ವಡಿವೇಲು ಎಂಬ ಹಾಸ್ಯ ಬ್ರಹ್ಮ ನಟನ ಬಗ್ಗೆ ನೀವರಿಯದ ಮಾಹಿತಿಗಳು ಇಲ್ಲಿವೆ ನೋಡಿ..
ತಮಿಳಿನಲ್ಲಿ ತಮ್ಮದೇ ಆದಂತಹ ಸ್ಟಾರ್ ಡಂ ಸೃಷ್ಟಿ ಮಾಡಿಕೊಂಡಂತಹ ಲೆಜೆಂಡರಿ ನಟರಲ್ಲಿ ನಟ ವಡಿವೇಲು ರವರದು ಬಹು ಪ್ರಧಾನವಾದ ಹೆಸರು ಇತ್ತೀಚೆಕೆಲ್ಲ ತಿಂಗಳ ಹಿಂದೆ ಇವರ ಹಿನ್ನೆಲೆ ಜೀವನ ಹಾಗೂ ಅದು ಕುಸಿತ ಕಂಡಿದ್ದು ಹೇಗೆ ಎನ್ನುವುದರ ಬಗ್ಗೆ ವಿಸ್ತಾರವಾದ ವಿಡಿಯೋ ಒಂದನ್ನು ಮಾಡಿದಿವಿ ಇವತ್ತಿನ ಈ ವಿಡಿಯೋದಲ್ಲಿ ನಟ ಬಡಿವೇಲುರವರಿಗೆ ಸಂಬಂಧಿಸಿದ ಒಂದಷ್ಟು ಸಂಗತಿಗಳನ್ನು ನಿಮ್ಮ ಮುಂದೆ ಹೇಳುತ್ತಿದ್ದೇವೆ. ಮೊದಲನೆಯದಾಗಿ ನಟ ವಡಿವೇಲು 1960ರ ಸೆಪ್ಟೆಂಬರ್ ನಲ್ಲಿ ನಟರಾಜನ್ ಹಾಗೂ ವೃದ್ಧೇಶ್ವರಿಯಂಬ ದಂಪತಿಯ ಮಗನಾಗಿ ಜನಿಸುತ್ತಾರೆ ಇವರ ಪೂರ್ತಿ ಹೆಸರು ಕುಮಾರ್ ವಡಿವೇಲು ನಟರಾಜ ಎಂದು ಇವರ ತಂದೆ ಕೊಡೈಕೆನಲ್ ಎಂಬಲ್ಲಿ ಕ್ರಾಸ್ ಕಟಿಂಗ್ ಕೆಲಸವನ್ನು ಮಾಡುತ್ತಿದ್ದರು.ಅವರು ಅಕಾಲಿಕವಾಗಿ ಮರಣ ಹೊಂದಿದ್ದರಿಂದ ಮಗ ವಡಿವೇಲು ತಂದೆ ಕೆಲಸದಲ್ಲಿ ತಾವು ಮುಂದುವರೆದರು ನಟ ವಡಿವೇಲು ಅವರ ಪೋಷಕರಿಗೆ ಇದ್ದಂತ ಏಳು ಜನ ಮಕ್ಕಳಲ್ಲಿ ನಟ ವಡಿವೇಲು ಕೂಡ ಒಬ್ಬರು ಅಷ್ಟು ಜನರಲ್ಲಿ ನೋಡಲು ತುಂಬಾ ಕಪ್ಪುವರ್ಣದಲ್ಲಿ ಇದ್ದವರು ಎಂದರೆ ಅದು ವಡಿವೇಲು ಮಾತ್ರ ಇದರಿಂದಾಗಿ ಉಳಿದವರೆಲ್ಲರೂ ಇವರನ್ನು ಕರಿಯ ಕಪ್ಪು ಚರ್ಮದವನು ಎಂದು ಗೆಲಿಯನ್ನು ಮಾಡುತ್ತಿದ್ದರು.
