ಆ್ಯಂಕರ್ ದಿವ್ಯ ವಸಂತ ಅರೆಸ್ಟ್ ಕೇರಳದಲ್ಲಿ ಅಡಗಿ ಕೂತಿದ್ದ ದಿವ್ಯ… ಒಮ್ಮೊಮ್ಮೆ ಎಂತಹ ಪರಿಸ್ಥಿತಿ ಬರುತ್ತದೆ ಎನ್ನುವುದಕ್ಕೆ ಈ ಕಥೆಯೇ ಉತ್ತಮ ಉದಾಹರಣೆಯಾಗಿದೆ ಇಷ್ಟು ದಿನ ಬೇರೆಯವರ ಸುದ್ದಿಯನ್ನ ವಾಚಿಸುತ್ತಾ ಇದ್ದಂತಹ ನಿರೂಪಕಿ ಇದೀಗ ತಾನೇ ಸುದ್ದಿ ಆಗುವಂತಹ ಪ್ರಸಂಗ ಎದುರಾಗಿ ಬಿಟ್ಟಿದೆ ಅದು ಕೂಡ ಮಾಡಿದಂತಹ ತಪ್ಪಿಗೆ ಅನುರೂಪಕಿ ಬೇರೆ ಯಾರು ಅಲ್ಲ ಖಾಸಗಿ ವಾಹಿನಿಯಲ್ಲಿ ನಿರೂಪಕಿ ಜೊತೆಗೆ ಟಿವಿಯಲ್ಲಿ ಸೆಲೆಬ್ರಿಟಿ ಆಗಿದಅಂತ ದಿವ್ಯ ವಸಂತ.
ಬ್ಲ್ಯಾಕ್ಮೇಲ್ ಸಂಬಂಧಕ್ಕೆ ಸಂಬಂಧಿಸಿದಂತೆ ಪೊಲೀಸರು ತೀರ ಹುಡುಕಾಟವನ್ನು ಮಾಡುತ್ತಿದ್ದರು ಆದರೆ ದಿವ್ಯ ವಸಂತ ಪೊಲೀಸರಿಗೆ ಚಳ್ಳೆಹಣ್ಣನ್ನು ತಿನಿಸುತ್ತಾ ಒಂದು ಕಡೆಯಿಂದ ಮತ್ತೊಂದು ಕಡೆಗೆ ಎಸ್ಕೇಪ್ ಆಗುತ್ತಾ ಇದ್ದರು ಕೊನೆಗೂ ದಿವ್ಯ ವಸಂತ ಅವರನ್ನು ರೆಸ್ಟ್ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಏನು ಪ್ರಕರಣ ಏನೆಲ್ಲ ನಡೆಯುತ್ತಿದೆ ಎನ್ನುವುದನ್ನು ಗಮನಿಸುತ್ತಾ ಹೋಗೋಣ.
ಏಕೆಂದರೆ ಮಾಧ್ಯಮದವರಾಗಿ ಬೇರೆಯವರ ಹುಳುಕು ಬೇರೆಯವರ ಸಮಸ್ಯೆ ಇವೆಲ್ಲವನ್ನೂ ಕೂಡ ಪ್ರಸಾರ ಮಾಡುವ ಜೊತೆ ಜೊತೆಗೆ ನಮ್ಮ ಕ್ಷೇತ್ರದಲ್ಲಿ ಏನಾದರೂ ಇಂತಹ ಸಮಸ್ಯೆಗಳು ಆದಾಗ ನಮ್ಮ ಕ್ಷೇತ್ರದಲ್ಲಿ ಏನಾದರೂ ತಪ್ಪುಗಳು ಆದಂತಹ ಸಂದರ್ಭದಲ್ಲಿ ಅದನ್ನು ಕೂಡ ಜನರ ಮುಂದೆ ಇಡಬೇಕಾಗುತ್ತದೆ ಏಕೆಂದರೆ ಮಾಧ್ಯಮದವರು ಎಂದರೆ ಮೇಲಿಂದ ಕೆಳಗಡೆ ಹಿಡಿದು ಬಂದಂತವರಲ್ಲ ಬೃಹಸ್ಪತಿಗಳಲ್ಲ.
ವಿಶ್ವ ಶ್ರೇಷ್ಠರಲ್ಲ ಅಥವಾ ಇನ್ನೊಂದು ಮತ್ತೊಂದು ಅಲ್ಲ ಹೀಗಾಗಿ ಮಾಧ್ಯಮದವರು ಕೂಡ ತಪ್ಪು ಮಾಡಿದಂತಹ ಸಂದರ್ಭದಲ್ಲಿ ಕೂಡ ಸಾರ್ವಜನಿಕರಿಗೂ ಗೊತ್ತಾಗಬೇಕಾಗುತ್ತದೆ ಸಾರ್ವಜನಿಕರು ತಿಳಿದುಕೊಂಡು ಎಚ್ಚೆತ್ತುಕೊಳ್ಳಬೇಕಾಗುತ್ತದೆ ಏಕೆಂದರೆ ಇತ್ತೀಚಿಗೆ ಮಾಧ್ಯಮಗಳ ಹೆಸರಿನಲ್ಲಿ ಬ್ಲಾಕ್ಮೇಲ್ ಪ್ರಕರಣಗಳು ಹೆಚ್ಚಾಗುತ್ತಾ ಇದೆ.
