ಅಬ್ಬಾ ಈ ರೀತಿ ಸ್ನಾನ ಮಾಡಿದರೆ ಲಕ್ಷ ಲಕ್ಷ ಸಿಗದ ಲಾಭ ಈ ಐದು ನಿಯಮ ಪಾಲಿಸಿ…ಸ್ನಾನ ಮಾಡುವ ಸರಿಯಾದ ನಿಯಮ

WhatsApp Group Join Now
Telegram Group Join Now

ಇವತ್ತಿನ ಸಂಚಿಕೆಯಲ್ಲಿ ನಾನು ಸ್ನಾನ ಮಾಡುವ ವಿಧಾನ ಹಾಗೆ ಯಾವ ವಿಧಾನದಲ್ಲಿ ಸ್ನಾನ ಮಾಡಿದರೆ ಸ್ನಾನವೇ ನಮಗೆ ಔಷಧಿ ಆಗುತ್ತೆ ಅಂತ ತಿಳಿಸಿಕೊಡ್ತಾ ಇದೀನಿ. ನಮ್ಮ ಶಿಬಿರದಲ್ಲಿ ಇದನ್ನ ಯಾವಾಗಲೂ ಹೇಳ್ತಾ ಇರ್ತೀವಿ ನಿಮಗೂ ಕೂಡ ಇದನ್ನ ತಿಳಿಸ್ತಾ ಇದೀನಿ ಇವತ್ತಿಂದಾನೆ ಸಾಧ್ಯವಾದರೆ ಇಂದಿನಿಂದಲೇ ಈ ರೀತಿ ನೀವು ಸ್ನಾನ ಮಾಡೋದನ್ನ ಅಭ್ಯಾಸ ಮಾಡ್ತಾ ಹೋಗಿ.

ಸ್ನಾನ ಯಾರು ಮಾಡೋದಿಲ್ಲ ಹೊರಗಡೆ ಹೋದಾಗ ಧೂಳು ಆಗುತ್ತೆ ಸ್ನಾನ ಮಾಡ್ತೀವಿ ಶಕೆ ಆಗುತ್ತೆ. ಸ್ನಾನ ಮಾಡ್ತೀವಿ ಅಥವಾ ತಾಜಾತನ ಬರಲಿ ಅಂತ ಸ್ನಾನ ಮಾಡ್ತೀವಿ ಅಥವಾ ಪುಣ್ಯಕ್ಷೇತ್ರಗಳಿಗೆ ಹೋದಾಗ ತೀರ್ಥ ಸ್ನಾನ ಅಂತ ಮಾಡ್ತೀವಿ.

ಹೀಗೆ ಹುಟ್ಟಿದಾಗಿಂದ ಸಾಯೋವರೆಗೂ ಅಂತೂ ಸ್ನಾನ ಮಾಡ್ತಾನೆ ಇರ್ತೀವಿ. ಸ್ನಾನ ಮಾಡಿದ್ದು ಹೌದು ಆದರೆ ಸ್ನಾನವೇ ನಮಗೆ ಔಷಧಿ ಆಗ್ಬೇಕು ಅಂದ್ರೆ ಹೇಗೆ ಸ್ನಾನ ಮಾಡಬೇಕು ಅಂತ ಕೇಳಿದಾಗ ಆಶ್ಚರ್ಯ ಪಡ್ತಾರೆ.

ಸ್ನಾನ ಮಾಡುವ ರೀತಿನೂ ಔಷಧಿಯಾಗಿ ನಾವು ಮಾರ್ಪಡಿಸಿಕೊಳ್ಳಬಹುದಾ ಹೇಗೆ ಸಾಧ್ಯ ಆಗುತ್ತೆ. ಅದು ಯಾವ ರೀತಿ ಸ್ನಾನ ಮಾಡಬೇಕು ಹೀಗೆಲ್ಲ ಕೇಳ್ತಾ ಇರ್ತಾರೆ. ಹೌದು ಆತ್ಮೀಯರೇ ಇವತ್ತಿನ ಸಂಚಿಕೆಯಲ್ಲಿ ನಾವು ಈ ವಿಚಾರಗಳ ಬಗ್ಗೆ ಗಮನ ಕೊಡೋಣ.

ಹಾಗೆ ಅದನ್ನ ಅರ್ಥಮಾಡಿಕೊಂಡು ಜೀವನ ಪರ್ಯಂತ ಈ ವಿಧಾನದಲ್ಲಿ ಸ್ನಾನ ಮಾಡೋದನ್ನ ನಾವೆಲ್ಲರೂ ಅಭ್ಯಾಸ ಮಾಡೋಣ. ಆತ್ಮೀಯರೇ ಮೊದಲಿಗೆ ಬಚ್ಚಲುಮನೆಗೆ ಹೋಗೋದಕ್ಕೂ ಮುಂಚೆ ನೀರು ಕುಡಿದು ಹೋಗ್ಬೇಕು.

