2023 ಜನವರಿ 1ರಿಂದ ಹೊಸ ರೂಲ್ಸ್ ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್, ಅಕ್ಕಿ ಜೊತೆ ಯಾವವಸ್ತುಗಳು ಸಿಗಲಿವೆ….! ಪಡಿತರ ಚೀಟಿ ದಾರರಿಗೆ ಸರ್ಕಾರವು ಮತ್ತೊಂದು ಸಿಹಿ ಸುದ್ದಿ ನೀಡಿದ್ದು ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಇನ್ನು ಮುಂದೆ ನ್ಯಾಯಬೆಲೆ ಅಂಗಡಿಯಲ್ಲಿ ಗ್ಯಾಸ್ ಸಿಲೆಂಡರ್ ಖರೀದಿ ಸೇರಿ ಹಲವು ಸೇವೆಗಳು ಲಭ್ಯವಿದೆ ನ್ಯಾಯಬೆಲೆ ಅಂಗಡಿಗಳಲ್ಲಿ ಇನ್ನು ಮುಂದೆ ಪಡಿತರ ಚೀಟಿಗೆ ಗ್ಯಾಸ್ ಸಿಲಿಂಡರ್ ಖರೀದಿ ಬ್ಯಾಂಕ್ ಖಾತೆ ತೆರೆಯುವುದು ಇಂಟರ್ನೆಟ್ ಸೇವೆ ಪಡೆಯುವ ವ್ಯವಸ್ಥೆ ಶೀಘ್ರವೇ ಜಾರಿಗೆ ಬರಲಿದೆ ಆಹಾರ ಇಲಾಖೆಯು ನ್ಯಾಯಬೆಲೆ ಅಂಗಡಿಗಳ ಮೂಲಕ ಗ್ಯಾಸ್ ಸಿಲೆಂಡರ್ ದಿನ ಬಳಕೆ ವಸ್ತುಗಳು ಅಂಚೆ ಇಲಾಖೆ ಮೂಲಕ ಬ್ಯಾಂಕ್ ಖಾತೆ ಓಪನ್ ಆಗು ಎರಡು ರೂಪಾಯಿಗೆ ಇಂಟರ್ನೆಟ್ ಸೌಲಭ್ಯ ಸೇರಿದಂತೆ ಹಲವು ಸೇವೆಗಳನ್ನ ಒದಗಿಸಲು ಮುಂದಾಗಿದೆ.ಇಲ್ಲಿಯವರೆಗೂ ನ್ಯಾಯಬೆಲೆ ಅಂಗಡಿಯಲ್ಲಿ ಕೇವಲ ಅಕ್ಕಿ ರಾಗಿ ಸಕ್ಕರೆ ಸೋಪು ಗೋಧಿ ಅಡುಗೆ ಎಣ್ಣೆ ಸೀಮೆಎಣ್ಣೆ.
