ನಮಸ್ಕಾರ ಪ್ರಿಯ ವೀಕ್ಷಕರೆ, ನೀವು ಗಟ್ಟಿಯಾಗಿದ್ದೀರಾ, ಒಬ್ಬ ವ್ಯಕ್ತಿ ಗಟ್ಟಿಯಾಗಿರಬೇಕೆಂದರೆ, ಅವನ ಮನಸ್ಸು ಗಟ್ಟಿಯಾಗಿರಬೇಕು. ಅವನ ಮೂಲೆಗಳು ಕೂಡ ಗಟ್ಟಿಯಾಗಿರಬೇಕು. ಅದಕ್ಕಿಂತ ಮುಖ್ಯವಾದದ್ದು ಅವನ ಮಾಂಸ ಖಂಡಗಳು ಗಟ್ಟಿಯಾಗಿರಬೇಕು. ಎಲ್ಲಾ ವಯಸ್ಸಿನಲ್ಲಿರುವವರಿಗು ಮತ್ತು ಎಲ್ಲಾ ರೀತಿಯ ಕೆಲಸ ಮಾಡುವವರೆಗೂ ಮಾಂಸ ಖಂಡಗಳನ್ನು ಗಟ್ಟಿಯಾಗಿ ಇಟ್ಟುಕೊಳ್ಳುವುದು ತುಂಬಾ ಅತ್ಯಗತ್ಯವಾಗಿರುತ್ತದೆ. ನಮ್ಮ ಮಾಂಸ ಖಂಡಗಳು ಚೆನ್ನಾಗಿದ್ದರೆ ದೈಹಿಕವಾಗಿ ಶ್ರಮವಹಿಸಿ ಮಾಡುವಂತಹ ಕೆಲಸಗಳನ್ನು ನಾವು ಸುಲಭವಾಗಿ ಮಾಡಿಕೊಳ್ಳಬಹುದು.
ಏಟು ಬೀಳುವುದು ಕೂಡ ಕಡಿಮೆಯಾಗುತ್ತದೆ. ನಾವು ಸರಿಯಾದ ರೀತಿಯಲ್ಲಿ ದೇಹಕ್ಕೆ ಸಪೋರ್ಟ್ ಕೊಡುವುದರಿಂದ ನಮ್ಮ ಮೂಳೆಗಳ ಆರೋಗ್ಯ ತುಂಬಾನೇ ಚೆನ್ನಾಗಿರುತ್ತೆ. ಕುತ್ತಿಗೆ ನೋವು ಅಥವಾ ಸೊಂಟ ನೋವು ಮತ್ತು ಮುಂದೆ ಏನಾದರೂ ಮೊಣಕಾಲು ನೋವು ಬರುವಂತಹ ಸೌಕರ್ಯಗಳು ಕಡಿಮೆ ಇರುತ್ತದೆ. ಸರಿಯಾದ ರೀತಿಯಲ್ಲಿ ಮೆಟಬಾಲಿಸಂ ಚೆನ್ನಾಗಿರುವುದರಿಂದ. ದೇಹದ ಬೊಜ್ಜನ್ನು ಕರಗಿಸುವುದಕ್ಕೆ ಸಾಧ್ಯವಾಗುತ್ತದೆ. ದೇಹದಲ್ಲಿ ಸಕ್ಕರೆ ಪ್ರಮಾಣ ಚೆನ್ನಾಗಿದ್ದು, ನಮ್ಮ ಡಯಾಬಿಟಿಸ್ ಅನ್ನು ಚೆನ್ನಾಗಿಟ್ಟಿಕೊಳ್ಳುವುದಕ್ಕೆ ಮಾಂಸ ಖಂಡಗಳು ತುಂಬಾ ಮುಖ್ಯ.
ಅದರ ಜೊತೆಗೆ ನಾವು ಸರಿಯಾಗಿ ವ್ಯಾಯಾಮ ಮಾಡುವುದರಿಂದ ನಮ್ಮ ಮಾನಸಿಕ ಶಕ್ತಿಯು ಚೆನ್ನಾಗಿರುತ್ತೆ ಮತ್ತು ನಾವು ಖುಷಿಯಾಗಿ ಜೀವನವನ್ನು ಮಾಡಬಹುದು. ಇದೆಲ್ಲ ಪ್ರಯೋಜನಗಳು ಇರುವುದು ನಮ್ಮ ದೇಹದ ಮಾಂಸಖಂಡದಿಂದ ಇದನ್ನು ನಾವು ಚೆನ್ನಾಗಿ ಇಟ್ಟುಕೊಳ್ಳಬೇಕೆಂದರೆ ಮುಖ್ಯವಾದ ಪಾತ್ರ ಏನೆಂದರೆ. ನಾವು ಏನು ಆಹಾರವನ್ನು ತೆಗೆದುಕೊಳ್ಳುತ್ತೇವೆ ಅನ್ನುವುದರ ಮೇಲೆ ನಿರ್ಧಾರವಾಗುತ್ತದೆ. ಇವತ್ತು ನಾವು ಏಳು ಮುಖ್ಯವಾದ ಅಂಶಗಳಿಂದ ಹೇಗೆ ನಾವು ಗಟ್ಟಿಯಾದ ಮಾಂಸ ಖಂಡಗಳನ್ನು ಇಟ್ಟುಕೊಳ್ಳಬಹುದು ಎಂದು ತಿಳಿದುಕೊಳ್ಳೋಣ.
