ತಾಯಿಯ ಮನೆಯಿಂದ ಈ ವಸ್ತುಗಳನ್ನು ತರಲೇಬೇಡಿ….
ಸಾಮಾನ್ಯವಾಗಿ ಹೆಣ್ಣಿನ ಮನೆಯವರು ಈ ರೀತಿ ಯೋಚನೆ ಮಾಡುತ್ತಾರೆ ಕೆಲವು ವಸ್ತುಗಳನ್ನು ತನ್ನ ಗಂಡನ ಮನೆಗೆ ಮಗಳು ತೆಗೆದುಕೊಂಡು ಹೋದರೆ ಅಲ್ಲಿ ಅವಳಿಗೆ ಗೌರವ ಹೆಚ್ಚಾಗಿ ಸಿಗುತ್ತದೆ ಅವಳಿಗೆ ಅದರಿಂದ ಉಪಯೋಗ ಆಗುತ್ತದೆ ಎಂದು ಇದು ಹಿಂದಿನ ಕಾಲದಿಂದ ವರೋಪಚಾರ ಅಂತಾನೇ ಹೇಳುತ್ತಾರೆ ಅಥವಾ ತವರಿನಿಂದ ಬರುವ ಉಡುಗೊರೆ ಅಂತಾನೆ ಕರೆಯಲ್ಪಡುತ್ತದೆ ಹಿಂದಿನ ಕಾಲದಲ್ಲಿ ಈ ರೀತಿ ತಾಯಿ ಮನೆಯಿಂದ ತೆಗೆದುಕೊಂಡು ಹೋಗುತ್ತಿರಲಿಲ್ಲ ಅಂದರೆ ಸ್ವಲ್ಪ ಪ್ರಮಾಣ ಮಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದರು. ಆದರೆ ಅವರು ಹೆಚ್ಚಾಗಿ ತಾಳ್ಮೆ ಹಾಗೂ ಅಲ್ಲಿ ಸಮಾಧಾನವಾಗಿ ಇರಬೇಕು ಮತ್ತು ಅಲ್ಲಿ ಎಲ್ಲವನ್ನು ಅನುಸರಿಸಿಕೊಂಡು ಹೋಗಬೇಕು ಮತ್ತು ಅವರ ಮನಸ್ಸಿಗೆ ನೋವು ಉಂಟಾಗದೆ ನೀನು ನಡೆದುಕೊಳ್ಳಬೇಕು ಎಂದು ಹೇಳಿ ಕಳಿಸುತ್ತಿದ್ದರು. ಆದರೆ ಕಾಲಕ್ರಮೇಣ ಇಂದಿನ ಜನಾಂಗಕ್ಕೆ ಬಂದರೆ ಈಗಿನವರು ಬರಿ ಉಡುಗರೆಯನ್ನು ಮಾತ್ರ ಕೊಟ್ಟು ಕಳಿಸುತ್ತಾರೆ ಆದರೆ ಈಗಿನ ನಾಗರಿಕತೆಯನ್ನು ಹೇಳಿ ಸ್ವಲ್ಪ ಪ್ರಮಾಣದ ಜನರು ಮಾತ್ರ ತನ್ನ ಗಂಡನ ಮನೆಗೆ ಕಳಿಸುತ್ತಾರೆ.

