ಮೂತ್ರದ ಬಣ್ಣ ಹೇಳುತ್ತೆ ನಿಮ್ಮ ಆರೋಗ್ಯವನ್ನು

WhatsApp Group Join Now
Telegram Group Join Now

ಮೂತ್ರದ ಬಣ್ಣ ನೋಡಿ ನಮ್ಮ ಆರೋಗ್ಯದ ಸ್ಥಿತಿ ಕಂಡು ಹಿಡಿಯಬಹುದು. ಮೂತ್ರ ವಿಸರ್ಜನೆ ಮಾಡುವಾಗ ಸಾಮಾನ್ಯವಾಗಿ ತೆಳು ಹಳದಿ ಅಥವಾ ಕಡು ಹಳದಿ ಬಣ್ಣದಲ್ಲಿರುತ್ತದೆ. ಈ ಬಣ್ಣವಲ್ಲದೆ ಇತರ ಬಣ್ಣದಲ್ಲಿದ್ದರೆ ಅದಕ್ಕೆ ನಾನಾ ಕಾರಣಗಳಿವೆ. ಮೂತ್ರದ ಯಾವ ಬಣ್ಣ ಏನನ್ನು ಸೂಚಿಸುತ್ತದೆ? ಯಾವಾಗ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು ಎಂಬ ಮಾಹಿತಿಯನ್ನು ಈ ವಿಡಿಯೋದ ಮೂಲಕ ತಿಳಿದುಕೊಳ್ಳೋಣ ಬನ್ನಿ.

ಸ್ನೇಹಿತರೇ ನಮ್ಮ ಮೂತ್ರಪಿಂಡಗಳು ಸತತವಾಗಿ ನಮ್ಮ ರಕ್ತವನ್ನು ಶುದ್ಧೀಕರಿಸುತ್ತದೆ. ಅಂಶಗಳನ್ನು ನೀರಿನೊಂದಿಗೆ ಮಿಶ್ರಣಮಾಡಿ ಹೊರಹಾಕುತ್ತದೆ ಮತ್ತು ಉಪಯುಕ್ತವಾದುದನ್ನು ರಕ್ತದೊಡನೆ ಕಳುಹಿಸುತ್ತಾ ಇರುತ್ತದೆ. ಆದರೆ ಕೆಲವೊಮ್ಮೆ ಅನಾರೋಗ್ಯದ ಕಾರಣ ದೇಹದಿಂದ ಹೊರಹೋಗಬಾರದ ಪೋಷಕಾಂಶಗಳೂ ಹೊರಹೋಗುತ್ತವೆ. ಅಂತೆಯೇ ಹೊರಹೋಗಬೇಕಾದ ವಿಷಕಾರಿ ವಸ್ತುಗಳು ರಕ್ತದಲ್ಲಿಯೇ ಉಳಿದುಬಿಡುತ್ತವೆ.

ಇವೆರಡೂ ಅಪಾಯಕಾರಿ ಸ್ಥಿತಿಗಳಾಗಿವೆ. ಮೂತ್ರದ ಪರೀಕ್ಷೆಯ ಮೂಲಕ ಈ ಅಂಶಗಳನ್ನು ಪತ್ತೆಹಚ್ಚಬಹುದು. ಆದರೆ ಮೂತ್ರದ ಬಣ್ಣವನ್ನು ಗಮನವಿಟ್ಟು ನೋಡಿದರೆ ಇದರಲ್ಲಿ ಇಂತಹ ಅಂಶವಿದೆ ಎಂದು ಸ್ಥೂಲವಾಗಿ ಅಂದಾಜಿಸಬಹುದು. ಮೂತ್ರದ ಬಣ್ಣದ ಮೂಲಕ ದೇಹ ಹಲವು ಕಾಯಿಲೆಗಳ ಮುನ್ಸೂಚನೆಯನ್ನೂ ನೀಡುತ್ತದೆ. ಸೂಕ್ತಕಾಲಕ್ಕೆ ಚಿಕಿತ್ಸೆ ನೀಡುವ ಮೂಲಕ ಉಲ್ಬಣವಾಗಬಹುದಾಗಿದ್ದ ತೊಂದರೆಯನ್ನು ಮೂಲದಲ್ಲಿಯೇ ಚಿವುಟಿದರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಇನ್ನು ಮೂತ್ರದಲ್ಲಿ ಬದಲಾವಣೆ ಹಲವಾರು ಸಂದರ್ಭದಲ್ಲಿ ಉಂಟಾಗುತ್ತದೆ. ಕೆಲವೊಮ್ಮೆ ನಾವು ತಿಂದ ಆಹಾರಗಳು ಮೂತ್ರದ ಬಣ್ಣ ಬದಲಾವಣೆ ಮಾಡುತ್ತದೆ. ಮತ್ತೆ ಕೆಲವೊಮ್ಮೆ ಯಾವುದಾದರು ಔಷಧಿ ತೆಗೆದುಕೊಂಡಾಗ ಮೂತ್ರದ ಬಣ್ಣ ಬದಲಾಗುತ್ತದೆ. ಇನ್ನು ದೇಹದಲ್ಲಿ ನೀರಿನಂಶ ಕಡಿಮೆಯಾದರೂ ಮೂತ್ರದ ಬಣ್ಣ ನೋಡಿ ಕಂಡು ಹಿಡಿಯಬಹುದು.

