ನಾಗರಾಧನೆ,ಆಶ್ಲೇಷ ಬಲಿ ಪೂಜೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋದವರು ಆ ತಪ್ಪನ್ನ ಮಾತ್ರ ಮಾಡಬೇಡಿ…ಅದು ಕರ್ನಾಟಕದಲ್ಲಿರುವ ಪ್ರಮುಖ ಧರ್ಮ ಕ್ಷೇತ್ರ ಪ್ರಕೃತಿಯ ಮಡಿಲಿನಲ್ಲಿ ಹಚ್ಚ ಹಸಿರಿನಿಂದ ಕಂಗಳಿಸೋ ಪಶ್ಚಿಮ ಘಟ್ಟಗಳ ಸಾಲಲ್ಲಿರುವ ದಿವ್ಯ ಕ್ಷೇತ್ರ ಅಲ್ಲಿ ನಮಗೆ ಕೇವಲ ಭಗವಂತನ ದರ್ಶನ ಮಾತ್ರ ಆಗುವುದಿಲ್ಲ ಬದಲಾಗಿ ಅಲ್ಲಿನ ಅಪೂರ್ವ.
ಪ್ರಕೃತಿಯ ಸೌಂದರ್ಯ ರುದ್ರರಮಣೀಯ ಪರ್ವತಗಳ ಸಾಲು ನಮ್ಮನ್ನ ಮಂತ್ರಮುಗ್ಧಗೊಳಿಸುತ್ತದೆ ಇನ್ನು ಅಲ್ಲಿನ ಪವಾಡ ಗಳ ಬಗ್ಗೆ ಹೇಳುವುದಕ್ಕೆ ಹೊರಟರೆ ಗಂಟೆಗಳು ಸಾಲುವುದಿಲ್ಲ ಸರ್ಪ ದೋಷದ ಪರಿಹಾರಕ್ಕಾಗಿ ಇಲ್ಲಿಗೆ ಆಗಮನಿಸುವ ಜನರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚು ತಲೆ ಇದೆ ಇನ್ನು ಈ ಸುತ್ತಮುತ್ತ ಜಾಗದ ಗ್ರಾಮದ ಜನರು ಹಾವು ಕಚ್ಚಿದರೆ ಯಾವುದೇ ಆಸ್ಪತ್ರೆಗೆ.
ಹೋಗುವುದಿಲ್ಲ ಬದಲಾಗಿ ಆ ದೇವಾಲಯಕ್ಕೆ ಕರೆತಂದು ಅಲ್ಲಿ ಚಿಕಿತ್ಸೆ ಕೊಡಿಸುತ್ತಾರೆ ಇಷ್ಟು ಹೇಳುತ್ತಿದ್ದ ಹಾಗೆ ಸಾಕಷ್ಟು ಜನರಿಗೆ ಈ ಸ್ಥಳ ಯಾವುದು ಎಂದು ಅರ್ಥವಾಗಿ ಬಿಟ್ಟಿರುತ್ತದೆ ನಾನು ಇವತ್ತು ಹೇಳುವುದಕ್ಕೆ ಹೊರಟಿರುವ ವಿಚಾರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಂಬಂಧಪಟ್ಟದ್ದು.ಸುಬ್ರಹ್ಮಣ್ಯ ಈ ಹೆಸರು ಕೇಳುತ್ತಿದ್ದಂತೆ ಆಸ್ತಿಕರ ಕಿವಿಗಳು ನೆಟ್ಟಗೆ ಆಗುತ್ತವೆ ಅಯ್ಯೋ ನಾನು ಕೂಡ.
ಕುಕ್ಕೆಗೆ ಹೋಗಿ ಬರಬೇಕು ಎಂದುಕೊಂಡಿದ್ದೆ ಆದರೆ ಆಗಲೇ ಇಲ್ಲವಲ್ಲ ಅನ್ನುವುದು ಉದ್ಗಾರ ಶುರುವಾಗಬಹುದು ಹೀಗೆ ಕೋಟ್ಯಂತರ ಭಕ್ತರ ನೆಲಬೀಡಾದ ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಆಶ್ಲೇಷ ಬಲಿ ಸರ್ಪಸಂಸ್ಕಾರ ಇತ್ಯಾದಿ ಸರ್ವ ಸರ್ಪ ದೋಷಗಳನ್ನು ನಿವಾರಿಸಬಲ್ಲ ವಿಶೇಷ ಪೂಜೆಗಳನ್ನು ನೆರವೇರಿಸಲಾಗುತ್ತದೆ ಇದರ ಜೊತೆಗೆ ತಮ್ಮ ಹಲವು.
ನಾಗದೋಷಗಳನ್ನ ನಿವಾರಿಸಿಕೊಳ್ಳಲು ಎಂದು ಸಾವಿರಾರು ಭಕ್ತರು ನಿತ್ಯ ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ ಇಲ್ಲಿನ ಕುಮಾರಧಾರ ನದಿಯಲ್ಲಿ ನೆನೆದು ಸುಬ್ರಹ್ಮಣ್ಯನ ದರ್ಶನ ಪಡೆದು ಪುನೀತರಾಗುತ್ತಾರೆ ಇಷ್ಟಕ್ಕೂ ಈ ಕ್ಷೇತ್ರದಲ್ಲಿ ನೆರವೇರಿಸಲ್ಪಟ್ಟ ಆಶ್ಲೇಷ ಬಲಿ ಸರ್ಪ ಸಂಸ್ಕಾರ ಗಳ ವಿಶೇಷತೆಗಳೇನು ಯಾಕಾಗಿ ಇಂತಹ ಪೂಜೆಗಳನ್ನು ನೆರವೇರಿಸಲಾಗುತ್ತದೆ ಎಂದು.
