ಮನೆಯಿಂದ ಹೊರ ಹೋಗಬೇಕಾದರೆ ಈ ವಸ್ತು ನಿಮ್ಮೊಂದಿಗೆ ಇದ್ದರೆ ಜಯ ನಿಮ್ಮದೇ…….!!
ಪ್ರತಿಯೊಬ್ಬರಿಗೂ ಕೂಡ ತಮ್ಮ ಜೀವನದಲ್ಲಿ ಒಂದು ಯಶಸ್ಸನ್ನು ಪಡೆಯಬೇಕು ನಾನು ಮಾಡುವಂತಹ ಎಲ್ಲಾ ಕೆಲಸದಲ್ಲಿಯೂ ನಾನು ಲಾಭವನ್ನು ಪಡೆಯಬೇಕು ಎಂಬ ಖುಷಿಯಲ್ಲಿಯೇ ಪ್ರತಿಯೊಂದು ಕೆಲಸವನ್ನು ಸಹ ಪ್ರಾರಂಭಿಸುತ್ತಾರೆ. ಆದರೆ ಪ್ರತಿಯೊಬ್ಬರಿಗೂ ಕೂಡ ಅವರು ಮಾಡುವಂತಹ ಎಲ್ಲಾ ಕೆಲಸದಲ್ಲಿಯೂ ಯಶಸ್ಸು ಸಿಗುವುದಿಲ್ಲ ಬದಲಿಗೆ ಕೆಲವೊಂದು ಕಾರಣಗಳಿಂದ ಅವರಿಗೆ ಎಲ್ಲದರಲ್ಲಿಯೂ ನಷ್ಟ ಉಂಟಾಗುತ್ತಿರುತ್ತದೆ.
ಅದೇ ರೀತಿಯಾಗಿ ಇನ್ನೂ ಕೆಲವೊಂದಷ್ಟು ಜನರಿಗೆ ಅವರು ಮಾಡುವ ವ್ಯಾಪಾರ ವಿವಾಹಗಳಲ್ಲಿ ಯಾವುದೇ ರೀತಿಯಾದಂತಹ ಲಾಭ ಸಿಗುತ್ತಿರುವುದಿಲ್ಲ ಆದರೆ ಇದಕ್ಕೆ ಬಹಳ ಪ್ರಮುಖವಾಗಿರುವಂತಹ ಕಾರಣ ಏನು ಎಂದರೆ ನಿಮ್ಮ ಸುತ್ತಮುತ್ತ ಇರುವಂತಹ ಜನ ಹೌದು ನಿಮ್ಮ ಅಕ್ಕಪಕ್ಕದಲ್ಲಿಯೇ ಇರುತ್ತಾರೆ, ಆದರೆ ಅವರೇ ನಿಮಗೆ ಹಿತಶತ್ರುಗಳಾಗಿ ಕಾಣಿಸುತ್ತಿರುತ್ತಾರೆ.
ಅಂದರೆ ಅವರು ನಿಮ್ಮ ಯಾವುದೇ ರೀತಿಯಾದಂತಹ ಏಳಿಗೆಯನ್ನು ಸಹಿಸಿಕೊಳ್ಳುವುದಿಲ್ಲ, ನೋಡು ಅವನು ಎಷ್ಟು ಚೆನ್ನಾಗಿದ್ದಾನೆ, ಅವನಿಗೆ ಯಾವುದೇ ರೀತಿಯ ಸಮಸ್ಯೆಗಳು ಇಲ್ಲ, ಅವನ ಎಲ್ಲಾ ಕೆಲಸ ಎಷ್ಟು ಅದ್ಭುತವಾಗಿ ನಡೆಯುತ್ತಿದೆ, ಹೀಗೆ ಹಲವಾರು ರೀತಿಯ ವಿಚಾರವಾಗಿ ನಿಮ್ಮ ಮೇಲೆ ಒಂದು ಕೆಟ್ಟ ಪ್ರಭಾವವನ್ನು ಬೀರಿರುತ್ತಾನೆ. ಈ ಒಂದು ಪ್ರಭಾವದಿಂದ ನಿಮ್ಮ ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ಕೂಡ ಅಡ್ಡಿ ಉಂಟಾಗುತ್ತಲೇ ಇರುತ್ತದೆ.
