ಕ್ಯಾಲೆಂಡರ್ ಅನ್ನು ಈ ದಿಕ್ಕಿನಲ್ಲಿ ಇಟ್ಟರೆ ಹಣದ ಹರಿವು ಹೆಚ್ಚಾಗುತ್ತದೆ
ನಾವು ಹೊಸ ವರ್ಷವನ್ನು ಪ್ರವೇಶಿಸಿದ್ದೇವೆ. ಎಲ್ಲರೂ ತಮ್ಮ ಮನೆ ಗಳಲ್ಲಿ ಹಳೆ ಕ್ಯಾಲೆಂಡರ್ ತೆಗೆದು ಹೊಸ ಕ್ಯಾಲೆಂಡರ್ ಅನ್ನು ಬದಲಾಯಿಸಿರುತ್ತಾರೆ. ಆದರೆ ಹೊಸ ವರ್ಷದ ಕ್ಯಾಲೆಂಡರ್ ಅನ್ನು ವಾಸ್ತು ಪ್ರಕಾರ ಸರಿಯಾದ ದಿಕ್ಕಿನಲ್ಲಿ ಇಡಬೇಕು. ಏಕೆಂದರೆ ಮನೆಯಲ್ಲಿರುವ ವಸ್ತುಗಳು ವಾಸ್ತು ಪ್ರಕಾರ ಇದ್ದರೆ ಮನೆಯಲ್ಲಿ ಧನಾತ್ಮಕ ಶಕ್ತಿ ತುಂಬಿರುತ್ತದೆ. ಇದರಿಂದ ಮನೆಯಲ್ಲಿ ಹೆಚ್ಚಿನ ಹಣ ಸಂಗ್ರಹವಾಗುತ್ತದೆ ಮತ್ತು ಮನೆಯ ಜನರು ತಮ್ಮ ಜೀವನದಲ್ಲಿ ಸುಧಾರಣೆ ಕಾಣುತ್ತಾರೆ.
ನೀವು ಈ ಹಿಂದೆ ನಿಮ್ಮ ಮನೆಯಲ್ಲಿ ವಾಸ್ತು ಪ್ರಕಾರ ಕ್ಯಾಲೆಂಡರ್ ಅನ್ನು ಹಾಕಿ ಇಲ್ಲದಿದ್ದರೆ ಈ ವರ್ಷ ನಿಮ್ಮ ಮನೆಯಲ್ಲಿ ವಾಸ್ತು ಪ್ರಕಾರ ಕ್ಯಾಲೆಂಡರ್ ಅನ್ನು ಇರಿಸಿ. ಇದರಿಂದ ನೀವು ಖಂಡಿತವಾಗಿಯೂ ಉತ್ತಮ ಬದಲಾವಣೆಯನ್ನು ನೋಡುತ್ತೀರಿ. ಹೊಸ ವರ್ಷದಂದು ಮನೆಯಲ್ಲಿ ಕ್ಯಾಲೆಂಡರ್ ಅನ್ನು ಇರಿಸಲು ಉತ್ತಮ ದಿಕ್ಕಿನಲ್ಲಿದ್ದರೆ ಅದು ಪಶ್ಚಿಮ ಬೇಕೆಂದರೆ ಪಶ್ಚಿಮವು ಹರಿವಿನ ದಿಕ್ಕು ಎಂದು ನಂಬ ಲಾಗಿದೆ. ಕ್ಯಾಲೆಂಡರ್ ನ್ನು ಈ ದಿಕ್ಕಿನಲ್ಲಿ ಇರಿಸಿದಾಗ ಮನೆಯಲ್ಲಿ ಹಣದ ಹರಿವು ಹೆಚ್ಚಾಗುತ್ತದೆ. ಬಹುಶಃ ನೀವು ಪಶ್ಚಿಮ ದಿಕ್ಕುವಿನಲ್ಲಿ ಕ್ಯಾಲೆಂಡರ್ ಅನ್ನು ಸ್ಥಾಪಿಸಲು ಸಾಧ್ಯವಾಗದಿದ್ದರೆ ಉತ್ತರ ದಿಕ್ಕಿಗೂ ಹಾಕಬಹುದು.
