ಕೆಲವೇ ವರ್ಷದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಕೋಟಿ ಕೋಟಿ ಒಡತಿಯಾಗಿದ್ದು ಹೇಗೆ?.. ಸದ್ಯಾ ಚರ್ಚೆಯಲ್ಲಿರುವಂತಹ ಸುದ್ದಿಗೆ ಗ್ರಾಸವಾಗುವಂತಹ ರಾಜಕಾರಣಿ ಎಂದರೆ ಅದು ಲಕ್ಷ್ಮಿ ಹೆಬ್ಬಾಳ್ಕರ್ ಕೇವಲ ಒಂದು ಬಾರಿ ಶಾಸಕಿಯಾದರೂ ಕೂಡ ಇಡೀ ರಾಜ್ಯದ್ಯಂತ ಆಗಾಗ ಸದ್ದು ಮಾಡುತ್ತಿರುತ್ತಾರೆ ಹಾಗಾದರೆ ಸಾಮಾನ್ಯ ಕಾರ್ಯಕರ್ತೆಯಾಗಿದ್ದಂತಹ ಲಕ್ಷ್ಮಿ ಹೆಬ್ಬಾಳ್ಕರ್.

WhatsApp Group Join Now
Telegram Group Join Now

ಈ ಪರಿ ಬೆಳದಿದ್ದು ಹೇಗೆ ಕೋಟಿ ಕೋಟಿ ಆಸ್ತಿಯನ್ನ ಸಂಪಾದನೆ ಮಾಡಿದ್ದು ಹೇಗೆ ಅದು ಕೂಡ ಕೆಲವೇ ಕೆಲವು ದಿನಗಳಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ವಿಷಯಕ್ಕೆ ಸಂಬಂಧಪಟ್ಟ ಹಾಗೆ ರಮೇಶ್ ಜಾರಕಿಹೊಳಿ ಡಿಕೆ ಶಿವಕುಮಾರ್ ನಡುವೆ ನಡೆಯುತ್ತಿರುವಂತಹ ಜಟಾಪಟಿ ಏನು ಯಾವಾಗಿಂದ ಶುರುವಾಗಿದ್ದು ಲಕ್ಷ್ಮಿ ಹೆಬ್ಬಾಳ್ಕರ್ ಗಂಡ ಎಲ್ಲೂ ಕೂಡ ಕಾಣಿಸಿಕೊಳ್ಳುವುದಿಲ್ಲ ಯಾವ ಕಾರಣಕ್ಕಾಗಿ.

ಲಕ್ಷ್ಮಿ ಹೆಬ್ಬಾಳ್ಕರ್ ಅವರ ಫ್ಯಾಮಿಲಿ ಬ್ಯಾಗ್ರೌಂಡ್ ಏನು ಎಂದು ಎಲ್ಲವನ್ನು ಕೂಡ ಹೇಳುತ್ತೇನೆ. ಲಕ್ಷ್ಮಿ ಹೆಬ್ಬಾಳ್ಕರ್ ಹುಟ್ಟಿದ್ದು 1975ರಲ್ಲಿ 47ರ ವಯಸ್ಸಿನ ಆಸು ಪಾಸು ಹುಟ್ಟಿದ್ದು ಬೆಳೆದಿದ್ದು ಬೆಳಗಾವಿಯಲ್ಲಿ ಲಿಂಗಾಯಿತ ಸಮಾಜದಲ್ಲಿ ತುಂಬಾ ಜನ ಅವರನ್ನ ಮರಾಠಿಗರು ಎಂದು ಅಂದುಕೊಂಡಿದ್ದಾರೆ ಒಳ್ಳೆಯ ವಿದ್ಯಾಭ್ಯಾಸವನ್ನು ಪಡೆದುಕೊಂಡಿದ್ದಾರೆ ಪೊಲಿಟಿಕಲ್ ಸೈನ್ಸ್.

ನಲ್ಲಿ ಪೋಸ್ಟ್ ಗ್ರಾಜುಯೇಷನ್ ಮುಗಿಸಿದ್ದಾರೆ ಮೈಸೂರು ಯೂನಿವರ್ಸಿಟಿಯಲ್ಲಿ ಅದಾದ ಬಳಿಕ ತಮ್ಮನ್ನು ತಾವು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಿಸಿಕೊಳ್ಳುತ್ತಾರೆ ರಾಜಕೀಯದಲ್ಲಿ ಆಸಕ್ತಿ ಇದ್ದಿದ್ದರಿಂದಾಗಿ 1998ರಲ್ಲಿ ಕಾಂಗ್ರೆಸ್ ಪಕ್ಷ ದ ಪ್ರಾರ್ಥಮಿಕ ಸದಸ್ಯತ್ವವನ್ನು ಪಡೆದುಕೊಂಡು ಕಾಂಗ್ರೆಸ್ ಪಕ್ಷದ ನಾಯಕರ ಜೊತೆ ಓಡಾಡುವುದಕ್ಕೆ ಶುರುಮಾಡುತ್ತಾರೆ.

ಕಾಂಗ್ರೆಸ್ ಪಕ್ಷದ ಸಭೆ ಸಮಾರಂಭಗಳಲ್ಲೂ ಕೂಡ ಲಕ್ಷ್ಮಿ ಹೆಬ್ಬಾಳ್ಕರ್ ಕಾಣಿಸಿಕೊಳ್ಳುವುದಕ್ಕೆ ಶುರು ಮಾಡುತ್ತಾರೆ ನಿಧಾನವಾಗಿ ಸಾಮಾನ್ಯ ಕಾರ್ಯಕರ್ತೆಯಾಗಿದ್ದಂತಹ ಲಕ್ಷ್ಮಿ ಹೆಬ್ಬಾಳ್ಕರ್ ಒಂದು ಅಂತಕ್ಕೆ ಬೆಳಗಾವಿ ಭಾಗದಲ್ಲಿ ತಮ್ಮನ್ನ ತಾವು ಗುರುತಿಸಿಕೊಳ್ಳುತ್ತಾರೆ ಇದೇ ಸಂದರ್ಭದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ರಮೇಶ್ ಜಾರಕಿಹೊಳಿ ಅವರ ಆತ್ಮೀಯ ಬಳಗದಲ್ಲಿ ತಮ್ಮನ್ನ.

