ಸೆಕೆಂಡ್ ಗಳಲ್ಲಿ ಪೂಜೆ ಪಾತ್ರೆಗಳನ್ನು ಪಳಪಳ ಹೊಳೆಯುವ ರೀತಿ ಮಾಡುವ ಜಾದು ನೀರು…
ಇವತ್ತು ನಾವು ತಾಮ್ರ ಮತ್ತು ಹಿತ್ತಾಳೆ ಸಾಮಾನುಗಳನ್ನು ಕೆಲವೇ ಸೆಕೆಂಡ್ ನಲ್ಲಿ ಶುದ್ದಿ ಮಾಡುವ ಒಂದು ನೀರನ್ನು ತೋರಿಸುತ್ತಿದ್ದೇವೆ. ಇನ್ನು ಮುಂದೆ ತಾಮ್ರ ಮತ್ತು ಹಿತ್ತಾಳೆ ಸಾಮಾನುಗಳನ್ನು ತಿಕ್ಕುವ ಸಮಸ್ಯೆ ಇರುವುದಿಲ್ಲ ನೀವು ನೋಡುತ್ತಿರಬಹುದು ಎಲ್ಲೆಲ್ಲಿ ನಾನು ಹಾಕುತ್ತಿದ್ದೇನೆ ಅಲ್ಲಿಯಾ ಜಾಗ ಎಷ್ಟು ನೀಟಾಗಿ ಶುದ್ದಿಯಾಗುತ್ತಿದೆ ಈ ಲಿಕ್ವಿಡ್ ಅಲ್ಲಲ್ಲಿ ಅರಡುತ್ತಿದೆ ಅಲ್ಲಿಯ ಜಾಗ ಪೂರ್ತಿಯಾಗಿ ಸ್ವಚ್ಛವಾಗುತ್ತಿದೆ ಇದೇ ಅಲ್ಲವಾ ಅದ್ಭುತ ಇನ್ನು ಮುಂದೆ ಈ ಪಾತ್ರೆಗಳನ್ನ ಗಂಟೆಗಟ್ಟಲೆ ಉಜ್ಜುವ ಅವಶ್ಯಕತೆ ಇರುವುದಿಲ್ಲ ಎಷ್ಟೇ ಪಾತರೆ ಇದ್ದರೂ ಕೂಡ ಈ ರೀತಿ ನೀರು ತಯಾರಿಸಿ ನಿಮಿಷದಲ್ಲಿ ಶುದ್ದಿ ಮಾಡಬಹುದು ನಾವು ಇದನ್ನು ಎಲ್ಲೆಲ್ಲಿ ಹರಡುತ್ತಿದ್ದೇವೆ ಆ ಜಾಗ ಕ್ಷಣಮಾತ್ರದಲ್ಲಿ ಶುಚಿಯಾಗುತ್ತಿದೆ ಈ ಹಿತಾಳೆಯ ತಟ್ಟೆಯನ್ನು ನೀವು ನೋಡುತ್ತಿರಬಹುದು ಅದು ಎಲ್ಲಿ ಎಲ್ಲಿ ಹರಡುತ್ತಿದೆ ಅಲ್ಲೆಲ್ಲ ಅದು ಶುದ್ದಿಯಾಗುತ್ತಿದೆ ಇವತ್ತು ನಾವು ಈ ಎಲ್ಲಾ ಪಾತ್ರೆಯನ್ನು ಶುಚಿ ಮಾಡೋಣ ನೀವು ನೋಡುತ್ತಿರುವ ಹಾಗೆ ಇದರ ಮೇಲೆ ತುಂಬಾ ಗಲೀಜು ಇದೆ.