ಆದ್ದರಿಂದ ಈ ಎಲ್ಲಾ ರೀತಿಯ ಸಮಸ್ಯೆಗಳು ದೂರವಾಗಬೇಕು ಎಂದರೆ ನೀವು ಮನೆಯಿಂದ ಹೊರಡುವಾಗ ಈ ವಸ್ತುವನ್ನು ನಿಮ್ಮ ಜೊತೆ ಇಟ್ಟುಕೊಂಡು ಹೊರಡಬೇಕು ಆಗ ನೀವು ಯಾವುದೇ ರೀತಿಯ ವ್ಯಾಪಾ ರವಾಗಲಿ ವ್ಯವಹಾರವಾಗಲಿ ನಿಮ್ಮ ಕೆಲಸವಾಗಲಿ ಎಲ್ಲದರಲ್ಲಿಯೂ ಕೂಡ ಅಭಿವೃದ್ಧಿಯನ್ನು ಪ್ರಗತಿಯನ್ನು ಕಾಣುತ್ತೀರಿ. ಹಾಗಾದರೆ ಆ ವಸ್ತು ಯಾವುದು ಎಂದು ಈ ಕೆಳಗೆ ತಿಳಿಯೋಣ.
ಅಂಗೈ ಅಗಲದಷ್ಟು ಹಳದಿ ಬಣ್ಣದ ಬಟ್ಟೆಯನ್ನು ತೆಗೆದುಕೊಳ್ಳಬೇಕು ಆ ಬಟ್ಟೆಯ ಒಳಗೆ ಒಂದು ಚಮಚ ಅರಿಶಿನವನ್ನು ಹಾಕಿ ಅದನ್ನು ಹಳದಿ ಬಣ್ಣದ ದಾರದಿಂದ ಒಂದು ಪೊಟ್ಟಣದ ರೀತಿಯಲ್ಲಿ ಕಟ್ಟಿಕೊಳ್ಳಬೇಕು. ಇದನ್ನು ನೀವು ಬೆಳಗ್ಗೆ ಮನೆಯಿಂದ ಹೊರಡುವಾಗ ನಿಮ್ಮ ಜೇಬಿನಲ್ಲಿ ಇಟ್ಟರೆ ಮನೆಗೆ ಬರುವ ತನಕ ಸಹ ಅದು ನಿಮ್ಮ ಜೊತೆಯಲ್ಲಿಯೇ ಇರಬೇಕು. ಹಾಗೂ ಮಧ್ಯ ಮಾರ್ಗದಲ್ಲಿ ನೀವು ಆ ಒಂದು ಹಳದಿ ಬಣ್ಣದ ಪೊಟ್ಟಣವನ್ನು
ಮುಟ್ಟುತ್ತಾ ಇರಬೇಕು. ಇದರಿಂದ ಯಾರೆ ನಿಮ್ಮ ಮೇಲೆ ಕೆಟ್ಟ ಕೆಲಸ ವನ್ನು ಪ್ರಯೋಗ ಮಾಡಿದ್ದರು, ನಿಮ್ಮ ಮೇಲೆ ಕಣ್ಣಿಟ್ಟರು ಅದು ನಿಮಗೆ ತಾಕದಂತೆ ತಡೆಯುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಒಂದು ವಿಧಾನವನ್ನು ಅನುಸರಿಸುವುದು ಬಹಳ ಉತ್ತಮ. ಆ ನಂತರ ನಿಮಗೆ ಈ ಒಂದು ವಿಧಾನದ ಪವಾಡ ತಿಳಿಯುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.