ಹೊಟ್ಟೆಯನ್ನು ಶುದ್ಧಿ ಮಾಡುವ ವಿಧಾನ:
ಈ ರೀತಿ ಹೊಟ್ಟೆಯನ್ನು ಶುದ್ಧೀಕರಿಸುವ ಕಾರ್ಯದಲ್ಲಿ ಅನೇಕರಿಗೆ ತೊಂದರೆಗಳು ಇರುತ್ತವೆ ಹಾಗೂ ಇದಕ್ಕೆ ಪರಿಹಾರವನ್ನು ಹಲವು ಕಡೆ ನೋಡಿ ಅದಕ್ಕೆ ಸರಿಯಾದ ರೀತಿಯಲ್ಲಿ ತಿಳಿದುಕೊಳ್ಳದೆ ಕೆಲವೊಂದನ್ನು ಉಪಯೋಗಿಸಿ ಅದರಿಂದ ವಿಫಲತೆಯನ್ನು ಹೊಂದಿರುತ್ತಾರೆ.ಹಾಗಾಗಿ ಈ ಕಾರ್ಯವನ್ನು ಮಾಡಿದರೆ ಇದರಿಂದ ಲಾಭ ಉಂಟಾಗುತ್ತದೆ ಅಂದರೆ ಪಂಚಕರ್ಮ ಚಿಕಿತ್ಸೆಯನ್ನು ಪಡೆದರೆ ಈ ಸಮಸ್ಯೆಯು ದೂರವಾಗುತ್ತದೆ ಆದರೆ ಇಂದಿನ ಜನಾಂಗದವರು ದುಡ್ಡಿನ ಕೊರತೆಯಿಂದ ಹಾಗೂ ಅವರ ಇತರೆ ಕಾರ್ಯಗಳ ಸಮಸ್ಯೆಯಿಂದ ಸಮಯವಿಲ್ಲದೆ ಇದನ್ನು ತ್ಯಜಿಸಿ ಮುಂದೆ ಹೋಗುತ್ತಾರೆ ಆದ್ದರಿಂದ ಮನೆಯಲ್ಲಿಯೇ ಅಂದರೆ ಮನೆಯಲ್ಲಿ ಸೇವಿಸುವ ಆಹಾರದಲ್ಲಿಯೇ ಈ ತೊಂದರೆಯಿಂದ ದೂರವಾಗುವ ಕೆಲವು ಮಾರ್ಗಗಳು ಇವೆ, ಮೊದಲಿಗೆ ಹೊಟ್ಟೆಯನ್ನು ಶುದ್ಧವಾಗಿ ಇರಿಸಿಕೊಳ್ಳಲು ಪ್ರತಿ ದಿನ ಆಹಾರವನ್ನು ಸರಿಯಾದ ಸಮಯದಲ್ಲಿ ಸೇವಿಸಬೇಕು ಹೊತ್ತಲ್ಲದ ಹೊತ್ತಲ್ಲಿ ಆಹಾರವನ್ನು ಸೇವಿಸಿದ ರಿಂದ ಈ ರೀತಿ ತೊಂದರೆಗಳು ಬರುತ್ತವೆ ಹಾಗೂ ಹೊಟ್ಟೆಯ ಶುದ್ದಿಯಾದ ನಂತರ ನೀವು ಯಾವುದೇ ಚಿಕಿತ್ಸೆಯನ್ನು ತೆಗೆದುಕೊಂಡರೆ ಅದರಿಂದ ಪ್ರಯೋಜನ ಆಗುವುದಿಲ್ಲ ವಾತಾಕ ರೂಪವು ಮತ್ತು ಪಿತ್ತಕ ರೂಪವು ಶುರುವಾದಾಗ ಈ ರೀತಿ ತೊಂದರೆಗಳು ಬರುತ್ತವೆ.
