ಮುಖದ ಮೇಲಿನ ನೆರಿಗೆ ಸುಕ್ಕು ಸಮಸ್ಯೆಗೆ ಇಲ್ಲಿದೆ ನೈಸರ್ಗಿಕ ಮದ್ದು…ಸಾಮಾನ್ಯವಾಗಿ ಮುಖದ ಸೌಂದರ್ಯ ಎಂಬುದು ಪ್ರತಿಯೊಬ್ಬರಿಗೂ ಮುಖ್ಯ ಮತ್ತು ಸುಕ್ಕು ಬರುವುದು ಕೂಡ ಅಷ್ಟು ಕಠಿಣವಾಗಿರುತ್ತದೆ ಅದರಿಂದ ಅವರ ವಯಸ್ಸಿನ ಮಿತಿ ಏನು ಎಂದವರಿಗೆ ತಿಳಿದುಬಿಡುತ್ತದೆ ಇತ್ತೀಚಿನ ಆಹಾರ ಪದಾರ್ಥ ಮತ್ತು ಅವರ ಆರ್ಥಿಕ ಸ್ಥಿತಿ ಹಾಗೂ ಇಂದಿನ ಹವಾಮಾನದ.
ಮಾಲಿನ್ಯದಿಂದಾಗಿ ತುಂಬಾ ಬೇಗ ಮುಖ ಸುಕ್ಕು ಬಂದುಬಿಡುತ್ತದೆ ಇದರಿಂದ 30 ವರ್ಷದ ಯುವಕ 40 ವರ್ಷದ ಹಾಗೆ ಕಾಣುವ ಪರಿಸ್ಥಿತಿ ಬಂದಿದೆ ಈ ರೀತಿ ನಮ್ಮ ಮುಖ ಆಗಬಾರದು ಎಂದರೆ ನಮಗೆ 40ವರ್ಷ ಇದ್ದರೂ 25ರ ಹರೆಯದವರಾಗೆ ಕಾಣಬೇಕು ಎಂದರೆ ನಮ್ಮ ದಿನನಿತ್ಯದ ದಿನಚರಿಯನ್ನು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ ಅತಿ ಹೆಚ್ಚಾಗಿ ನೀರನ್ನು ಕುಡಿಯಬೇಕು ಮತ್ತು ಹಲವಾರು ಹಣ್ಣು.
ಹಂಪಲುಗಳನ್ನು ಸೇವಿಸಬೇಕು ಮತ್ತು ಮುಖ್ಯವಾಗಿ ಕೊಬ್ಬಿನಂಶವನ್ನು ಅತಿಯಾಗಿ ಸೇವಿಸಬಾರದು ಕೋಲ್ಡ್ ಪ್ರೆಸ್ ಆಲಿವ್ ಆಯಿಲ್ ಅನ್ನು ಪ್ರತಿದಿನ ನಿಮ್ಮ ಮುಖಕ್ಕೆ ಮಸಾಜ್ ರೀತಿ ಮಾಡಿ ಮಲಗಬೇಕು, ಈ ರೀತಿ ನೀವು ಸರಿಸುಮಾರು ಒಂದೆರಡು ತಿಂಗಳು ಪ್ರತಿದಿನ ಮಾಡಿದರೆ ಅದರಿಂದ ಸಿಗುವ ಪ್ರತಿಫಲವನ್ನು ನಿಮಗೆ ಕಾಣಲು ಸಿಗುತ್ತದೆ ಇದು ಮನೆಯಲ್ಲಿ.
ನೀವೇ ಮಾಡಿಕೊಳ್ಳಬಹುದು ಅಂತ ಒಂದು ಮನೆ ಮದ್ದು ತುಂಬಾ ಕಡಿಮೆ ಖರ್ಚಿನಲ್ಲಿ ಮತ್ತು ನಿಮ್ಮ ಮುಖಕ್ಕೆ ಯಾವುದೇ ರೀತಿಯ ದುಷ್ಪರಿಣಾಮವನ್ನು ಬೀರದೆ ಸರಳವಾಗಿ ಮುಗಿದುಹೋಗುವಂತಹ ಒಂದು ಕಾರ್ಯ,ಇದಲ್ಲದೆ ಹಲವು ರೀತಿಯ ಮಾತ್ರೆಗಳನ್ನು ಕೂಡ ತೆಗೆದುಕೊಂಡು ನೀವು ನಿಮ್ಮ ಮುಖದ ಸುಕ್ಕನ್ನು ಕಡಿಮೆ ಮಾಡಿಕೊಳ್ಳಬಹುದು.