ಕೆಲಸ ಮಾಡುತ್ತಲೇ ವಡಿವೇಲು ನಾಟಕದ ಪಾತ್ರದಲ್ಲಿ ಆಸಕ್ತರಾಗಿ ಹಳ್ಳಿಯ ಕೆಲವು ಉತ್ಸವಗಳಲ್ಲಿ ನಾಟಕಗಳಲ್ಲಿ ಸ್ಟೇಜ್ ಮೇಲೆ ಅಭಿನಯ ಮಾಡುತ್ತಿದ್ದರು ವಿಶೇಷವಾಗಿ ದೀಪಾವಳಿ ಸಮಯದಲ್ಲಿ ವಡಿವೇಲು ನಾಟಕಗಳ ಅಭಿನಯಕ್ಕೆ ಇಳಿಯುತ್ತಿದ್ದರು.ಇವರ ತಂದೆಗೆ ಈ ಸಂದರ್ಭದಲ್ಲಿ ಏನೋ ಕಾಯಿಲೆ ಉಂಟಾಗಿ ಅವರ ಆಪರೇಷನ್ ಮಾಡಿಸಲು ಒಂದು ಲಕ್ಷ ಖರ್ಚು ಆಗುತ್ತದೆ ಎಂದು ವೈದ್ಯರು ಹೇಳಿದರು ಆದರೆ ಕಡು ಬಡತನದ ಕುಟುಂಬದವರಾಗಿದ್ದ ವಡಿವೇಲು ಅವರಿಗೆ ಅಷ್ಟೊಂದು ಹಣವನ್ನು ಎಲ್ಲಿಂದಲೂ ಹೊಂದಿಸಲು ಸಾಧ್ಯವಾಗಲಿಲ್ಲ ಆದ್ದರಿಂದ ಅವರ ತಂದೆಯ ಸಾವನ್ನ ಅವರ ಕಣ್ಣಾರೆ ನೋಡುವ ದುಸ್ಥಿತಿ ಎದರಾಗುತ್ತದೆ ತಂದೆಯ ಅಕಾಲಿಕ ಮರಣದಿಂದ ಕಂಗೆಡುವ ವಡಿವೇಲು ತನ್ನ ತಂದೆಯು ಮಾಡುತ್ತಿದ್ದ ಗ್ರಾಸ್ ಕಟಿಂಗ್ ಹಾಗೂ ಕನ್ನಡಿ ಗಳಿಗೆ ಫ್ರೇಮ್ ಹಾಕುವಂತಹ ಕೆಲಸದಲ್ಲಿ ತಮ್ಮ ಸಹೋದರರೊಂದಿಗೆ ಮುಂದುವರೆದರು ಕನ್ನಡಿಗೆ ಫ್ರೇಮ್ ಹಾಗೂ ಗ್ಲಾಸ್ ಆಕುವಂತಹ ಕೆಲಸವನ್ನು ಮುಂದುವರಿಸುತ್ತಾ ಬಟ್ಟೆ ಹೊಲಿಯಲು ಶುರು ಮಾಡುತ್ತಾರೆ.
ಅವರ ಇಡೀ ಸಂಸಾರಕ್ಕೆ ಇದ್ದ ಏಕೈಕ ಆದಾಯ ವೆಂದರೆ ಅದು ಇದೆ ಆಗಿತ್ತು ತಂದೆಯ ಸಂಪಾದನೆಯಲ್ಲಿ ಇಡೀ ಸಂಸಾರ ಸಾಗಬೇಕಿತ್ತು ಇದನ್ನೇ ನಂಬಿಕೊಂಡಿದ್ದರೆ ಹೆಚ್ಚ ಗಳಿಸಲು ಸಾಧ್ಯವಾಗುವುದಿಲ್ಲ ಎಂದು ಕೊಂಡು ವಡಿವೇಲುರವರು ತಮ್ಮ ಕೆಲಸ ಸಹೋದರರ ಜೊತೆ ಮದುರೆಗೆ ಕೂಲಿ ಕೆಲಸಕ್ಕೆ ರೈಲಿನ ಮೂಲಕ ಬಂದಿದ್ದರು ಅಲ್ಲಿ ಇವರನ್ನು ಮೊದಲ ಬಾರಿಗೆ ನೋಡಿದ ರಾಜ್ ಕಿರಣ್ ಎಂಬ ಇನ್ನೊಬ್ಬ ತಮಿಳ ಹಾಸ್ಯ ಹಾಗೂ ಪೋಷಕ ಕಲಾವಿದರೊಬ್ಬರು ವಡಿವೇಲುನಲ್ಲಿ ಇದ್ದಂತಹ ಚುರುಕು ಮಾತುಗಾರಿಕೆಯನ್ನು ಗಮನಿಸಿ ಇವರನ್ನು ಸಿನಿಮಾ ಕ್ಷೇತ್ರಕ್ಕೆ ಪರಿಚಯಿಸಲು ಉತ್ಸುಕ ರಾಗುತ್ತಾರೆ ವಡಿವೇಲುರವರ ಆವಭಾವ ಹಾಗೂ ಅವರ ಮಾತುಗಾರಿಕೆ ಶೈಲಿಗೆ ಮನಸೋತ ರಾಜಕಿರಣ್ ನೀನು ಚೆನ್ನಾಗಿ ಮಾತನಾಡುತ್ತೀಯಾ ನಿನಗೆ ಇನ್ನು ಏನೇನು ಬರುತ್ತದೆ ತೋರಿಸು ಎಂದಾಗ ಈ ವಡಿವೇಲು ತನಗೆ ಗೊತ್ತಿದ್ದಂತಹ ಭಾವ ಅಭಿನಯ ನಟನೆ ಹಾಸ್ಯ ಇತ್ಯಾದಿಯನ್ನು ಮಾಡಿ ತೋರಿಸಿ ಅವರನ್ನು ರಂಜಿಸುತ್ತಾರೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