ಉಗುರು ಸುತ್ತಿಗೆ ಮನೆ ಮದ್ದು..ಸಾಮಾನ್ಯವಾಗಿ ಬೆರಳುಗಳ ಸಂಧಿಯಲ್ಲಿ ಹಾಗೂ ತುದಿಯಲ್ಲಿ ಕಣ್ಣಿಗೆ ಕಾಣದ ಬ್ಯಾಕ್ಟೀರಿಯಾಗಳು ಅಡಗಿರುತ್ತವೆ. ಅವುಗಳಿಂದ ಕಾಲಿನ ತುದಿಯಲ್ಲಿ ಕೆಂಪಾಗುವುದು ಹಾಗೂ ಉರಿಯುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಇದನ್ನು ಉಗುರು ಸುತ್ತು ಎಂದು ಪರಿಗಣಿಸಲಾಗುತ್ತದೆ ಆದರೆ ಇದು ಅನೇಕರಿಗೆ ತಿಳಿದಿರುವುದಿಲ್ಲ. ಹಾಗೆ ಬಿಟ್ಟರೆ ಅದು ಸರಿ ಹೋಗುತ್ತದೆ ಇಲ್ಲ ಎಂದರೆ ಅದಕ್ಕೆ ಹೆದರ ಮಾತರೆ ತೆಗೆದುಕೊಂಡರೆ ಸರಿ ಹೋಗುತ್ತದೆ ಎಂದು ಬಿಟ್ಟುಬಿಡುತ್ತಾರೆ. ಆದರೆ ಅದರಿಂದ ಅನೇಕ ರೀತಿಯ ತೊಂದರೆಗಳು ಆಗುತ್ತವೆ.ಇದಕ್ಕೆ ಮನೆಯಲ್ಲಿಯೇ ಮಾಡಬಹುದಾದ ಚಿಕಿತ್ಸೆಯ ಒಂದು ಸಣ್ಣ ವಿವರ, ಇದನ್ನು ಸರಿಯಾಗಿ ಮಾಡಿದರೆ ಉಗುರು ಸುತ್ತು ಎಂಬುದು ಬಹುಬೇಗ ಮಾಯವಾಗುತ್ತದೆ. ಮನೆಯಲ್ಲಿಯೇ ಸಿಗುವಂತಹ ಸಾಮಗ್ರಿಗಳಿಂದ ಇದನ್ನು ಮಾಡಿಕೊಳ್ಳಬಹುದು ಅದರ ಬಗ್ಗೆ ತಿಳಿದುಕೊಳ್ಳೋಣ.ಮೊದಲಿಗೆ ಮೆಣಸು ಹಾಗೂ ಯಾಲಕ್ಕಿ ಮತ್ತು ಹರಿಶಿಣ ನಿಂಬೆಹಣ್ಣು ತೆಗೆದುಕೊಳ್ಳೋಣ.

