ತುಂಬಾ ಬೇಜಾರಾದಾಗ ಈ ಅದ್ಭುತ ಕಥೆ ಕೇಳಿ……
ಒಂದು ಗ್ರಾಮದಲ್ಲಿ ಒಬ್ಬ ರೈತನಿದ್ದ ಅವನಿಗೆ ಯಾವಾಗಲೂ ಒಂದು ಚಟ ರೋಗದ ಹಾಗೆ ಪ್ರತಿದಿನ ಬೆಳೆಯುತ್ತಿತ್ತು ಅದು ಏನು ಎಂದರೆ ಯಾವಾಗಲೂ ಚಿಂತೆ ಮಾಡುವುದು ಅವನು ಕೆಲಸ ಮಾಡುವಾಗಲೂ ಚಿಂತೆ ಊಟ ಮಾಡುವಾಗ ಚಿಂತೆ ನಿದ್ದೆ ಮಾಡುವಾಗಲೂ ಚಿಂತೆ ಹೀಗೆ ಪ್ರತಿದಿನ ಯೋಚನೆಯಲ್ಲೇ ಮುಳುಗಿ ಹೋಗಿದ್ದ ಅವನು 50 ರಿಂದ 60 ಎಕರೆ ಹೊಲವನ್ನು ಸಹ ಹೊಂದಿದ್ದ ಆಳು ಕಾಳು ಜಾನುವಾರುಗಳು ಹಾಗೂ ಇರುವುದಕ್ಕೆ ದೊಡ್ಡ ಬಂಗಲೆಯನ್ನು ಕೂಡ ಹೊಂದಿದ್ದ ಒಂದು ಲೆಕ್ಕದಲ್ಲಿ ಅವನನ್ನು ಜಮೀನ್ದಾರ ಎಂದರು ತಪ್ಪಾಗಲಾರದು ಅವನಿಗೆ ಎರಡು ಮಕ್ಕಳು ಹಾಗೂ ಅವನ ಪತ್ನಿ ಜೊತೆಗೆ ಇದ್ದರೂ ಕೂಡ ಕೆಲಸಕ್ಕೆ ಬಾರದ ಯೋಚನೆಯನ್ನು ಮಾಡಿ ಪ್ರತಿದಿನ ಕುಗ್ಗುತ್ತಿದ್ದ ಒಂದು ವೇಳೆ ನನ್ನ ಬೆಳೆಗಳಿಗೆ ಕ್ರಿಮಿಕೀಟ ಬಂದರೆ ಆದು ನಾಶವಾದರೆ ಏನು ಮಾಡುವುದು ಒಂದು ವೇಳೆ ಅದನ್ನು ಜಾನುವಾರುಗಳು ತಿಂದು ಹಾಳು ಮಾಡಿದರೆ ಏನು ಮಾಡುವುದು ನನ್ನ ಹೊಲವಣಗಿದರೆ ಏನು ಮಾಡುವುದು ಮಳೆ ಬಿಟ್ಟುಬಿಡದೆ ಸುರಿಯ ತೊಡಗಿದರೆ ನನ್ನ ಬೆಳೆ ನಾಶವಾಗಿ ಹೋಗುತ್ತದಲ್ಲ ಎಂದು ಹೀಗೆ ಪ್ರತಿದಿನ ಯೋಚನೆ ಮಾಡುತ್ತ ಮಗ್ನನಾಗಿ ಹೋದ.
