ಅಪ್ಪ ಸಿ ಬಿ ಐ ಅಧಿಕಾರಿ,ಆದರೆ ಮಗಳು ಬಸ್ ಡ್ರೈವರ್ – ಅಪ್ಪ ಮಗಳನ್ನು ಆ ಕೆಲಸಕ್ಕೆ ಕಳಿಸಿದ್ದು ಯಾಕೆ….ಇವತ್ತು ನಾನು ನಿಮ್ಮ ಮುಂದೆ ಇಡುತ್ತಿರುವಂತಹ ಸ್ಟೋರಿ ನಿಮ್ಮೆಲ್ಲರಿಗೂ ಕೂಡ ಸ್ಪೂರ್ತಿಯನ್ನು ತುಂಬುತ್ತದೆ ಅದರಲ್ಲೂ ಕೂಡ ಈಗಿನ ಕಾಲದ ಮಕ್ಕಳು ನೋಡಲೇ ಬೇಕಾಗಿರುವಂತಹ ಕಥೆ ಅದರಲ್ಲೂ ಇತ್ತೀಚಿಗೆ ಏನಾಗುತ್ತಿದೆ ಎಂದರೆ ಅಪ್ಪ ಅಮ್ಮ ಶ್ರೀಮಂತರಾಗಿದ್ದರೆ.
ಸಾಕು ಅಥವಾ ಒಳ್ಳೆಯ ಅಧಿಕಾರದಲ್ಲಿ ಇದ್ದರೆ ಸಾಕು ಆ ಶ್ರೀಮಂತಿಕೆಯನ್ನ ಆ ಅಧಿಕಾರವನ್ನು ಎಷ್ಟರಮಟ್ಟಿಗೆ ದುರುಪಯೋಗಪಡಿಸಿಕೊಳ್ಳಲು ಸಾಧ್ಯವಾಗುತ್ತದೆಯೋ ಅಷ್ಟರ ಮಟ್ಟಿಗೆ ದುರುಪಯೋಗ ಪಡೆಸಿಕೊಳ್ಳುತ್ತಾರೆ ಅಪ್ಪ ಅಮ್ಮನ ದುಡ್ಡನ್ನ ಎಷ್ಟು ಮಜಾ ಮಾಡಿ ಉಡಾಯಿಸುವುದಕ್ಕೆ ಸಾಧ್ಯವೊ ಆ ರೀತಿಯಾಗಿ ಉಡಾಯಿಸುವಂತ ಕೆಲಸವನ್ನು ಮಾಡುತ್ತಾರೆ ಅಷ್ಟು.
ಮಾತ್ರವಲ್ಲದೆ ಈಗಿನ ಕಾಲದವರ ಒಂದಷ್ಟು ಮಕ್ಕಳಂತೂ ಗಾಂಜಾ ಈ ನಶಾ ಲೋಕದಲ್ಲೇ ತೇಲಾಡುತ್ತಿರುತ್ತಾರೆ ಒಂದು ರೀತಿಯಾಗಿ ಈಗಿನ ಕಾಲದ ಮಕ್ಕಳನ್ನ ಅಪ್ಪ-ಅಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವುದೇ ಬಹಳ ಕಷ್ಟ ಎನ್ನುವ ರೀತಿ ಬದಲಾಗಿದೆ ಅದರಲ್ಲಿ ಒಂದಷ್ಟು ಮಕ್ಕಳು ಮಾತ್ರ ಪ್ರತಿಯೊಬ್ಬರಿಗೂ ಮಾದರಿಯಾಗುವ ರೀತಿಯಲ್ಲಿ ಸ್ಪೂರ್ತಿ.
ಆಗುವ ರೀತಿಯಲ್ಲಿ ತಮ್ಮ ಜೀವನವನ್ನು ಸಾಗಿಸುತ್ತಾ ಹೋಗುತ್ತಿದ್ದಾರೆ ಇವತ್ತು ಅಂತಹದೇ ಒಂದು ಕಥೆಯನ್ನ ನಾನು ನಿಮ್ಮ ಮುಂದೆ ಇಡುತ್ತಿದ್ದೇನೆ. ಆಕೆಯಪ್ಪ ಸಿಬಿಐ ಅಧಿಕಾರಿ ಸಿಬಿಐ ನಲ್ಲಿ ಒಂದು ಒಳ್ಳೆ ಅಧಿಕಾರದಲ್ಲಿ ಇರುವಂತಹ ಅಧಿಕಾರಿ ಆದರೆ ಆಕೆ ಮಾತ್ರ ಬಸ್ ಡ್ರೈವರ್ ಆಗಿ ಕೆಲಸವನ್ನು ಮಾಡುತ್ತಿದ್ದಾಳೆ ಸ್ವಲ್ಪಮಟ್ಟಿಗೆ ಅಚ್ಚರಿಯಾಗುತ್ತದೆ ಅಪ್ಪ ಅಂತಹ.
