ಮಲಗುವ ಮುನ್ನ ಈ ತಪ್ಪುಗಳನ್ನು ಅಪ್ಪಿ ತಪ್ಪಿಯು ಮಾಡಬೇಡಿ….ಊಟ ನಿದ್ರೆ ಹಾಗೂ ವಿಶ್ರಾಂತಿ ಮನುಷ್ಯನಿಗೆ ಬೇಕಾದ ಮೂಲಭೂತ ಅಂಶಗಳು ಈ ಮೂರರಲ್ಲಿ ಯಾವುದರಲ್ಲಾದರೂ ಏರುಪೇರು ಆದರೂ ಅವನು ಗಂಭೀರ ಗತಿಯ ಪರಿಣಾಮವನ್ನು ಎದುರಿಸಬೇಕಾಗುತ್ತದೆ.ಇಂದಿನ ಈ ವಿಡಿಯೋದಲ್ಲಿ ರಾತ್ರಿಯ ಊಟ ಸೇವಿಸಿದ ಬಳಿಕ ನಾವು ಮಾಡಬಾರದ ಕೆಲಸಗಳ ಬಗ್ಗೆ ಹಾಗೂ ರಾತ್ರಿಯ ಊಟದ ಬಗ್ಗೆ ನೀವು ತಿಳಿಯಲೇಬೇಕಾದ ಒಂದಷ್ಟು ಉಪಯುಕ್ತ ಸಂಗತಿಗಳ ಕುರಿತಾಗಿ ನಿಮಗೆ ತಿಳಿಸುತ್ತೇವೆ.ಮೊದಲನೇದಾಗಿ ಹೇಳುವುದಾದರೆ ನೀವು ರಾತ್ರಿ ಊಟ ಮಾಡಿದ ಬಳಿಕ ನಿದ್ರೆಗೆ ಜಾರುವ ಮುನ್ನ ಟಿವಿ ನೋಡುತ್ತಾ ಕುಳಿತಿರುತ್ತೀರಾ ಎಂದರೆ ಇಂದಿನಿಂದ ಅಭ್ಯಾಸವನ್ನು ಬದಿಗಿಡಿ ಏಕೆಂದರೆ ರಾತ್ರಿ ಊಟವಾದ ತಕ್ಷಣ ಕುಳಿತು ಟಿವಿ ವೀಕ್ಷಿಸುವುದು ಅಷ್ಟು ಸರಿಯಾದ ಕ್ರಮವಲ್ಲ ಇದರಿಂದ ತಿಂದ ಆಹಾರ ಸರಿಯಾಗಿ ಜೀರ್ಣವಾಗದೆ ಅನಗತ್ಯ ಕೊಬ್ಬು ಶೇಖರಣವಾಗಬಹುದು ರಾತ್ರಿ ಊಟದ ಬಳಿಕ ಸ್ವಲ್ಪ ಹೊತ್ತು ಓಡಾಡುವುದು ಸೂಕ್ತ ಅಥವಾ ರಾತ್ರಿಯ ಸಮಯದಲ್ಲಿ ಓಡಾಡಲು ನಿಮಗೆ ಅನುಕೂಲವಿಲ್ಲವೆಂದರೆ ಮನೆಯಲ್ಲಿಯೇ ಸಣ್ಣಪುಟ್ಟ ಕೆಲಸಗಳನ್ನು ನೀವು ಮಾಡಬಹುದು.

