ಉಪ್ಪಿನ ದೀಪ ಹಚ್ಚುವುದು ಹೇಗೆ ಗೊತ್ತಾ? ಹಣಕಾಸಿನ ಸಮಸ್ಯೆಗೆ ಪರಿಹಾರಇವತ್ತಿನ ವಿಡಿಯೋದಲ್ಲಿ ನಾನು ಉಪ್ಪಿನ ದೀಪ ಹಚ್ಚೋದು ಹೇಗೆ ಮತ್ತು ಉಪ್ಪಿನ ದೀಪ ಹಚ್ಚುವುದರಿಂದ ಆಗುವ ಅನುಕೂಲಗಳು ಏನೆಂದು ತಿಳಿಸುತ್ತೇನೆ.ಉಪ್ಪಿನ ದೀಪ ಹಚ್ಚುವುದು ಎಂದರೆ ಮನುಷ್ಯ ಎಂದ ಮೇಲೆ ಸಮಸ್ಯೆಗಳು ಸಹಜ ಹಾಗೆ ಆರ್ಥಿಕವಾಗಿಯೂ ಸಮಸ್ಯೆಯನ್ನು ಅನುಭವಿಸಿತ ಇರುತ್ತೇವೆ ಇದಕ್ಕೆ ಪರಿಹಾರ ಇಲ್ಲಿದೆ ನೋಡಿ ನಾನು ಏನು ಮಾಡುತ್ತಿದ್ದೇನೆ ಎಂದರೆ ಒಂದು ಮಣ್ಣಿನ ತಟ್ಟೆಯನ್ನು ತೆಗೆದುಕೊಂಡಿದ್ದೇನೆ ಅಂದರೆ ಪ್ಲೇಟನ್ನು ತೆಗೆದುಕೊಂಡಿದ್ದೇನೆ, ಆ ಒಂದು ಮಣ್ಣಿನ ಪ್ಲೇಟ್ಗೆ ಅರಿಶಿನವನ್ನು ಹಚ್ಚಿದ್ದೇನೆ ಅದನ್ನು ಪ್ಲೇಟಿಗೆ ಪೂರ್ತಿಯಾಗಿ ಹಚ್ಚಿದ್ದೇನೆ ಪ್ಲೇಟಿನ ಎರಡು ಭಾಗಕ್ಕೂ ಕೂಡ ನಾನು ಅರಿಶಿನವನ್ನು ಹಚ್ಚಿದ್ದೇನೆ. ಈ ಒಂದು ಪ್ಲೇಟಿಗೆ ಅರಿಶಿನವನ್ನು ಹಚ್ಚಿದ ನಂತರ ಕುಂಕುಮವನ್ನು ನಾಲ್ಕು ಭಾಗಗಳಿಗೆ ಇಟ್ಟಿದ್ದೇನೆ ಈ ಒಂದು ಉಪ್ಪಿನ ದೀಪ ತುಂಬಾನೇ ಶ್ರೇಷ್ಠವಾದಂತಹದು ಲಕ್ಷ್ಮಿ ದೇವಿಗೆ.ನಾವಿದನ್ನು ತುಂಬಾ ಶ್ರದ್ಧೆಯಿಂದ ಭಕ್ತಿಯಿಂದ ಈ ದೀಪವನ್ನು ಹಚ್ಚಬೇಕು ನಾನಿಲ್ಲಿ ಎರಡು ದೀಪವನ್ನು ತೆಗೆದುಕೊಂಡಿದ್ದೇನೆ,