ಸ್ಥಾನದಲ್ಲಿ ಇರುವಂತಹ ಸಂದರ್ಭದಲ್ಲಿ ಮಗಳು ಡ್ರೈವರ್ ಆಗುವಂತಹ ಪರಿಸ್ಥಿತಿ ಏನು ಬಂತು ಎಂದು ಹೇಳಿ ಅದು ಏನು ಎತ್ತ ಎಂದು ವಿವರಿಸುತ್ತಾ ಹೋಗುತ್ತೇನೆ ಆಕೆಯ ಹೆಸರು ರೂಪ ಎಂದು ಕೇರಳದ ಕೊಲ್ಲಂಬಾಗದ ಹುಡುಗಿ ಯಾಕೆ ಹೆಚ್ಚು ಕಡಿಮೆ ಆಕೆಯ ವಯಸ್ಸು 24 ರಿಂದ 25 ವರ್ಷ ಆಕೆ ಪಿಜಿ ಡಿಪ್ಲೋಮಾ ಇನ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ಕೋರ್ಸ್ ಅನ್ನು.
ಮಾಡುತ್ತಿದ್ದಾಳೆ ಅದಕ್ಕೂ ಮುಂಚೆ ಒಂದಿಷ್ಟು ಒಳ್ಳೆಯ ಕೋರ್ಸ್ ಗಳನ್ನು ಆಕೆ ಪೂರ್ಣಗೊಳಿಸಿದ್ದಾಳೆ ಜೊತೆಗೆ ಆಕೆ ಬೇರೆ ಬೇರೆ ಒಂದಿಷ್ಟು ಆಸಕ್ತಿ ಇರುವಂತಹ ಕಾರಣಕ್ಕಾಗಿ ಅದರೆಲ್ಲದರ ಅಭ್ಯಾಸ ಮಾಡುತ್ತಿದ್ದಾಳೆ ಅಂತಿಮವಾಗಿ ನಾನು ಸೇನೆಯಲ್ಲಿ ಕೆಲಸ ಮಾಡಬೇಕು ಎನ್ನುವಂತಹ ಗುರಿಯನ್ನ ಆಕೆ ಇಟ್ಟುಕೊಂಡಿದ್ದಾಳೆ ಆಕೆಗೆ ಅಪ್ಪ ಅಮ್ಮ ಓದಿಗೆ ಸಂಬಂಧಪಟ್ಟ.
ಹಾಗೆ ಎಲ್ಲದಕ್ಕೂ ಕೂಡ ಹಣವನ್ನು ಕೊಡುತ್ತಿದ್ದರು ಆಕೆಗೆ ಒಂದು ಸಂದರ್ಭದಲ್ಲಿ ಅನಿಸುತ್ತದೆ ಯಂತೆ ನಾನು ಅಪ್ಪ ಅಮ್ಮನ ದುಡ್ಡಿನಲ್ಲಿ ಓದುವ ಬದಲಾಗಿ ನನ್ನ ಕಾಲಿನ ಮೇಲೆ ನಾನು ನಿಂತುಕೊಳ್ಳಬೇಕು ನಾನು ಏನಾದರೂ ಕೆಲಸವನ್ನು ಮಾಡಿ ಆ ದುಡಿಮೆಯಲ್ಲೇ ನಾನು ಓದಬೇಕು ಅಥವಾ ಹೋದನ್ನು ಪೂರ್ಣಗೊಳಿಸಬೇಕು ಎಂದು ಆಕೆ ಅಂದುಕೊಳ್ಳುತ್ತಾಳೆ ಆಗ.
ಅವಳು ಯೋಚನೆ ಮಾಡಿದ್ದು ಏನು ಎಂದರೆ ನಾನು ಬಸ್ ಡ್ರೈವರ್ ಆಗಿ ಕೆಲಸವನ್ನು ಮಾಡಬೇಕು ಎಂದು ಏಕೆಂದರೆ ಮುಂಚೆಯೇ ಆಕೆಗೆ ಡ್ರೈವ್ ಮಾಡುವುದು ಬಹಳ ಚೆನ್ನಾಗಿ ಗೊತ್ತಿತ್ತು ಅದು ಅಷ್ಟೇ ಅಲ್ಲದೆ ಆಕೆ ಹೆವಿ ಲೈಸೆನ್ಸ್ ಅನ್ನು ಕೂಡ ಪಡೆದುಕೊಂಡಿದ್ದಳು ಹೆವಿ ವೆಹಿಕಲ್ಸ್ ಲೈಸೆನ್ಸ್ ಅಂದರೆ ಈ ಲಾರಿ ಬಸ್ಸು ಓಡಿಸೋಕೆ ಬೇಕಾಗಿರುವ ಲೈಸೆನ್ಸ್ ಹೀಗಾಗಿ ಆಕೆ.
ಅಂದುಕೊಳ್ಳುತ್ತಾಳೆ ನಾನು ಯಾವುದಾದರೂ ಖಾಸಗಿ ಬಸ್ಗೆ ಡ್ರೈವರ್ ಆಗಿ ಕೆಲಸವನ್ನು ಮಾಡಬೇಕು ಎಂದು ಹೇಳಿ ಆಕೆ ಮನಸ್ಸಿನಲ್ಲಿ ಇದ್ದಿದ್ದು ಎರಡು ವಿಚಾರ ಒಂದು ಬಸ್ ಡ್ರೈವರ್ ಆಗಿ ಕೆಲಸ ಮಾಡುವುದರಿಂದ ನನಗೆ ಒಂದಷ್ಟು ಹಣ ಬರುತ್ತದೆ ಇದರಿಂದ ನನ್ನ ವಿದ್ಯಾಭ್ಯಾಸವನ್ನು ಆರಾಮವಾಗಿ ಪೂರ್ತಿ ಗೊಳಿಸಬಹುದು ಎಂದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.