ಜಿಂಕ್ ವಿಟಮಿನ್ ಸಿ ಒಮೆಗಾ ತ್ರಿ ಸಿಕ್ಸ್ಟಿ ಬಯೋಟಿನ್ ಹೀಗೆ ಹಲವು ರೀತಿಯ ಔಷಧಿಗಳನ್ನು ಕೂಡ ತೆಗೆದು ನೀವು ನಿಮ್ಮ ಮುಖದ ಸುಕ್ಕನ್ನು ಬರದಿರುವ ರೀತಿ ಮಾಡಿಕೊಳ್ಳಬಹುದು ಆದರೆ ಇದಕ್ಕಿಂತ ತುಂಬಾ ಪ್ರಯೋಜನಕಾರಿಯಾಗಿರುವುದು ಮತ್ತು ನೈಸರ್ಗಿಕವಾಗಿಯೇ ತೊಂದರೆ ಆಗದ ರೀತಿ ಇರುವುದು ಈ ಒಂದು ಆಲಿವ್ ಆಯಿಲ್ ಅನ್ನು ಮುಖಕ್ಕೆ ಹಚ್ಚಿ ಮಸಾಜ್ ರೀತಿ.
ಮಾಡುವುದರಿಂದ ಬಹುಬೇಗವಾಗಿ ನಿಮ್ಮ ಮುಖ ಸುಕ್ಕು ಕಟ್ಟಿರುವುದನ್ನು ಮುರಿದು ತರು ಯುವಕನ ರೀತಿ ಮತ್ತು ಯುವತಿಯ ರೀತಿ ಕಾಣಿಸುತ್ತದೆ, ಅಥವಾ ಇನ್ನೂ ಒಂದು ಮನೆಮದ್ದು ಕೂಡ ಇದೆ ನೀವು ಕ್ಯಾರೆಟ್ ಅನ್ನು ಪ್ರತಿನಿತ್ಯ ಅಡುಗೆಗೆ ಬಳಸುತ್ತಲೇ ಇರುತ್ತೀರ ಅದನ್ನು ನಿಮ್ಮ ಅವಶ್ಯಕತೆಗೆ ತಕ್ಕಷ್ಟು ತೆಗೆದುಕೊಂಡು ಚೆನ್ನಾಗಿ ತುರಿದು ನಂತರ ಅದನ್ನು.
ಪೇಸ್ಟ್ ರೀತಿ ಮಾಡಿ ಅದಕ್ಕೆ ಸ್ವಲ್ಪ ಜೇನುತುಪ್ಪವನ್ನು ಮಿಶ್ರಣ ಮಾಡಿ ನಿಮ್ಮ ಮುಖಕ್ಕೆ ಫೇಸ್ ಪ್ಯಾಕ್ ತರ ಹಚ್ಚಿಕೊಳ್ಳಬೇಕು ಸರಿ ಸುಮಾರು ಅರ್ಧ ಗಂಟೆಗಳ ಕಾಲ ಹಾಗೆ ಬಿಟ್ಟು ನಂತರ ತಣ್ಣೀರಿನಿಂದ ಮುಖವನ್ನು ತೊಳೆಯಬೇಕು ಈ ರೀತಿ ಪ್ರತಿ ರಾತ್ರಿ ನೀವು ಊಟ ಮುಗಿದ ನಂತರ ಮಾಡುತ್ತಾ ಬಂದರೆ ಇದರಿಂದ ಕೂಡ ಉತ್ತಮ ಫಲಿತಾಂಶವನ್ನು ನೀವು ಕಾಣಬಹುದು.
ಮತ್ತು ಇನ್ನೂ ಒಂದು ಪರಿಹಾರ ಎಂದರೆ ನಿಂಬೆಹಣ್ಣು ಮತ್ತು ಸ್ವಲ್ಪ ನೀರು ಒಂದು ನಿಂಬೆಹಣ್ಣಿಗೆ ಅರ್ಧ ಲೋಟ ನೀರನ್ನು ಮಿಶ್ರಣ ಮಾಡಿ ಅದನ್ನು ನೀವು ಮುಖಕ್ಕೆ ಮಸಾಜ್ ರೀತಿ ಮಾಡಿ ಹಚ್ಚಿಕೊಳ್ಳುವುದು ಕೂಡ ನಿಮ್ಮ ತ್ವಚೆ ಸುಕ್ಕು ಬೀಳುವುದಂತೆ ತಡೆಯುತ್ತದೆ ಮತ್ತು ನಮ್ಮ ಆಹಾರ ಪದಾರ್ಥಗಳನ್ನು ಕೂಡ ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಅಧಿಕವಾಗಿ ತುಪ್ಪ.
ಮತ್ತು ಮೊಸರು ಹಾಲು ಹಣ್ಣು ಹಂಪಲುಗಳನ್ನು ಮತ್ತು ತರಕಾರಿಗಳನ್ನು ಕೂಡ ಪ್ರತಿನಿತ್ಯ ಸೇವಿಸಬೇಕು ಮತ್ತು ಹಲವಾರು ಬಗೆಯ ಪದಾರ್ಥಗಳನ್ನು ಕೂಡ ಸೇವಿಸಬೇಕು ಅದು ಯಾವುದೇ ಎಂದರೆ ಕಡಲೆಬೀಜ ಬಾದಾಮಿ ಗೋಡಂಬಿ ಪಿಸ್ತಾ ಈ ರೀತಿ ಕೆಲ ಆಹಾರವನ್ನು ಕೂಡ ನಾವು ಸೇವಿಸಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.