ಕಾಂತಾರ ಸಿನಿಮಾದಲ್ಲಿ ಬರುವ ಪಂಜುರ್ಲಿಯ ಅಸಲಿ ಕಥೆ ಗೊತ್ತಾ? ಶಿವನೇ ಕೊಂದು ಮರು ಜೀವ ಕೊಟ್ಟಿದ್ದು ಏಕೆ ?
ಕಾಂತಾರ ಈ ಹೆಸರನ್ನು ಕೇಳಿದ ಕೂಡಲೇ ಒಂದು ರೀತಿಯ ಭಕ್ತಿ ಭಾವ ಮೂಡುತ್ತದೆ ಕಾಂತಾರ ಎನ್ನುವುದು ಈಗ ಕೇವಲ ಸಿನಿಮಾ ಮಾತ್ರವಲ್ಲ ಅದು ಸಿನಿ ಪ್ರೇಕ್ಷಕರ ಮನದಲ್ಲಿ ವಿಶೇಷವಾದ ಸ್ಥಾನವನ್ನು ಪಡೆದಿದೆ ಚಿತ್ರರಂಗದ ಇತಿಹಾಸದಲ್ಲಿಯೇ ಬುಕ್ ಮೈ ಶೋ ನಲ್ಲಿ ಶೇಕಡ 99 ರಷ್ಟು ಇಷ್ಟಪಟ್ಟ ಸಿನಿಮಾವೇ ಇರಲಿಲ್ಲ ಆದರೆ ಕಾಂತಾರ ಈ ವಿಚಾರದಲ್ಲಿ ಚರಿತ್ರೆ ಯನ್ನು ಸೃಷ್ಟಿ ಮಾಡಿದೆ ಈ ಸಿನಿಮಾವನ್ನು ನೋಡಿ ಹೊರ ಬಂದಿದ್ದ ಶೇಕಡ 99 ರಷ್ಟು ಮಂದಿಗೆ ಈ ಸಿನಿಮಾ ಇಷ್ಟವಾಗಿದೆ ಹಾಗೂ ಈ ಸಿನಿಮಾ ದೊಡ್ಡ ಮಟ್ಟಕ್ಕೆ ಗೆದ್ದಿದೆ ಎನ್ನುವುದಕ್ಕೆ ಇದೇ ಸಾಕ್ಷಿ ಕಾಂತರಾ ಸಿನಿಮಾ ಚಿತ್ರರಂಗದ ಇತಿಹಾಸದಲ್ಲಿ ಎಂದಿಗೂ ಕೂಡ ನೆನಪಿನಲ್ಲಿಟ್ಟುಕೊಳ್ಳುವ ಸಿನಿಮಾ.

