ಇಂತಹ ರಂಗೋಲಿ ಮನೆ ಮುಂದೆ ಹಾಕುವುದರಿಂದ ಮಹಾಲಕ್ಷ್ಮೀ ದೇವಿ ಆಕರ್ಷಣೆ ಆಗಿ ಮನೆಗೆ ಆಗಮನ ಮಾಡುತ್ತಾಳೆ
ಮನೆಯ ಮುಂದೆ ಬೆಳಗ್ಗೆ ಹಾಗೂ ಸಾಯಂಕಾಲ ರಂಗೋಲಿ ಹಾಕುವುದರ ಮಹತ್ವ. ನಮಸ್ತೆ ಗೆಳೆಯರೆ ಹಬ್ಬ ಹರಿದಿನಗಳ ಸಮಯದಲ್ಲಿ ಬೆಳಗ್ಗೆ ಆಗುವುದಿಲ್ಲ ಕೆಲಸ ಹೆಚ್ಚಾಗಿರುತ್ತದೆ ಎಂದು ಮನೆಯ ಅಂಗಳವನ್ನು ರಾತ್ರಿ ಗುಡಿಸಿ ರಂಗೋಲಿಯನ್ನು ಹಾಕಿರುತ್ತಾರೆ ಈ ರೀತಿ ಮಾಡುವುದರಿಂದ ಒಳ್ಳೆಯದು ಕೆಟ್ಟದ್ದು ಅಥವಾ ಒಳ್ಳೆಯ ಫಲ ಸಿಗುತ್ತದೆಯೋ ಇಲ್ಲವೋ ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ಸಾಯಂಕಾಲ ಬ್ರಾಹ್ಮಿ ಮುಹೂರ್ತ ಅಂದರೆ 5 ರಿಂದ 6 ಗಂಟೆ ಒಳಗೆ ಅಂಗಳವನ್ನು ಗುಡಿಸಿ ಸಗಣಿ ನೀರನ್ನು ಹಾಕಿ ರಂಗೋಲಿಯನ್ನು ಹಾಕುವುದರಿಂದ ಮನೆಗೆ ಮಹಾಲಕ್ಷ್ಮಿ ಪ್ರವೇಶವಾಗಿ ಮಹಾಲಕ್ಷ್ಮಿ ಸ್ಥಿರವಾಗಿ ಮನೆಯಲ್ಲಿ ನೆಲೆಸುವಂತೆ ಆಗುತ್ತದೆ. ಯಾವಾಗಲೂ ಮನೆಗೆ ಮಹಾಲಕ್ಷ್ಮಿ ಬೆಳಗ್ಗೆ ಬರುತ್ತಾಳೆ ಆದರೆ ಸಾಯಂಕಾಲ ದೀಪವನ್ನು ಯಾಕೆ ಬೆಳಗಿಸಬೇಕು ಎಂದರೆ ಮನೆಯಲ್ಲಿರುವ ದರಿದ್ರ ದೇವಿ ಹೊರಗೆ ಹೋಗಲು ದೀಪವನ್ನು ಸಾಯಂಕಾಲಬೆಳಗಿಸುತ್ತೇವೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಸಾಕಷ್ಟು ಹೆಚ್ಚಿಗೆ ಉಂಟು ಮಾಡುತ್ತದೆ.
ಪ್ರತಿದಿನ ಸಾಯಂಕಾಲ ಹೊಸ್ತಿಲನ್ನು ತೊಳೆದು ಅರಿಶಿನ ಕುಂಕುಮ ಹಚ್ಚಿ ರಂಗೋಲಿಯನ್ನು ಹಾಕಬೇಕು ಹಾಗೂ ಬೆಳಿಗ್ಗೆ ಎದ್ದು ಪುನಃ ಮತ್ತೆ ರಂಗೋಲಿ ಹಾಕಬೇಕು ಏಕೆಂದರೆ ಸಾಯಂಕಾಲದ ರಂಗೋಲಿಯನ್ನು ಹಾಗೆ ಬೆಳಗ್ಗೆ ಬಿಡುವುದು ಅಷ್ಟೊಂದು ಫಲಕಾರಿಯಾಗುವುದಿಲ್ಲ ಬೆಳಗ್ಗೆ ನೀವು ಪುನಃ ರಂಗೋಲಿ ಹಾಕಿದಾಗಲೇ ಲಕ್ಷ್ಮೀದೇವಿ ಮನೆಗೆ ಪ್ರವೇಶ ಮಾಡುತ್ತಾಳೆ ಬೆಳಗ್ಗೆ ಹಾಕಿದ ರಂಗೋಲಿಗೆ ಅಷ್ಟು