ಗ್ರಾಫಿಕ್ಸ್ ಹೇಗೆ ಮಾಡುತ್ತಾರೆ ಯಾವ ಸಾಫ್ಟ್ವೇರ್ ಬಳಸುತ್ತಾರೆ.. ಸಾಮಾನ್ಯವಾಗಿ ಸಿನಿಮಾಗಳಲ್ಲಿ ನೀವು ನೋಡುವುದಾದರೆ ಈ ಸಿಜಿಐ ಮತ್ತು ಗ್ರಾಫಿಕ್ ಇಲ್ಲದೆ ಸಿನಿಮಾ ಅಷ್ಟು ಸುಂದರವಾಗಿ ಮೂಡಿ ಬರಲು ಸಾಧ್ಯವಾಗುವುದಿಲ್ಲ ಇದನ್ನು ನೀವು ಹಿಂದೆ ಇಂಗ್ಲಿಷ್ ಚಿತ್ರಗಳಲ್ಲಿ ನೋಡಿರಬಹುದು ಇದೀಗ ನಮ್ಮ ಭಾರತದ ಸಿನಿಮಾಗಳಲ್ಲೂ ಅಧಿಕವಾಗಿ ಬಳಸುತ್ತಿದ್ದಾರೆ ಏಕೆಂದರೆ.
ತಂತ್ರಜ್ಞಾನ ಅಷ್ಟಾಗಿ ಮುಂದುವರೆದಿದೆ ಈ ಒಂದು ಗ್ರಾಫಿಕ್ ಇಲ್ಲದೆ ಯಾವತ್ತು ಸಿನಿಮಾವು ಅಷ್ಟು ಅಚ್ಚುಕಟ್ಟಾಗಿ ಅಷ್ಟು ಮನರಂಜನೆಯಾಗಿ ನಮಗೆ ಕಾಣಲು ಸಿಗುವುದಿಲ್ಲ ಹಾಗಾಗಿ ಇದು ಒಂದು ಪ್ರಮುಖ ಪಾತ್ರವನ್ನು ಚಿತ್ರರಂಗದ ಮೇಲೆ ವಹಿಸುತ್ತದೆ ಇದಕ್ಕೆ ಒಂದು ಉದಾಹರಣೆ ಎಂದರೆ ಸಾಮಾನ್ಯವಾಗಿ ರೋಡಿನಲ್ಲಿ ಒಂದು ಚಿತ್ರದ ನಟ ನಿಂತಿರುತ್ತಾನೆ.
ಆ ಜಾಗಕ್ಕೆ ಒಂದು ಡ್ರ್ಯಾಗನ್ ಬರುತ್ತದೆ, ಆ ಡ್ರಾಗನ್ ಬಾಯಿಯಿಂದ ಗಾಳಿಯನ್ನು ಬಿಟ್ಟರೆ ಅದು ಬೆಂಕಿ ರೀತಿಯಲ್ಲಿ ಬರುತ್ತದೆ ಆದರೆ ಆ ನಟ ಅತಿಯಾಗಿ ಗಾಳಿ ಬಂದಂತೆ ಬಹುದೂರ ಆರುತ್ತಾನೆ. ಸಾಮಾನ್ಯವಾಗಿ ಅನುಮಾನ ಪ್ರತಿಯೊಬ್ಬರಿಗೂ ಬರುತ್ತದೆ ಆ ಮನುಷ್ಯ ಸುಟ್ಟು ಹೋಗಬೇಕಲ್ಲವೇ ಎಂದು ಇದಕ್ಕೆ ಕೆಲಸ ಮಾಡುವ ಜನರ ಸಂಖ್ಯೆ ಅತಿ ಹೆಚ್ಚು ಹಾಗಾಗಿ ಇವರ.
ಸಂಬಳವೂ ಕೂಡ ಅಧಿಕವಾಗಿರುತ್ತದೆ ಇವರು ಸಾಫ್ಟ್ವೇರ್ ತಲೆ ಉಳ್ಳ ಬುದ್ದಿವಂತರಾಗಿರುತ್ತಾರೆ ಮೊದಲಿಗೆ ಒಂದು ಚಿತ್ರದಲ್ಲಿ ಒಂದು ಭಾಗ ಈ ತರಹ ಇರಬೇಕು ಎಂದು ಕೇಳಿದರೆ ಮೊದಲಿಗೆ ಅವರು ಆ ಒಂದು ಚಿತ್ರಣದ ಚಿತ್ರವನ್ನು ಬಿಡಿಸಬೇಕು ನಂತರ ಅದರಲ್ಲಿ ಆ ಸಮಯ ಮತ್ತು ಅದರ ಹಿಂದೆ ಮುಂದೆ ಪ್ರತಿಯೊಂದು ಅವರು ಊಹಿಸಿ ನಮಗೆ ಚಿತ್ರಣದ ರೀತಿಯಲ್ಲಿ.
