WhatsApp Group Join Now
Telegram Group Join Now

ಇಡಗುಂಜಿಯ ವಿಶೇಷ ಮಾಹಿತಿ ಇಲ್ಲಿದೆ, ಆ ವಿಗ್ರಹದ ವಿಶೇಷತೆ ಏನು ಗೊತ್ತಾ!

ದ್ವಾಪರಯುಗ ಅಂತ್ಯದಲ್ಲಿ ಶ್ರೀಕೃಷ್ಣನು ಭೂಲೋಕದಲ್ಲಿ ರಕ್ಷಿತ ಸಂಖ್ಯೆ ಹೆಚ್ಚಾಗದಂತೆ ನೀಡಿ ಕೊಳ್ಳಲು ದ್ವಾಪರ ಮುನಿಗಳಿಗೆ ಸೂಚಿಸುತ್ತಾನೆ ಅದರಂತೆ ಮುನಿಗಳು ತಮ್ಮ ಹೋಮ ಹವನಗಳನ್ನು ಮಾಡುತ್ತಾರೆ. ಅದರ ಸಿದ್ಧಿ ಆಗುವುದಿಲ್ಲ ಹಲವು ವಿಘ್ನಗಳು ಉಂಟಾಗುತ್ತದೆ ಇದರಿಂದ ಚಿಂತಿರಾದ ಮುನಿಗಳು ಶ್ರೀ ಕೃಷ್ಣನನ್ನು ಪ್ರಾರ್ಥಿಸುತ್ತಾರೆ. ಶ್ರೀಕೃಷ್ಣನ ಸೂಚನೆಯಂತೆ ನಾರದರು ಋಷಿಮುನಿಗಳನ್ನು ಸಂಪರ್ಕಿಸುತ್ತಾರೆ ಆಗ ನಾರದರು ಇದಕ್ಕೆ ವಿಘ್ನೇಶ್ವರನೆ ಪರಿಹಾರ ಎಂಉ ಅರಿತು ಕೈಲಾಸಕ್ಕೆ ಹೋಗಿ ಶಿವ ಪಾರ್ವತಿ ಅವರನ್ನು ಒಲಿಸಿ ಗಣಪತಿಯನ್ನು ಭೂಲೋಕಕ್ಕೆ ಕರೆತರುತ್ತಾರೆ. ಆದರೆ ಮೊದಲೆ ತಿಂಡಿ ಪ್ರಿಯನಾದ ಗಣಪತಿ ಇಲ್ಕಿ ಬಂದು ವಾಸವಿರುವುದಕ್ಕೆ ಒಂದು ಷರತ್ತನ್ನು ವಿಧಿಸುತ್ತಾನೆ ಅದೇನೆಂದರೆ ದಿನವು ತನಗೆ ಪಂಚಕಾಧ್ಯ ನೈವೇದ್ಯ ಆಗಬೇಕು.

ಯಾವತ್ತು ಪಂಚಕಾಧ್ಯ ಸಿಗುವುದಿಲ್ಲವೋ ಅಂದು ನಾನು ಕೈಲಾಸಕ್ಕೆ ಮರಳುತ್ತೇನೆ ಎಂದು ವಾಲಕಿಲ್ಲರಿಗೆ ಕರಾರು ಹಾಕುತ್ತಾನೆ ಅದಕ್ಕೆ ಒಪ್ಪಿದ ಮುನಿಗಳು ಗಣಪತಿಯನ್ನು ಕರೆತಂದು ಇಡಕುಂಜ ಎಂಬ ಪ್ರದೇಶಕ್ಕೆ ಬರುತ್ತಾರೆ. ಇದೇ ಮುಂದೆ ಶ್ರೀ ಕ್ಷೇತ್ರ ಇಡಗುಂಜಿ ಆಗುತ್ತದೆ. ಇಲ್ಲಿನ ಮಹಾಗಣಪತಿ ವಿಗ್ರಹವನ್ನು ದೈವ ಶಿಲ್ಪಿ ವಿಶ್ವಕರ್ಮ ಕಡೆದ ಮೂರ್ತಿ ಎನ್ನಲಾಗುತ್ತದೆ. ‌ಇತಿಹಾಸ ತಜ್ಞರ ಪ್ರಕಾರ ಸುಮಾರು ಐದು ಸಾವಿರ ವರ್ಷಗಳ ಹಳೆಉ ಮೂರ್ತಿ ಇದು ಎನ್ನಲಾಗುತ್ತದೆ. ಇಡಗುಂಜಿಯ ಮಹಾತ್ತೋಭಾರ ಮಹಾಗಣಪತಿ ಅಂದರೆ ಸಾಮಾನ್ಯವಲ್ಲ ಸೂಕ್ಷ್ಮವಾಗಿ ಗಮನಿಸಿ ಜಗತ್ತಿನಲ್ಲಿ ಇರುವ ಎಲ್ಲಾ ಗಣಪತಿಗಳು ಏಕದಂತ ಆದರೆ ಇಲ್ಲಿನ‌ ಗಣಪತಿ ಹಾಗಿಲ್ಲ ಇದಕ್ಕೆ ಒಂದು ಕಥೆಯೇ ಇದೆ.

ಮಹಾಗಣಪತಿಯು ತಿಂಡಿ ಪ್ರಿಯಾ ಎಂಬುವುದು ಎಲ್ಲರಿಗು ತಿಳಿದಿರುವ ಸಂಗತಿ ಹೀಗೆ ಗಜಾನನ ಒಮ್ಮೆ ಮೋದಕ, ಚಕ್ಕುಲಿ, ಪಂಚ ಕಜ್ಜಾಯಗಳನ್ನು ತಿಂದು ದಾರಿಯಲ್ಲಿ ಹೋಗುತ್ತಿರುವಾಗ ಹೊಟ್ಟೆ ಹೊಡೆದು ಹೋಗುತ್ತಿರುವ ಅನುಭವ ಆಗುತ್ತದೆಯಂತೆ. ಅಯ್ಯೋ ಆಗ ಇನ್ನೇನು ಮಾಡುವುದು ಎಂದು ಅಕ್ಕಪಕ್ಕದಲ್ಲಿ ನೋಡುವಾಗ ಪಕ್ಕದಲ್ಲಿ ಒಂದು ಸರ್ಪ ಹೋಗುತ್ತಿತ್ತಂತೆ, ತಡ ಮಾಡದೆ ಗಣೇಶ ಆ ಹಾವನ್ನು ಎತ್ತಿ ತನ್ನ ಹೊಟ್ಟಗೆ ಬಿಗಿದು ಕಟ್ಟಿದ್ದನಂತೆ. ಇದನ್ನ ದೂರದಿಂದ ನೋಡುತ್ತಿದ್ದ ಚಂದ್ರ ಕಿಲಕಿಲ ಅಂತ ನಕ್ಕು ಬಿಟ್ಟ ಇದನ್ನು ನೋಡಿದ ಗಜಾನನ ಕ್ರೋಧಗೊಂಡು ತನ್ನ ಒಂದು ದಂತವನ್ನು‌ ಮುರಿದು ಚಂದ್ರನೆಡೆಗಡ ಎಸೆಯುತ್ತಾನೆ. ಆನಂತರ ಗಣಪತಿ ಏಕದಂತನಾಗುತ್ತಾನೆ ಇಂತಹ ಗಣಪತಿ ನೋಡಲು ಸಿಗುವುದು ಇಡಗುಂಜಿಯಲ್ಲಿ ಮಾತ್ರ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೀಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By god