ನಮಸ್ತೆ ವೀಕ್ಷಕರೇ ನಮ್ಮ ದೇಹದಲ್ಲಿ ಒರಗಡೆ ಹಾಗುವ ಗಾಯಗಳು ಇರಬಹುದು ನೋವುಗಳು ಇರಬಹುದು ಎಲ್ಲದಕ್ಕೂ ನಾವು ಏನಾದರೂ ಮೆಡಿಸಿನ್ ಅನ್ನು ತೆಗೆದುಕೊಂಡು ವಾಸಿ ಮಾಡಿಕೊಳ್ಳಬಹುದು.ದೇಹದ ಒಳಗಡೆ ಇರುವ ಜೀವಕೋಶ ,ರಕ್ತ ಕಣಗಳಿಗೆ ಆಗುವ ಹಾನಿ ಏನು ಇರುತ್ತದೆ ಏನಾದರೂ ತೊಂದರೆ ಅದರೆ ಮೆಡಿಸಿನ್ ತೆಗೆದುಕೊಂಡರು ಕೂಡ ನಮ್ಮ ಆಹಾರದಲ್ಲಿ ಅದಷ್ಟು ಬದಲಾವಣೆ ಮಾಡಿಕೊಂಡು ಅದನ್ನ ಸರಿಪಡಿಸಿಕೊಳ್ಳಬೇಕು.
ನಮ್ಮ ಆಹಾರದಲ್ಲಿ ಸರಿಯಾದ ಪ್ರಮಾಣದಲ್ಲಿ ವಿಟಮಿನ್, ಪ್ರೋಟೀನ್ ಎಲ್ಲವು ಇದ್ದಾಗ ಮಾತ್ರ ಈ ರೀತಿಯ ತೊಂದರೆಗಳಿಂದ ದೂರ ಇರಬಹುದು ನಮ್ಮ ಅನೇಕ ತೊಂದರೆಗಳಿಗೆ ಯಾವುದೋ ಒಂದು ಸಿಂಪಲ್ ಔಷಧಿಯನ್ನ ಮನೇಲಿ ತಯಾರು ಮಾಡಬಹುದು.ಮನೆಯಲ್ಲಿ ಸಿಗುವಂತಹ ಪದಾರ್ಥದಿಂದ ತಯಾರಿಸಬಹುದು ಅಂದರೆ ಯಾರು ಬೇಡ ಅನ್ನುತ್ತಾರೆ ಇವತ್ತು ಅಂತಹದ್ದೆ ಒಂದು ಮನೆ ಔಷಧಿಯನ್ನು ನೋಡೋಣ.
ವಿಟಮಿನ್ ಸಿ ಅನ್ನೋದು ನಮ್ಮ ದೇಹಕ್ಕೆ ತುಂಬಾನೆ ಮುಖ್ಯ ನಮ್ಮ ದೇಹದಲ್ಲಿ ಇರುವ ಸಣ್ಣ ಸಣ್ಣ ಜೀವಕೋಶಗಳಿಗೆ ರಕ್ತ ಕಣಗಳಿಗೆ ಏನಾದರೂ ತೊಂದರೆ ಅದಾಗ ಅದನ್ನು ಸರಿಮಾಡುವುದಕ್ಕೆ ವಿಟಮಿನ್ ಸಿ ಅನ್ನೋದು ತುಂಬಾನೆ ಮುಖ್ಯ.ನಮಗೆಲ್ಲಾ ಗೊತ್ತಿರುವ ಹಾಗೆ ವಿಟಮಿನ್ ಸಿ ಅನ್ನೋ ಪದಾರ್ಥ ಅಂದರೆ ನೆಲ್ಲಿಕಾಯಿ ,ನಾವು ಇವತ್ತು ನೆಲ್ಲಿಕಾಯಿ ಜ್ಯೂಸ್ ಬಗ್ಗೆ ತಿಳಿಯೋಣ.ಅಥವಾ ಆಮ್ಲ ಜ್ಯೂಸ್ .ಮೊದಲಿಗೆ ನೆಲ್ಲಿಕಾಯಿ ಜ್ಯೂಸ್ ಮಾಡೋಕೆ ಏನೇನು ಎಲ್ಲಾ ಉಪಯೋಗಿಸಿದ್ದಿವಿ ಅಂತ ತಿಳಿಯೋಣ.ನೆಲ್ಲಿಕಾಯಿ ಅದು ಸೈಜ್ ಮೇಲೆ ಆದಾರವಾಗುತ್ತದೆ.ನಾಲ್ಕರಿಂದ ಐದು ನೆಲ್ಲಿಕಾಯಿ ಒಂದು ಸ್ವಲ್ಪ ಉಪ್ಪು ರುಚಿಗೆ.ಸ್ವಲ್ಪ ಶುಂಠಿ ಇದು ಬೇಕಾದರೆ ತೆಗದುಕೊಳ್ಳಬಹುದು ಬೇಡ ಅಂದರೆ ಬಿಡಬಹುದು.ಸ್ವಲ್ಪ ಬೆಲ್ಲ ಇದು ಕೂಡ ಆಪ್ಷನಲ್ .ಸಕ್ಕರೆ ಹಾಕಬಹುದು ಇಲ್ಲ ಅಂದರೆ ಜೇನುತುಪ್ಪ ಹಾಕಬಹುದು.
