ಹೆಂಡತಿಯ ಮಹತ್ವ! ಕನ್ನಡ ಸಣ್ಣ ಕಥೆಗಳು…ಒಬ್ಬ ವ್ಯಕ್ತಿ ಒಂದು ಸ್ವಾಮೀಜಿಯಲ್ಲಿ ತನ್ನ ಹೆಂಡತಿಯ ಬಗ್ಗೆ ದೂಷಣೆ ಮಾಡ್ತಾ ಇದ್ದ ಆಗ ಆ ಸ್ವಾಮೀಜಿ ಅವನಲ್ಲಿ ನಿನ್ನ ಮನೆಯಲ್ಲಿ ಬಟ್ಟೆ ಒಗಿಯುವವರು ಯಾರು ಎಂದು ಆ ವ್ಯಕ್ತಿಯಲ್ಲಿ ಕೇಳಿದಾಗ ಅವನು ನನ್ನ ಹೆಂಡತಿ ಅಂತ ಹೇಳುತ್ತಾನೆ ನಂತರ ಸ್ವಾಮೀಜಿ.

WhatsApp Group Join Now
Telegram Group Join Now

ಮತ್ತೆ ಕೇಳುತ್ತಾರೆ ನಿಮ್ಮ ಮನೆಯ ಬಾಣಸಿಗ ಯಾರು? ಆಗ ಆ ವ್ಯಕ್ತಿ ಹೇಳುತ್ತಾನೆ ನನ್ನ ಹೆಂಡತಿ ಮತ್ತೊಮ್ಮೆ ಸ್ವಾಮೀಜಿ ಕೇಳುತ್ತಾರೆ ನಿಮ್ಮ ಮನೆ ಕೆಲಸ ಯಾರು ಮಾಡುವುದು? ಆಗ ವ್ಯಕ್ತಿ ಹೇಳುತ್ತಾನೆ ನನ್ನ ಹೆಂಡತಿ ಸ್ವಾಮೀಜಿ ಮತ್ತೆ ಕೇಳುತ್ತಾರೆ ನಿನ್ನನ್ನು ಹಾಗೆ ನಿನ್ನ ತಂದೆ ತಾಯಿಯ ಸೇವೆ ಮಾಡುವವರು.

ಯಾರು? ವ್ಯಕ್ತಿ ಹೇಳುತ್ತಾನೆ ನನ್ನ ಹೆಂಡತಿ ನಿನಗೆ ಅಥವಾ ನಿನ್ನ ಮಕ್ಕಳಿಗೆ ಹುಷಾರಿಲ್ಲದಿದ್ದಾಗ ನಿಮ್ಮನ್ನು ಯಾರು ನೋಡಿಕೊಳ್ಳುತ್ತಾರೆ ಯಾರು ನಿಮಗೆ ರಾತ್ರಿ ಎಲ್ಲಾ ನಿದ್ದೆ ಬಿಟ್ಟು ಕಾಯುತ್ತಾರೆ ಎಂದಾಗ ಆ ವ್ಯಕ್ತಿ ಹೇಳುತ್ತಾನೆ ನನ್ನ ಹೆಂಡತಿ.ನಂತರ ಮತ್ತೊಮ್ಮೆ ಸ್ವಾಮೀಜಿ ಕೇಳುತ್ತಾರೆ ನಿನ್ನ.

ಮನೆಯ ಜವಾಬ್ದಾರಿ ಯಾರು ಒತ್ತಿರುವುದು ಆಗ ವ್ಯಕ್ತಿ ನನ್ನ ಹೆಂಡತಿ ಮತ್ತೆ ಸ್ವಾಮೀಜಿ ಕೇಳುತ್ತಾರೆ ನಿನ್ನ ಸುಖ ದುಃಖದಲ್ಲಿ ಜೊತೆಯಾಗಿರುವವರು ಯಾರು ಎಂದು ಆಗ ಆ ವ್ಯಕ್ತಿ ನನ್ನ ಹೆಂಡತಿ ಕೊನೆಗೆ ಸ್ವಾಮೀಜಿ ಏನಪ್ಪಾ ನಿನ್ನ ಹೆಂಡತಿ ಈ ಎಲ್ಲಾ ಕೆಲಸಕ್ಕೂ ನಿನ್ನಿಂದ ಸಂಬಳ ತಗೊಳ್ಳುತ್ತಾಳೋ ಎಂದು ಕೇಳಿದಾಗ.

ಆ ವ್ಯಕ್ತಿ ಇಲ್ಲ ಸ್ವಾಮೀಜಿ ಅಂತ ಹೇಳುತ್ತಾನೆ ನಂತರ ಸ್ವಾಮೀಜಿ ಹೇಳುತ್ತಾರೆ ನೀನು ಕೇವಲ ನಿನ್ನ ಹೆಂಡತಿಯ ಬಗ್ಗೆ ದೂರು ಮಾತ್ರ ಹೇಳುತ್ತಿದ್ದೀಯ ಅವಳ ಒಳ್ಳೆಯ ಗುಣಗಳನ್ನು ಮರೆತುಬಿಟ್ಟಿದ್ದೀಯ ನೀನು ಅವಳನ್ನು ಅರ್ಥ ಕೂಡ ಮಾಡಿಕೊಳ್ಳಲಿಲ್ಲ.ನಿನ್ನ ಹೆಂಡತಿ ಇಷ್ಟು ಕೆಲಸ ಮಾಡಿದರು ನಿನ್ನ.

ಹತ್ತಿರ ವೇತನ ಪಡೆದುಕೊಳ್ಳಲು ಬಯಸುವುದಿಲ್ಲ ಅದರ ಬದಲು ನಿನ್ನಿಂದ ಕೇವಲ ಒಂದು ಸ್ವಲ್ಪ ಸಮಯ ಹಾಗೆ ನಿನ್ನ ಪ್ರೀತಿ ಹಾಗೆ ಗೌರವವನ್ನು ಬಯಸುತ್ತಾಳೆ.ಸ್ವಾಮೀಜಿಯ ಮಾತುಗಳನ್ನು ಕೇಳಿದ ಆ ವ್ಯಕ್ತಿ ತನ್ನ ತಲೆಯನ್ನು ತಗ್ಗಿಸುತ್ತಾನೆ ಮಿತ್ರರೇ ಗಂಡ ಹೆಂಡತಿಯರು ಪರಸ್ಪರ ಒಬ್ಬರಿಗೊಬ್ಬರು ಜೀವನದಲ್ಲಿ.

ಏನೆಲ್ಲಾ ತ್ಯಾಗ ಮಾಡಿದ್ದಾರೆ ಎಂದು ಒಂದು ಬಾರಿ ಯೋಚಿಸಿದರೆ ಅವರ ನಡುವೆ ಇರುವ ಆ ಮನಸ್ತಾಪ ದೂರವಾಗಿ ಇಬ್ಬರು ಖುಷಿಯಿಂದ ಜೀವನ ಸಾಗಿಸಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god