ಇಷ್ಟಾರ್ಥ ಸಿದ್ಧಿಗಾಗಿ ಮಹಾಶಿವರಾತ್ರಿಯಂದು ನಿಮ್ಮ ರಾಶಿಗನುಸಾರ ಶಿವನನ್ನು ಹೀಗೆ ಪೂಜಿಸಿ.ಮಹಾಶಿವರಾತ್ರಿ ಲಯಕರ್ತನಾದ ಶಿವನನ್ನು ನಾನಾವಿಧಗಳಿಂದ ಭಜಿಸುವ ದಿನವಾಗಿದೆ. ಈ ದಿನ ವಿಶೇಷವಾಗಿ ನಿಮ್ಮ ರಾಶಿಯನುಸಾರ ಶಿವನಿಗೆ ಕೆಲವೊಂದು ವಸ್ತುಗಳನ್ನು ಅರ್ಪಿಸಿ, ಶಿವನಿಗೆ ಸಮರ್ಪಿತವಾದ ಮಂತ್ರವನ್ನು ಪಠಿಸಬೇಕು.ಈ ವರ್ಷ ಮಹಾಶಿವರಾತ್ರಿ ಹಬ್ಬವು 2024 ಮಾರ್ಚ್ 8, ಶುಕ್ರವಾರದಂದು ಆಚರಿಸಲಾಗುತ್ತದೆ.ಮಹಾಶಿವರಾತ್ರಿಯ ದಿನವನ್ನು ಈಶ್ವರ ಮತ್ತು ತಾಯಿ ಪಾರ್ವತಿಯ ಮದುವೆಯ ರಾತ್ರಿ ಎಂದು ಪರಿಗಣಿಸಲಾಗಿದೆ. ಪೌರಾಣಿಕ ನಂಬಿಕೆಗಳ ಪ್ರಕಾರ, ಮಹಾಶಿವರಾತ್ರಿಯ ದಿನದಂದು, ಅಗ್ನಿಲಿಂಗದ ಉದಯದೊಂದಿಗೆ ಸೃಷ್ಟಿ ಪ್ರಾರಂಭವಾಯಿತು. ಅಗ್ನಿಲಿಂಗ ಮಹಾದೇವನ ದೈತ್ಯ ರೂಪವಾಗಿದೆ.ಒಂದು ವರ್ಷದಲ್ಲಿ 12 ಶಿವರಾತ್ರಿಗಳಿದ್ದರೂ, ಈ ಎಲ್ಲಾ ಮಾಸಿಕ ಶಿವರಾತ್ರಿಗಳಲ್ಲಿ, ಮಾಘ – ಫಾಲ್ಗುಣ ಮಾಸಗಳ ಮಧ್ಯದಲ್ಲಿ ಬರುವ ಶಿವರಾತ್ರಿಗೆ ವಿಶೇಷ ಮಹತ್ವವಿದೆ ಮತ್ತು ಆದ್ದರಿಂದ ಇದನ್ನು ಮಹಾಶಿವರಾತ್ರಿ ಎಂದು ಕರೆಯಲಾಗುತ್ತದೆ. ಈ ದಿನದಂದು ಕೆಲವು ವಿಶೇಷ ಕ್ರಮಗಳನ್ನು ಕೈಗೊಳ್ಳುವುದರಿಂದ ಭಕ್ತರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಈ ದಿನದಂದು, ನಿಮ್ಮ ರಾಶಿಚಕ್ರದ ಪ್ರಕಾರ ಕೆಲವು ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ನೀವು ಶುಭ ಫಲಿತಾಂಶಗಳನ್ನು ಪಡೆಯಬಹುದು. ಆ ಕ್ರಮಗಳೇನು ಎನ್ನುವುದನ್ನು ನೋಡೋಣ.