ಮೊದಲಿಗೆ ನೆಲ್ಲಿಕಾಯಿಯನ್ನು ಚೆನ್ನಾಗಿ ತೊಳೆದು ವರೆಸಿ ಅದನ್ನ ತುರಿದುಕೊಳ್ಳಬೇಕು ನಾವು ಜ್ಯೂಸ್ ಮಾಡಬೇಕಾದರೆ ಈ ನೆಲ್ಲಿಕಾಯಿ ನಮ್ಮ ಇಮ್ಯೂನಿಟಿಯನ್ನು ಜಾಸ್ತಿ ಮಾಡುತ್ತದೆ.ರೋಗನಿರೋಧಕ ಶಕ್ತಿ ಹೆಚ್ಚಿಸಲು ನೆಲ್ಲಿಕಾಯಿ ತುಂಬಾ ಸಹಾಯಕಾರಿ ಶೀತ ಅಥವಾ ಕೆಮ್ಮು ಇದ್ದಾಗ ನೆಲ್ಲಿಕಾಯಿಯನ್ನು ಕೂಡ ಔಷಧಿ ರೀತಿಯಲ್ಲಿ ಬಳಸಬಹುದು.
ತುಂಬಾ ಮುಖ್ಯವಾಗಿ ಹೇಳಬೇಕು ಅಂದರೆ ನಮ್ಮ ಚರ್ಮ ಮತ್ತು ಕೂದಲಿನ ರಕ್ಷಣೆಗೆ ವಿಟಮಿನ್ ಸಿ ಇರುವ ನೆಲ್ಲಿಕಾಯಿ ತುಂಬಾ ಸಹಾಯ ಮಾಡುತ್ತದೆ.ಕೂದಲು ಉದರುವುದು,ತಲೆಯ ಹೊಟ್ಟಿನ ಸಮಸ್ಯೆಗೆ ,ಕೂದಲು ಉದ್ದವಾಗಿ ಬೆಳೆಯಲು ಹೇರ್ ಕಂಡಿಷನರ್ ಹಾಗಿ ಸಹ ಬಳಸಬಹುದು.ನಾವು ನೆಲ್ಲಿಕಾಯಿ ಬಳಸುವುದರಿಂದ ಇನ್ನೊಂದು ಮುಖ್ಯವಾದ ವಿಷಯ ಅಂದರೆ ನಿಮ್ಮ ಕಣ್ಣಿನ ಆರೋಗ್ಯಕ್ಕೆ ಈ ನೆಲ್ಲಿಕಾಯಿ ತುಂಬಾನೆ ಒಳ್ಳೆಯದು ಹಾಗೆ ನೆಲ್ಲಿಕಾಯಿ ನಮ್ಮ ಡಯಜೀಷನ್ ಗೆ ಸಹ ಸಹಾಯ ಮಾಡುತ್ತದೆ.ಅದೇ ರೀತಿ ನಮ್ಮ ದೇಹದಲ್ಲಿ ಇರುವ ಟಾಕ್ಸಿನ್ಸ್ ಅಂದರೆ ವಿಷ ಪದಾರ್ಥಗಳು ,ಕಲ್ಮಶಗಳನ್ನು ಒರ ಹಾಕುವುದಕ್ಕೆ ಸಹಾಯ ಮಾಡುತ್ತದೆ.
ನಮ್ಮ ದೇಹದ ತೂಕ ಕಡಿಮೆ ಮಾಡಲು ಯಾರು ಡಯೆಟ್ ಅಲ್ಲಿ ಇರುತ್ತಾರೆ ಅವರಿಗೆ ತೂಕ ಇಳಿಸಿಕೊಳ್ಳುವುದಕ್ಕೆ ನೆಲ್ಲಿಕಾಯಿಯನ್ನು ಡಯೆಟ್ ಅಲ್ಲಿ ಬಳಸಿದರೆ ಅಥವಾ ಸೇರಿಸಿಕೊಂಡರೆ ಸಹಾಯ ಮಾಡುತ್ತದೆ.ಇಗ ತುರಿದುಕೊಂಡ ನೆಲ್ಲಿಕಾಯಿ ,ಸ್ವಲ್ಪ ಉಪ್ಪು,ಬೆಲ್ಲ,ಶುಂಠಿ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಬೇಕು ಅದನ್ನು ಸೋಸಬೇಕು ಇದಕ್ಕೆ ನೀವು ಬೇಕಾಗುವಷ್ಟು ನೀರು ಹಾಕಿಕೊಳ್ಳಿ.ನಂತರ ನೆಲ್ಲಿಕಾಯಿ ಜ್ಯೂಸ್ ತಯಾರು ಆಗಿರುತ್ತದೆ. ದಿನವೂ ಸಹ ಕುಡಿಯಬಹುದು.ನಿಮ್ಮ ಜೀರ್ಣ ಕ್ರಿಯೆಯಲ್ಲಿ ಸಹಾಯ ಮಾಡುತ್ತದೆ.ಅನೇಕ ಸಮಸ್ಯೆಗಳಿಗೆ ಒಂದೇ ಪರಿಹಾರ ಅಂತ ಹೇಳಬಹುದು.ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.