ಇನ್ನು ಮೂತ್ರ ಸೋಂಕು ಅಂದರೆಯಂತ ಗಂಭೀರ ಸಮಸ್ಯೆ ಇದ್ದಾಗ ಮೂತ್ರದ ಬಣ್ಣದಲ್ಲಿ ಬದಲಾವಣೆ ಉಂಟಾಗುವುದು. ಇನ್ನು ಮೂತ್ರದ ಯಾವ ಬಣ್ಣ ಏನನ್ನು ಸೂಚಿಸುತ್ತದೆ ಅಂತ ನೋಡುವುದಾದರೆ ಮೊದಲನೇದಾಗಿ ಬಣ್ಣವಿಲ್ಲದೆ ಮೂತ್ರದ ಬಣ್ಣ ಬಗ್ಗೆ ನೋಡುವುದಾದರೆ ನೀರು ಕುಡಿದ ಬಳಿಕ ಕೊಂಚ ವೇಳೆಯ ನಂತರ ವಿಸರ್ಜಿಸಿದ ಮೂತ್ರ ಸ್ವಲ್ಪವೂ ಬಣ್ಣವಿಲ್ಲದೇ ಇದ್ದರೆ ಅಥವಾ ಪೂರ್ಣವಾಗಿ ಪಾರದರ್ಶಕವಾಗಿದ್ದರೆ ಇದು ಮಧುಮೇಹದ ಸೂಚನೆಯಾಗಿ. ಜೊತೆಗೆ ಪದೇ ಪದೇ ಮೂತ್ರಕ್ಕೆ ಅವಸರವಾಗುತ್ತದೆ ಮತ್ತು ಪದೇ ಪದೇ ನೀರಡಿಕೆಯಾಗುತ್ತಿದೆ ಎಂದು ಗಮನಿಸಿ.

ಈ ಸೂಚನೆಗಳು ಮಧುಮೇಹದ ಸ್ಪಷ್ಟ ಸೂಚನೆಗಳಾಗಿವೆ. ಕೂಡಲೇ ವೈದ್ಯರಿಂದ ಅಥವಾ ಪ್ರಮಾಣೀಕೃತ ವೈದ್ಯಕೀಯ ತಪಾಸಣಾ ಪ್ರಯೋಗಾಲಯದಲ್ಲಿ ಮಧುಮೇಹದ ಪರೀಕ್ಷೆ ಮಾಡಿಸಿಕೊಳ್ಳಿ. ಇನ್ನು ಹಳದಿ ಬಣ್ಣ, ಮೂತ್ರ ತೆಳು ಹಳದಿ ಬಣ್ಣದಲ್ಲಿದಲ್ಲಿದ್ದರೆ ನೀವು ನಿಮ್ಮ ದೇಹಕ್ಕೆ ಅಗತ್ಯವಾದಷ್ಟು ನೀರು ಕುಡಿಯಿರಿ ಎಂದು ಅರ್ಥ. ದೇಹದಲ್ಲಿ ನೀರಿನಂಶ ಸರಿಯಾಗಿ ಇದ್ದರೆ ಮೂತ್ರ ತೆಳು ಹಳದಿ ಬಣ್ಣದಲ್ಲಿದ್ದು, ಮೂತ್ರ ಮಾಡುವಾಗ ಹೆಚ್ಚಿನ ದುರ್ವಾಸನೆ ಬೀರುವುದಿಲ್ಲ. ನಿಮ್ಮ ಮೂತ್ರ ಕಡು ಹಳದಿ ಬಣ್ಣದಲ್ಲಿದ್ದರೆ ಆರೋಗ್ಯಕ್ಕೇನು ತೊಂದರೆಯಿಲ್ಲ.

ಆದರೆ ದೇಹಕ್ಕೆ ಅಗತ್ಯವಿರುವಷ್ಟು ನೀರು ಕುಡಿಯುತ್ತಿಲ್ಲವೆಂದು ಅರ್ಥ. ಈ ಮೂತ್ರ ಹೆಚ್ಚು ವಾಸನೆ ಹೊಂದಿರುತ್ತದೆ. ಮೂತ್ರ ಈ ರೀತಿ ಕಂಡು ಬಂದಾಗ ಸಾಕಷ್ಟು ನೀರು ಕುಡಿಯಿರಿ. ಆರೋಗ್ಯವಂತ ವಯಸ್ಕರು ದಿನಕ್ಕೆ ಎಂಟು ರಿಂದ 10 ಗ್ಲಾಸ್ ನೀರನ್ನು ಕುಡಿಯಬೇಕು. ಇದಲ್ಲದೆ ತಾಜಾ ಹಣ್ಣಿನ ರಸ ಅಥವಾ ನಿಂಬೆ ನೀರನ್ನು ಕುಡಿಯುವುದರಿಂದ ಮೂತ್ರದ ಬಣ್ಣವೂ ಸಾಮಾನ್ಯವಾಗುತ್ತದೆ. ಹಸಿರು ಬಣ್ಣ, ಕೃತಕ ಬಣ್ಣ ಹಾಕಿರುವ ಆಹಾರ ತಿಂದಾಗಲೂ ಮೂತ್ರದಲ್ಲಿ ವ್ಯತ್ಯಾಸ ಕಂಡುಬರುವುದು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

By god