ಉದಾಹರಣೆಗೆ ಅಡುಗೆಮನೆ ಸ್ವಚ್ಛ ಮಾಡುವುದು ಪಾತ್ರೆ ತೊಳೆಯುವುದು ಬಟ್ಟೆ ಮಡಚುವುದು ಮನೆ ಕೆಲಸ ಹೀಗೆ ದೇಹಕ್ಕೆ ಎಕ್ಸಸೈಜ್ ಕೊಡುವ ಸಣ್ಣ ಸಣ್ಣ ಕೆಲಸವನ್ನು ನೀವು ಮಾಡುತ್ತಾ ತೂಕ ಹೆಚ್ಚದ ಹಾಗೆ ನೋಡಿಕೊಳ್ಳಬಹುದು ಇದರಿಂದ ಮನೆಯಲ್ಲಿರುವ ಸ್ತ್ರೀಯರ ಕೆಲಸವನ್ನು ಹಂಚಿಕೊಂಡಂತೆ ಆಗುತ್ತದೆ ಹಾಗೂ ದೇಹವನ್ನು ಸಮತೋಲನವಾಗಿ ಇಟ್ಟುಕೊಂಡಂತೆಯೂ ಆಗುತ್ತದೆ.ಇನ್ನು ಎರಡನೆಯದಾಗಿ ನಾವು ರಾತ್ರಿ ಸೇವಿಸುವ ಊಟದಲ್ಲಿ ಸೋಡಿಯಂ ಪದಾರ್ಥವು ಅಧಿಕವಾಗಿರುವಂತಹ ಯಾವುದೇ ಆಹಾರವನ್ನು ನಾವು ಸೇವಿಸದೆ ಇರುವುದು ಕ್ಷೇಮ ಸೋಡಿಯಂ ಪೂರಿತ ಆಹಾರವು ರುಚಿಯಾಗಿರುತ್ತದೆ ಆದರೂ ಅದರಿಂದ ದೇಹಕ್ಕೆ ಹಾನಿಯಾಗುವುದೇ ಹೆಚ್ಚು ಉದಾಹರಣೆಗೆ ಈಗ ನಮ್ಮ ಮನೆಯಲ್ಲಿ ಯಾರದಾದರೂ ಹುಟ್ಟುಹಬ್ಬದ ಆಚರಣೆ ಇದ್ದಾಗ ನಾವು ಹತ್ತಿರದ ಅಂಗಡಿಯಿಂದ ಐಸ್ ಕ್ರೀಮ್ ಕೇಕ್ ಹಾಗೂ ಪಿಜ್ಜಾ ವನ್ನು ತರಸಿಕೊಂಡು ಸಂತೋಷದಿಂದ ತಿನ್ನುತ್ತೇವೆ ನಾವು ತಿನ್ನುವ ಒಂದು ಸ್ಲೈಸ್ ಪಿಜ್ಜಾದಲ್ಲಿ ಸರಾಸರಿ ಐನೂರು ಮಿಲಿ ಗ್ರಾಂ ಗಿಂತಲೂ ಅಧಿಕ ಪ್ರಮಾಣದ ಸೋಡಿಯಂ ಇರುತ್ತದೆ.

WhatsApp Group Join Now
Telegram Group Join Now

ನೀವು ಮೂರೇ ಪೀಸ್ ಪಿಜ್ಜಾ ತಿಂದರೂ ಅದರಲ್ಲಿ ಉಪ್ಪಿನ ಅಂಶವು 1500 ಮಿಲಿ ಗ್ರಾಂ ನಷ್ಟು ದಾಟುತ್ತದೆ ಇನ್ನೂ ಈ ಪಿಜ್ಜಾದ ಮೇಲೆ ಸುರಿಯಲಾಗಿರುವ ಹೆಚ್ಚಿನ ಪದಾರ್ಥಗಳಲ್ಲಿಯೂ ಕೂಡ ಅಧಿಕವಾದ ಉಪ್ಪಿನ ಅಂಶವಿದ್ದು ವಾರವಿಡೀ ದೇಹಕ್ಕೆ ಸೇರಬಹುದಾದ ಉಪ್ಪಿನ ಅಂಶವು ಒಂದೇ ದಿನದಲ್ಲಿ ಪಿಜ್ಜಾದ ಸೇವನೆಯಿಂದ ನಿಮ್ಮ ದೇಹಕ್ಕೆ ಸೇರುವಂತಾಗುತ್ತದೆ ಅಧಿಕ ಉಪ್ಪಿನ ಅಂಶವು ದೇಹಕ್ಕೆ ಸೇರಿದರೆ ಅದು ಕೊಲೆಸ್ಟ್ರಾಲ್ ಅನ್ನು ಉತ್ಪಾದಿಸಿ ದೇಹವನ್ನು ವಿಪರಿತ ಕೊಬ್ಬಲು ಶುರುವಾಗುತ್ತದೆ ದೇಹದ ಕೊಬ್ಬು ಜಾಸ್ತಿಯಾಗಿ ದೇಹದ ತೂಕ ವಿಪರೀತವೆಂಬಂತೆ ಹೆಚ್ಚಾಗುವುದಲ್ಲದೆ ನಿಮ್ಮ ಬಿಪಿ ಲೆವೆಲ್ ಸಹ ಇದರಿಂದ ಹೆಚ್ಚಾಗಿ ಅನೇಕ ವಿಧದ ರುದ್ರೋಗಗಳಿಗೂ ಸಹ ದಾರಿಯಾಗಲು ಕಾರಣವಾಗುತ್ತದೆ ಹಾಗಾಗಿ ಇದರಿಂದಾಗಿ ನೀವು ಸೇವಿಸುವ ರಾತ್ರಿ ಆಹಾರದಲ್ಲಿ ಉಪ್ಪಿನಂಶ ಕಡಿಮೆ ಇರುವುದು ಒಳ್ಳೆಯದು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.