ಪೂಜೆ ಮಾಡಲು ಬೇಕಾಗಿರುವ ಸಮಯದಲ್ಲಿ ಅರ್ಧಕ್ಕಿಂತ ಜಾಸ್ತಿ ಸಮಯ ಪೂಜೆಯ ಪಾತ್ರೆ ಶುಚಿ ಮಾಡುವುದರಲ್ಲಿ ಕಳೆದು ಹೋಗುತ್ತದೆ ಆದರೆ ಇನ್ನು ಮುಂದೆ ಹಾಗೆ ಆಗುವುದಿಲ್ಲ ಕೆಲವೇ ನಿಮಿಷವಲ್ಲ ಕ್ಷಣದಲ್ಲಿ ಈ ಪಾತ್ರೆ ಶುದ್ಧಿಯಾಗುತ್ತವೆ ಹಾಗಾದರೆ ತಡ ಮಾಡದೆ ಚಿಟಕೆ ಒಡೆಯುವ ಅಷ್ಟರಲ್ಲಿ ಈ ಪಾತ್ರವನ್ನು ಶುಚಿ ಮಾಡುವ ಜಾದು ನೀರು ಹೇಗೆ ತಯಾರು ಮಾಡುವುದು ಎಂದು ನೋಡೋಣ. ಇಲ್ಲಿ ನಾನು ಸೈಟ್ರಿಕ್ ಆಸಿಡ್ ಅನ್ನು ತೆಗೆದುಕೊಂಡಿದ್ದೇನೆ ಯಾವುದೇ ಕಿರಾಣಿ ಅಂಗಡಿಯಲ್ಲಿ ಸುಲಭವಾಗಿ ಇದು ಸಿಗುತ್ತದೆ ಇದರಲ್ಲಿ ನಿಂಬೆಹಣ್ಣಿನ ಸತ್ವವಿದ್ದು ಇದು 15 ರಿಂದ 20 ರೂಪಾಯಿಗೆ ಒಂದು 50 ಗ್ರಾಂ ನಷ್ಟು ಸಿಗುತ್ತದೆ ನೋಡಲು ಸಕ್ಕರೆಯ ರೀತಿ ಕಾಣುತ್ತದೆ ಇದನ್ನು ಒಂದು ಚಮಚದಷ್ಟು ತೆಗೆದುಕೊಳ್ಳೋಣ ನಾವು ಶುಚಿ ಮಾಡುತ್ತಿರುವ ಪಾತ್ರೆ ಎಷ್ಟು ಕಲೆಯಾಗಿದೆ ಎಂದು ನೋಡಿಕೊಂಡು ಇದನ್ನು ಹಾಕಬೇಕು ನಾನು ಸದ್ಯಕ್ಕೆ ಇದನ್ನು ಒಂದು ಚಮಚ ಹಾಕಿದ್ದೇನೆ ಈಗ ಇದರಲ್ಲಿ ಅರ್ಧ ನಿಂಬೆಹಣ್ಣಿನ ರಸ ಹಾಕಿಕೊಳ್ಳೋಣ ನಿಂಬೆ ಹಣ್ಣಿನ ರಸದಲ್ಲಿ ಈ ಸೈಟ್ರಿಕ್ಸ್ ಆಸಿಡ್ ಅನ್ನು ಕರಗಿಸಿ ತೆಗೆದುಕೊಳ್ಳಿ.

WhatsApp Group Join Now
Telegram Group Join Now

ಇದು ಕರಗಿದ ನಂತರ ಇದಕ್ಕೆ ಉಳಿದಿರುವ ಸಾಮಗ್ರಿಗಳನ್ನು ಹಾಕೋಣ ಅರ್ಧ ಚಮಚ ದಷ್ಟು ಉಪ್ಪನ್ನು ಹಾಕಿ ಎರಡರಿಂದ ಮೂರು ಚಮಚದಷ್ಟು ನೀರನ್ನು ಹಾಕಿ ಈಗ ಉಪ್ಪು ಮತ್ತು ಸೈಟ್ರಿಕ್ ಆಸಿಡ್ ನೀರಿನಲ್ಲಿ ಚೆನ್ನಾಗಿ ಕರಗಿಸಿ ತೆಗೆದುಕೊಳ್ಳಿ ಇವೆಲ್ಲ ಕರಗಿದ ನಂತರವೇ ಇದನ್ನು ನಾವು ಉಪಯೋಗಿಸಬಹುದು ಈಗ ನಿಮಗೆ ಒಂದು ಪ್ರಶ್ನೆ ಬರಬಹುದು ಇದನ್ನು ಹೇಗೆ ಶೇಖರಿಸಿ ಇಡಬಹುದ ಎಂದು ಇಲ್ಲ ಇದನ್ನು ನಾವು ಶೇಖರಿಸಿ ಇಡಲು ಆಗುವುದಿಲ್ಲ ನಾವು ಪಾತ್ರೆಯನ್ನು ಯಾವಾಗ ಶುಚಿ ಮಾಡಬೇಕು ಎಂದುಕೊಳ್ಳುತ್ತೇವೆ ಆಗ ಇದನ್ನು ತಯಾರಿಸಿ ಪಾತ್ರೆಯನ್ನು ಶುಚಿ ಮಾಡಬಹುದು ನಾವು ತಯಾರಿಸುತ್ತಿರುವ ಈ ಲಿಕ್ವಿಡ್ ಅನ್ನು ಪಾತ್ರೆಯ ಮೇಲೆ ಹಾಕಿದ ತಕ್ಷಣವೇ ಅದು ಬಹಳ ಚೆನ್ನಾಗಿ ಶುಚಿಯಾಗುತ್ತದೆ ಆದರೆ ಅದರ ನಂತರ ಮುಖ್ಯ ವಿಷಯವಿದೆ ಅದನ್ನು ಮಾಡಿದರೆ ಮಾತ್ರವೇ ಈ ಪಾತ್ರೆ ಬಹಳ ದಿನದವರೆಗೆ ಪಳಪಳ ಎಂದು ಹೊಳೆಯುತ್ತಿರುತ್ತದೆ ಅದನ್ನು ಮುಂದೆ ಹೇಳುತ್ತೇನೆ ಈಗ ಇವೆಲ್ಲವೂ ಕರಗಿದ್ದಾವೆ, ಈಗ ಇದನ್ನು ಪಾತ್ರೆಯ ಮೇಲೆ ಹಾಕಿ ಅದನ್ನು ಶುಚಿ ಮಾಡೋಣ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