ಹೊಸ ಕನ್ನಡ ಭಾವನಾತ್ಮಕ ಕಥೆ ಕನ್ನಡ ನೀತಿ ಕಥೆ… ಗಿರೀಶನ ಜೊತೆ ನನ್ನ ಮದುವೆಯಾಗಿ ಐದು ವರ್ಷಗಳಾಗಿತ್ತು ಆದರೆ ನಮಗೆ ಇನ್ನೂ ಮಕ್ಕಳಾಗಿರಲಿಲ್ಲ ಗಿರೀಶ್ ನನ್ನ ಮೇಲೆ ತುಂಬಾ ನಂಬಿಕೆ ಇಟ್ಟಿದ್ದರು ನಾನು ಬಂಜೆಯಾಗಿದ್ದೆ ಆದರೆ ನಾನು ಗಿರೀಶನಿಗೆ ಸುಳ್ಳು ಹೇಳಿದ್ದೆ ನಮಗೆ ಶೀಘ್ರದಲ್ಲೇ ಮಗು ಆಗುತ್ತೆ ಎಂದು ಲೇಡಿ ಡಾಕ್ಟರ್ ಹೇಳಿದ್ದಾರೆ ಎಂದು ನಾನು ಗಿರೀಶನನ್ನು ನಂಬಿಸಿದೆ.

WhatsApp Group Join Now
Telegram Group Join Now

ಗಿರೀಶ್ ಕೂಡ ನನ್ನ ಮಾತನ್ನು ನಂಬಿದ್ದ ಆದರೆ ನಾನು ಇನ್ನು ಮುಂದೆಯೂ ಗಿರೀಶನಿಗೆ ಸುಳ್ಳು ಹೇಳಲು ತಯಾರಿರಲಿಲ್ಲ ನಾನು ಗಿರೀಶನಿಗೆ ಸುಳ್ಳು ಹೇಳಿ ಸುಸ್ತಾಗಿದ್ದೆ ನಾನು ನನ್ನ ಗಂಡನಿಗೆ ಪೂರ್ತಿ ಸತ್ಯ ಹೇಳಬೇಕು ಅಂದುಕೊಂಡೆ ಅವನಿಗೆ ಮತ್ತಷ್ಟು ದ್ರೋಹ ಮಾಡಲು ನನಗೆ ಇಷ್ಟವಿರಲಿಲ್ಲ ನನ್ನ ಗಂಡನಿಗೆ ಸತ್ಯ ಹೇಳುವ ಮೊದಲು ನನ್ನ ಅಮ್ಮನಿಗೆ ಒಮ್ಮೆ ಕರೆಮಾಡಿ ಕೇಳಿದೆ..’ ಅಮ್ಮ ಈಗ ನಾನೇನು ಮಾಡಬೇಕು ನನ್ನ ಬಗ್ಗೆ ಗಿರೀಶನಿಗೆ ಎಲ್ಲ ಸತ್ಯವನ್ನು ಹೇಳಿ ಬಿಡಲೇ ಎಂದಾಗ ಅಮ್ಮ ಹೇಳಿದಳು’,

ನೀನು ನಿನ್ನ ಗಂಡನಿಗೆ ಇನ್ನೊಂದು ಮದುವೆ ಮಾಡಿಬಿಡು ಆಗ ನಿನ್ನ ಗಂಡ ನಿನಗೆ ಯಾವಾಗಲೂ ಕೃತಜ್ಞರಾಗಿರುತ್ತಾನೆ ಮತ್ತು ಎಂದು ನಿನ್ನನ್ನು ಬಿಟ್ಟುಬಿಡುವ ಯೋಚನೆ ಮಾಡುವುದಿಲ್ಲ ಅಮ್ಮನ ಮಾತು ಕೇಳಿ ನನಗೆ ತುಂಬಾ ಕೋಪ ಬಂತು ಜೊತೆಗೆ ನನ್ನ ಮನಸ್ಸಿಗೆ ತುಂಬಾ ನೋವಾಯಿತು ನನ್ನ ತಾಯಿ ನನ್ನ ವಿರುದ್ಧ ದ್ವೇಷ ಸಾಧಿಸುತ್ತಿದ್ದಾಳೆ ಎಂದು ನಾನು ಭಾವಿಸಿದೆ ಏಕೆಂದರೆ ನಾನು ಅವರನ್ನು ತುಂಬಾ ಅವಮಾನಿಸಿದೆ.

See also  ನಿಮ್ಮ ಕನಸಿನಲ್ಲಿ ಹಿರಿಯರು ಕಾಣಿಸಿದರೆ ಈ 7 ಸೂಚನೆ ನೀಡುತ್ತಿರುತ್ತಾರೆ.