.
ಮೇಷ ರಾಶಿ – ಮಹಾಶಿವರಾತ್ರಿಯ ದಿನದಂದು ಭಗವಾನ್ ಶಿವನಿಗೆ ಕೆಂಪು ಚಂದನ ಮತ್ತು ಕೆಂಪು ಬಣ್ಣದ ಹೂವುಗಳನ್ನು ಅರ್ಪಿಸಿ, ಓಂ ನಾಗೇಶ್ವರಾಯ ನಮಃ ಎಂಬ ಮಂತ್ರವನ್ನು 51 ಅಥವಾ 108 ಬಾರಿ ಜಪಿಸಿ.ವೃಷಭ ರಾಶಿ- ಈ ದಿನ ಶಿವನನ್ನು ಪೂಜಿಸುವಾಗ ಮಲ್ಲಿಗೆ ಹೂಗಳನ್ನು ಅರ್ಪಿಸಬೇಕು. ಇದರೊಂದಿಗೆ ಶಿವನ ರುದ್ರಾಷ್ಟಕ ವನ್ನು ಪಠಿಸಿ.ಮಿಥುನ ರಾಶಿ – ಮಹಾಶಿವರಾತ್ರಿ ದಿನ ದಾತುರದ ಹೂವನ್ನು ಅರ್ಪಿಸಬೇಕು. ಇದನ್ನು ಅರ್ಪಿಸುವಾಗ ಶಿವ ಪಂಚಾಕ್ಷರಿ ಮಂತ್ರ- ಅಂದರೇ ಓಂ ನಮಃ ಶಿವಾಯ ಈ ಮಂತ್ರವನ್ನು ಈ ದಿನ ಎಷ್ಟೇ ಜಪಿಸಿದರು ತುಂಬಾ ಒಳ್ಳೆಯದು ಆದರೆ ಕನಿಷ್ಠ 108 ಬಾರಿ ಜಪಿಸಿ.

WhatsApp Group Join Now
Telegram Group Join Now

ಕಟಕ ರಾಶಿ – ಮಹಾಶಿವರಾತ್ರಿಯ ದಿನದಂದು ಶಿವಲಿಂಗಕ್ಕೆ ಹಸುವಿನ ಹಾಲಿನೊಂದಿಗೆ ಅಭಿಷೇಕ ಮಾಡಿ ನಂತರ, 11 ಬಿಲ್ವ ಪತ್ರೆ ಎಲೆಗಳ ಮೇಲೆ ಶ್ರೀಗಂಧದಿಂದ ‘ಓಂ’ ಎಂದು ಬರೆದು ಶಿವಲಿಂಗಕ್ಕೆ ಅರ್ಪಿಸಿ ನಂತರ ಧೂಪ ದೀಪಗಳನ್ನು ಬೆಳಗಿ ಶಿವನನ್ನು ಪೂಜಿಸಿ. ಮೂರು ಎಲೆಗಳನ್ನು ಹೊಂದಿರುವ ಬಿಲ್ವಪತ್ರೆಗೆ ಒಂದು ಎಲೆ ಎಂದು ಕರೆಯುತ್ತಾರೆ ಈ ರೀತಿಯಾಗಿ ಹನ್ನೊಂದು ಬಿಲ್ವಪತ್ರೆ ಎಲೆಗಳನ್ನು ಉಪಯೋಗಿಸಬೇಕು.ಸಿಂಹ ರಾಶಿ- ಈ ದಿನದಂದು ಮಹಾದೇವನ ಪೂಜೆಯಲ್ಲಿ ಕೆಂಪು ಕಣಗಿಲೆ ಹೂವುಗಳನ್ನು ಅರ್ಪಿಸಬೇಕು, ಇದರೊಂದಿಗೆ ಶಿವಾಲಯದಲ್ಲಿ ಕುಳಿತು ಶ್ರೀ ಶಿವ ಚಾಲೀಸಾ ವನ್ನು ಪಠಿಸಬೇಕು.

