84 ಸೆಕೆಂಡುಗಳಲ್ಲಿ ಶ್ರೀ ರಾಮಲೆಲ್ಲ ಪ್ರಾಣ ಪ್ರತಿಷ್ಠಾಪನೆ
ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ದೇಗುಲ ನಿರ್ಮಾಣ ಶತ ಶತಮಾನಗಳ ಕನಸು ಮಂದಿರ ನಿರ್ಮಾಣಕ್ಕೆ ಎದುರಾಗಿದ್ದ ಸಾವಿರಾರು ಸವಾಲುಗಳೆಲ್ಲ? ಸರಿದು ಹೋಗಿ ಕೊನೆಗೂ ರಾಮ ಜನ್ಮಭೂಮಿ ಯಲ್ಲಿ ಮರ್ಯಾದ ಪುರುಷೋತ್ತಮನ ಭವ್ಯ ದೇಗುಲ ತಲೆಎತ್ತಿ ನಿಂತಿದೆ ಜನವರಿ 22 ರಂದು ದೇಗುಲದ ಗರ್ಭಗುಡಿಯಲ್ಲಿ ರಾಮ ಲಲ್ಲ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ
ಈ ದಿವ್ಯ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಕೋಟ್ಯಾಂತರ ಭಾರತೀಯರು ಕಾತರರಾಗಿದ್ದಾರೆ ಸರಯೂ ನದಿ ತಟದಲ್ಲಿ ಮಂದಿರ ಉದ್ಘಾಟನೆಯ ಅಂತಿಮ ತಯಾರಿ ಭರದಿಂದ ನಡೀತಾ ಇದೆ. ಜನವರಿ ಇಪ್ಪತ್ತೆರಡರಂದು ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತೆ. ಧಾರ್ಮಿಕ ಗುರುಗಳ ಪ್ರಕಾರ ದೇವಾಲಯದಲ್ಲಿ ವಿಗ್ರಹವನ್ನು ಪ್ರತಿಷ್ಠಾಪಿಸದೆ ದೇವರ ಆರಾಧನೆಯು ಅಪೂರ್ಣವೆಂದು ಪರಿಗಣಿಸಲಾಗಿದೆ. ಆದರೆ ಇಲ್ಲಿ 84 ಸೆಕೆಂಡ್ಗಳಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಮಾಡಬೇಕು. ಇದು ಹೇಗೆ ಸಾಧ್ಯ ಅಂತ ಹಲವರು ಶಾಕ್ ಆಗಿದ್ದಾರೆ.
ಬರಿ 84 ಸೆಕೆಂಡುಗಳಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡುವುದು ಸಾಧ್ಯನ ಇಲ್ಲಿ ಸ್ವಲ್ಪ ಯಡವಟ್ಟಾದ್ರೂ ಏನಾಗುತ್ತೆ? ಅಂದು ರಾಮನ ಪಟ್ಟಾಭಿಷೇಕದಗಳಿಗೆ ಸರಿ ಇಲ್ವಾ? ಅದೇ ಕಾರಣಕ್ಕೆ ರಾಮ ಅಷ್ಟು ಕಷ್ಟ ಪಡಬೇಕಾಯಿತು ಎಂಬತ್ತ ನಾಲ್ಕು ಸೆಕೆಂಡಿನ ಹಿಂದಿನ ರಹಸ್ಯವೇನು ಅನ್ನೋದರ ಎಲ್ಲ ಇಂಚಿಂಚೂ ಮಾಹಿತಿಯನ್ನ ಇವತ್ತಿನ ಈ ವಿಡಿಯೋದಲ್ಲಿ ನೋಡೋಣ ವಿಡಿಯೋ ತುಂಬಾ ಇಂಟರೆಸ್ಟಿಂಗ್ ಆಗಿರುತ್ತೆ.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಭರ ದಿಂದ ಸಾಗಿದೆ ಇನ್ನು ಕೆಲವೇ ಕೆಲವು ದಿನಗಳಲ್ಲಿ ಅಯೋಧ್ಯಾ ರಾಮ ಮಂದಿ
ಇದೀಗ ಅಯೋಧ್ಯೆಯ ಭವ್ಯ ರಾಮ ಮಂದಿರದಲ್ಲಿ ಬಾಲ ರಾಮನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆಯ ಸಮಯ ಬಂದಿದೆ. ಪ್ರಾಣ ಪ್ರತಿಷ್ಠಾಪನೆ 84 ಸೆಕೆಂಡುಗಳಲ್ಲಿ ನಡೆಯಲಿದ್ದು, 84 ಸೆಕೆಂಡಗಳು ತುಂಬಾನೇ ತುಂಬಾ ವಿಶೇಷವಾಗಿದೆ. ಹೌದು. ಪ್ರಾಣ ಪ್ರತಿಷ್ಠಾಪನೆಗೆ ಇರುವ ಸಮಯ, 84 ಸೆಕೆಂಡ್ ಅಷ್ಟೇ ಅಂದ್ರೆ 1 ನಿಮಿಷ, 24 ಸೆಕೆಂಡ್ ಗಳಷ್ಟೇ. ಈ 84 ಸೆಕೆಂಡ್ ಅತ್ಯಂತ ಶುಭ ದಿನ ಇಂದು ಹೇಳಲಾಗುತ್ತೆ ಈ ಮುಹೂರ್ತದಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡೋದ್ರಿಂದ ಭಾರತಕ್ಕೆ ಒಳಿತಾಗಲಿದೆ.
ಅಗ್ನಿ ಅಕಾಲಿಕ ಸಾವು, ಕಳ್ಳತನ, ಖಾಯಿಲೆ. ಸಾವಿನ ಸಂಕೋಲೆ ಈ ಬಗೆಯ ಆಪತ್ತುಗಳಿಂದ ರಕ್ಷಣೆ ನೀಡುತ್ತದೆ ಎಂಬುದು ಧಾರ್ಮಿಕ ಪಂಡಿತರ ಅಭಿಪ್ರಾಯವಾಗಿದೆ. ಜನವರಿ 22 ಮಧ್ಯಾಹ್ನ 12:00 ಘಂಟೆ ಇಪ್ಪತ್ತ 4 ನಿಮಿಷ ಎಂಟು ಸೆಕೆಂಡ್ ನಿಂದ 12 ಗಂಟೆ 30 ನಿಮಿಷದ 32 ಸೆಕೆಂಡ್ ಒಳಗೆ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತೆ ಒಂದು ವೇಳೆ ಈ ಸಮಯದೊಳಗೆ ಆಗದೇ ಹೋದ್ರೆ ಅದು ಅಶುಭ ಎಂದು ಹೇಳಲಾಗುತ್ತೆ ಇದೇ ಕಾರಣಕ್ಕೆ ತುಂಬಾ ಮುಂಜಾಗ್ರತೆ ವಹಿಸಿ ಅನುಭವಿ ಪಂಡಿತರು ಈ ಕಾರ್ಯವನ್ನು ವಹಿಸಿಕೊಂಡಿದ್ದಾರೆ. ಅಚ್ಚರಿಯ ವಿಷಯ ಏನಂದ್ರೆ ಶ್ರೀರಾಮ ಹುಟ್ಟಿದ ಸಮಯದಲ್ಲೇ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ ಹಿಂದೂ ಪೌರಾಣಿಕ ಕಥೆಯ ಪ್ರಕಾರ ಶ್ರೀರಾಮನು ಅಭಿಜಿತ್ ಮುಹೂರ್ತದಲ್ಲಿ ಜನಿಸಿದ ಎಂದು ನಂಬ ಲಾಗಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.