ಮೆಂತ್ಯ ಕಾಳಿನ ಈ ಉಪಯೋಗ ಗೊತ್ತಾದ್ರೆ ತಿನ್ನದವರು ತಿನ್ನಕ್ಕೆ ಶುರು ಮಾಡ್ತೀರಾ |ಒಂದು ಚಮಚ ಮೆಂತ್ಯ ಹಾಗೂ ಮೆಂತ್ಯ ನೆನೆಸಿರುವ ನೀರು ಇದರಲ್ಲಿ ಏನೆಲ್ಲಾ ಆರೋಗ್ಯಕರ ಅಂಶಗಳಿವೆ ಉಪಯೋಗಗಳಿವೆ,ಆರೋಗ್ಯ ಲಾಭವಿದೆ ಎಂದು ನಿಮಗೆ ತಿಳಿಸುತ್ತೇನೆ. ಒಂದೇ ಒಂದು ಚಮಚ ಮೆಂತ್ಯ ತೆಗೆದುಕೊಂಡು ರಾತ್ರಿ ಮಲಗುವ ಮೊದಲು ಹೀಗೆ ನೀರಿನಲ್ಲಿ ನೆನೆಸಿಟ್ಟು ಮಾರನೇ ದಿನ ಬೆಳಗ್ಗೆ ನೋಡುವಷ್ಟರಲ್ಲಿ ಮೆಂತ್ಯವೆಲ್ಲ ನೆನೆದಿರುತ್ತದೆ ಹಾಗೂ ನೀರಿನ ಬಣ್ಣ ಹೀಗೆ ಬದಲಾಗಿರುತ್ತದೆ. ಈ ಮೆಂತ್ಯದ ನೀರನ್ನ ಸೋಸಿ ತೆಗೆದು ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ ಕುಡಿಯಬೇಕು ಹಾಗೆ ಕುಡಿಯುವುದರಿಂದ ಅನೇಕ ಉಪಯೋಗಗಳಿವೆ ನಾನು ಅದನ್ನು ಒಂದೊಂದೇ ಆಗಿ ಹೇಳುತ್ತೇನೆ.ಈ ನೀರು ಕಹಿ ಇರೋದಿಲ್ಲ ರುಚಿ ನು ಏನು ಅಂತಹ ವ್ಯತ್ಯಾಸ ಇರುವುದಿಲ್ಲ ನೀವು ಸುಲಭವಾಗಿ ಕುಡಿಯಬಹುದು ನಾನು ನೂರು ಎಂಎಲ್ ನೀರಿನಲ್ಲಿ ಒಂದು ಚಮಚ ಮೆಂತ್ಯವನ್ನು ನೆನೆಸಿಟ್ಟಿದ್ದೆ ಈಗ ಅದನ್ನು ತೆಗೆದುಕೊಳ್ಳುತ್ತಿದ್ದೇನೆ.