ಕೆಲಸ ಮಾಡುವಾಗ ಕೇವಲ ಯೋಚನೆಯಲ್ಲೇ ತೊಡಗಿರುತ್ತಿದ್ದ ಒಂದು ವೇಳೆ ನನ್ನ ಜಾನುವಾರುಗಳಿಗೆ ಏನಾದರೂ ಆದರೆ ನನ್ನ ಗತಿ ಏನು ಮಕ್ಕಳ ಗತಿ ಏನು ನನ್ನ ಮುದಿವಯಸಿನಲ್ಲಿ ಮಕ್ಕಳು ಚೆನ್ನಾಗಿ ನೋಡಿಕೊಳ್ಳದೆ ಹೋದರೆ ನನ್ನ ಪಾಡು ಏನಾಗುತ್ತದೆ ಎಂದು ಪ್ರತಿದಿನ ಚಿಂತೆಯಲ್ಲಿಯೇ ದಿನಗಳನ್ನು ದೂಡುತ್ತಾ ಹೋಗುತ್ತಾನೆ ಹೀಗೆ ಪ್ರತಿದಿನ ಚಿಂತೆಯಲ್ಲಿಯೇ ದಿನ ಗಳನ್ನು ದೂಡುತ್ತಾ ಇದ್ದ ಅವನ ಪತ್ನಿಗೂ ಈ ವಿಷಯದಲ್ಲಿ ತುಂಬಾ ಚಿಂತನೆಯಾಗಿತ್ತು ಅವಳು ತನ್ನ ಪತಿಗೆ ಎಷ್ಟೋ ಬಾರಿ ತಿಳಿಸಿ ಹೇಳಲು ಪ್ರಯತ್ನ ಪಟ್ಟಳು ಆದರೆ ಅವನಿಗೆ ಅದರ ಪ್ರಯೋಜನ ಆಗಲಿಲ್ಲ.ಒಂದು ದಿನ ಅವಳು ತನ್ನ ಪತಿಯನ್ನು ಕರೆದುಕೊಂಡು ಒಬ್ಬ ಸನ್ಯಾಸಿಯ ಬಳಿ ಹೋಗುತ್ತಾಳೆ ಆ ಸನ್ಯಾಸಿ ತುಂಬಾನೇ ಬುದ್ಧಿವಂತ ಹಾಗೂ ಚಾಣಾಕ್ಷ ನಾಗಿದ್ದ ಇಬ್ಬರೂ ಸನ್ಯಾಸಿಯ ಬಳಿ ಬಂದು ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳುತ್ತಾರೆ ರೈತಹೇಳುತ್ತಾನೆ ಗುರುಗಳೇ ನಾನು ಯಾವಾಗಲೂ ಕೆಟ್ಟ ಯೋಚನೆಗಳನ್ನೇ ಮಾಡುತ್ತಿರುತ್ತೇನೆ.
ಪ್ರತಿದಿನ ನಾನು ಚಿಂತೆಯಲ್ಲೇ ಮಗ್ನನಾಗಿರುತ್ತೇನೆ ಆದರೆ ಆ ಯಾವ ಕೆಟ್ಟ ಘಟನೆಗಳು ನನ್ನ ಜೀವನದಲ್ಲಿ ಇದುವರೆಗೂ ನಡೆದಿಲ್ಲ ಆದರೂ ಚಿಂತೆ ಮಾತ್ರ ನನ್ನನ್ನು ಬಿಡುತ್ತಿಲ್ಲ ಸನ್ಯಾಸಿಯವರ ಮಾತುಗಳನ್ನು ಕೇಳುತ್ತಾ ಒಂದು ಕ್ಷಣ ಅವರಿಗೆ ಒಂದು ಮಾತನ್ನು ಹೇಳುತ್ತಾರೆ ಸರಿ ನಾನು ನಿಮ್ಮ ಸಮಸ್ಯೆಗೆ ಉತ್ತರವನ್ನು ಹೇಳುತ್ತೇನೆ ಆದರೆ ನೀವು ನಾಳೆ ಬನ್ನಿ ಎಂದು ಹೇಳಿ ಕಳಿಸುತ್ತಾರೆ ದಂಪತಿಗಳು ಮರುದಿನ ಸನ್ಯಾಸಿಯ ಬಳಿ ಮತ್ತೆ ಬರುತ್ತಾರೆ ಬಂದು ನಿಂತು ನೋಡುತ್ತಾರೆ ಸನ್ಯಾಸಿಗಳು ತುಂಬಾ ಯೋಚನೆ ಮಾಡುತ್ತಾ ಕುಳಿತಿರುತ್ತಾರೆ ಅವರ ಮುಂದೆ ಒಂದು ಲೋಟದ ತುಂಬಾ ಹಾಲಿರುತ್ತದೆ ಅದನ್ನು ನೋಡುತ್ತಾ ಸನ್ಯಾಸಿ ಯೋಚನೆಯಲ್ಲಿ ಮಗ್ನರಾಗಿರುತ್ತಾರೆ ದಂಪತಿಗಳು ಸನ್ಯಾಸಿಗೆ ಕೇಳುತ್ತಾರೆ ಸ್ವಾಮೀಜಿ ಯಾಕೆ ಏನಾಯಿತು ಏನನ್ನು ಚಿಂತಿಸುತಿದ್ದೀರಾ ಎಂದು ಆಗ ಸನ್ಯಾಸಿ ನನಗೆ ಒಂದು ಚಿಂತೆ ತುಂಬಾ ಕಾಡುತ್ತಿದೆ ಎಂದು ಹೇಳುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