ಹಲ್ಲಿ ಯಾವ ಭಾಗದಲ್ಲಿ ಬಿದ್ದರೆ ಏನು ಫಲ…ಸಾಮಾನ್ಯವಾಗಿ ಮನೆ ಎಂದ ಮೇಲೆ ಎಲ್ಲರ ಮನೆಯಲ್ಲೂ ಕೂಡ ಈ ಹಲ್ಲಿಗಳ ವಾಸಸ್ಥಾನ ಇದ್ದೇ ಇರುತ್ತದೆ ಹಾಗೆ ಆಫೀಸ್ ನಲ್ಲಾದರೂ ಕೂಡ ಈ ಹಲ್ಲಿಗಳು ನಮಗೆ ನೋಡುವುದಕ್ಕೆ ಸಿಗುತ್ತದೆ ಇವತ್ತು ನಾನು ಹಲ್ಲಿ ಶಕುನ ಇದರ ಬಗ್ಗೆ ತಿಳಿಸುತ್ತಾ ಹೋಗುತ್ತೇನೆ ಸಾಮಾನ್ಯವಾಗಿ ಒಂದೊಂದು ಬಾರಿ ಏನಾಗುತ್ತದೆ ಎಂದರೆ ಈ ಹಲ್ಲಿಗಳು.
ಜಗಳವಾಡುತ್ತಾ ಆಡುತ್ತಾ ರಫ್ ಎಂದು ಕೆಳಗೆ ಬೀಳುತ್ತವೆ ಭಯದಿಂದ ನಾವು ಎದ್ದು ಆ ಕಡೆ ಈ ಕಡೆ ಹೋಗುತ್ತಿರುತ್ತೇವೆ ಇದು ಏನು ಹೇಳುತ್ತದೆ ಎಂದರೆ ಮನೆಯಲ್ಲಿ ಒಂದು ಕಲಹ ನಡೆಯಬಹುದು ಮನೆಯಲ್ಲಿ ಗುರು ಹಿರಿಯರ ಜೊತೆ ಜಗಳವಾಗಬಹುದು ಸ್ವಲ್ಪ ಆ ಸಮಯದಲ್ಲಿ ಕೋಪವನ್ನ ನಾವು ತಡೆದು ಹಿಡಿದುಕೊಳ್ಳಬೇಕು ಅನ್ನುವುದನ್ನು ಕೂಡ.
ತೋರಿಸಿಕೊಡುತ್ತಿರುತ್ತದೆ ಹಾಗೆ ಹಲ್ಲಿ ಒಂದು ಬಾರಿ ಏನಾಗುತ್ತದೆ ಎಂದರೆ ಏನಾದರೂ ಪ್ರಾಣಿಯನ್ನು ಬಾಯಲ್ಲಿ ಕಚ್ಚಿಕೊಂಡು ಹೋಗುತ್ತಿರುತ್ತದೆ ಅದು ಕೂಡ ಒಂದು ಧನಪ್ರಾಪ್ತಿ ಎಂದು ಹೇಳುತ್ತಿರುತ್ತಾರೆ ಒಂದೊಂದು ಬಾರಿ ನಮಗೆ ಏನಾಗುತ್ತಿರುತ್ತದೆ ಎಂದರೆ, ಈ ಹಲ್ಲಿಗಳು ಸತ್ತು ಬಿದ್ದಿರುತ್ತವೆ ಈ ಸತ್ತು ಬಿದ್ದಂತಹ ಹಲ್ಲಿಗಳನ್ನ ನಾವು ನೋಡಿದಾಗ ಮನೆಯಲ್ಲಿ ಯಾರಿಗೋ ಸ್ವಲ್ಪ.
ಹುಷಾರಿಲ್ಲದ ಹಾಗೆ ಆಗಬಹುದು ಅನ್ನುವಂತಹ ಒಂದು ಸೂಚನೆ ಕೂಡ ಇದರಿಂದ ಅರ್ಥಕ್ಕೆ ಸಿಗುತ್ತಿರುತ್ತದೆ ಕೆಲವೊಂದು ಬಾರಿ ನಾವು ಸಾಮಾನ್ಯವಾಗಿ ಕುಳಿತುಕೊಂಡಾಗ ಈ ಹಲ್ಲಿಗಳು ಶಬ್ದ ಮಾಡುತ್ತಿರುತ್ತವೆ ಇದರಿಂದ ನಮಗೆ ಒಂದೊಂದು ಬಾರಿ ಏನಾಗುತ್ತದೆ ಎಂದರೆ ಮೃಷ್ಟಾನ್ನ ಭೋಜನ ಕೂಡ ಸಿಗುತ್ತಿರುತ್ತದೆ ಇಲ್ಲವಾದರೆ ದ್ರವ್ಯ ಲಾಭವೂ ಕೂಡ ಆಗುತ್ತಿರುತ್ತದೆ ಸಡನ್ ಆಗಿ.