ಇದು ಚರ್ಮದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ತೂಕವನ್ನು ಕಳೆದುಕೊಳ್ಳಲು ತುಂಬಾ ಒಳ್ಳೆಯದು ಸಕ್ಕರೆ ಕಾಯಿಲೆಯನ್ನು ಹತೋಟಿಯಲ್ಲಿಡುತ್ತದೆ.ಎದೆಹಾಲು ಹೆಚ್ಚಿಸಲು ಪೀರಿಯಡ್ ಟೈಮಲ್ಲಿ ಹೊಟ್ಟೆ ನೋವು ಇಂತಹ ಸಮಸ್ಯೆಗಳಿದರೆ ಅದನ್ನು ಸರಿ ಮಾಡಲು ತುಂಬಾ ಅನುಕೂಲವಾಗುತ್ತದೆ. ನೀರು ಕುಡಿದ ಮೇಲೆ ಮೆಂತ್ಯವನ್ನು ಬಿಸಾಡ ಬೇಕಾಗಿಲ್ಲ ಇದನ್ನು ಹಾಗೆ ತಿನ್ನಬಹುದು ಅಥವಾ ಹಾಗೆ ನೆನೆಸದೇ ನೀರಿನ ಜೊತೆಯಲ್ಲಿ ಮೆಂತ್ಯವನ್ನು ತಿನ್ನಬಹುದು ಆ ರೀತಿ ಮಾಡುವುದರಿಂದ ನಿಮಗೆ ಅಸಿಡಿಟಿ ಸಮಸ್ಯೆ ಇದ್ದರೆ ಅದು ಕಡಿಮೆಯಾಗುತ್ತದೆ ಅಥವಾ ನಿನ್ನೆಸಿರುವ ಮೆಂತ್ಯವನ್ನು ಸಂಪೂರ್ಣವಾಗಿ ನೀರನ್ನು ಬಗ್ಗಿಸಿ ತೆಗೆದು ಮೊಳಕೆಯನ್ನು ಕಟ್ಟಿಸಿ ತಿನ್ನಬಹುದು. ಇದು ತುಂಬಾ ಚೆನ್ನಾಗಿರುತ್ತೆ ಸ್ವಲ್ಪ ಕೂಡ ಕಹಿ ಇರುವುದಿಲ್ಲ ಅಥವಾ ಕೋಸಂಬರಿಯ ರೀತಿಯಲ್ಲಿ ಮಾಡಿಕೊಂಡು ತಿನ್ನಬಹುದು. ಇಷ್ಟೇ ಅಲ್ಲದೆ ಈ ಮೆಂತ್ಯವನ್ನು ಬಳಸಿಕೊಂಡು ಮೃದುವಾಗಿರುವಂತಹ ಮೆಂತ್ಯ ದೋಸೆ ಮೆಂತ್ಯ ಇಡಲಿ ಮಾಡಿ ಸವಿಯಬಹುದು.

WhatsApp Group Join Now
Telegram Group Join Now
See also  ಅಮ್ಮ ಮಗಳಿಗೆ ಒಬ್ಬನೇ ಗಂಡ ಆಸ್ತಿಗೋಸ್ಕರ ಹೆತ್ತ ಮಗಳೇ ಇಟ್ಲು ಪಿಂಡ..ಜಿಮ್ ಬಾಡಿ ಮಾಡಿದ ಎಡವಟ್ಟು

ಜೀರಿಗೆ ಮತ್ತು ಮೆಣಸಿನ ಕಾಯಿ ಜೊತೆ ಉರಿದು ರುಚಿಕರ ತಂಬಳಿಯನ್ನು ಮಾಡಬಹುದು.ನಿಮಗೆ ಹೊಟ್ಟೆಯ ಸಮಸ್ಯೆ ಅಥವಾ ಜೀರ್ಣ ಸಮಸ್ಯೆಯಾಗಿದ್ದರೆ ಒಂದು ಚಮಚ ಮೆಂತ್ಯವನ್ನು ಮಜ್ಜಿಗೆಯ ಅಥವಾ ನೀರಿನ ಜೊತೆ ಕುಡಿದರೆ ಅಥವಾ ಮೆಂತ್ಯ ವನ್ನು ಲೈಟಾಗಿ ಉರಿದು ಪುಡಿ ಮಾಡಿ ಅದನ್ನು ನೀರಿನ ಜೊತೆ ಕುಡಿದರೇ ಜೀರ್ಣದ ಯಾವುದೇ ಸಮಸ್ಯೆ ಆದರೂ ಕಡಿಮೆಯಾಗುತ್ತದೆ. ಇಷ್ಟು ಮಾತ್ರವಲ್ಲದೆ ಮೆಂತ್ಯ ನೆನಸಿ ಅದನ್ನು ಅರೆದು ತಲೆಗೆ ಹಚ್ಚಿಕೊಂಡರೆ ಕೂದಲು ಉದುರುವುದು ಕಡಿಮೆಯಾಗುತ್ತದೆ. ಕೂದಲು ಚೆನ್ನಾಗಿ ಬೆಳೆಯುತ್ತದೆ ತಲೆಯ ಹೊಟ್ಟು ಕಡಿಮೆಯಾಗುತ್ತದೆ. ಈ ರೀತಿ ಮೆಂತ್ಯದಿಂದ ಅನೇಕ ರೀತಿಯ ಉಪಯೋಗಗಳಿವೆ ಅರೆದಿರುವ ಮೆಂತ್ಯವನ್ನು ಎಣ್ಣೆಯ ಜೊತೆ ಸೇರಿಸಿ ಹಚ್ಚಬಹುದು ಅಥವಾ ಹಾಗೆಯೇ ಬೇಕಾದರೂ ಹಚ್ಚಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.