಹಾಗೂ ಪ್ರತಿ ವರ್ಷವೂ ಮಕರ ಸಂಕ್ರಾಂತಿ ಜನವರಿ 14ರಂದು ಅಯ್ಯಪ್ಪ ಸ್ವಾಮಿಯ ಒಡವೆಗಳನ್ನು ಪೂಜೆ ಮಾಡಿ ನಂತರ ಒಂದು ನಿಗೂಢವಾದ ಜಾಗದಲ್ಲಿ ಇಟ್ಟುಬಿಡುತ್ತಾರೆ ಅಲ್ಲಿಂದ ಸ್ವಲ್ಪ ದೂರದಲ್ಲಿ ಅಗ್ನಿ ಸಂಚರಿಸುತ್ತೆ ಅದು ಮಕರ ಜ್ಯೋತಿ ಎಂದು ಈಗಲೂ ಅನೇಕರು ನಂಬಿದ್ದಾರೆ ಮಕರ ಜ್ಯೋತಿ ಕಾಣಿಸಿಕೊಳ್ಳುವುದು ಸಾಕ್ಷಾತ್ ಸ್ವಾಮಿ ಅಯ್ಯಪ್ಪ ಪ್ರತ್ಯಕ್ಷವಾಗುತ್ತಾರೆ ಎಂದು ಅನೇಕರ ನಂಬಿಕೆ, ಇಲ್ಲಿ ಪರಂಪರೆಯಿಂದಲೂ ಅರ್ಚಕರಾಗಿ ಪೂಜೆ ಮಾಡುತ್ತಾ ಬರುತ್ತಿರುವವರು ಒಂದೇ ಕುಟುಂಬದವರು ಇವರನ್ನು ಅಂದು ಪರಶುರಾಮರು ನೇಮಿಸಿದ್ದರು ಎಂಬ ನಂಬಿಕೆ ಇದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