ನಾವು ಮಾಧ್ಯಮದವರು ಏನು ಬೇಕಾದರೂ ಮಾಡಬಹುದು ಎನ್ನುವವರ ಮನಸ್ಥಿತಿ ಸಂಖ್ಯೆ ಕೂಡ ಜಾಸ್ತಿ ಆಗುತ್ತಇದೆ ಹೀಗಾಗಿ ಇಂತಹ ಪ್ರಕರಣಗಳನ್ನು ಸಾರ್ವಜನಿಕರಿಗೆ ತಿಳಿಸುವುದು ಸಾರ್ವಜನಿಕರ ಮುಂದೆ ಇಟ್ಟು ಸಾರ್ವಜನಿಕರು ಜಾಗೃತರಾಗುವಂತೆ ಮಾಡಬೇಕು ಜೊತೆಗೆ ಇಂಥವರು ಎಲ್ಲರೂ ಕೂಡ ಮಾಧ್ಯಮಕ್ಕೆ ಕಳಂಕ ಮಾಧ್ಯಮಕ್ಕೆ ಕಪ್ಪು ಚುಕ್ಕಿ ಎಂದರು ಕೂಡ ತಪ್ಪಾಗುವುದಿಲ್ಲ.
ಅದೆಷ್ಟೋ ಮಂದಿ ಮಾಧ್ಯಮ ಎಂದಾಗ ದೇವರ ರೀತಿಯಲ್ಲಿ ಪೂಜಿಸುವಂತವರು ಕೂಡ ಇದ್ದಾರೆ ಅಷ್ಟೇ ಪ್ರಾಮಾಣಿಕವಾಗಿ
ನಿಷ್ಠೆಯಿಂದ ಕಾರ್ಯನಿರ್ವಹಿಸುವವರು ಕೂಡ ಇದ್ದಾರೆ ಅಂಥವರ ಎಲ್ಲರ ಹೆಸರನ್ನ ಹಾಳು ಮಾಡುವುದಕ್ಕೆ ಇಂತಹ ಒಂದಷ್ಟು ಮಂದಿ ಸಾಕು ಏನು ಪ್ರಕರಣ ಎನ್ನುವುದನ್ನು ಮೊದಲಿಗೆ ಗಮನಿಸೋಣ ಅದಾದ ಬಳಿಕ ಉಳಿದ ವಿಚಾರವನ್ನು ನೋಡೋಣ.
ಮೊದಲಿಗೆ ಈಗಿನ ಅಪ್ಡೇಟ್ ಗಮನಿಸುವುದಾದರೆ ಬೆಂಗಳೂರಿನಿಂದ ದಿವ್ಯ ವಸಂತ ರಾತ್ರೋರಾತ್ರಿ ಎಸ್ಕೇಪ್ ಆಗಿರುತ್ತಾರೆ ತನ್ನ ಮನೆಯಲ್ಲಿ ಅಂದರೆ ಲಗ್ಗೆರೆಯಲ್ಲಿರುವಂತಹ ತನ್ನ ಮನೆಯಲ್ಲಿ ಲ್ಯಾಪ್ಟಾಪ್ ನಿಂದ ಹಿಡಿದು ಕ್ಯಾಮೆರಾ ಇಂದ ಹಿಡಿದು ಏನೇನು ಬೇಕು ಅದೆಲ್ಲವನ್ನು ಕೂಡ ತೆಗೆದುಕೊಂಡು ಕಾರಿನಲ್ಲಿ ಎಸ್ಕೇಪ್ ಆಗಿದ್ದಾರೆ ಪೊಲೀಸರು ನೇರವಾಗಿ ಲಗ್ಗೆರೆ ಮನೆಗೆ ಹೋಗುತ್ತಾರೆ.
ಮನೆಯ ಮೇಲೆ ದಾಳಿ ಮಾಡುತ್ತಾರೆ ಅಲ್ಲಿ ತಮ್ಮ ಕೈಗೆ ಏನೇನು ಸಿಗುತ್ತದೆ ಅದನ್ನೆಲ್ಲವನ್ನು ಕೂಡ ವಶಕ್ಕೆ ಪಡೆದುಕೊಳ್ಳುತ್ತಾರೆ ಸಾಕ್ಷಿಗೆ ಬೇಕಾಗುತ್ತದೆ ಎನ್ನುವಂತಹ ಕಾರಣದಿಂದಾಗಿ ಆ ಸಮಯದಲ್ಲಿ ಅವರ ತಾಯಿ ಕಣ್ಣೀರನ್ನು ಹಾಕುತ್ತಾರಂತೆ ಮಗಳನ್ನು ತುಂಬಾ ಕಷ್ಟಪಟ್ಟು ಸಾಕಿ ಬೆಳೆಸಿದೆ ಆದರೆ ಹೀಗೆ ಆಗಿ ಹೋಯ್ತಲ್ಲ ಎನ್ನುವ ರೀತಿಯಲ್ಲಿ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.