ಪ್ರತಿಯೊಂದು ಹೆಣ್ಣು ಮದುವೆಯಾಗಿ ಹೋಗುವಾಗ ಮತ್ತು ಆ ಹೆಣ್ಣಿಗೆ ವಿವೇಚನೆ ತಿಳಿದ ನಂತರ ಈ ರೀತಿ ಕೆಲ ವಿಷಯಗಳನ್ನು ಹೇಳಿ ಅದನ್ನು ಅವರ ಗಂಡನ ಮನೆಗೆ ಉಡುಗರೆಯಾಗಿ ಕಳಿಸಲು ಪ್ರೋತ್ಸಾಹಿಸಬೇಕು.ಹಣ ಆಸ್ತಿ ಹಾಗೂ ಒಳ್ಳೆಯ ಅಂತಸ್ತು ಇಷ್ಟೇ ಅಲ್ಲದೆ ನೀನು ಹೋದ ಮನೆಯಲ್ಲಿ ಅಲ್ಲಿನ ಹಿರಿಯರಿಗೆ ತಗ್ಗಿ ಬಗ್ಗಿ ನಡೆಯಬೇಕು ಮತ್ತು ಕ್ಷಮಾ ಗುಣ ಹೆಚ್ಚಾಗಿರಬೇಕು ಹಾಗೂ ಪ್ರತಿಯೊಂದು ಕಷ್ಟ ಸುಖದಲ್ಲಿ ಅವರಿಗೆ ನೀನು ಸರಿಪಾಲಾಗಿ ನಡೆದುಕೊಳ್ಳಬೇಕು ಈ ರೀತಿ ಕೆಲವು ಉಡುಗೊರೆಯ ಮಾತುಗಳನ್ನು ಆ ಹೆಣ್ಣಿಗೆ ಹೇಳಿ ತವರಿನವರು ಕಳಿಸಬೇಕು ಅದು ಅವಳ ಜೀವನದ ಉದ್ದವೋ ಆ ಉಡುಗರೇ ಒಂದು ಮುಖ್ಯ ಪಾತ್ರವನ್ನು ವಹಿಸುತ್ತದೆ. ಇದು ಬಹು ಮುಖ್ಯವಾಗಿ ಹೆಣ್ಣು ಮಕ್ಕಳು ತನ್ನ ತಾಯಿಯ ಮನೆಯಿಂದ ತರಲೇ ಬಾರದಂತಹ ವಸ್ತುಗಳು ಅದು ಮೊದಲಿಗೆ ಪೂಜೆಯ ಸಾಮಾನುಗಳು ಅಂದರೆ ಪೂಜೆಗೆ ಮೀಸಲಿಟ್ಟಿರುವ ಕೆಲವು ಪಾತ್ರೆ ಸಾಮಾನುಗಳು ಮನೆಯಲ್ಲಿ ಇದ್ದೇ ಇರುತ್ತವೆ, ಅದನ್ನು ಮದುವೆಯಾಗಿ ಹೋದ ಹೆಣ್ಣು ತನ್ನ ಗಂಡನ ಮನೆಗೆ ತೆಗೆದುಕೊಂಡು ಹೋಗಬಾರದು ಅದರಲ್ಲೂ ಕೂಡ ನಂದಾದೀಪವನ್ನು ತೆಗೆದುಕೊಂಡು ಹೋಗಲೇಬಾರದು.

WhatsApp Group Join Now
Telegram Group Join Now

ಏಕೆಂದರೆ ತನ್ನ ತಾಯಿಯ ಮನೆಯಲ್ಲಿ ಅದನ್ನು ಉಪಯೋಗಿಸುತ್ತಿರುವುದ ರಿಂದ ಅದರಲ್ಲಿ ಅದಕ್ಕೆ ಆದ ಒಂದು ಶಕ್ತಿ ಇರುತ್ತದೆ ಹಾಗಾಗಿ ಅದನ್ನು ತೆಗೆದುಕೊಂಡು ಹೋಗಬಾರದು ಮತ್ತು ವಿಗ್ರಹಗಳು ಅಂದರೆ ಚಿಕ್ಕ ಚಿಕ್ಕ ವಿಗ್ರಹಗಳನ್ನು ತೆಗೆದುಕೊಂಡು ಹೋಗಬಾರದು, ಹಾಗೂ ಉಪ್ಪು ಉಪ್ಪನ್ನು ಕೂಡ ತನ್ನ ಮನೆಯಿಂದ ತೆಗೆದುಕೊಂಡು ಹೋಗಬಾರದು ಏಕೆಂದರೆ ಅಡುಗೆಗೆ ಬಳಸುವ ಉಪ್ಪನ್ನು ಮಹಾಲಕ್ಷ್ಮಿಗೆ ಮತ್ತು ಹುಣಸೆಹಣ್ಣು ಹಾಗೂ ತನ್ನ ತಾಯಿ ಮನೆಯಲ್ಲಿ ಇರುವಂತಹ ಕಹಿ ವಸ್ತುಗಳು ಮತ್ತು ಕಾರದ ಸಾಮಾನುಗಳನ್ನು ತರಲೇಬಾರದು ಈ ರೀತಿ ಸಾಮಾನ್ಯವಾಗಿ ಸಣ್ಣ ಸಣ್ಣ ವಸ್ತುಗಳನ್ನು ತೆಗೆದುಕೊಂಡು ಹೋಗುವುದು ಉತ್ತಮವಲ್ಲ ಮೊದಲಿಗೆ ಹೇಳಿದಾಗೆ ಅವಳ ನುಡಿ ನಡೆ ಹಾಗೂ ಅವಳು ತನ್ನ ಗಂಡನ ಮನೆಯಲ್ಲಿ ಹೇಗೆ ಇರಬೇಕು ಮತ್ತು ಅದನ್ನು ಹೇಗೆ ನಿಭಾಯಿಸಿಕೊಂಡು ಕೊನೆಯವರೆಗೂ ಒಳ್ಳೆಯ ಪತ್ನಿಯಾಗಿ ಸಾಗಬೇಕು ಈ ರೀತಿ ಕೆಲವು ಅಂಶಗಳನ್ನು ಮತ್ತು ಜೀವನಕ್ಕೆ ಉಪಯೋಗವಾಗುವ ಒಳ್ಳೆಯ ವಿಷಯಗಳು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