ಆದರೆ ಒಂದು ದೀಪದ ಮೇಲೆ ಇನ್ನೊಂದು ದೀಪವನ್ನು ಇಟ್ಟು ಅದಕ್ಕೆ ಎರಡು ಬತ್ತಿಗಳನ್ನು ಹಾಕಿದ್ದೇನೆ ಇದು ನಿಮಗೆ ನೆನಪಿನಲ್ಲಿರಲಿ ಎರಡು ಬತ್ತಿಗಳನ್ನು ಹಾಕಬೇಕು ಹಾಕಿ ಎರಡು ದೀಪಗಳಿಗೂ ಸಹ ಪೂರ್ತಿಯಾಗಿ ಅರಿಶಿನವನ್ನು ಹಚ್ಚಿದ್ದೇನೆ ಹಾಗೆ ಕುಂಕುಮವನ್ನು ಸಹ ಇಟ್ಟಿದ್ದೇನೆ. ಪ್ರತಿ ಶುಕ್ರವಾರ ನಾವು ಈ ದೀಪವನ್ನು ಹಚ್ಚಬಹುದು ಈಗ ನಾನು ಆ ಒಂದು ತಟ್ಟೆಗೆ ಹರಳು ಉಪ್ಪನ್ನು ತೆಗೆದುಕೊಂಡಿದ್ದೇನೆ ಈ ಉಪ್ಪು ಎನ್ನುವುದು ಕೆಟ್ಟ ಶಕ್ತಿಯನ್ನು ದೂರ ಮಾಡಿ ಒಳ್ಳೆಯ ಶಕ್ತಿಯನ್ನು ತೆಗೆದುಕೊಂಡು ಬರುತ್ತದೆ. ಈಗ ನಾನು ಪ್ಲೇಟಿಗೆ ಮುಕ್ಕಾಲು ಭಾಗದಷ್ಟು ಉಪ್ಪನ್ನು ಹಾಕಿ ಅದನ್ನು ಎಲ್ಲಾ ಕಡೆ ಸಮನಾಗಿ ಹರಡಿಕೊಂಡಿದ್ದೇನೆ. ಈಗ ದೀಪವನ್ನು ಆ ಉಪ್ಪಿನ ಮೇಲೆ ಇಟ್ಟಿದ್ದೇನೆ ನಾವು ಸಂಕಲ್ಪವನ್ನು ಮಾಡಿಕೊಂಡು ಐದು ವಾರ 9ವಾರ ಈ ರೀತಿಯಾಗಿ ದೀಪವನ್ನು ಅಚ್ಚಬಹುದು. ಲಕ್ಷ್ಮಿ ದೇವಿಗೆ ಕೆಂಪು ಬಹಳ ಇಷ್ಟ ಆದರಿಂದ ಕೆಂಪು ಹೂವಿನಿಂದ ಆ ಒಂದು ದೀಪವನ್ನು ನಾವು ಅಲಂಕಾರ ಮಾಡಬಹುದು ಜೊತೆಗೆ ನಾನು ಇಲ್ಲಿ ಅರಿಶಿಣದ ಹೂವನ್ನು ಕೂಡ ಇಟ್ಟಿದ್ದೇನೆ.

WhatsApp Group Join Now
Telegram Group Join Now
See also  ಕನಸಿನಲ್ಲಿ ಹಾವು ಕಾಣಿಸಿಕೊಂಡರೆ ಸಿಗುತ್ತದೆ ಈ ಏಳು ವಿಶೇಷ ಸೂಚನೆಗಳು.‌ನಿಮಗೂ ಹಾವಿನ ಕನಸು ಬಂದಿದ್ಯಾ

ನಮಗೆ ಅನುಕೂಲವಾದ ಹಾಗೆ ಐದು ವಾರ 9 ವಾರ ಹೀಗೆ ಈ ಒಂದು ದೀಪವನ್ನು ಹಚ್ಚಬಹುದು ನಮ್ಮಲ್ಲಿರುವಂತಹ ಆರ್ಥಿಕ ಸಮಸ್ಯೆಗಳು ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ ನನ್ನ ಜೀವನದಲ್ಲೂ ಕೂಡ ಈ ಒಂದು ಅನುಭವವಾಗಿದೆ.ಈಗ ದೀಪ ಹಚ್ಚಲು ಎಲ್ಲಾ ಕೂಡ ತಯಾರಿಯಾಗಿದೆ ಪ್ರತಿ ಶುಕ್ರವಾರ ನಾವು ಬ್ರಾಹ್ಮಿ ಮುಹೂರ್ತದಲ್ಲಿ ಅಂದರೆ 4 ರಿಂದ 4:30 ಅಥವಾ 6 ಗಂಟೆಯ ಒಳಗೆ ದೀಪವನ್ನು ಹಚ್ಚಿದರೆ ತುಂಬಾನೇ ಒಳ್ಳೆಯ ಫಲ ಸಿಗುತ್ತದೆ.ಇದನ್ನು ಈಗ ನಾನು ಲಕ್ಷ್ಮಿ ದೇವಿಯ ಮುಂದೆ ಇಡುತ್ತಿದ್ದೇನೆ ಯಾವ ಮುಖವಾಗಿ ಈ ಒಂದು ದೀಪವನ್ನು ಹಚ್ಚಬೇಕು ಎಂದರೆ ಉತ್ತರ ಮುಖವಾಗಿ ಅಥವಾ ಉತ್ತರ ದಿಕ್ಕಿಗೆ ಮುಖವಾಗಿ ಈ ದೀಪವನ್ನು ಹಚ್ಚಬೇಕು ಯಾವಾಗಲೂ ಉತ್ತರಕ್ಕೆ ಇರಬೇಕು. ಇದನ್ನು ಲಕ್ಷ್ಮಿ ದೇವಿಯ ಫೋಟೋದ ಮುಂದೆ ಇಡಬೇಕು 6 ಗಂಟೆಯ ಒಳಗೆ ಈ ದೀಪವನ್ನು ಹಚ್ಚುವುದರಿಂದ ಬ್ರಾಹ್ಮಿ ಮುಹೂರ್ತದ ಒಳಗೆ ಅದು ತುಂಬಾನೇ ಒಳ್ಳೆಯ ಫಲ ಸಿಗುತ್ತದೆ ಹಾಗೂ ನೂರಕ್ಕೆ ನೂರು ಫಲ ಸಿಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.