ಈ ದಿಕ್ಕು ಕುಬೇರನ ದಿಕ್ಕು. ಹಾಗಾಗಿ ಈ ದಿಕ್ಕಿನಲ್ಲಿ ಕ್ಯಾಲೆಂಡರ್ ಅನ್ನು ಅಳವಡಿಸಿದರೆ ಮನೆಯಲ್ಲಿ ಹಣದ ಹರಿವು ಹೆಚ್ಚಾಗುತ್ತದೆ. ಆದ್ದರಿಂದ ನೀವು ಮನೆಯಲ್ಲಿ ಹೆಚ್ಚು ಹಣವನ್ನ ಪಡೆಯಲು ಬಯಸಿದರೆ ಕ್ಯಾಲೆಂಡರ್‌ನ್ನು ಉತ್ತರ ದಿಕ್ಕಿನಲ್ಲಿ ಇರಿಸಿ ಕ್ಯಾಲೆಂಡರ್ ಅನ್ನು ಯಾವ ದಿಕ್ಕಿನಲ್ಲಿ ಇಡಬಾರದು. ವಾಸ್ತು ಶಾಸ್ತ್ರದ ಪ್ರಕಾರ ಕ್ಯಾಲೆಂಡರ್ ಅನ್ನು ಯಾವುದೇ ಕಾರಣಕ್ಕೂ ದಕ್ಷಿಣಾಭಿಮುಖವಾಗಿ ಇಡಬಾರದು. ಹಾಗೆ ಇಟ್ಟುಕೊಂಡರೆ ನಷ್ಟ ಎದುರಿಸ ಬೇಕಾಗುತ್ತದೆ.
ಕ್ಯಾಲೆಂಡರ್ ನ್ನು ಈ ದಿಕ್ಕಿನಲ್ಲಿ ಇರಿಸಿದರೆ ಬಹಳಷ್ಟು ವೈದ್ಯಕೀಯ ವೆಚ್ಚ ಗಳು ಎದುರಿಸಬೇಕಾಗುತ್ತದೆ ಮತ್ತು ಸಾಕಷ್ಟು ಹಣದ ನಷ್ಟವನ್ನು ಎದುರಿಸಬೇಕಾಗುತ್ತದೆ. ಕ್ಯಾಲೆಂಡರ್ ಅನ್ನು ಎಲ್ಲಿ ಇಡಬಾರದು? ಕ್ಯಾಲೆಂಡರ್ ಅನ್ನು ಬಾಗಿಲಿನ ಹಿಂದೆ ಇಡಬಾರದು. ಜೊತೆಗೆ ಅದನ್ನು ಕಿಟಕಿಯ ಬಳಿಯೂ ಇಡಬಾರದು. ಮನೆಯ ಮುಖ್ಯ ಬಾಗಿಲಿನ ಬಳಿ ಕ್ಯಾಲೆಂಡರ್ ಇಡಬೇಡಿ. ಇದು ಮನೆಯವರ ಪ್ರಗತಿಗೆ ಅಡ್ಡಿಯಾಗುತ್ತದೆ. ವಾಸ್ತು ಪ್ರಕಾರ ಮನೆಯಲ್ಲಿ ಅಳವಡಿಸಿರುವ ಕ್ಯಾಲೆಂಡರ್ ಗಾಳಿಗೆ ಹಾರಿ ಹೋಗಬಾರದು. ಇದು ಮನೆಯವರ ಪ್ರಗತಿಗೆ ಅಡ್ಡಿಯಾಗುತ್ತದೆ ಮತ್ತು ಕೆಟ್ಟ ಪರಿಣಾಮವನ್ನು ಬೀರುತ್ತದೆ.
ಹಾಗೆಯೇ ಯಾವ ರೀತಿ ಕ್ಯಾಲೆಂಡರ್‌ನ ಖರೀದಿಸಬಾರದು ಆತ್ತ ಮನೆಯಲ್ಲಿರುವ ಕ್ಯಾಲೆಂಡರ್ ಯುದ್ಧದ ಚಿತ್ರವನ್ನು ಹೊಂದಿರ ಬಾರದು. ಹಾಗೆಯೇ ಹಡಗು ಮುಳುಗುತ್ತಿರುವ ಚಿತ್ರವಿರುವ ಕ್ಯಾಲೆಂಡರ್ ಇಟ್ಟುಕೊಳ್ಳಬೇಡಿ. ಇದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ತರುತ್ತದೆ. ಪ್ರತಿಯೊಂದುಕ್ಕೂ ಕೂಡ ಅವರದೇ ಆದ ಮಹತ್ವವಿರುತ್ತದೆ ಯಾವ ದಿಕ್ಕಿಗೆ ಏನನ್ನು ಇಡಬೇಕು ಅದೇ ದಿಕ್ಕಿಗೆ ಇಡಬೇಕಾಗುತ್ತದೆ ಜ್ಯೋತಿಷ್ಯ ಶಾಸ್ತ್ರದಲ್ಲೂ ಕೂಡ ಈ ಬಗ್ಗೆ ಉಲ್ಲೇಖವಿದೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.