ಧನಸ್ಸು ರಾಶಿ ಮೂಲ ನಕ್ಷತ್ರದವರ ಗುಣ ಸ್ವಭಾವಗಳು….. ನಾನು ಇವತ್ತು ಈ ಮೂಲ ನಕ್ಷತ್ರದಲ್ಲಿ ಜನಿಸಿರುವಂತಹ ವ್ಯಕ್ತಿಗಳ ಜಾತಕ ಫಲ ಹೇಗಿರುತ್ತದೆ ಎಂದು ತಿಳಿಸುತ್ತಿದ್ದೇನೆ ಅದು ಸ್ತ್ರೀಯರಿರಬಹುದು ಅಥವಾ ಪುರುಷ ಇರಬಹುದು ಈ ಮೂಲ ನಕ್ಷತ್ರ ಧನಸ್ಸು ರಾಶಿಯಲ್ಲಿ ಬರುವಂತಹದು ಮೂಲ ನಕ್ಷತ್ರದ 4 ಚರಣಗಳು ಎ ಯೋ ಬಾ ಬಿ ಅನ್ನುವ ನಾಲ್ಕು ಚರಣಗಳಲ್ಲಿ ಜನಿಸಿರುವಂತಹ ವ್ಯಕ್ತಿಗಳ ಗುಣ ಸ್ವಭಾವ ಯಾವ ರೀತಿ ಇರುತ್ತದೆ ಅವರ ಆರೋಗ್ಯ ಸ್ಥಿತಿ ಹೇಗಿರುತ್ತದೆ ಮತ್ತು ಅವರು ಯಾವ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುತ್ತಾರೆ ಅಥವಾ ಅವರು ಯಾವ ಕ್ಷೇತ್ರದಲ್ಲಿ ಕೆಲಸ ಮಾಡಿದರೆ ಯೋಗ್ಯವಾಗುತ್ತದೆ, ಮೂಲ ನಕ್ಷತ್ರದಲ್ಲಿ ಜನಿಸಿರುವಂತಹ ವ್ಯಕ್ತಿಗಳಿಗೆ ಯಾವ ನಕ್ಷತ್ರದಲ್ಲಿ ಜನಿಸಿರುವಂತಹ ವಧು ವರರು ಒಂದಾಗುತ್ತಾರೆ ಎನ್ನುವುದನ್ನು ಈ ವಿಡಿಯೋದಲ್ಲಿ ನಿಮಗೆ ತಿಳಿಸುತ್ತೇನೆ. ಮೂಲ ನಕ್ಷತ್ರದಲ್ಲಿ ಜನಿಸಿರುವಂತಹ ವ್ಯಕ್ತಿಗಳ ಗುಣಸ್ವಭಾವ ಯಾವ ರೀತಿ ಇರುತ್ತದೆ ಎಂದು ನೋಡಿದಾಗ ಇವರು ಅತ್ಯಂತ ವಸ್ತ್ರಲಂಕಾರ ಪ್ರಿಯರಾಗಿರುತ್ತಾರೆ ಇವರಿಗೆ ಮೈಮೇಲೆ ಇರುವಂತಹ ಬಟ್ಟೆಗಳು ಶುದ್ಧವಾಗಿ ಶುಭ್ರವಾಗಿ ಇರಬೇಕು ಮತ್ತು ಅವು ಯಾವತ್ತಿಗೂ ಪ್ರಕಾಶಿಸುವ ಹಾಗೆ ಇರಬೇಕು.
