ಮತ್ತೆ ಹಾಡಿತು ಕೋಗಿಲೆ ಚಿತ್ರದ ನಟಿ ರೂಪಿಣಿ ಈಗ ಹೇಗಿದ್ದಾರೆ ಎಲ್ಲಿದ್ದಾರೆ ಗೊತ್ತಾ!!1975ರಲ್ಲಿ ಬಾಲಿವುಡ್ ನ ಮಿಲಿ ಎಂಬ ಚಿತ್ರದಲ್ಲಿ ಕೇವಲ ಐದು ವರ್ಷದ ಪುಟ್ಟ ಹುಡುಗಿಯಾಗಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು ನಟಿ ರೂಪಿಣಿ 80 90ರ ದಶಕದಲ್ಲಿ ದಕ್ಷಿಣ ಭಾರತದ ಟಾಪ್ ನಟರ ಜೊತೆ ನಾಯಕಿಯಾಗಿ ನಟಿಸಿದರು ರೂಪಿಣಿ. 1969ರಲ್ಲಿ ಮುಂಬೈನಲ್ಲಿ ಜನಿಸಿದ ಈ ನಟಿ ಭರತನಾಟ್ಯ ಕುಚುಪುಡಿ ನೃತ್ಯವನ್ನು ಕಲಿತಿದ್ದರು ರೂಪಿಣಿಯವರ ತಾಯಿ ವೈದ್ಯ ಆಗಿದ್ದರು.ಒಮ್ಮೆ ರೂಪಿಣಿಯವರು ರಜಾ ದಿನಗಳಲ್ಲಿ ತಮ್ಮ ತಾಯಿಯ ಜೊತೆ ತಮಿಳಿನ ಪ್ರಸಿದ್ಧ ನಿರ್ದೇಶಕ ಕೆ ಬಾಕಿ ರಾಜು ಮನೆಗೆ ಹೋಗಿದ್ದರು ರೂಪಿಣಿಯವರ ತಾಯಿ ಬಾಕಿ ರಾಜು ಅವರ ಫ್ಯಾಮಿಲಿ ಡಾಕ್ಟರ್ ಸಹ ಹಾಗಿದ್ದರೂ ನಿರ್ದೇಶಕ ಬಾಕಿ ರಾಜು ಹಾಗೂ ಪತ್ನಿ ಪೂರ್ಣಿಮಾ ರೂಪಿಣಿ ಅವರನ್ನು ಕಂಡು ಸಿನಿಮಾದಲ್ಲಿ ನಟನೆಯನ್ನು ಮಾಡುತ್ತೀಯ ಎಂದು ಕೇಳಿದರು.

ಕೇವಲ 14 ವರ್ಷದ ರೂಪಿಣಿ ತನ್ನ ತಾಯಿಯ ಕಡೆ ಆಗ ತಿರುಗಿ ನೋಡುತ್ತಾರೆ ರೂಪಿಣಿಯರು ರಜನಿಕಾಂತ್ ಅವರ ಚಿತ್ರವೊಂದರ ಮೂಲಕ ತಮಿಳು ಚಿತ್ರಕೆ ಎಂಟರಿಯಾದರೂ ಫೇಮಸ್ ನಟಿಯಾಗಿ ಬೆಳೆಯುತ್ತಾರೆ. ನಂತರ ತಮಿಳು ಹಿಂದಿ ಮಲಯಾಳಂ ಕನ್ನಡದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸುತ್ತಾರೆ ಒಲವಿನ ಆಸರೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬರುತ್ತಾರೆ ನಟಿ ರೂಪಿಣಿ ನಂತರ ವಿಷ್ಣುವರ್ಧನ್ರವರಿಗೆ ನಾಯಕಿಯಾಗಿ ಹಲವಾರು ಸಿನಿಮಾಗಳಲ್ಲಿ ನಟಿಸುತ್ತಾರೆ ಇವರು ನಟಿಸಿದ ವಿಷ್ಣುವರ್ಧನ್ ಅವರ ಮತ್ತೆ ಹಾಡಿತು ಕೋಗಿಲೆ ಮತ್ತು ರವಿಚಂದ್ರನ್ ಅವರ ಗೋಪಿಕೃಷ್ಣ ಚಿತ್ರಗಳು ಸೂಪರ್ ಡೂಪರ್ ಆಗುತ್ತಾವೆ.

WhatsApp Group Join Now
Telegram Group Join Now

ರೂಪಿಣಿಯವರು ಹಿಂದಿ ಸೇರಿ ದಕ್ಷಿಣ ಭಾರತದ ಸುಮಾರು 80 ಚಿತ್ರಗಳಲ್ಲಿ ನಟಿಸಿದ್ದಾರೆ ಕನ್ನಡದ ಚಿತ್ರದಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ರೂಪಿಣಿಯವರು 1995ರಲ್ಲಿ ಮೋಹನ್ ಕುಮಾರ್ ಎನ್ನುವವರನ್ನು ಮದುವೆಯಾಗುತ್ತಾರೆ. ರೂಪಣಿಯವರು ಪ್ರಸ್ತುತ ಚೆನ್ನೈನಲ್ಲಿ ನೆಲೆಸಿದ್ದಾರೆ. ಸಮಾಜಮುಖಿ ಕೆಲಸಗಳಲ್ಲಿಯೂ ಸಹ ತೊಡಗಿಸಿಕೊಂಡಿರುವ ರೂಪಿಣಿ ವಿಶೇಷ ಚೇತನ ಮಕ್ಕಳಿಗಾಗಿ ಸ್ಪರ್ಶ ಫೌಂಡೇಶನ್ ಎಂಬ ಸಂಸ್ಥೆಯನ್ನ ನಡೆಸುತ್ತಾ ಇದ್ದು ವಿಶೇಷ ಚೇತನ ಮಕ್ಕಳಿಗೆ ಆಸರೆಯಾಗಿದ್ದಾರೆ ನಟಿ ರೂಪಿಣಿ.ನಟಿ ರೂಪಿಣಿಯವರ ನಟನೆ ಹಾಗೂ ಕಾರ್ಯ ನಿಮಗೆ ಇಷ್ಟವಾದಲ್ಲಿ ಈ ವಿಡಿಯೋವನ್ನು ನೋಡಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.