ತೋರಿಸಬೇಕು ನಂತರ ಅದರ ಮುಂದಿನ ಕೆಲಸಗಳು ಶುರುವಾಗುತ್ತದೆ ಮೊದಲಿಗೆ ಆ ಜಾಗದಲ್ಲಿ ಒಂದು ಡ್ರ್ಯಾಗನ್ ಇರಬೇಕು ಎಂದರೆ ಆ ಡ್ರ್ಯಾಗನ್ ಹೇಗಿರಬೇಕು ಮತ್ತು ಆ ಜಾಗದಲ್ಲಿ ಒಂದು ಡ್ರ್ಯಾಗನ್ ಅಥವಾ ಒಂದು ಕಾರು ಅಥವಾ ಒಂದು ಏಲಿಯನ್ ಈ ರೀತಿ ನಾವು ಹೇಗೆ ಊಹಿಸುತ್ತೇವೆ ಅದನ್ನು ಡಿಜಿಟಲ್ ರೀತಿಯಲ್ಲಿ ಉತ್ಪತ್ತಿ ಮಾಡಿ ಬಿಡುತ್ತಾರೆ.
ಅದು ಹೇಗೆಂದರೆ ಮಣ್ಣಿನಲ್ಲಿ ಮಡಿಕೆಯನ್ನು ಮಾಡಿದ ರೀತಿ ಅದನ್ನು ನಾವು ನಮ್ಮ ಕೈಗಳಿಂದ ಮಾಡಿದರೆ ಇವರು ಇವುಗಳನ್ನು ತಂತ್ರಜ್ಞಾನದಿಂದ ಈ ರೀತಿಇರುವ ಸಾಫ್ಟ್ವೇರ್ ಗಳನ್ನು ಉಪಯೋಗಿಸಿ ಮಾಡುತ್ತಾರೆ ಅವು ಯಾವುಗಳೆಂದರೆ ಎಂ ತ್ರಿ ಆಟೋ ಡಿಸ್ಕ್ ಈ ರೀತಿ ಸಾಫ್ಟ್ವೇರ್ಗಳು ಬೇಕಾಗುತ್ತದೆ ನಂತರ ಆ ಡ್ರ್ಯಾಗನ್‌ಗೆ ಜೀವ ಬರಬೇಕು ಅದಕ್ಕೋಸ್ಕರ ಟೆಕ್ಸ್ಚರಿಂಗ್.
ಆರ್ಟಿಸ್ಟ್ ಅನ್ನು ಕರೆಸಬೇಕು ಅವರಿಂದ ಈ ಒಂದು ಡ್ರ್ಯಾಗನಿಗೆ ಜೀವ ಬರುವಂತೆ ಮಾಡಬಹುದು ಅದು ಕೂಡ ತಂತ್ರಜ್ಞಾನದಿಂದ ಈ ವ್ಯಕ್ತಿಗಳು ಆ ಒಂದು ಡ್ರಾಗನಿಗೆ ಅದರ ಬಣ್ಣ ಹೇಗಿರಬೇಕು ಮತ್ತು ಅದರ ತ್ವಚೆ ಹೀಗಿರಬೇಕು ಮತ್ತು ಅದಕ್ಕೆ ಕೂದಲು ಇದ್ದರೆ ಕೂದಲು ಮತ್ತು ಅದರ ಕಣ್ಣಿನ ಡಿಸೈನ್ ಹೀಗೆ ಅದಕ್ಕೆ ಅತಿ ವಿಭಿನ್ನವಾಗಿ ಕಾಣಲು ಏನೇನು ಮಾಡಬೇಕು ಪ್ರತಿಯೊಂದು.
ಮಾಡುತ್ತಾರೆ ನೀವು ನೋಡಿದರೆ ಅದು ನಿಜವಾಗಿ ಒಂದು ಡ್ರ್ಯಾಗನ್ ಬಂದಿರುವ ಹಾಗೆ ಕಾಣುವಂತೆ ಈ ವ್ಯಕ್ತಿಗಳು ತಯಾರು ಮಾಡುತ್ತಾರೆ ಇದನ್ನು ಮಾಡಲು ಉಪಯೋಗಿಸುವ ಸಾಫ್ಟ್ವೇರ್ಗಳು ಮಡ್ ಬಾಕ್ಸ್ ಜೀಬ್ರೆಸ್, ಮಾರಿ, ಬ್ಲೆಂಡರ್, ಈ ರೀತಿ ಇರುವ ಸಾಫ್ಟ್ವೇರ್ ಗಳನ್ನು ಉಪಯೋಗಿಸಿ.
ಈ ರೀತಿ ಮಾಡುತ್ತಾರೆ ನಂತರ ಈಗ ಅದಕ್ಕೆ ಜೀವ ಬಂದಾಯ್ತು,ನಂತರ ಅದು ನಡೆಯುವ ಹಾಗೆ ಮತ್ತು ಅದು ಹಾರುವ ಹಾಗೆ ಅದು ಬಾಯಿಯಿಂದ ಬೆಂಕಿಯನ್ನು ಬಿಡುವ ಹಾಗೆ ಮಾಡಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