ಇನ್ನೂ 200 300 ವರ್ಷಗಳು ಕಳೆದರೂ ಇತಿಹಾಸ ವನ್ನು ತೆಗೆದು ನೋಡಿದರೂ ಅಲ್ಲಿ ಕಾಂತಾರ ಎನ್ನುವ ಸಿನಿಮಾವು ಮೊದಲ ಸ್ಥಾನದಲ್ಲಿ ಇರುತ್ತದೆ ಕಾಂತಾರ ಸಿನಿಮಾದಲ್ಲಿ ಕರಾವಳಿಯ ಸಂಸ್ಕೃತಿಯನ್ನು ಹಾಗೂ ಅಲ್ಲಿಯ ದೈವರಾಧನೆಯನ್ನು ತೋರಿಸಲಾಗಿದೆ ಅದರಲ್ಲೂ ಪಂಜುರ್ಲಿ ದೈವ ಇಡೀ ಸಿನಿಮಾವನ್ನೇ ಆವರಿಸಿಕೊಂಡಿದೆ ಕಾಂತಾರ ಸಿನಿಮಾದಲ್ಲಿ ಪಂಜುರ್ಲಿ ದೈವದ ಆಚರಣೆ ಹಾಗೂ ಅದರ ಶಕ್ತಿ ಏನು ಎನ್ನುವು ದನ್ನು ತೋರಿಸಲಾಗಿದೆ ಈ ಪಂಜುರ್ಲಿ ದೈವದ ಹಿಂದೆಯೂ ಕೂಡ ಒಂದು ಕಥೆ ಇದೆ ಪಂಜುರ್ಲಿ ದೇವಸ್ಥಾನ ಪಡೆದಿದ್ದು ಹೇಗೆ ಎನ್ನುವುದನ್ನು ಈ ಕೆಳಗಿನಂತೆ ತಿಳಿದುಕೊಳ್ಳೋಣ ಕರಾವಳಿ ಕರ್ನಾಟಕ ವನ್ನು ತುಳುನಾಡು ಎಂದು ಕರೆಯುತ್ತಾರೆ ತುಳುನಾಡು ತನ್ನ ವಿಶಿಷ್ಟ ಆಚರಣೆ ಸಂಸ್ಕೃತಿಗೆ ಹೆಸರುವಾಸಿ ಅದರಲ್ಲೂ ತುಳುನಾಡಿನಲ್ಲಿ ಇರುವ ದೈವರಾಧನೆ ಭಾರತೀಯ ಸಂಸ್ಕೃತಿಯಲ್ಲಿಯೇ ವಿಶೇಷವಾದ ಸ್ಥಾನವನ್ನು ಪಡೆದಿದೆ.

WhatsApp Group Join Now
Telegram Group Join Now

ಈ ತುಳುನಾಡಿನಲ್ಲಿ ದೈವಾರಾಧನೆಗೆ ತನ್ನದೇ ಆದ ಮಹತ್ವ ಇದೆ ಅದರಲ್ಲಿ ಜನರ ನಂಬಿಕೆ ಅಡಗಿದೆ ಹಾಗೂ ತುಳುನಾಡಿನಲ್ಲಿ 10 ಹಲವು ದೈವಗಳು ಇದೆ ಅದರಲ್ಲೂ ಕಾಂತಾರದಲ್ಲಿ ತೋರಿಸಿರುವ ಪಂಜುರ್ಲಿ ಕೂಡ ಒಂದು ಪಂಜುರ್ಲಿ ದೈವ ತುಳುನಾಡಿನ ದೈವ ಗಳಲ್ಲಿ ಪ್ರಧಾನ ಸ್ಥಾನದಲ್ಲಿ ಇರುವ ದೈವ ತುಳುವಿನ ಪಂಜುರ್ಲಿಗೆ ಕನ್ನಡದಲ್ಲಿ ವರಹ ಎಂದು ಅರ್ಥ ಹೀಗೆ ವರಹವು ಈಶ್ವರ ದೇವರ ಕೃಪೆಯಿಂದಾಗಿ ದೈವವಾಗಿ ಭೂಲೋಕಕ್ಕೆ ಬರುತ್ತದೆ ಅದು ಹೇಗೆ ಎಂದರೆ ಪಾರ್ವತಿ ದೇವಿಯ ಇಚ್ಛೆಯ ಅನುಸಾರವಾಗಿ ಈಶ್ವರ ದೇವರು ಒಂದು ಕಾಡನ್ನು ಕಟ್ಟುತ್ತಾರೆ ಇದನ್ನು ದೇವರ ಕಾಡು ಎಂದು ಕರೆಯಲಾಗುತ್ತದೆ ಇದೇ ಕಾಡಿಗೆ ಈಶ್ವರ ದೇವರು ಬೇಟೆಗೆ ಎಂದು ಹೋಗುತ್ತಾರೆ ಈ ರೀತಿ ಬೇಟೆಗೆ ಎಂದು ಹೋದ ಸಂದರ್ಭದಲ್ಲಿ ಅವರ ಕಣ್ಣಿಗೆ ಹಂದಿ ಮತ್ತು ಹಂದಿಯ ಮರಿಗಳು ಕಾಣಿಸುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.