ಹಳೇ ಸೀರೆಯಲ್ಲಿ ಹೊಸ ಡೋರ್ ಮ್ಯಾಟ್…ನಾವು ಇವತ್ತು ಹಳೆ ಸೀರೆಯನ್ನು ಉಪಯೋಗಿಸಿ ಹೊಸ ಡೋರ್ ಮ್ಯಾಟ್ ಯಾವ ರೀತಿ ಮಾಡುವುದು ಎಂದು ಹೇಳಿಕೊಡುತ್ತೇವೆ ಎಲ್ಲರ ಮನೆಯಲ್ಲೂ ಹಳೆ ಸೀರೆ ಇದ್ದೇ ಇರುತ್ತದೆ ಸುಮ್ಮನೆ ಇರುವ ಬದಲು ಈ ರೀತಿಯಾದಂತಹ ಹೊಸ ಮ್ಯಾಟ್ ಅನ್ನು ಹಾಕಿಕೊಳ್ಳಬಹುದು ಡೋರ್ ಮ್ಯಾಟ್ ಮಾಡುವುದಕ್ಕೆ ಏನೇನು.
ಬೇಕು ಎಂದರೆ ಒಂದು ಪೂರ್ತಿ ಸೀರೆ ಎರಡು ಕ್ರೋಶ ಕಡ್ಡಿ ಒಂದು ದಬ್ಬಳ ದಬ್ಬಳ ಇಲ್ಲವೆಂದರೆ ಸೇಫ್ಟಿ ಪಿನ್ ತೆಗೆದುಕೊಳ್ಳಿ ಒಂದು ಕತ್ತರಿ ಕತ್ತರಿಸುವುದಕ್ಕೆ ಸೀರೆಯಲ್ಲಿ ಉದ್ದುದ್ದವಾಗಿ ಕತ್ತರಿಸಿಕೊಳ್ಳಿ ಅಡ್ಡಲಾಗಿ ಕತ್ತರಿಸಿಕೊಳ್ಳಬೇಡಿ ಈ ರೀತಿಯಾಗಿ ಸ್ವಲ್ಪ ಕತ್ತರಿಸಿಕೊಂಡರೆ ಸಾಕು ಕೈಯಿಂದ ಅದನ್ನು ಎಳೆದುಕೊಂಡರೆ ಆಗುತ್ತದೆ ನಾವು ಎಷ್ಟಕ್ಕೆ ಕತ್ತರಿಸುತ್ತೇವೋ ಅಷ್ಟಕ್ಕೆ ಸಮನಾಗಿ.
ಅದು ಬರುತ್ತದೆ ತುಂಬಾ ಸುಲಭವಾಗಿ ಮಾಡಿಕೊಳ್ಳಬಹುದು ಮ್ಯಾಟ್ ಅನ್ನು ಕೊನೆಯಲ್ಲಿ ಪೂರ್ತಿಯಾಗಿ ಎಳೆಯಬೇಡಿ ಸ್ವಲ್ಪ ಬಟ್ಟೆಯನ್ನು ಉಳಿಸಿಕೊಳ್ಳಿ ಏಕೆಂದರೆ ಕೊನೆಯಲ್ಲಿ ಒಲೆಯುವ ಅವಶ್ಯಕತೆ ಇರುವುದಿಲ್ಲ ಹೀಗೆ ಜಾಗ ಉಳಿಸಿಕೊಂಡು ಕತ್ತರಿಸಿದರೇ ಸುಲಭ ಎನಿಸುತ್ತದೆ ಇದೇ ರೀತಿ ಪೂರ್ತಿ ಸೀರೆಯನ್ನು ಈ ರೀತಿ ಸ್ವಲ್ಪ ಕತ್ತರಿಸಿ ಹೇಳಿದರೆ ಸಾಕು ಅದು.
ಸಮಾನವಾಗಿ ಬರುತ್ತದೆ ತುಂಬಾ ರಫ್ ಇರುವ ಸೀರೆಯನ್ನು ಉಪಯೋಗಿಸಬೇಡಿ ಅದು ಸ್ವಲ್ಪ ಸ್ಮೂತ್ ಆಗಿ ಇರಬೇಕು ಎಂಬ್ರಾಯಿಡರಿ ಇರುವಂತಹ ಸೀರೆಯನ್ನು ಉಪಯೋಗಿಸಿ ಬೇಡಿ ಅದು ಸರಿಯಾಗಿ ಬರುವುದಿಲ್ಲ ಮನೆಯಲ್ಲೇ ನಾವು ಈ ರೀತಿಯಾದ ಡೋರ್ ಮ್ಯಾಟ್ ಮಾಡಿಕೊಂಡರೆ ನಮಗೆ ಒಂದು ರೀತಿಯ ಖುಷಿ ಇರುತ್ತದೆ ಅದನ್ನು ನೋಡಿದಾಗೆಲ್ಲ ನಾವು.