ಮೊದಲಿಗೆ ಮೆಣಸನ್ನು ಚೆನ್ನಾಗಿ ಕುಟ್ಟಿ ಪುಡಿ ಮಾಡಿಕೊಳ್ಳಬೇಕು. ಅದಾದ ನಂತರ ಯಾಲಕ್ಕಿಯ ಸಿಪ್ಪೆ ತೆಗೆದು ಅವುಗಳ ಕಾಳುಗಳನ್ನು ಅದೇ ರೀತಿ ಕುಟ್ಟಿ ಪುಡಿ ಮಾಡಿಕೊಳ್ಳ ಬೇಕು ಅದಾದ ನಂತರ ಅರಿಶಿಣದ ಜೊತೆ ಮೆಣಸು ಮತ್ತು ಯಾಲಕ್ಕಿ ಪುಡಿಯನ್ನು ಮಿಶ್ರಣ ಮಾಡಿಕೊಳ್ಳಬೇಕು. ಅರಿಶಿಣವನ್ನು ಸಾಮಾನ್ಯವಾಗಿ ಆಂಟಿ ಆಕ್ಸಿಡೆಂಟ್ ಗುಣ ಇರುವ ಒಂದು ವಸ್ತುವಾಗಿ ಪರಿಗಣಿಸಲಾಗುತ್ತದೆ ಆದ್ದರಿಂದ ಅದನ್ನು ಅನೇಕ ರೀತಿಯಾಗಿ ಬಳಸಿಕೊಳ್ಳಬಹುದು.ಅದಾದ ನಂತರ ನಿಂಬೆ ಹಣ್ಣನ್ನು ತುಂಡು ಮಾಡಿಕೊಂಡು ನಿಂಬೆಹಣ್ಣಿನಲ್ಲಿರುವ ಬೀಜಗಳನ್ನು ಹೊರತೆಗೆದು. ನಂತರ ಮಿಶ್ರಣ ಮಾಡಿಕೊಂಡ ಆ ಪುಡಿಯನ್ನು ನಿಂಬೆಹಣ್ಣಿನ ಒಳಗಡೆ ಹಾಕಬೇಕು ಈ ರೀತಿ ಮಾಡಿದರೆ ಮನೆಯಲ್ಲಿಯೇ ಈ ಉಗುರು ಸುತ್ತಿಗೆ ಪರಿಹಾರವನ್ನು ಕಂಡುಕೊಳ್ಳಬಹುದು.ಸಾಮಾನ್ಯವಾಗಿ ಕೊಳಕು ನೀರಿನಲ್ಲಿ ಹಾಗೂ ರಸ್ತೆ ಬದಿಯಲ್ಲಿ ತಿರುಗಾಡಿ ಬಂದರೆ ಈ ರೀತಿ ಬೆರಳು ತುದಿಯಲ್ಲಿ ಬ್ಯಾಕ್ಟೀರಿಯಾ ಗಳಿಂದ ಈ ರೀತಿ ಉಗುರು ಸುತ್ತು ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.

WhatsApp Group Join Now
Telegram Group Join Now

ಅದು ಮನೆಗೆ ಬಂದ ಕೂಡಲೇ ಬಿಸಿನೀರಲ್ಲಿ ಕಾಲನ್ನು ಚೆನ್ನಾಗಿ ತೊಳೆದುಕೊಂಡರೆ ಅದನ್ನು ತಡೆಗಟ್ಟಬಹುದು ಅನೇಕರು ಈ ಉಗುರು ಸುತ್ತನ್ನು ನಾನಾ ರೀತಿಯಲ್ಲಿ ಗುರುತಿಸುತ್ತಾ ಹೋಗುತಾರೇ.ಅಂದರೆ ಉಗುರಿನ ಹತ್ತಿರ ಕ್ಯೂ ಬರುವುದು ಮತ್ತು ಕೆಂಪಾಗಿ ಅದನ್ನು ಹಾಗೆ ಬಿಡುವುದು ಮತ್ತು ಅದನ್ನು ಕೈಗಳಿಂದ ಮುಟ್ಟುತ್ತಾ ಹೋಗುವುದು. ಈ ರೀತಿ ಮಾಡದೆ ನಿರ್ದಿಷ್ಟವಾಗಿ ಅದು ಕಾಣಿಸಿಕೊಂಡ ಕೂಡಲೇ ಈ ರೀತಿ ಮನೆ ಮದ್ದನ್ನು ತಯಾರಿಸಿ ಅದನ್ನು ಮಾಡಿಕೊಂಡರೆ ಆ ನೋವಿನಿಂದ ಮತ್ತು ಆ ಉಗಿರಿಸುತ್ತಿವಿನಿಂದ ನಿರಂತರ ಪರಿಹಾರವನ್ನು ಕಂಡುಕೊಳ್ಳಬಹುದು.ಇದು ಹೆಚ್ಚಾಗಿ ಅನೇಕರಿಗೆ ಕಂಡು ಬರುತ್ತದೆ ಅಂದರೆ ನೀರಿನಲ್ಲಿ ಸದಾ ಕೆಲಸ ಮಾಡುವವರು ಮತ್ತು ಈ ಶುದ್ಧ ನೀರಲ್ಲಿ ಕೆಲಸವನ್ನು ನಿರ್ವಹಿಸದೆ ಇದ್ದ ಹಾಗೂ ಮಕ್ಕಳು ಅತಿಯಾಗಿ ಕೊಳಕು ನೀರಲ್ಲೂ ಮತ್ತು ಶರೀರದ ಹೊರಗಡೆ ಕಂಡುಬರುವ ಜಾಗದಲ್ಲಿ ಬರಿಗಲ್ಲಿನಿಂದ ಆಟವಾಡುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.