ಇಂದು ದರ್ಶನ್ ಅಂದು ವಿಷ್ಣುವರ್ಧನ್ ಆ ಗುಂಪಿಗೆ ಟಾರ್ಗೆಟ್ – ಅಂದು ಅಳುತ್ತಾ ನಿಂತಿದ್ದ ವಿಷ್ಣು…. ನಾವೆಲ್ಲರೂ ಕೂಡ ನಟ ದರ್ಶನ ಅವರ ಮೇಲೆ ಚಪ್ಪಲಿ ಎಸೆದಿರುವಂತಹ ವಿಷಯ ಕುರಿತಾಗಿ ಚರ್ಚೆ ಮಾಡುತ್ತಿದ್ದೇವೆ ಇದೇ ಸಂದರ್ಭದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಬೇರೆ ಬೇರೆ ಕಡೆಗಳಲ್ಲಿ ಒಂದು ವಿಚಾರ ವೈರಲ್ ಆಗುತ್ತಿದೆ ಇವತ್ತು ನಟ ದರ್ಶನ್ ಆದರೆ ಅವತ್ತು.
ದಾದಾ ವಿಷ್ಣುವರ್ಧನ್ ಎಂದು ಸದ್ಯ ದರ್ಶನ ಅವರನ್ನು ಟಾರ್ಗೆಟ್ ಮಾಡಲಾಗಿದೆ ಎನ್ನುವಂತಹ ಚರ್ಚೆ ನಡೆಯುತ್ತಿದೆ ಅದನ್ನು ಸ್ವಲ್ಪ ಪಕ್ಕಕ್ಕಿಟ್ಟು ಇದೀಗ ನಮ್ಮೆಲ್ಲರ ಪ್ರೀತಿಯ ಸಾಹಸ ಸಿಂಹ ದಾದಾ ವಿಷ್ಣುವರ್ಧನ್ ಅವರಿಗೆ ಕೊಟ್ಟ ಕಾಟದ ಬಗ್ಗೆ ಒಂದಷ್ಟು ವಿಚಾರಗಳನ್ನು ನಿಮ್ಮ ಮುಂದೆ ಇಡಲೇಬೇಕು. ನಮ್ಮ ದಾದನಿಗೆ ಕೊಟ್ಟಂತಹ ಕಾಟವನ್ನು ಬೇರೆ ಯಾವುದೇ ನಟನಿಗೆ.
ಕೊಟ್ಟಿದ್ದರು ಸಿನಿಮಾ ಇಂಡಸ್ಟ್ರಿಯಲ್ಲಿ ಉಳಿದುಕೊಳ್ಳಲು ಸಾಧ್ಯವೇ ಆಗುತ್ತಿರಲಿಲ್ಲ ಒಂದು ಹಂತಕ್ಕೆ ವಿಷ್ಣುವರ್ಧನ್ ಕೂಡ ಸಿನಿಮಾ ಇಂಡಸ್ಟ್ರಿಗೆ ಗುಡ್ ಬೈ ಹೇಳಿದ್ದರು ಈ ಬಂಧನ ಸಿನಿಮಾ ಸಂದರ್ಭದಲ್ಲಿ ಆದರೆ ಬಂಧನ ಸಿನಿಮಾ ಹಿಟ್ ಆಗುತ್ತಿದ್ದ ಹಾಗೆ ಅಭಿಮಾನಿಗಳು ತುಂಬಾ ಪ್ರೀತಿಯನ್ನು ಕೊಟ್ಟರು ವಿಷ್ಣುವರ್ಧನ್ ನಾನು ಯಾವತ್ತು ನಿಮ್ಮನ್ನು ಬಿಟ್ಟು ಹೋಗುವುದಿಲ್ಲ.
ಎಂದು ಹೇಳಿ ವಾಪಸ್ ಬಂದರು ಹಾಗಾದರೆ ಅನುಭವಿಸಿದಂತಹ ಸಂಕಷ್ಟಗಳು ಏನು ಎಂದು ಒಂದೊಂದಾಗಿ ಹೇಳುತ್ತಾ ಹೋಗುತ್ತೇನೆ,ನಿಜವಾದ ವಿಷ್ಣು ಅಭಿಮಾನಿಗಳಿಗೆ ಕಣ್ಣೀರು ಬರುತ್ತದೆ ವಿಷ್ಣುವರ್ಧನ್ ನಾಗರಹಾವು ಸಿನಿಮಾ ಮೂಲಕ ತುಂಬಾ ಚಿಕ್ಕ ವಯಸ್ಸಿಗೆ 22 ರಿಂದ 23 ವರ್ಷಕ್ಕೆ ಸೂಪರ್ ಸ್ಟಾರ್ ಪಟ್ಟವನ್ನು ಗಳಿಸಿಕೊಂಡರು ಮೊದಲ ಸಿನಿಮಾವೇ 100 ಡೇಸ್.
