19 ವರ್ಷಕ್ಕೆ ಮದುವೆ ಮಗು ಆದ್ಮೇಲೆ ಕೈಕೊಟ್ಟು ಹೋದ ಗಂಡ ಪ್ರೀತಿಯಲ್ಲಿ ಬಿದ್ದ ಉಮಾಶ್ರೀ ಕಥೆ..ಕನ್ನಡ ಚಿತ್ರರಂಗದಲ್ಲಿ ಉಮಾಶ್ರೀ ಅವರನ್ನು ಮೀರಿಸುವಂತಹ ನಟನೆ ಮಾಡುವ ಮತ್ತೊಬ್ಬ ನಟಿ ಇಲ್ಲ ಏಕೆಂದರೆ ಅವರ ನಟನೆ ತುಂಬಾ ವಿಭಿನ್ನವಾಗಿರುತ್ತದೆ ಮತ್ತು ಕಾಲಕ್ಕೆ ತಕ್ಕಂತೆ ಹಾಗೂ ವೇಷಭೂಷಣಗಳನ್ನು ಅವರ ವಯಸ್ಸಿಗ ಮಿತಿ ಇಲ್ಲದೆ ಅವರು.
ಆ ಪಾತ್ರವನ್ನು ಮಾಡುತ್ತಾರೆ ಇಂದಿಗೂ ಕೂಡ ಹಲವು ಕಿರು ಚಿತ್ರಗಳಲ್ಲಿ ಮತ್ತು ಕಿರುತೆರೆಯ ಲೋಕದಲ್ಲಿ ಅವರು ಅಭಿನಯಿಸುತ್ತ ಇದ್ದಾರೆ.ಆದರೆ ಇವರ ಆರಂಭಿಕ ದಿನಗಳಲ್ಲಿ ಇವರು ಪಟ್ಟಿರುವ ಕಷ್ಟಗಳು ಅಶಿಷ್ಟ ಅಲ್ಲ ಇವರು ಕೇವಲ ಸಿನಿಮಾ ರಂಗದಲ್ಲಿ ಮಾತ್ರವಲ್ಲದೆ ರಾಜಕೀಯದಲ್ಲೂ ಸ್ಪರ್ಧಿಸಿ ಶಾಸಕಿಯಾಗಿ ಜನಸೇವೆ ಮಾಡಿದ ನಟಿ ಉಮಾಶ್ರೀ ಅವರ.
ಜೀವನದಲ್ಲಿ ನಡೆದ ದುರಂತಗಳು ಯಾವುವು? ಮದುವೆಯಾದ ಸ್ವಲ್ಪ ತಿಂಗಳುಗಳಲ್ಲೇ ಅವರ ಗಂಡ ಬಿಟ್ಟು ಹೋಗಿದ್ದು ಯಾಕೆ ಹೀಗೆ ಹತ್ತು ಹಲವು ಪ್ರಶ್ನೆಗಳು ಮೂಡುತ್ತವೆ ಕನ್ನಡದ ಚಿತ್ರರಂಗದ ಪುಟ್ಮಲ್ಲಿ ಎಂದರೆ ಅದು ಉಮಾಶ್ರೀ ಅವರು ಮಾತ್ರ ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಹಾಗೆ ಉಮಾಶ್ರೀ ಅವರು ಮಾಡದೇ ಇರುವ ಪಾತ್ರಗಳು ಇಲ್ಲ ಯಾವುದೇ ಸಿನಿಮಾ ಆಗಿರಲಿ ಅಥವಾ.
ಯಾವುದೇ ಪಾತ್ರವಾಗಿರಲಿ ಪರಕಾಯ ಪ್ರವೇಶ ಮಾಡಿ ಸರಿಯಾದ ಸ್ಥಾನಮಾನಗಳೊಂದಿಗೆ ಅಭಿನಯಿಸುವ ವ್ಯಕ್ತಿತ್ವ ಹೊಂದಿರುವ ನಟಿ ಇವರು ಇವರ ಮೊದಲ ಸಿನಿಮಾ ಕಾಶೀನಾಥ್ ಅವರ ಅನುಭವ ಎಂಬ ಸಿನಿಮಾದಲ್ಲಿ ಇವರ ಮೊದಲ ನಟನೆ 80ರ ದಶಕದಲ್ಲೇ ಪಡ್ಡೆಗಳ ಮೈ ಬಿಸಿ ಏರಿಸಿದ ನಟಿ,80ರ ದಶಕದಲ್ಲಿ ಮಡಿ ಮುಟ್ಟಿ ಮಲಗಿದ್ದ ಕನ್ನಡ ಚಿತ್ರರಂಗ ಅನುಭವ.