ಹೀಗೆ ಮುಂತಾದ ಪದಾರ್ಥಗಳನ್ನು ಕೊಡುತ್ತಿದ್ದರು ಆದರೆ ಈಗ ಆರೋಗ್ಯ ಇಲಾಖೆಯು ಹೊಸ ಸೇವೆಗಳನ್ನು ನಮಗೆ ಕೊಡುವಲ್ಲಿ ಯೋಚಿಸುತ್ತಿದ್ದಾರೆ ಅದರಲ್ಲಿ ನಾವು ಸಿಲಿಂಡರನ್ನು ಬೇರೆ ಜಾಗದಲ್ಲಿ ಅಥವಾ ಗೋಡೌನ್ ನಲ್ಲಿ ಹೋಗಿ ತರಬೇಕಾಗಿತ್ತು ಆದರೆ ಈಗ ಇವರು ಯೋಚಿಸುತ್ತಿರುವುದೇನೆಂದರೆ ಸಿಲಿಂಡರ್ ಕೂಡ ನ್ಯಾಯಬೆಲೆ ಅಂಗಡಿಯಲ್ಲಿ ದೊರಕಿಸಿ ಕೊಡುವಂತೆ ಮಾಡಿದರೆ ಹೇಗಿರುತ್ತದೆ ಹಾಗೂ ಬ್ಯಾಂಕಿಗೆ ಹೋಗಿ ಖಾತೆಗಳನ್ನು ತೆರೆಯುವುದರ ಬದಲು ಅವರು ಅವರವರ ನ್ಯಾಯಬೆಲೆ ಅಂಗಡಿಗಳಲ್ಲಿ ಹೊಸ ಖಾತೆಗಳನ್ನು ತೆರೆಯಬಹುದು ಎಂದು ಹೇಳುತ್ತಿದ್ದಾರೆ ಇದರ ಜೊತೆಗೆ ಕೇವಲ ಎರಡೇ ಎರಡು ರೂಪಾಯಿಗೆ ಇಂಟರ್ನೆಟ್ ಗಳ ಸೇವೆಯನ್ನು ಕೊಡುವುದಾಗಿ ಯೋಚಿಸಿದ್ದಾರೆ ಇದರ ಜೊತೆ ಇನ್ನೂ ಅನೇಕ ಸೌಲಭ್ಯಗಳನ್ನು ಬಿಪಿಎಲ್ ಕಾರ್ಡ್ ಪಡಿತರಿಗೆ ಕೊಡಿಸುವ ಕೆಲಸದಲ್ಲಿ ತೊಡಗಿದ್ದಾರೆ.
ಇದರ ಸದುಪಯೋಗವನ್ನು ಬಿಪಿಎಲ್ ಕಾರ್ಡ್ ಪಡಿತರು ಉಪಯೋಗಿಸಿಕೊಳ್ಳಬಹುದು ಇದರಿಂದ ಪಡಿತರಿಗೆ ಸಹಾಯವಾಗುತ್ತದೆ ಎಷ್ಟೋ ಜನರಿಗೆ ಇದು ಉಪಯುಕ್ತ ಕೂಡ ಆಗಬಹುದು.ಇನ್ನು ರಾಜ್ಯದಲ್ಲಿ 1 ಕೋಟಿ 15 ಲಕ್ಷ 79 ಸಾವಿರದ 81 ಬಿಪಿಎಲ್ 23 ಲಕ್ಷ 87 ಸಾವಿರದ 956 ಎಪಿಎಲ್ ಹಾಗೂ 10 ಲಕ್ಷ 90 ಸಾವಿರ 563 ಅಂತ್ಯೋದ್ಯಯ ಸೇರಿ 1ಕೋಟಿ 50 ಲಕ್ಷ 57 ಸಾವಿರದ 600 ಪಡಿತರ ಚೀಟಿಗೆ ಪ್ರತಿ ತಿಂಗಳಿಗೆ 20 ಸಾವಿರದ 168 ನ್ಯಾಯಬೆಲೆ ಅಂಗಡಿಗಳು ಪಡಿತರ ವಿತರಣೆ ಮಾಡುತ್ತಿದೆ, ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಿಗೆ ಜನರ ಅಲೆದಾಟ ತಪ್ಪಿಸಿ ಸಮೀಪದ ನ್ಯಾಯಬೆಲೆ ಅಂಗಡಿಗಳಲ್ಲಿಯೇ ಅಗತ್ಯ ಸೇವೆಗಳನ್ನ ಒದಗಿಸಲು ಆಹಾರ ಇಲಾಖೆ ಚಿಂತನೆ ನಡೆಸಿದೆ ಎನ್ನಲಾಗಿದೆ ಹಾಗಾಗಿ ಎಲ್ಲಾ ಸೌಲಭ್ಯವನ್ನು ಬಳಸಿಕೊಳ್ಳುವ ಹಕ್ಕು ನಮಗೆ ಸಿಗುತ್ತದೆ ಇದನ್ನು ಎಲ್ಲರೂ ಬಳಸಿಕೊಳ್ಳಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