ಸರಳ ವಾಸ್ತು ಹೆಸರಿನಲ್ಲಿ ವಂಚನೆ ಯತ್ನ! ಚಳಿ ಬಿಡಿಸಿದ ದಾವಣಗೆರೆಯ ಹುಡುಗ….. ಶಂಕರ್ ಗುರೂಜಿ ಸಂಸ್ಥೆಯ ಸಿಬ್ಬಂದಿ ಹಾಗೂ ಪ್ರದೀಪ್ ದಾವಣಗೆರೆ.
ಸಿಬ್ಬಂದಿ : ಹಲೋ ಸರ್ ನಮಸ್ತೆ ನಾವು ಬೆಂಗಳೂರಿನಿಂದ ಕರೆ ಮಾಡುತ್ತಿದ್ದೇವೆ ಶಂಕರ್ ಗುರೂಜಿ ಸಂಸ್ಥೆ ಇಂದ
ಪ್ರದೀಪ್ : ಯಾವ ಗುರೂಜಿ ಅಮ್ಮ
ಸಿಬ್ಬಂದಿ : ಸರ್ ನಿಮಗೆ ಕಾಲ್ ಮಾಡಿರೋದು ಬೆಂಗಳೂರಿಂದ ನಾವು ಕಾಲ್ ಮಾಡ್ತಾ ಇದ್ದೀವಿ ಸರ್
ಪ್ರದೀಪ್ : ಯಾವ್ ಗುರೂಜಿ ಸಂಸ್ಥೆಯಿಂದ ಅಮ್ಮ
ಸಿಬ್ಬಂದಿ : ಶಂಕರ್ ಗುರೂಜಿ ಸಂಸ್ಥೆಯಿಂದ
ಪ್ರದೀಪ್ : ಯಾರದು ಶಂಕರ್ ಗುರೂಜಿ ಎಂದರೆ
ಸಿಬ್ಬಂದಿ : ಇವರು ಬೆಳಗ್ಗೆ 8:00 ಗಂಟೆಗೆ ಉದಯ ಟಿವಿಯಲ್ಲಿ ನಮಸ್ತೆ ಶಂಕರ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ ಆ ಗುರೂಜಿಯವರ ಸಂಸ್ಥೆಯಿಂದ ಕರೆ ಮಾಡುತ್ತಿದ್ದೇವೆ ಸರ್. ಪ್ರದೀಪ್ : ಸರಿ,
ಸಿಬ್ಬಂದಿ : ನಿಮ್ಮ ನಂಬರನ್ನು ಶಂಕರ್ ಗುರೂಜಿಯವರು ಸಂಖ್ಯಾಶಾಸ್ತ್ರ ದಿಂದ 10,000 ನಂಬರ್ ನ 10 ಅದೃಷ್ಟ ಸಂಖ್ಯೆಯನ್ನು ಆಯ್ಕೆ ಮಾಡಿದ್ದಾರೆ ಅದರಲ್ಲಿ ನಿಮ್ಮ ಮೊಬೈಲ್ ನಂಬರ್ ಕೂಡ ಲಕ್ಕಿ ನಂಬರ್ ಎಂದು ಆಯ್ಕೆಯಾಗಿದೆ ಅದಕ್ಕೋಸ್ಕರವಾಗಿ ಸರಳ ವಾಸ್ತು ಮತ್ತೆ ಧನಲಕ್ಷ್ಮಿ ಕುಬೇರ ಪೂಜಾ ವಸ್ತುಗಳನ್ನ ಶಂಕರ್ ಗುರೂಜಿ ಅವರು ನಿಮಗೆ ಕಳಿಸಿಕೊಡುತ್ತಿದ್ದಾರೆ ಕಳಿಸಿಕೊಟ್ಟರೆ ನೀವು ಅದನ್ನು ತೆಗೆದುಕೊಳ್ಳುತ್ತಿರ ಎಂದು ಕೇಳಲು ನಿಮಗೆ ಕರೆ ಮಾಡಿದ್ದೇವೆ. ಪ್ರದೀಪ್ : ಅಮ್ಮ ಫ್ರೀಯಾಗಿ ಕಳಿಸಿಕೊಟ್ಟರೆ ತೆಗೆದುಕೊಳ್ಳುತ್ತೇನೆ ದುಡ್ಡು ಗಿಡ್ಡು ಕಟ್ಟಬೇಕು ಎಂದರೆ ನಾನು ತಗೊಳ್ಳೋದಿಲ್ಲ. ಸಿಬ್ಬಂದಿ : ಹೌದಾ ಸರಿ ಸರ್ ಹಾಗಾದ್ರೆ ಇದಕ್ಕೆ ಅಮೌಂಟ್ ಇರುತ್ತದೆ.