ಇವರು ವಸ್ತ್ರಾಲಂಕಾರದ ಕಡೆ ಹೆಚ್ಚು ಗಮನವನ್ನು ವಹಿಸುತ್ತಾರೆ ಹಾಗೂ ಇವರು ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ಉತ್ತಮ ಕಾರ್ಯವನ್ನು ನಿರ್ವಹಿಸುತ್ತಾರೆ ಏಕೆಂದರೆ ಇವರು ಜನಗಳ ಪ್ರೀತಿಯನ್ನು ಗಳಿಸಿರುತ್ತಾರೆ ಜನಗಳು ಕಷ್ಟ ಎಂದರೆ ಹಿಂದೆ ಮುಂದೆ ನೋಡದೆ ಅವರಿಗೆ ಸಹಾಯ ಮಾಡುವಂತಹ ಮನಸ್ಥಿತಿ ಯುಳ್ಳ ವ್ಯಕ್ತಿಗಳು ಹಾಗಾಗಿ ಇವರು ಚಟುವಟಿಕೆಯಿಂದ ಇರುವುದಕ್ಕಾಗಿ ಸಂಘ ಸಂಸ್ಥೆಗಳಲ್ಲಿ ಓಡಾಡುತ್ತಿರುತ್ತಾರೆ ಇನ್ನು ಇವರು ಅತ್ಯಂತ ಸಂಪ್ರದಾಯಕ್ಕೆ ಒತ್ತು ಕೊಡುವಂತಹ ವ್ಯಕ್ತಿಗಳು ಆಧ್ಯಾತ್ಮದಲ್ಲಿ ವಿಶ್ವಾಸವುಳ್ಳವರು ದೇವರಲ್ಲಿ ನಂಬಿಕೆ ಇಟ್ಟವರು ಹಿರಿಯರಲ್ಲಿ ಪ್ರೀತಿ ಇರುವಂತಹ ವ್ಯಕ್ತಿಗಳು ಹಾಗಾಗಿ ಸಂಪ್ರದಾಯ ಶಾಸ್ತ್ರದ ಕಡೆ ಹೆಚ್ಚಾಗಿ ಗಮನ ಕೊಡುತ್ತಾರೆ.ಇವರು ಅಧಿಕವಾಗಿ ವಸ್ತ್ರಲಂಕಾರಕ್ಕೆ ಯಾವ ರೀತಿಯಾಗಿ ಮಾನ್ಯತೆ ನೀಡಿರುತ್ತಾರೆ ಹಾಗೆ ಬೇರೆಯವರಿಂದ ಕೂಡ ಅದನ್ನು ಬಯಸುತ್ತಾರೆ ಅಂದರೆ ಸೌಂದರ್ಯವನ್ನು ಆಸ್ವಾದಿಸುವ ವ್ಯಕ್ತಿಗಳು ಚೆನ್ನಾಗಿರುವಂತಹದನ್ನು ಬಹಳಷ್ಟು ವೈಭವವಾಗಿ ಹೇಳುವಂತಹ ವ್ಯಕ್ತಿತ್ವ ಮತ್ತು ಇವರು ಸದಾ ಸಂತೋಷದಿಂದ ಜೀವನವನ್ನು ನಡೆಸುತ್ತಿರುತ್ತಾರೆ ಸದೃಢ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ.
ಅಂದರೆ ಇವರು ಯೋಚನೆ ಪಡುವುದಿಲ್ಲ ಯಾವುದೇ ಕೆಲಸವನ್ನು ಅದು ಆಗುತ್ತದೆ ಎನ್ನುವ ಛಲದಿಂದ ಮಾಡುತ್ತಾರೆ ಹಾಗಾಗಿ ಅದರಿಂದ ಜಾಸ್ತಿ ಯೋಚಿಸುವುದಿಲ್ಲ ಅದನ್ನು ಬಹಳ ಲೀಲಾಜಾಲವಾಗಿ ಮಾಡುತ್ತಾರೆ ಮತ್ತು ಅವರು ತೆಗೆದುಕೊಂಡಿರುವಂತಹ ನಿರ್ಧಾರಗಳು ಸದೃಢವಾಗಿರುತ್ತವೆ. ಇವರು ಯಾವಾಗಲೂ ಜನರಿಗೆ ಅವಶ್ಯಕತೆ ಇರುವ ಸೌಲಭ್ಯಗಳನ್ನು ದೊರಕಿಸಿ ಕೊಡುವಲ್ಲಿ ಹೆಚ್ಚಿನದಾಗಿ ಪ್ರಯತ್ನಿಸುತ್ತಿರುತ್ತಾರೆ ಎಲ್ಲ ವಿಷಯಗಳಲ್ಲಿ ಉತ್ತಮ ಸಲಹೆಗಳನ್ನು ನೀಡುತ್ತಾರೆ ಮತ್ತು ಸಂಪೂರ್ಣವಾಗಿ ಸ್ನೇಹಜೀವಿಯಾಗಿರುವಂತಹದು ಬಹಳ ಸ್ಪಷ್ಟವಾಗಿ ಕಂಡು ಬರುತ್ತದೆ ಮೂಲ ನಕ್ಷತ್ರದಲ್ಲಿ ಜನಿಸಿರುವಂತಹ ವ್ಯಕ್ತಿಗಳ ಪಲ ಮತ್ತು ಅವರ ಮನಸ್ಥಿತಿ ಹಾಗೂ ಈ ಧನಸ್ಸು ರಾಶಿಯಲ್ಲಿ ಬರುವಂತಹ ಮೂಲ ನಕ್ಷತ್ರ ಇದರಲ್ಲಿ ನಾಲ್ಕು ಚರಣಗಳನ್ನು ಹೇಳಿದ್ದೇನೆ ಅದರಲ್ಲಿ ಒಂದೊಂದು ಚರಣಗಳ ಮನಸ್ಥಿತಿ ಹೇಗಿರುತ್ತದೆ ಎಂದು ನಾನು ತಿಳಿಸಿಕೊಡುತ್ತೇನೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