ಸ್ನಾನಕ್ಕೆ ಸಾಮಾನ್ಯವಾಗಿ ನೀವು ಗೂಗಲ್ ಮಾಡಿ ನೋಡಿ ಬಚ್ಚಲುಮನೆಗೆ ಹೋದಾಗ ಹೃದಯಾಘಾತ ಆದಂತಹ ಸಂಖ್ಯೆ ಜಾಸ್ತಿ ಇರುತ್ತೆ. ಕಾರಣ ಏನು ಅಂದ್ರೆ ಒಳಗೆ ಹೋಗ್ತಾರೆ ದಿಡೀರ್ ಅಂತ ತಲೆ ಮೇಲೆ ತಣ್ಣೀರೋ ಬಿಸಿನೀರೋ ಏನೋ ಸುರಿಕೊಂಡು ಬಿಡ್ತಾರೆ.

ತಕ್ಷಣ ಹಾರ್ಮೋನುಗಳ ಅಸಮತೋಲನ ಆಗುತ್ತೆ ಅನೇಕ ರೀತಿಯ ಸಮಸ್ಯೆಗಳಿಗೆ ಒಳಗಾಗ್ತೀವಿ ಹಾಗಾಗಿ ಈ ರೀತಿ ಆಗಬಾರದು ಅಂದ್ರೆ ಮೊದಲು ಯಾವಾಗ್ಲೂ ಒಂದು ಕಪ್ ನೀರು ಕುಡಿದು ಸ್ನಾನಕ್ಕೆ ಹೋಗ್ಬೇಕು.

ಎರಡನೇದು ಬಚ್ಚಲುಮನೆಗೆ ಹೋದಾಗ ಪಾದಕ್ಕೆ ನೀರು ಹಾಕೋಬೇಕು ಮೊದಲು ಅಂದ್ರೆ ಕಾಲಿಗೆ ನೀರು ತಾಗಿದಾಗ ಆ ನೀರು ಬಿಸಿ ಇದಿಯಾ ತಂಪು ಇದಿಯಾ ಅಥವಾ ಬೆಚ್ಚಗೆ ಇದಿಯಾ ಅಂತಕಂತ ಸೂಚನೆ ನೇರವಾಗಿ ನಮ್ಮ ಮೆದುಳಿಗೆ ಸರಬರಾಜ ಆಗುತ್ತೆ.

ಆ ಸೂಚನೆ ನೇರವಾಗಿ ನಮ್ಮ ಮೆದುಳಿಗೆ ಹೋಗುತ್ತೆ ಎಲ್ಲ ಜೀವಕೋಶಗಳಿಗೆ ಆ ಸೂಚನೆ ಸಿಗೋದೇ ಮೆದುಳು ಮುಖಾಂತರ ಹಾಗಾಗಿ ಬಚ್ಚಲುಮನೆಗೆ ಹೋಗ್ತಿದ್ದಂಗೆ ಮೈಮೇಲೆ ನೀರು ಹಾಕೋಬಾರದು ಮೊದಲು ಪಾದದ ಮೇಲೆ ನೀರು ಹಾಕೋಬೇಕು.

ಹಾಗೆ ನೀರನ್ನ ತಗೊಳ್ತೀವಿ ಎರಡನೇದಾಗಿ ನಾವು ಎಡಗಡೆ ಭುಜದ ಮೇಲೆ ಹಾಕೊಳ್ತೀವಿ. ಮೂರನೆಯದಾಗಿ ಬಲಗಡೆ ಭುಜದ ಮೇಲೆ ಹಾಕೊಳ್ತೀವಿ ನಾಲ್ಕನೇದಾಗಿ ನಾವು ತಲೆ ಮೇಲೆ ನೀರನ್ನ ಹಾಕೋಬೇಕು ಅಂದ್ರೆ ಮೊದಲನೇ ಜಗ್ ನೀರನ್ನ ಪಾದದ ಮೇಲೆ ಹಾಕೊಳ್ತೀವಿ.

ಎರಡನೇ ಜಗ್ ನೀರನ್ನ ಎಡಗಡೆ ಭುಜದ ಮೇಲೆ ಹಾಕೊಳ್ತೀವಿ ಮೂರನೇ ಜಗ್ ನೀರನ್ನು ತಗೊಂಡು ಬಲಗಡೆ ಭುಜದ ಮೇಲೆ ಹಾಕೊಳ್ತೀವಿ ನಾಲ್ಕನೇ ಜಗ್ ನೀರು ತಲೆ ಮೇಲೆ ಬರುತ್ತೆ ಈ ರೀತಿ ನಾವು ನೀರನ್ನ ಮೊದಲು ಮೈ ಮೇಲೆ ಹಾಕೋಬೇಕು.

ಯಾಕೆ ಈ ರೀತಿ ಹಾಕೋಬೇಕು ಅಂತ ಅನೇಕ ಜನರು ಕೇಳ್ತಾ ಇರ್ತಾರೆ. ಬೆಳಿಗ್ಗೆ ವಾತಾವರಣ ಯಾವಾಗ್ಲೂ ತಂಪಾಗಿರುತ್ತೆ ತಂಪಾದಾಗ ನಮ್ಮ ದೇಹದಲ್ಲಿ ಉಷ್ಣತೆ ಹೆಚ್ಚಾಗ್ತಾ ಇರುತ್ತೆ. ಅಂದ್ರೆ ನಮ್ಮ ದೇಹದ ಅರ್ಧ ಭಾಗ ಉಷ್ಣ ದೇಹದ ಎಡಭಾಗ ತಂಪು ಇರುತ್ತೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.

By god