ಅತಿಯಾದ ಖಾರದ ಆಹಾರ ಹಾಗೂ ಹೊರಗಡೆ ತಿಂಡಿಗಳು ಮತ್ತು ಬೇಕರಿ ತಿಂಡಿಗಳು ಈ ರೀತಿಯ ಆಹಾರವನ್ನು ಹೆಚ್ಚಾಗಿ ಸೇವಿಸುವುದರಿಂದ ಹೊಟ್ಟೆ ಅಶುದ್ಧಿಯಾಗುತ್ತದೆ ಮತ್ತು ಮಲವಿಸರ್ಜನೆ ಸರಿಯಾಗಿ ಆಗದೆ ಇರುವ ತೊಂದರೆಗಳು ಹೆಚ್ಚಾಗಿ ಬರುತ್ತವೆ, ಮೊದಲಿಗೆ ಈ ರೀತಿ ಕಂಡುಬರುವ ಎಲ್ಲಾ ಆಹಾರವನ್ನು ತ್ಯಜಿಸಬೇಕು ಉತ್ತಮ ಪೋಷಕಾಂಶಗಳ ಕೆಲ ಆಹಾರಗಳನ್ನು ಮಾತ್ರ ಸೇವಿಸುತ್ತಾ ಬಂದರೆ ಯಾವ ತೊಂದರೆಗಳು ನಮ್ಮ ದೇಹಕ್ಕೆ ಬರುವುದಿಲ್ಲ ಹಾಗೂ ಉತ್ತಮವಾದ ದೇಹ ನಮ್ಮದಾಗಿರುತ್ತದೆ , ಸಾಮಾನ್ಯವಾಗಿ ಪ್ರತಿದಿನ ಸೇವಿಸುವ ಟೀ ಮತ್ತು ಕಾಫಿಯನ್ನು ಆದಷ್ಟು ಕಡಿಮೆ ಮಾಡುತ್ತಾ ಬರಬೇಕು ಹಾಗೂ ಧೂಮಪಾನ ಮತ್ತು ಮಧ್ಯಪಾನ ಮಾಡುವವರಿಗಂತೂ ಈ ರೀತಿ ತೊಂದರೆ ಹೆಚ್ಚಾಗಿ ಕಾಣುತ್ತದೆ ಮತ್ತು ಅದರಿಂದ ಅವರು ದೂರಾಗಲು ಅನೇಕ ಸಮಯ ಬೇಕಾಗುತ್ತದೆ, ಒಳ್ಳೆಯ ತರಕಾರಿಗಳು ಮತ್ತು ಆಹಾರಗಳು ಅತಿ ಹೆಚ್ಚಾಗಿ ಇವೆ ಅದನ್ನು ಸರಿಯಾದ ಕ್ರಮದಲ್ಲಿ ಸೇವಿಸಿದರೆ ಈ ರೀತಿ ಯಾವ ತೊಂದರೆಯೂ ಬರುವುದಿಲ್ಲ ಅದರಲ್ಲಿಯೂ ಕ್ಯಾರೆಟ್ ಬೂದುಗುಂಬಳಕಾಯಿ ಬಿಟ್ರೋಟ್ ಸೌತೆಕಾಯಿ ಹಾಗೂ ಇನ್ನು ಅನೇಕ ತರಕಾರಿಗಳು ಇವೆ ಮತ್ತು ಮನೆಯಲ್ಲೇ ಮಾಡುವಂತಹ ಕೆಲವು ಒಳ್ಳೆ ಆಹಾರವನ್ನು ಸೇವಿಸಬೇಕು ಹೊರಗಡೆ ತಿನ್ನುವುದನ್ನು ಆದಷ್ಟು ಕಡಿಮೆ ಮಾಡಬೇಕು.
ಈ ರೀತಿ ಪ್ರತಿಯೊಂದನ್ನು ನಮಗೆ ನಾವೇ ಕಡಿವಾಣ ಹಾಕಿಕೊಂಡು ಈ ಒಳ್ಳೆಯ ಆಹಾರವನ್ನು ಸೇವಿಸುತ್ತಾ ಬಂದರೆ ಈ ರೀತಿ ಯಾವ ತೊಂದರೆಯೂ ಬರುವುದಿಲ್ಲ, ಈ ರೀತಿ ಪ್ರತಿದಿನ ನಾವು ಮಾಡುವ ಕೆಲ ಕಾರ್ಯಗಳನ್ನು ಕೂಡ ಸರಿಯಾದ ಕ್ರಮದಲ್ಲಿ ಮಾಡಿಕೊಂಡು ಬಂದರೆ ಮತ್ತು ಸರಿಯಾದ ಸಮಯಕ್ಕೆ ಮಲಗುವುದು ಮುಂಜಾನೆ ಬೇಗ ಹೇಳುವುದು ಈ ರೀತಿ ಕೆಲವು ಒಳ್ಳೆಯ ರೂಡಿಗಳನ್ನು ಮಾಡಿಕೊಂಡರೆ ಈ ಕರುಳಿನ ಶುದ್ದಿ ಮತ್ತು ಮಲಬದ್ಧತೆಯ ತೊಂದರೆಗಳಿಂದ ದೂರವಾಗ ಬಹುದು , ಇನ್ನು ಇದಕ್ಕೆ ಪರಿಹಾರಗಳು ಎಂದರೆ ಸರಿ ಸುಮಾರು 60% ಅಷ್ಟು ತರಕಾರಿಗಳನ್ನು ಸೇವಿಸಬೇಕು ಮತ್ತು ಈ ರೀತಿ ತರಕಾರಿಯಲ್ಲಿ ಮಾಡಿರುವ ಪಲ್ಯವನ್ನು ಅತಿಯಾಗಿ ಸೇವಿಸಬೇಕು ಹಾಗೂ 40%ರಷ್ಟು ದವಸ ಧಾನ್ಯಗಳಿಂದ ಮಾಡಿರುವ ರೊಟ್ಟಿ ಹಾಗೂ ಚಪಾತಿ ಈ ರೀತಿ ಆಹಾರಗಳನ್ನು ಸೇವಿಸಬೇಕು ಹಾಗೂ ಅತಿಯಾಗಿ ನೀರನ್ನು ಕುಡಿಯಬೇಕು ನೀರನ್ನು ಕುಡಿಯುವುದರಿಂದ ಬರೀ ಈ ಒಂದು ತೊಂದರೆ ಮಾತ್ರ ಅಲ್ಲ ದೇಹದಲ್ಲಿರುವ ಅನೇಕ ತೊಂದರೆಗಳಿಗೆ ಪರಿಹಾರ ಇದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