ಮಾಡಿದ್ದು ಎಂದು, ಈ ಡೋರ್ ಮ್ಯಾಟ್ ಎಷ್ಟೇ ಬಳಸಿದರು ಬೇಗ ಹಾಳಾಗುವುದಿಲ್ಲ 10 ರಿಂದ 15 ವರ್ಷ ಬಾಳಿಕೆ ಬರುತ್ತದೆ ನಾನು ಕತ್ತರಿಸಿದ ಇಡೀ ಸೀರೆಯನ್ನು ಈ ರೀತಿಯಾಗಿ ಉಂಡೆಯ ರೀತಿ ಮಾಡಿಕೊಂಡು ಇಟ್ಟುಕೊಂಡಿದ್ದೇನೆ ಏಕೆಂದರೆ ಅದು ಗಂಟಾಗಬಾರದು ಎಂದು ಈ ರೀತಿಯಾಗಿ ಸುತ್ತಿ ಇಟ್ಟುಕೊಂಡರೆ ಎಳೆ ಎಳೆಯಾಗಿ ನೀಟಾಗಿ ಬರುತ್ತದೆ ನಾವು ಒಂದೇ ಬಣ್ಣವನ್ನು.
ಬಳಸಬೇಕೆಂದೇನಿಲ್ಲ ಮೂರು ಬಣ್ಣವನ್ನು ತೆಗೆದುಕೊಂಡು ಈ ರೀತಿಯಾಗಿ ಹಾಕಬಹುದು ಒಂದು ಕ್ರೋಶ ಕಡ್ಡಿಯನ್ನು ತೆಗೆದುಕೊಳ್ಳಿ ಅದಕ್ಕೆ ಒಂದು ಸಣ್ಣನೆಯ ಗಂಟನ್ನು ಹಾಕಿಕೊಳ್ಳಿ ಈ ರೀತಿಯಾಗಿ ತುಂಬಾ ಸುಲಭವಾಗಿ ಮನೆಯಲ್ಲೇ ಹಾಕಿಕೊಳ್ಳಬಹುದು ಹೊಸಬರಾದರೆ ನಾಲ್ಕೈದು ದಿನಗಳಲ್ಲಿ ಹಾಕಬಹುದು. ಗೊತ್ತಿರುವವರ ಹಾಕಿದರೆ ಎರಡು ದಿನಗಳಲ್ಲಿ.
ಹಾಕಬಹುದು ಮೊದಲನೆಯದಾಗಿ ಈ ರೀತಿಯಾಗಿ ನಾವು ನಾಟನು ಹಾಕಿಕೊಳ್ಳಬೇಕು ನಾವು ಮೊದಲೇ ತೀರ್ಮಾನ ಮಾಡಬೇಕು ಮ್ಯಾಟ್ ಚಿಕ್ಕದಾಗಿ ಅಥವಾ ಮಧ್ಯದಲ್ಲಿ ಬೇಕಾ ಅಥವಾ ದೊಡ್ಡದಾಗಿ ಬೇಕಾ ಎಂದು ನನಗೆ ದೊಡ್ಡದಾಗಿ ಬೇಕು ಎಂದು 40 ಸ್ಟೆಪ್ ಹಾಕಿಕೊಳ್ಳುತ್ತಿದ್ದೇನೆ ಈ ರೀತಿಯಾಗಿ ಈ ರೀತಿಯಾಗಿ ಮೊದಲೇ ಲಾಕ್ ಮಾಡಿಕೊಳ್ಳಬೇಕು ಎನಿಸಿಕೊಂಡೆ.
ಹಾಕಿಕೊಳ್ಳಿ ನಲವತ್ತನ್ನು ಮಧ್ಯಮ ಪ್ರಮಾಣದಲ್ಲಿ ಬೇಕು ಎಂದರೆ ಇಪ್ಪತ್ತು ಅಥವಾ ಅದಕ್ಕಿಂತ ಚಿಕ್ಕದಾಗಿ ಬೇಕು ಎಂದರೆ ಹದಿನೈದು ಹಾಕಿಕೊಂಡಿ ನೋಡಿ ನಿಮಗೆ ಗೊತ್ತಾಗುತ್ತದೆ ಇಲ್ಲಿ ನಾನು ಸ್ಕ್ವೇರ್ ಮ್ಯಾಟ್ ಅನ್ನು ಹಾಕುತ್ತಿರುವುದು ನಿಮಗೆ ಎಷ್ಟು ಅಗಲ ಬೇಕೋ ಆ ರೀತಿಯಾಗಿ ಹಾಕಿಕೊಳ್ಳಬಹುದು ನಾನು ಇಲ್ಲಿ ಮೂರು ಬಣ್ಣವನ್ನು ಉಪಯೋಗಿಸಿ ಡೋರ್ ಮ್ಯಾಟ್ ಅನ್ನು.
ಹಾಕುತ್ತಿದ್ದೇನೆ ನಾವು ಲಾಕ್ ಆಗಿರುವುದು ಈ ರೀತಿಯಾಗಿ ಫ್ರೀಯಾಗಿ ಮುಂದೆ ಹಿಂದೆ ಹೋಗಬೇಕು ನಾನು ಇಲ್ಲಿ 40 ಅನ್ನು ಎಣಿಸಿಕೊಂಡೆ ಹಾಕುತ್ತಿದ್ದೇನೆ ಮನೆಯಲ್ಲಿ ತುಂಬಾ ಹಳೆಯ ಸೀರೆ ಇರುತ್ತದೆ ಅದರಲ್ಲಿ ಬಣ್ಣಗಳನ್ನು ನೋಡಿಕೊಂಡು ನಿಮಗೆ ಹೊಂದಾಣಿಕೆಯಾಗುವಂತೆ ಹಾಕಿಕೊಳ್ಳಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