ಪ್ರದೀಪ್ : ಅಮೌಂಟ್ ಇದ್ರೆ ಕಳಿಸಬೇಡಿ.

ಪ್ರದೀಪ್ : ಹಲೋ ಇವಾಗ ತಾನೇ ನೀವು ನನಗೆ ಕಾಲ್ ಮಾಡಿದ್ರಿ ಅಲ್ವಾ?
ಸಿಬ್ಬಂದಿ : ಹಾ ಸರ್ ನಾವು ಬೆಂಗಳೂರಿನಿಂದ ಕರೆ ಮಾಡಿದ್ವಿ ಶಂಕರ್ ಗುರೂಜಿ ಸಂಸ್ಥೆ ಇಂದ.
ಪ್ರದೀಪ್ : ಅದಕ್ಕೆ ಎಷ್ಟು ರೂಪಾಯಿ ಆಗುತ್ತಮ್ಮ.
ಸಿಬ್ಬಂದಿ : ಸರ್, ಇದು ಇವಾಗ ನಿಮ್ಮ ಮನೆಗೆ ನೀವಾಗೆ ಸರಳ ವಾಸ್ತು ಮಾಡಿಸಲು ಬಂದರೆ 8 ರಿಂದ 10 ಸಾವಿರ ರೂಪಾಯಿಗಳು ಇರುತ್ತದೆ. ಸರ್ ಇದು ಇಲ್ಲಿ ನಿಮ್ಮ ನಂಬರ್ ಲಕ್ಕಿ ಎಂದು ಶಂಕರ್ ಗುರೂಜಿ ಆಯ್ಕೆ ಮಾಡಿರುವುದರಿಂದ
ಪ್ರದೀಪ್ : ಅದೆಲ್ಲ ಇರಲಿ ನನ್ನ ನಂಬರ್ ಹೇಗೆ ಸಿಕ್ತು ನಿಮ್ಮ ಸಾಹೇಬ್ರಿಗೆ
ಸಿಬ್ಬಂದಿ : ಸರ್ ನೋಡಿ ನಿಮ್ಮ ನಂಬರ್ ಮಾತ್ರ ವಂತಲ್ಲ ಅಮೃತ ಸಿದ್ಧಿ ಯೋಗದಲ್ಲಿ ಸಂಖ್ಯಾಶಾಸ್ತ್ರ ಹಾಕಿ ಬಿಟ್ಟು ಅದರಲ್ಲಿ ಹತ್ತು ಸಾವಿರ ನಂಬರನ್ನು ತೆಗೆದುಕೊಂಡು ಅದರಲ್ಲಿ 10 ನಂಬರನ್ನು ಆಯ್ಕೆ ಮಾಡುತ್ತಾರೆ ಶಾಸ್ತ್ರದಿಂದ ಅದರಲ್ಲಿ ಆಯ್ಕೆಯಾಗಿರು ವಂತಹ 10 ಜನರಿಗೆ ಮಾತ್ರ ಗುರೂಜಿಯವರೇ ಸರಳ ಶಾಸ್ತ್ರದ ಪೂಜೆ ಸಾಮಗ್ರಿಗಳನ್ನ ಕಳಿಸುತ ಇದ್ದಾರೆ.ನಿಮ್ಮ ನಂಬರ್ ಕೂಡ ಆಯ್ಕೆಯಾಗಿದೆ ಹಾಗೆ ನಿಮ್ಮ ಜೊತೆ ಆಯ್ಕೆ ಆಗಿರುವ ಇನ್ನ ಒಂಬತ್ತು ನಂಬರ್ ಗಳಿಗೂ ಕೂಡ ನಾವೇ ಕರೆ ಮಾಡುತ್ತಿದ್ದೇವೆ ಮತ್ತೆ ಕೇಳುತ್ತಿದ್ದೇವೆ.
ಪ್ರದೀಪ್ : ಹಾಗಾದರೆ ಎಷ್ಟು ದುಡ್ಡಾಗುತ್ತದೆ
ಸಿಬ್ಬಂದಿ : ಆಯ್ಕೆಯಾಗಿರುವ 10 ಜನರಿಗೆ ಒಂದುವರೆ ಸಾವಿರ ರೂಪಾಯಿಗಳಂತೆ ಕಳಿಸಿಕೊಡುತ್ತಿದ್ದಾರೆ ಬಟ್ ನೀವಾಗಿ. ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

WhatsApp Group Join Now
Telegram Group Join Now