ಹಣಬೆಯನ್ನು ತರಲು ಹೋದ ಮಹಿಳೆ ರಾತ್ರಿ ಎಲ್ಲಾ ಕಾಡಿನಲ್ಲಿ ಹಲೆದಾಡಿದ್ದಾಳೆ ಇದಕ್ಕೆ ಕಾರಣವಾಗಿದ್ದು ಮಾತ್ರ ಆ ಒಂದು ಬಳ್ಳಿ ಹಾಗಾದರೆ ಆ ಮಹಿಳೆ ರಾತ್ರಿ ಇಡಿ ಅಲೆದಾಡುತ್ತಾ ಏನು ಮಾಡಿದಳು ಬಹಳ ರೋಚಕವಾದ ಮಾಹಿತಿ.

WhatsApp Group Join Now
Telegram Group Join Now

ಆ ಮಹಿಳೆ ಅಣಬೆಯನ್ನು ಹುಡುಕಲು ಮಧ್ಯಾಹ್ನ ಕಾಡಿಗೆ ಹೊರಟಳು ಸಂಜೆಯಾದರೂ ಸಹ ಮನೆಗೆ ಹಿಂತಿರುಗಿ ಬರಲಿಲ್ಲ ಮೊಬೈಲ್ ಗೆ ಕರೆ ಮಾಡಿದರು ನಾಟ್ ರೀಚಬಲ್ ಎಂದು ಬರುತಿತ್ತು ಹೀಗಾಗಿ ಆತಂಕಗೊಂಡ ಮನೆಯವರು ಅರಣ್ಯ ಸಿಬ್ಬಂದಿ ಹಾಗೂ ಪೊಲೀಸರಿಗೆ ಮಾಹಿತಿಯನ್ನು ನೀಡಿದರು

ಮಹಿಳೆಯ ಮೊಬೈಲ್ ನೆಟ್ವರ್ಕ್ ಅನ್ನು ಟ್ರ್ಯಾಕ್ ಮಾಡಿದ ಪೊಲೀಸರು ತೆರಳಿದರು ಮಹಿಳೆ ಅಲ್ಲಿ ಇರಲಿಲ್ಲ ಮತ್ತೆ ಮೊಬೈಲ್ ನ ಲೊಕೇಶನ್ ಟ್ರ್ಯಾಕ್ ಮಾಡಿ ಹುಡುಕಾಡಲು ಶುರು ಮಾಡಿದಾಗ ಮಹಿಳೆ ಪತ್ತೆಯಾದಳು ಅಷ್ಟೊತ್ತಿಗೆ ಆಗಲೇ ತಡರಾತ್ರಿಯಾಗಿತ್ತು 11ಗಂಟೆಯಾಗಿತ್ತು ತುಂಬಾ ಗಾಳಿ ಮಳೆ ಇದ್ದಿದ್ದರಿಂದ ಸ್ವಲ್ಪಮಟ್ಟಿಗೆ ಅಸ್ವಸ್ಥಗೊಂಡಿದ್ದಳು ಮಹಿಳೆ ಕೊನೆಗೂ ಹಣಬೆ ತರಲು ಹೋಗಿದ್ದ ಮಹಿಳೆಯನ್ನ ಅರಣ್ಯ ಸಿಬ್ಬಂದಿ ಹಾಗೂ ಪೊಲೀಸರು ತಮ್ಮ ಕಾರ್ಯಾಚರಣೆಯಿಂದ ಕಂಡುಹಿಡಿದರು.

ಆದರೆ ಆಕೆ ದಾರಿ ತಪ್ಪಲು ಅದೊಂದು ಬಳ್ಳಿ ಕಾರಣವಾಗಿತ್ತು ಎಂದು ವಿವರಿಸಿದ್ದಾಳೆ ಏನಿದು ದಾಟುಬಳ್ಳಿ ಬಿಳಿ ದಾರದಂತೆ ಇರುವ ಈ ಜೀವಿಗೆ ಗ್ರಾಮೀಣ ಭಾಗದಲ್ಲಿ ದಾಟು ಬಳ್ಳಿ ಅಥವಾ ಮರೆವಿನ ಬಳ್ಳಿ ಎಂದು ಕರೆಯುತ್ತಾರೆ ಕಾಡಿಗೆ ಹೋದಾಗ ಈ ದಾಟು ಬಳ್ಳಿಯನ್ನು ದಾಟಿದರೆ ದಾರಿ ತಪ್ಪುತ್ತಾರೆ ಮರಳಿ ಮನೆಗೆ ಬರಲು ದಿಕ್ಕು ತೋಚದಂತೆ ಆಗುತ್ತದೆ ಎಂಬುವುದು ಗ್ರಾಮೀಣ ಭಾಗದ ಹಳ್ಳಿ ಜನರ ನಂಬಿಕೆಯಾಗಿದೆ.

See also  ಇದರಿಂದ ಇನ್ಮುಂದೆ ರಂಗೋಲಿ ಹಾಕಿ,ಇದರಿಂದ ಇಷ್ಟೆಲ್ಲಾ ಉಪಯೋಗ ಇದೆ ಅಂತ ಗೊತ್ತಿರಲಿಲ್ಲ

ಈ ವಿರಳ ಜೀವಿ ಮಳೆಗಾಲದಲ್ಲಿ ಮಾತ್ರ ಸಿಗುತ್ತದೆ ತುಂಬಾ ಗಮನ ಕೊಟ್ಟು ನೋಡಿದರೆ ಮಾತ್ರ ಇದು ಕಾಣಿಸುತ್ತದೆ ಅಣಬೆ ತರಲು ಕಾಡಿಗೆ ಹೋದಾಗ ಇದೇ ದಾಟುಬಳಿಯನ್ನ ದಾಟಿದ್ದಾಳೆ ಇದಾಗಿ ದಾರಿ ತಪ್ಪಿದೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ಈ ಘಟನೆ ನಡೆದಿರುವುದು ಉತ್ತರ ಕನ್ನಡ ಜಿಲ್ಲೆಯ ಅಂಬಿಕಾ ನಗರದಲ್ಲಿ ಕನ್ನಡದಲ್ಲಿ ದಾಟು ಬಳ್ಳಿ ಎಂದು ಕರೆಯುವ ಜೀವಿಗೆ ಇಂಗ್ಲಿಷ್ ನಲ್ಲಿ ಹಾರ್ಸ್ ಹೈರ್ ಅಥವಾ ಗಾರ್ಡಿಯನ್ ಎನ್ನುತ್ತಾರೆ ಈ ದಾಟು ಬಳ್ಳಿ ದಾರದಂತಿದ್ದು ಯಾರಿಗೂ ಸಹ ಬಹಳ ಸುಲಭವಾಗಿ ಕಾಣಿಸುವುದಿಲ್ಲ ಕಾಡಿಗೆ ಹೋದವರು ಬಹಳ ಎಚ್ಚರಿಕೆಯಿಂದ ಇರಬೇಕು.

By god

Leave a Reply

Your email address will not be published. Required fields are marked *