ಯಾರೋ ಸ್ನೇಹಿತ ಬಂದು ಕರೆದುಕೊಂಡು ಹೋಗಿ ಒಳ್ಳೆಯ ಊಟ ಕೊಡಿಸಬಹುದು ಇಲ್ಲವಾದರೆ ಒಂದು ದ್ರವ್ಯ ಲಾಭ ಈ ರೀತಿ ಎಲ್ಲವೂ ಕೂಡ ಸಾಮಾನ್ಯವಾಗಿ ಎಷ್ಟೋ ಜನರ ಜೀವನದಲ್ಲಿ ನಡೆಯುತ್ತಿರುತ್ತದೆ ಇವತ್ತು ಹಲ್ಲಿಗಳು ಯಾವ ಯಾವ ಭಾಗದಲ್ಲಿ ಬಿದ್ದರೆ ಏನೇನಲ್ಲ ಅರ್ಥ ಕೊಡುತ್ತದೆ ಎಂದು ತಿಳಿಸುತ್ತಾ ಹೋಗುತ್ತೇನೆ ಹಲ್ಲಿ ಏನಾದರೂ ತಲೆಯ ಮೇಲೆ.
ಬಿದ್ದರೆ ಕಲಹ ಎಂದು ಹೇಳುತ್ತಿರುತ್ತಾರೆ ಒಂದು ರೀತಿ ಏನೋ ಜಗಳ ಕಾದಿದೆ ಏನೋ ಒಂದು ಅನಾಹುತ ನಡೆಯುವುದರಲ್ಲಿ ಇದೆ ಅನ್ನುವ ಒಂದು ಹಲ್ಲಿಯ ಶಾಸ್ತ್ರದಲ್ಲಿ ಬರುತ್ತಿರುತ್ತದೆ ಅಥವಾ ನೆತ್ತಿಯ ಮೇಲೆ ಬಿದ್ದಾಗ ಮರಣ ಎಂದು ಹೇಳುತ್ತಿರುತ್ತಾರೆ ಹಾಗಾಗಿ ಆ ಸಮಯದಲ್ಲಿ ಕೆಲವರು ಏನು ಮಾಡುತ್ತಿರುತ್ತಾರೆ ಎಂದರೆ ದೇವಸ್ಥಾನಕ್ಕೆಲ್ಲ ಹೋಗಿ ಬರುತ್ತಿರುತ್ತಾರೆ ಈ ಕಂಚಿಗೆ.
ಹೋಗಿ ಬಂದವರ ದರ್ಶನವನ್ನು ಕೂಡ ಮಾಡಿಕೊಂಡು ಬರುತ್ತಿರುತ್ತಾರೆ ಈ ಕಂಚಿ ಒಳಗೆ ಏನು ಎಂದರೆ ಚಿನ್ನದ ಒಂದು ಹಲ್ಲಿಯ ವಿಗ್ರಹ ಪ್ರತಿಷ್ಠಾಪನೆ ಮಾಡಿರುತ್ತಾರೆ ಅಂತಹದನ್ನ ಯಾರು ನೋಡಿಕೊಂಡು ಬಂದಿರುತ್ತಾರೋ ಅಂಥವರ ಬಳಿ ಹೋಗಿ ಕಾಲಿಗೆ ಬೀಳುತ್ತಿರುತ್ತಾರೆ ಇವೆಲ್ಲವೂ ಸಾಮಾನ್ಯವಾಗಿ.
ತಿಳಿದೋ ತಿಳಿಯದೆಯೋ ಎಷ್ಟೋ ಜನ ಅರ್ಥಮಾಡಿಕೊಂಡಿರುತ್ತಾರೆ ಹಾಗೆ ಈ ಹಲ್ಲಿ ಏನಾದರೂ ಮುಖದ ಮೇಲೆ ಬಿದ್ದಾಗ ಅದನ್ನು ಧನಾಗಮನ ಎಂದು ಹೇಳುತ್ತಿರುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.