ನೋಡುವುದಕ್ಕೂ ಮುನ್ನ ಈ ಕ್ಷೇತ್ರದ ಹಿನ್ನೆಲೆ ಬಗ್ಗೆ ಈ ಕ್ಷೇತ್ರಕೆ ಕುಕ್ಕೆ ಅನ್ನುವ ಹೆಸರು ಬರುವುದಕ್ಕೆ ಕಾರಣವಾದ ವಿಚಾರದ ಬಗ್ಗೆ ಒಂದಷ್ಟು ಮಾಹಿತಿ ಕೊಡುತ್ತೇನೆ ಕಂದ ಪುರಾಣದ ಉಲ್ಲೇಖದ ಪ್ರಕಾರ ಶಿವಪುತ್ರ ಕಾರ್ತಿಕೇಯ ಮದುವೆಯಾಗಿದ್ದು ಈಗಿನ ಕುಮಾರ ಪರ್ವತದಲ್ಲಿ ಮುಂದೆ ಆತ ಸುಬ್ರಹ್ಮಣ್ಯನಾಗಿ ಇಲ್ಲಿ ನೆಲೆಸುವುದಕ್ಕೂ ಆ ವಿವಾಹವೇ ಕಾರಣವಾಯಿತು.
ತಾರಕಾಸುರನ ಸಂಹಾರದ ನಂತರ ಕಾರ್ತಿಕೇಯ ತನ್ನ ಸಹೋದರ ಗಣೇಶನೊಂದಿಗೆ ಈ ಸ್ಥಳಕ್ಕೆ ಬಂದನಂತೆ ಆವತ್ತಿಗಾಗಲೇ ತನ್ನ ಪರಿವಾರದೊಂದಿಗೆ ಈ ಸ್ಥಳಕ್ಕೆ ಬಂದು ಇಳಿದಿದ್ದ ದೇವೇಂದ್ರ ವಿಜಯ ಯಾತ್ರೆಯಿಂದ ಮರಳಿದ ಕಾರ್ತಿಕೆಯ ಹಾಗೂ ಗಣೇಶರಿಗೆ ಭವ್ಯ ಸ್ವಾಗತವನ್ನು ಕೋರುತ್ತಾನೆ ಈ ವೇಳೆ ತನ್ನ ಮಗಳು ದೇವಸೇನಾಳನ್ನ ಮದುವೆಯಾಗುವಂತೆ ಕಾರ್ತಿಕೆಯನಿಗೆ.
ಮನವಿ ಮಾಡುತ್ತಾನೆ ಇದಕ್ಕೆ ಸುಬ್ರಹ್ಮಣ್ಯನು ಸಮ್ಮತಿ ಸೂಚಿಸಿದರಿಂದ ಇದೇ ಸ್ಥಳದಲ್ಲಿ ವಿವಾಹ ಮಹೋತ್ಸವವನ್ನು ಏರ್ಪಡಿಸುತ್ತಾನೆ ದೇವೇಂದ್ರ. ಬ್ರಹ್ಮ ವಿಷ್ಣು ವೃದ್ಧರಾಗೆಯಾಗಿ ಸಕಲ ದೇವತೆಗಳಿಗೆ ಕಾರ್ತಿಕೇಯ ವಿವಾಹ ಆಹ್ವಾನ ಕಳಿಸಿದ ದೇವರಾಜ ಇಂದ್ರ ದೇವಸೇನಾಳ ದಾರಾ ಮಹೋತ್ಸವಕ್ಕಾಗಿ ವಿವಿಧ ನದಿಗಳಿಂದ ಪವಿತ್ರ ಜಲವನ್ನ ಇಲ್ಲಿಗೆ ತರಿಸಿದನಂತೆ.
ವಿವಾಹಕ್ಕೆ ಬಂದ ದೇವತೆಗಳೆಲ್ಲ ದೇವೇಂದ್ರ ತರಿಸಿದ್ದ ಸರ್ವ ತೀರ್ಥಗಳಿಂದ ಕಾರ್ತಿಕೇಯನಿಗೆ ಮಹಾಭಿಷೇಕ ನೆರವೇರಿಸಿ ಶುಭ ಕೋರಿದರಂತೆ ಹಾಗೆ ಕಾರ್ತಿಕೇಯನಿಂದ ಹಲವು ಪುಣ್ಯತೀರ್ಥಗಳ ಜಲ ನದಿಯಾಗಿ ಹರಿದು ಇಲ್ಲಿ ಹರಿಯುವ ನದಿಗೆ ಕುಮಾರಧಾರ ಎನ್ನುವ ಹೆಸರು ಬಂತು ಎಂದು ಹೇಳುತ್ತದೆ ಸ್ಥಳ ಪುರಾಣ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.