ನಮ್ಮ ಮಾಂಸ ಖಂಡಗಳನ್ನು ಗಟ್ಟಿಯಾಗಿ ಇಟ್ಟುಕೊಳ್ಳುವುದಕ್ಕೆ ಮೊದಲ ಮತ್ತು ಮುಖ್ಯವಾಗಿ ಬೇಕಾಗಿರುವ ಅಂಶ ಪ್ರೋಟೀನ್ ಬೇಕಾಗುತ್ತದೆ. ನಮ್ಮ ಮಾಂಸಖಂಡಗಳಲ್ಲಿ ಆಕ್ಟಿನ್ ಅಂಡ್ ಮಯೋಸಿನ್ ಪ್ರೋಟೀನ್ ಮೊಲೆಕ್ಯುಲ್ ಇರುತ್ತದೆ. ಆದ್ದರಿಂದ ನಾವು ಪ್ರೋಟೀನ್ ಅನ್ನು ಸರಿಯಾದ ರೀತಿಯಲ್ಲಿ ಪ್ರೋಟೀನ್ ಅನ್ನು ತೆಗೆದುಕೊಳ್ಳುವುದರಿಂದ ಮಾಂಸ ಖಂಡಗಳು ಗಟ್ಟಿಯಾಗಿದ್ದು. ಅದು ಬೇಗ ರಿಪೇರಿ ಆಗುವುದಕ್ಕೆ ಸಾಧ್ಯವಾಗುತ್ತದೆ. ಇದು ನಮಗೆ ಸಸ್ಯಹಾರಿ ಮೂಲದಿಂದಲೂ ಸಿಗುತ್ತದೆ ಮತ್ತು ಮಾಂಸಾಹಾರಿ ಮೂಲದಿಂದಲೂ ಸಹ ಸಿಗುತ್ತದೆ.
ಸಸ್ಯಾಹಾರಿ ಮೂಲಗಳನ್ನು ನಾವು ಮೊದಲು ಇಲ್ಲಿ ತೆಗೆದುಕೊಳ್ಳೋಣ. ಹಾಲು ಮತ್ತು ಹಾಲಿನ ಪದಾರ್ಥಗಳು, ಹಾಲು, ಮೊಸರು, ಚೀಸ್ , ಪನ್ನೀರು , ಇದೆಲ್ಲದರಲ್ಲೂ ಕೂಡ ಪ್ರೋಟೀನ್ ಅಂಶ ನಮಗೆ ಚೆನ್ನಾಗಿ ಸಿಗುತ್ತದೆ. ಪ್ರೋಟೀನ್ ಜೊತೆಗೆ ಕ್ಯಾಲ್ಸಿಯಂ ಪ್ರೊ ಬಯೋಟಿಕ್ಸ್ ಸಿಗುವುದರಿಂದ ಹಾಲು ಮತ್ತು ಹಾಲಿನ ಪದಾರ್ಥಗಳನ್ನು ನಾವು ಪ್ರತಿನಿತ್ಯ ಬಳಸಬೇಕು. ಮತ್ತು ಮೊಳಕೆ ಕಾಳುಗಳನ್ನು ನಾವು ಒಂದು ಮುಷ್ಟಿಯಷ್ಟಾದರೂ ತಿನ್ನುವುದು ಒಂದು ಒಳ್ಳೆಯ ಅಭ್ಯಾಸ. ಮೊಳಕೆ ಕಾಳುಗಳಲ್ಲಿ ಪ್ರೋಟೀನ್ ಇರುತ್ತದೆ.
ಯಾವುದೇ ರೀತಿಯ ಕಾಳುಗಳಾಗಿರಬಹುದು, ಹೆಸರು ಕಾಳು, ಕಡ್ಲೆಕಾಳು, ಇದನ್ನು ನಾವು ಮೊಳಕೆ ಒಡೆಸಿ ತಿನ್ನುವುದು ಒಂದು ಒಳ್ಳೆಯ ಅಭ್ಯಾಸವಾಗುತ್ತದೆ. ನಂತರ ಬೇಳೆ ಸಾಂಬಾರ್, ಅಥವಾ ಬೇಳೆ ಸಾರು, ಮತ್ತು ಬೇಳೆ ದಾಲ್ ಅನ್ನೋ ಮಾಡಿಕೊಂಡು ತಿನ್ನುವುದು ಒಳ್ಳೆಯದು. ಇದರಲ್ಲಿ ನಮಗೆ ಪ್ರೋಟಿನ್ ತುಂಬಾ ಚೆನ್ನಾಗಿ ಸಿಗುತ್ತದೆ. ನಂತರ ಸೋಯ ಚಂಕ್ಸ್ ಅಥವಾ ಸೋಯ ಮಿಲ್ಕ್ ಕೂಡ ಅದರಲ್ಲಿ ಪ್ರೋಟೀನ್ ಸಿಗುವುದರಿಂದ ಅದನ್ನು ನಮ್ಮ ಅಡಿಗೆಯಲ್ಲಿ ಉಪಯೋಗಿಸುವುದು ಮತ್ತು ಅದನ್ನು ಹಾಗೆ ಬೇಯಿಸಿಕೊಂಡು ತಿನ್ನುವುದು.
ಅಥವಾ ಸೋಯ ಮಿಲ್ಕನ್ನು ಕುಡಿಯುವುದರಿಂದ ಒಳ್ಳೆಯ ಅಭ್ಯಾಸ ಅಂತ ಹೇಳಬಹುದು. ಇದರ ಜೊತೆಗೆ ಮಾಂಸಾಹಾರಿ ಮೂಲದಿಂದಲೂ ಕೂಡ ಪ್ರೋಟೀನ್ ಸಿಗುತ್ತದೆ. ಮುಖ್ಯವಾಗಿ ಮೊಟ್ಟೆ ಎಗ್ ವೈಟ್ ನಲ್ಲಿ ಪ್ರೋಟೀನ್ ಚೆನ್ನಾಗಿರುತ್ತೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.