34 ವರ್ಷವಾದರೂ ಇನ್ನೂ ಮದುವೆಯಾಗದೆ ಇರುವುದಕ್ಕೆ ಕಾರಣ ತಿಳಿಸಿ ಕಣ್ಣೀರಿಟ್ಟ ಅನುಶ್ರೀ…… ಕನ್ನಡ ಕಿರುತರೆ ಲೋಕ ಕಂಡಂತಹ ಖ್ಯಾತ ಹಾಗೂ ನಂಬರ್ ಒನ್ ಪಟ್ಟ ಅಲಂಕರಿಸಿ ಹೆಸರುವಾಸಿಯಾಗಿರುವಂತಹ ನಿರೂಪಕಿ ಎಂದು ಹೇಳಿದರೆ ಅದು ಅನುಶ್ರೀ ಅವರು ಹೌದು ನಟಿ ನಿರೂಪಕಿ ಅನುಶ್ರೀ ಅವರು ಕರ್ನಾಟಕದಲ್ಲಿ ಎಷ್ಟೆಲ್ಲ ಜನಪ್ರಿಯವನ್ನು ಪಡೆದಿದ್ದಾರೆ ಎನ್ನುವುದು ಈಗಾಗಲೇ ಎಲ್ಲರಿಗೂ ಕೂಡ ತಿಳಿದಿದೆ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕ್ರಮವನ್ನು ನಿರೂಪಣೆ ಮಾಡಿರುವ ಮಂಗಳೂರಿನ ಬೆಡಗಿ ಅನುಶ್ರೀಯವರು ಕನ್ನಡದ ಬಹು ಬೇಡಕೆಯ ಹಾಗೂ ದುಬಾರಿ ನಿರೂಪಕಿ ಎಂದು ಹೇಳಿದರೆ ತಪ್ಪಾಗಲಾರದು. ಸರಿಗಮಪ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಹೀಗೆ ಹಲವು ರಿಯಾಲಿಟಿ ಶೋಗಳ ಕಾರ್ಯಕ್ರಮಗಳ ಮೂಲಕ ಹಲವು ಸೀಸನ್ ಗಳನ್ನ ನಿರೂಪಣೆ ಮಾಡಿಕೊಂಡು ಬರುತ್ತಾ ಇದ್ದು ಸದ್ಯ ಜೀ ಕನ್ನಡ ದಲ್ಲಿ ಫಿಕ್ಸ್ ಆಗಿ ಬಿಟ್ಟಿದ್ದಾರೆ ಅನುಶ್ರೀ ಅವರಿಗೆ ಯಶಸ್ಸು ಅನ್ನುವುದು ಎಂದು ಕೂಡ ಒಂದೇ ಸಲಿ ಸಿಕ್ಕಿಲ್ಲ ತಾವು ಹುಟ್ಟು ಬೆಳೆದ ಊರಾದ ಮಂಗಳೂರಿನಿಂದ ಬಂದು ಬೆಂಗಳೂರಿನಲ್ಲಿ ನೆಲೆ ನಿಂತ ಗಟ್ಟಿಗಿತ್ತಿ ನಿರೂಪಕಿ.