ನಾನು ಕೋಪದಿಂದ ಹೇಳಿದೆ ಅಮ್ಮ ನಾನು ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ ಇಷ್ಟು ಹೇಳಿ ನಾನು ಕೋಪದಿಂದ ಫೋನ್ ಸ್ವಿಚ್ ಆಫ್ ಮಾಡಿದೆ ಸಂಜೆ ಗಿರೀಶ್ ಮನೆಗೆ ವಾಪಸ್ ಬಂದಾಗ ನೋಡಿ ಕೇಳಿದ ಏನಾಗಿದೆ ಗೌರಿ ಕತ್ತಲೆ ಕೋಣೆಯಲ್ಲಿ ಏಕೆ ಕುಳಿತುಕೊಂಡಿದ್ದೀಯಾ,, ನನ್ನ ಹಣೆ ಬರಹದಲ್ಲಿ ಕತ್ತಲೆಯನ್ನೇ ಬರೆದಿರುವಾಗ ಈ ಕತ್ತಲೆಯಿಂದ ನನಗೇನಾಗಬೇಕು ಎಂದು ಕಂಗಾಲಾಗಿದ್ದೇನೆ ಎಂದಾಗ ಗಿರೀಶ್ ಹುಚ್ಚಿಯಂತೆ ಯಾಕೆ ಮಾತನಾಡುತ್ತಿದ್ದೀಯಾ.

ನಾನು ನಿನ್ನ ಗಂಡ ನಿನ್ನ ಜೊತೆ ನಾನಿದ್ದೇನೆ ದೇವರು ನಮಗೆಲ್ಲವನ್ನು ನೀಡಿದ್ದಾನೆ ಕೂತು ಕುಂತಲ್ಲಿ ನಿನಗೆ ಏನಾಯಿತು ಆಗ ನಾನು ಗಿರೀಶ್ ಹಾಗೆ ಎಲ್ಲವನ್ನು ವಿವರಿಸಿದೆ ನಾನು ಬಂಜೆ ಇನ್ನು ಮುಂದೆ ನಾನು ಯಾವತ್ತೂ ತಾಯಿಯಾಗಲು ಸಾಧ್ಯವಿಲ್ಲ ನಾನು ಇವತ್ತು ವೈದ್ಯರ ಬಳಿ ಚೆಕಪ್ಪಿಗೆ ಹೋಗಿದ್ದೆ ಆಗ ಅವರು ನೀವು ಬಂಜೆ ನೀವು ನಿಮ್ಮ ಜೀವನವಿಡೀ ಇನ್ಯಾವತ್ತೂ ಮಗುವಿಗೆ ಜನ್ಮ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.

ನನ್ನ ಮಾತು ಕೇಳಿದ ಗಿರೀಶ್ ಒಂದು ಕ್ಷಣ ಮಂಕಾಗಿ ನಿಂತರು ಅವರ ಮುಖದಲ್ಲಿ ಮೋಡ ಮುಸುಕಿದ ಹಾಗಿತ್ತು, ಆದರೆ ತಕ್ಷಣ ನನ್ನ ಕೈ ಹಿಡಿದು ಹೇಳಿದರು ಪರವಾಗಿಲ್ಲ ಗೌರಿ ನನಗೆ ನೀನೇ ಹೆಚ್ಚು ನಿನ್ನ ಬಿಟ್ಟು ನನಗೆ ಬೇರೆ ಏನೂ ಬೇಕಾಗಿಲ್ಲ ಅಂತ ಗಿರೀಶ್ ನನ್ನನ್ನು ಸಮಾಧಾನ ಪಡಿಸಿದಾಗ ನನ್ನ ಮನಸ್ಸಿಗೆ ಸ್ವಲ್ಪ ನೆಮ್ಮದಿಯಾಯಿತು ಒಂದು ದಿನ ಅತ್ತೆಗೂ ಈ ವಿಷಯ ತಿಳಿಯಿತು.

See also  ನಿಮ್ಮ ಕನಸಿನಲ್ಲಿ ಹಿರಿಯರು ಕಾಣಿಸಿದರೆ ಈ 7 ಸೂಚನೆ ನೀಡುತ್ತಿರುತ್ತಾರೆ.

ಅವರು ತುಂಬಾ ತಲೆಕೆಡಿಸಿಕೊಂಡರು ಒಂದು ದಿನ ನಮ್ಮ ನೆರೆಯವರು ನಮ್ಮ ಮನೆಗೆ ಬಂದಿದ್ದರು ನನ್ನ ಮಗನಿಗೆ ಎರಡನೆಯ ಮದುವೆ ಮಾಡಿಸಬೇಕೆಂದಿರುವೆ ಅವನಿಗೆ ಒಂದು ಒಳ್ಳೆಯ ಹುಡುಗಿ ಹುಡುಕಿ ಕೊಡಿ ಎಂದು ನೆರಮನೆಯವರನ್ನು ಅತ್ತೆ ಕೇಳಿದಾಗ ಅವರು ನೀವು ನಿಮ್ಮ ಮಗನಿಗೆ ಯಾಕೆ ಇನ್ನೊಂದು ಮದುವೆ ಮಾಡಬೇಕು ನಿಮ್ಮ ಮೊದಲ ಸೊಸೆಗೆ ಏನಾಗಿದೆ ಎಂದು ಕೇಳಿದರು.

ನಮ್ಮ ಅತ್ತೆ ಹೇಳಿದರು ಅವಳೊಬ್ಬಳು ಬಂಜೆ ಈಗ ನಮ್ಮ ವಂಶವನ್ನು ಬೆಳೆಸಬೇಕಲ್ಲವೇ ಅದಕ್ಕೆ ನನ್ನ ಮಗನಿಗೆ ಎರಡನೇ ಮದುವೆಯನ್ನು ಮಾಡಲೇಬೇಕು ನಮ್ಮತ್ತೆ ಮಾತನ್ನು ಕೇಳಿ ನಾನು ಗಡಗಡ ನಡುಗಿ ಹೋದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ .

By god