ತಾವು ಗುರುತಿಸಿಕೊಳ್ಳುತ್ತಾರೆ ಯಾವಾಗ ರಮೇಶ್ ಜಾರಕಿಹೊಳಿ ಅವರ ಆತ್ಮೀಯ ಬಳಗದಲ್ಲಿ ಗುರುತಿಸಿಕೊಳ್ಳುತ್ತಾರೋ ಅಥವಾ ರಮೇಶ್ ಜಾರಕಿಹೊಳಿ ಅವರ ಒಂದು ಬಾಂಧವ್ಯ ಸಿಗುತ್ತದೆ ಅದಾದ ನಂತರ ಲಕ್ಷ್ಮಿ ಹೆಬ್ಬಾಳ್ಕರ್ ನಿಧಾನವಾಗಿ ಕಾಂಗ್ರೆಸ್ ಪಕ್ಷದಲ್ಲಿ ಬೆಳೆಯುವುದಕ್ಕೆ ಶುರುವಾಗುತ್ತಾರೆ ಹಂತ ಹಂತಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಮೇಲಕ್ಕೆ ಹೋಗುತ್ತಾರೆ ಅಂತಿಮವಾಗಿ 2013ರಲ್ಲಿ.

ರಮೇಶ್ ಜಾರಕಿಹೊಳಿ ಲಕ್ಷ್ಮಿ ಹೆಬ್ಬಾಳ್ಕರ್ಗೆ ಕಾಂಗ್ರೆಸ್ ಪಕ್ಷದಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಟಿಕೆಟ್ ಅನ್ನು ಕೊಡಿಸುತ್ತಾರೆ ಒಂದಷ್ಟು ಜನ ಆಗ ವಿರೋಧವನ್ನು ವ್ಯಕ್ತಪಡಿಸಿದರು ಏಕೆಂದರೆ ಓರ್ವ ಮಹಿಳೆಗೆ ಟಿಕೆಟ್ ಕೊಟ್ಟರೆ ಅಥವಾ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ಕೊಟ್ಟರೆ ಗೆಲುವು ಕಷ್ಟ ಆಗಬಹುದು ಎಂದು ಹೇಳಿ ಆದರೆ ನಾನೇ ಓಡಾಡಿ ಗೆಲ್ಲಿಸುತ್ತೇನೆ ಎನ್ನುವ.

ಭರವಸೆಯಲ್ಲಿ ರಮೇಶ್ ಜಾರಕಿಹೊಳಿ ಲಕ್ಷ್ಮಿ ಹೆಬ್ಬಾಳ್ಕರ್ಗೆ ಟಿಕೆಟ್ ಅನ್ನು ಕೊಡಿಸುತ್ತಾರೆ ಅಂದರೆ ಅಷ್ಟರಮಟ್ಟಿಗೆ ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ಒಂದು ಒಳ್ಳೆ ಆತ್ಮೀಯತೆ ಇತ್ತು, ಆ ಸಂದರ್ಭದಲ್ಲಿ ಅದೇ ಆಧಾರದ ಮೇಲೆ ಟಿಕೆಟ್ ಅನ್ನು ಕೂಡ ಕೊಡಿಸುತ್ತಾರೆ ಆದರೆ ಲಕ್ಷ್ಮಿ ಹೆಬ್ಬಾಳ್ಕರ್ ಮೊದಲ ಚುನಾವಣೆಯಲ್ಲಿ ಸೋಲನ್ನ ಕಾಣಬೇಕಾಗುತ್ತದೆ.

2014ರಲ್ಲಿ ಲೋಕಸಭಾ ಚುನಾವಣೆ ಬಂದಾಗ ಮತ್ತೆ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಅವರೇ ಟಿಕೆಟ್ ಅನ್ನ ಕೊಡಿಸುತ್ತಾರೆ ಮತ್ತೊಮ್ಮೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪರ್ಧೆಯನ್ನು ಮಾಡುತ್ತಾರೆ ಆದರೆ ಆಗಲೂ ಕೂಡ ಸೋಲನ್ನ ಕಾಣುವಂತಹ ಪರಿಸ್ಥಿತಿ ಎದುರಾಗುತ್ತದೆ ಎರಡೆರಡು ಚುನಾವಣೆಗಳಲ್ಲಿ.

ಸೋಲುತ್ತಿದ್ದ ಹಾಗೆ ಲಕ್ಷ್ಮಿ ಹೆಬ್ಬಾಳ್ಕರ್ ಕಾಂಗ್ರೆಸ್ ಪಕ್ಷದಲ್ಲಿ ಇನ್ನಷ್ಟು ಕಾಣಿಸಿಕೊಳ್ಳುವಂತೆ ಆಗುತ್ತಾರೆ,ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಹೆಚ್ಚೆಚ್ಚು ಓಡಾಡುವುದಕ್ಕೆ ಶುರುಮಾಡಿಕೊಳ್ಳುತ್ತಾರೆ ಹೆಚ್ಚಾಗಿ ಜನರ ಸಂಪರ್ಕವನ್ನು ಮಾಡುತ್ತ ಹೋಗುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