ಅದ್ಭುತವಾದ ವಿಶೇಷ ಶಕ್ತಿ ಇರುತ್ತದೆ ನಕಾರಾತ್ಮಕ ಶಕ್ತಿಯನ್ನು ಮನೆಯ ಒಳಗೆ ಪ್ರವೇಶಿಸಿದಂತೆ ಹಿಡಿದಿಟ್ಟುಕೊಳ್ಳುವ ಶಕ್ತಿ ಬೆಳಗ್ಗೆ ಹಾಕಿದ ರಂಗೋಲಿಗೆ ಇರುತ್ತದೆ. ಇನ್ನು ಗೆಳೆಯರೇ ಕೆಲವೊಬ್ಬರು ಬಾಗಿಲನ್ನು ಚೆನ್ನಾಗಿ ತೊಳೆದು ರಂಗೋಲಿಯನ್ನು ಅಷ್ಟೇ ಹಾಕಿ ಬರುತ್ತಾರೆ ಆದರೆ ರಂಗೋಲಿಯನ್ನು ಬಿಡಿಸುವಾಗ ಮೊದಲು 4 ಬದಿಗಳಿಗೂ ಅಂಚನ್ನು ಮೊದಲು ಬಿಡಿಸಬೇಕು ಈ ರೀತಿ ಹಾಕಿದರೆ ಮಹಾಲಕ್ಷ್ಮಿ ಆಕರ್ಷಿತಳಾಗಿ ಮನೆಯೊಳಗೆ ಬರುತ್ತಾರೆ ಅಂಚನ್ನು ಹಾಕದೆ ರಂಗೋಲಿಯನ್ನು ಹಾಗಿದ್ದರೆ ಮನೆಯಲ್ಲಿ ಪಿತೃ ಕಾರ್ಯಗಳು ಹೆಚ್ಚಾಗಿ ನಡೆಯುತ್ತವೆ ಹಾಗಾಗಿ ಆದಷ್ಟು 4 ಬದಿಗೆ ಅಂಚನ್ನು ಹಾಕಿ ರಂಗೋಲಿಯನ್ನು ಬಿಡಿಸಬೇಕು.
ಆಗ ರಂಗೋಲಿಗೆ ಒಂದು ಅರ್ಥ ಸಿಗುತ್ತದೆ ಈ ರೀತಿಯಾಗಿ ರಂಗೋಲಿ ಹಾಕುವುದರಿಂದ ನಿಮ್ಮ ಮನೆಗೆ ಎಲ್ಲಾ ರೀತಿಯ ಸಮೃದ್ಧಿ ಬರುತ್ತದೆ. ಆದರೆ ಗೆಳೆಯರೇ ಸಾಯಂಕಾಲ ರಂಗೋಲಿಯನ್ನು ದೀಪಾರಾಧನೆ ಮಾಡುವುದಕ್ಕಿಂತ ಮೊದಲು ಹಾಕಿ ನಂತರ ಬೆಳಗ್ಗೆ ಪುನಃ ಮತ್ತೆ ಬೇರೆ ರಂಗೋಲಿಯನ್ನು ಹಾಕಬೇಕು ಸಾಯಂಕಾಲದ ರಂಗೋಲಿಯನ್ನು ಹಾಗೆ ಬಿಡುವುದು ಅಷ್ಟೊಂದು ಸೂಕ್ತಕರವಲ್ಲ ಅದು ದರಿದ್ರಲಕ್ಷ್ಮಿಯನ್ನು ಹೊರಗೆ ಹಾಕಲು ಆಗಿರುತ್ತದೆ ಹಾಗಾಗಿ ಅದೃಷ್ಟ ಲಕ್ಷ್ಮಿಯನ್ನು ಬೆಳಗ್ಗೆ ನಿಮ್ಮ ಮನೆಗೆ ಆಹ್ವಾನಿಸಲು ಬೆಳಗ್ಗೆ ಹೊಸ್ತಿಲನ್ನು ತೊಳೆದು ಅರಿಶಣ ಕುಂಕುಮ ಹಚ್ಚಿ ಪುನಃ ರಂಗೋಲಿಯನ್ನು ಬಿಡಿಸಬೇಕು ಉತ್ತಮ ರೀತಿಯಲ್ಲಿ ಲಕ್ಷ್ಮಿಯ ಪ್ರವೇಶ ನಿಮ್ಮ ಮನೆಯಲ್ಲಿ ಆಗುತ್ತದೆ ಇದರಿಂದ ನಿಮ್ಮ ಎಲ್ಲ ಸಮಸ್ಯೆಗಳು ನಿವಾರಣೆಯಾಗುತ್ತವೆ ನಿಮಗೆ ಇರುವು ದರಿದ್ರ ತೊಲಗಿ ಹೋಗುತ್ತದೆ ಸುಖ ಸಂತೋಷ ನಿಮ್ಮ ಮನೆಯಲ್ಲಿ ಶಾಶ್ವತವಾಗಿರುತ್ತದೆ ಧನ ಲಾಭವಾಗುತ್ತದೆ.