WhatsApp Group Join Now
Telegram Group Join Now

ಅನುಶ್ರೀಯವರನದು ತುಂಬಾನೇ ಕಷ್ಟದ ಜರ್ನಿ ನಿರೂಪಣೆ ಮಾಡುತ್ತಾ ನಿರೂಪಣೆಯ ಕೆಲಸಗಳನ್ನು ಮಾಡುತ್ತಾ ದಶಕಗಳನ್ನ ಕಳೆದಿರುವ ಅವರು 3 4 ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿರುವುದು ವಿಶೇಷ ಅವರ ಜನಪ್ರಿಯತೆ ಯಾವ ಸಿನಿಮಾ ಕಲಾವಿದರಿಗೂ ಕೂಡ ಕಡಿಮೆ ಇಲ್ಲ ಎಂದು ಹೇಳಬಹುದು ಅಲ್ಲದೆ ಕನ್ನಡದಲ್ಲಿ ನಿರೂಪಕಿ ಎಂದಾಕ್ಷಣ ಪ್ರತಿಯೊಬ್ಬರಿಗೂ ನೆನಪಿಗೆ ಬರುವುದು ಇವರೇ ಪಟಪಟ ಎಂದು ಮಾತನಾಡಿಸುತ್ತಾ ಎಲ್ಲರನ್ನೂ ನಗಿಸುವ ಇವರ ಬದುಕಿನಲ್ಲಿಯೂ ಕೂಡ ಕಣ್ಣೀರಿನ ಕಥೆ ಇದ್ದು ಈ ಬಗ್ಗೆ ಹಲವು ಬಾರಿ ಸ್ವತಹ ಅನುಶ್ರೀ ಅವರೇ ಕೆಲವು ಕಾರ್ಯಕ್ರಮಗಳಲ್ಲಿ ತಮ್ಮ ಆರಂಭದ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ.ಮಂಗಳೂರಿನ ಈ ಬೆಡಗಿಯ ಕುಟುಂಬಕ್ಕೆ ಸಹಾಯವಾಗುವಂತೆ ಏನಾದರೂ ಕೆಲಸ ಮಾಡಬೇಕು ಎನ್ನುವ ಆಸೆ ಇವರಿಗೆ ಇತ್ತು ಆಸೆ ಅನ್ನುವುದಕ್ಕಿಂತ ಹೆಚ್ಚಾಗಿ ಅನಿವಾರ್ಯತೆ ಮೊದಲು ಮಂಗಳೂರಿನ ಸ್ಥಳಿಯ ವಾಹಿನಿಯೊಂದರಲ್ಲಿಯೇ ಅಂತ್ಯಾಕ್ಷರಿ ಕಾರ್ಯಕ್ರಮಕೆ ನಿರೂಪಣೆ ಮಾಡುತ್ತಿದ್ದ ಅನುಶ್ರೀ ಈ ಕಾರ್ಯಕ್ರಮಕ್ಕೆ ಜನರು ಕರೆ ಮಾಡಿ ಅನುಶ್ರೀ ಅವರ ಜೊತೆ ಅಂತ್ಯಾಕ್ಷರಿ ಆಡಬೇಕಿತ್ತು ಈ ಕಾರ್ಯಕ್ರಮ ಮಂಗಳೂರಿನಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದು ವರ್ಷಾನುಗಟ್ಟಲೆ ಈ ಕಾರ್ಯಕ್ರಮ ವನ್ನು ಅನುಶ್ರೀ ಅವರೇ ನಡೆಸಿ ಕೊಟ್ಟಿದ್ದರು.

ಇದನ್ನು ನೋಡಿದ ಕನ್ನಡದ ಪ್ರಖ್ಯಾತ ವಾಹಿನಿ ಯೊಂದು ಅನುಶ್ರೀ ಅವರಿಗೆ ಕರೆ ಮಾಡಿ ಆಡಿಶನ್ ನೀಡುವಂತೆ ಹೇಳಿದರು ಹೀಗೆ ಬೆಂಗಳೂರಿಗೆ ಬಂದ ಅನುಶ್ರೀಯವರು ಮೊದಲು ಡಿಮ್ಯಾಂಡ್ ಅಪ್ಪು ಡಿಮಾಂಡು ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸಿದರು ಅನುಶ್ರೀಯವರು ಚಾನಲ್ ನನಗೆ ದೊಡ್ಡ ಮೊತ್ತದಲ್ಲಿ ಹಣವನ್ನು ನೀಡಲಿದೆ ನನ್ನ ಕುಟುಂಬಕ್ಕೆ ಇನ್ ಯಾವುದೇ ರೀತಿಯಲ್ಲಿ ತೊಂದರೆ ಇರುವುದಿಲ್ಲ ಎಂದು ಭಾವಿಸಿದ್ದರು ಆದರೆ ಪ್ರತಿ ಸಂಚಿಕೆಗೆ ಕೇವಲ 250 ಮಾತ್ರ ಬಂದಾಗ ಬೇರೆ ಪಾರ್ಟ್ ಟೈಮ್ ಕೆಲಸ ಮಾಡದೆ ಇವರಿಗೆ ವಿಧಿ ಇರಲಿಲ್ಲ ಹೀಗಾಗಿ ಹುಟ್ಟು ಹಬ್ಬದ ಕಾರ್ಯಕ್ರಮಗಳಲ್ಲಿಯೂ ಕೂಡ ನಿರೂಪಣೆಯನ್ನು ಮಾಡಿದ್ದು ನಂತರ ಸಾಲು ಸಾಲು ರಿಯಾಲಿಟಿ ಶೋಗಳಲ್ಲಿ ಕಾರ್ಯಕ್ರಮಗಳಲ್ಲಿ ಕಾಮಿಡಿ ಕಾರ್ಯಕ್ರಮಗಳು ಹಾಗೂ ಲೈವ್ ಇವೆಂಟ್ ಸೇರಿದಂತೆ ಅನೇಕ ರೀತಿಯ ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡುವ ಮೂಲಕ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದ್ದಾರೆ ನಮ್ಮ ಅನುಶ್ರೀ ಅವರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