ಸಿನಿಮಾದಿಂದ ಅವೆಲ್ಲವನ್ನು ದೂರ ಮಾಡಿ ಸಿನಿಮಾ ನೋಡಲು ಹೋದ ಪ್ರೇಕ್ಷಕರು ಅನೇಕರು.ಸಿನಿಮಾದ ಹಸಿ ಬಿಸಿ ದೃಶ್ಯಗಳು ಉಮಾಶ್ರೀ ಅವರ ನೈಜ್ಯ ನಟನೆ ಕೂಡ ಒಂದು ಕಾರಣ ಎಂದು ಹೇಳಬಹುದು ಹೀಗೆ ಇದಾದ ನಂತರ ಅವರು ಹಿಂತಿರುಗಿ ನೋಡಲೇ ಇಲ್ಲ ಇವರಿಗೆ ಸಾಲು ಸಾಲು ಸಿನಿಮಾಗಳು ಬಂದವು ನಂತರ ಇದೀಗ ರಾಜಕೀಯಕ್ಕೆ ಅವರ ಪ್ರವೇಶ ಮಾಡಿದ ನಂತರ.
ಚಿತ್ರಗಳು ಮತ್ತು ಸಿನಿಮಾ ಜಗತ್ತಲ್ಲಿ ಅವರು ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ ಇದೀಗ ರಾಜಕೀಯಕ್ಕೆ ಸ್ವಲ್ಪ ದೂರವಾಗಿರುವ ಉಮಾಶ್ರೀ ಅವರು ನಿಮಗೆ ಕಾಣಲು ಸಿಗುತ್ತಿರುವುದು ಜೀ ಕನ್ನಡದ ಪುಟ್ಟಕ್ಕನ ಮಕ್ಕಳು ಎಂಬ ಧಾರಾವಾಹಿಯಲ್ಲಿ.ಇವರ ಆರಂಭ ದಿನಗಳಲ್ಲಿ ಇವರ ತಾಯಿ ಇರಲಿಲ್ಲ ಇವರು ದೊಡ್ಡಮ್ಮನ ಮನೆಯಲ್ಲಿ ಬೆಳೆದಿದ್ದರು ಅತಿ ಬಡತನವಿದ್ದರೂ ಬಡತನ.
ಕಾಣದಂತೆ ಅವರ ದೊಡ್ಡಮ್ಮ ನೋಡಿಕೊಂಡರು ಪ್ರೀತಿಸಿ ಮದುವೆಯಾಗಿ ನಂತರ ಅವರ ಜೀವನದಲ್ಲಿ ಕಂಡದ್ದೆಲ್ಲ ಕಷ್ಟಗಳೇ,ಆ ಹುಡುಗನ ಸೌಂದರ್ಯಕ್ಕೆ ಮರುಳಾಗಿ ಅವರ ಕುಟುಂಬದ ಹಿನ್ನೆಲೆಯನ್ನು ಸರಿಯಾಗಿ ತಿಳಿಯದೆ ಮತ್ತು ಆ ಹುಡುಗನ ಸ್ವಭಾವಗಳನ್ನು ಅರಿಯದೆ ಮೋಸ ಹೋಗುತ್ತಾರೆ ಆ ವ್ಯಕ್ತಿಗೆ ಸರಿಯಾದ ಕೆಲಸ ಕೂಡ ಇರಲಿಲ್ಲ ಸ್ವಲ್ಪ ವರ್ಷಗಳು.
ಕಳೆದ ನಂತರ ಅವರಿಗೆ ಒಂದು ಹೆಣ್ಣು ಮಗು ಆಯಿತು ಆದರೆ ಅವರ ಗಂಡ ಮತ್ತು ಗಂಡನ ಮನೆಯವರು ಹೆಣ್ಣು ಮಗು ಆಗಿದ್ದೆ ಒಂದು ದೊಡ್ಡ ತಪ್ಪು ಎಂಬುವಂತೆ ಮಾತನಾಡ ತೊಡಗಿದರು ಉಮಾಶ್ರೀ ಅವರ ಗಂಡನ ಮನೆ ಅವರಿಗೆ ಹೆಣ್ಣು ಮಕ್ಕಳು ಎಂದರೆ ಅದ್ಯಾಕೆ ಅಷ್ಟು ಕಷ್ಟವಾಯಿತು ಅವರಿಗೆ ಅಂದು ತಿಳಿದಿರಲಿಲ್ಲ ಅದಾದ ಹೊತ್ತಿಗೆ ಅವರನ್ನು ಪ್ರೀತಿಯಿಂದ ಸಾಕಿದ್ದು.
ಅವರ ದೊಡ್ಡಮ್ಮ ಆರೋಗ್ಯದಲ್ಲಿ ಅಸ್ವಸ್ಥತೆ ಕಾಣುತ್ತದೆ ನಂತರ ನೀನು ತವರು ಮನೆಗೆ ಹೋಗಿದ್ದನ್ನು ನಮ್ಮಗೆ ಯಾರಿಗೂ ಹೇಳಿದೆ ಹೋಗಿದ್ದೀಯಾ ಎಂದು ಮತ್ತು ಚಿಕ್ಕ ಚಿಕ್ಕ ವಿಷಯಗಳಿಗೆ ಜಗಳವನ್ನು ಮಾಡಿ ಅವರನ್ನು ಶಾಶ್ವತವಾಗಿ ದೂರ ಮಾಡಿಬಿಡುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