ಕನ್ಯಾ ರಾಶಿ – ಬಿಲ್ವಪತ್ರೆ, ಧಾತುರದ ಹೂವಿನೊಂದಿಗೆ ಶಿವನನ್ನು ಪೂಜಿಸಿ ಮತ್ತು ಪಂಚಾಕ್ಷರಿ ಮಂತ್ರ ಓಂ ನಮಃ ಶಿವಾಯ ಪಠಿಸಿ. ಮತ್ತು ಶಿವ ಚಾಲೀಸಾ ವನ್ನೂ ಪಠಿಸಬೇಕು.ತುಲಾ ರಾಶಿ- ಈ ದಿನ ಶಿವಾಷ್ಟಕವನ್ನು ಪಠಿಸಬೇಕು. ಇದರೊಂದಿಗೆ, ಮೊಸರು ಅಥವಾ ಕಲ್ಲು ಸಕ್ಕರೆ, ಹಾಲಿನಿಂದ ಶಿವಲಿಂಗಕ್ಕೆ ಅಭಿಷೇಕ ಮಾಡಿ, ಶಿವ ಸಹಸ್ರನಾಮ ವನ್ನು ಪಠಿಸಿ.ವೃಶ್ಚಿಕ ರಾಶಿ- ಈಶ್ವರನನ್ನು ಗುಲಾಬಿ ಹೂವುಗಳು ಮತ್ತು ಬಿಲ್ವಪತ್ರೆಯೊಂದಿಗೆ ಪೂಜಿಸಿ ನಂತರ ರುದ್ರಾಷ್ಟಕ ವನ್ನು ಪಠಿಸಬೇಕು. ನಂತರ ಓಂ ಅಂಗರೇಶ್ವರಾಯ ನಮಃ ಮಂತ್ರವನ್ನು ಜಪಿಸಿ.

ಧನಸ್ಸು ರಾಶಿ – ಈ ದಿನದಂದು, ಬೆಳಿಗ್ಗೆ ಹಳದಿ ಬಣ್ಣದ ಹೂವುಗಳಿಂದ ಶಿವನನ್ನು ಪೂಜಿಸಬೇಕು. ಶಿವನಿಗೆ ಖೀರು ಅಥವಾ ಪಾಯಸವನ್ನು ಪ್ರಸಾದವಾಗಿ ಅರ್ಪಿಸಿ ಮತ್ತು ಶಿವಾಷ್ಟಕ ವನ್ನು ಪಠಿಸಿ.ಮಕರ ರಾಶಿ- ಈಶ್ವರನನ್ನು ಧಾತುರ, ಭಂಗ, ಅಷ್ಟಗಂಧಗಳಿಂದ ಪೂಜಿಸಿ, ಓಂ ಪಾರ್ವತಿ ನಾಥಾಯ ನಮಃ ಮಂತ್ರವನ್ನು 108 ಬಾರಿ ಜಪಿಸಿ.ಕುಂಭ ರಾಶಿ- ಈ ರಾಶಿಯವರು ಶಿವನಿಗೆ ಪ್ರತ್ಯೇಕವಾಗಿ ಹಾಲು, ಮೊಸರು, ಸಕ್ಕರೆ, ತುಪ್ಪ, ಜೇನುತುಪ್ಪವನ್ನು ಅರ್ಪಿಸಿ ಓಂ ಶಿವಾಯ ನಮಃ ಮಂತ್ರವನ್ನು ಪಠಿಸಿ, ನಂತರ ಶಿವಾಷ್ಟಕವನ್ನು ಪಠಿಸಬೇಕು.ಮೀನ ರಾಶಿ- ಮಹಾಶಿವರಾತ್ರಿಯ ದಿನದಂದು ಶಿವಲಿಂಗಕ್ಕೆ ಪಂಚಾಮೃತ, ಮೊಸರು, ಹಾಲು ಮತ್ತು ಹಳದಿ ಬಣ್ಣದ ಹೂವುಗಳನ್ನು ಅರ್ಪಿಸಬೇಕು. ಪೂಜೆ ಮುಗಿದ ನಂತರ ಶ್ರೀಗಂಧದ ಜಪ ಮಾಲೆಯೊಂದಿಗೆ ಓಂ ಭಾಮೇಶ್ವರಾಯ ನಮಃ ಮಂತ್ರವನ್ನು 108 ಬಾರಿ ಜಪಿಸಿ.

ಮೇಲೆ ಹೇಳಿದ ಮಂತ್ರಗಳನ್ನು ಜಪಿಸಲು ಸಾಧ್ಯವಾಗದೇ ಇದ್ದಲ್ಲಿ ಈ ಮಂತ್ರವನ್ನು ಕೇಳಿದರೂ ಒಳ್ಳೆಯ ಫಲಗಳು ಪ್ರಾಪ್ತಿಯಾಗುತ್ತದೆ.
ಕ್ರಮಗಳೇನು ಎನ್ನುವುದನ್ನು ನೋಡೋಣ.

By god