ಆಗುತ್ತದೆ ಇಡೀ ಕರ್ನಾಟಕದಾದ್ಯಂತ ಸಿನಿಮಾ ಸದ್ದು ಮಾಡುತ್ತದೆ ಆಗಲೇ ಒಂದಷ್ಟು ವಿಕೃತ ಮನಸುಗಳಿಗೆ ವಿಷ್ಣುವರ್ಧನ್ ಅವರನ್ನು ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ ಈತ ಏನೋ ಒಂದನ್ನು ಮಾಡಿಬಿಡುತ್ತಾನೆ ಎಂದು ಒಂದಿಷ್ಟು ಜನಗಳಿಗೆ ಅನಿಸಲು ಶುರುವಾಗುತ್ತದೆ ಹೀಗಾಗಿ ವಿಷ್ಣುವರ್ಧನ್ ಅವರಿಗೆ ಮೊದಲ ಕಲ್ಲು ಬಿದ್ದಿದ್ದು ಈ ನಾಗರಹಾವು ಸಿನಿಮಾದ 100 ಡೇ.
ಸಂಭ್ರಮಾಚರಣೆಯ ಸಂದರ್ಭದಲ್ಲಿ ಮೊದಲ ಬಾರಿಗೆ ಅವರ ಹಣೆಗೆ ಕಲ್ಲೊಂದು ತಾಗುತ್ತದೆ ಆದರೆ ವಿಷ್ಣುವರ್ಧನ್ ಅದನ್ನು ತೀರ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ ಯಾರೋ ಅಭಿಮಾನಿಗಳು ಏನೋ ತಪ್ಪಾಗಿ ಈ ರೀತಿ ಕಲ್ಲನ್ನು ತೂರಿರಬಹುದು ಎಂದು ಸುಮ್ಮನೆ ಆದರೂ, ಆದರೆ ವಿಷ್ಣುವರ್ಧನ್ ತಮ್ಮ ಜೀವನದಲ್ಲಿ ಮೊದಲು ಮಾಡಿದಂತಹ.
ತಪ್ಪು ಏನೆಂದರೆ ಗಂಧದ ಗುಡಿ ಸಿನಿಮಾ ಗೆ ವಿಲನ್ ಆಗಿ ಅಭಿನಯಿಸಲು ಒಪ್ಪಿಕೊಂಡಿದ್ದು ಯಾಕೆ ವಿಲನ್ ಆಗಿ ಅಭಿನಯಿಸಲು ಒಪ್ಪಿಕೊಂಡರು ಎಂದರೆ ವಿಷ್ಣುವರ್ಧನ್ ಅವರು ಡಾಕ್ಟರ್ ರಾಜಕುಮಾರ್ ಅವರ ದೊಡ್ಡ ಅಭಿಮಾನಿ ಅವರು ಯಾವಾಗಲೂ ಕೂಡ ಹೇಳುತ್ತಿದ್ದರಂತೆ ಅಣ್ಣಾವ್ರ ಆಕ್ಟಿಂಗ್ ಆಗಿರಬಹುದು ಅಣ್ಣಾವರ ದೇಹ ಆಗಿರಬಹುದು.
ಅಣ್ಣಾವ್ರಿಗೆ ಇರುವಂತಹ ಸ್ಟೈಲ್ ಆಗಿರಬಹುದು. ಇವೆಲ್ಲವೂ ನನಗೆ ವಿಪರೀತವಾಗಿ ಇಷ್ಟ ಎಂದು ಯಾವಾಗ ಗಂಧದಗುಡಿ ಸಿನಿಮಾದಲ್ಲಿ ವಿಲನ್ ಆಗಿ ಆಫರ್ ಬರುತ್ತದೆಯೋ ಆಗ ಹಿಂದೆ ಮುಂದೆ ನೋಡದೆ ವಿಷ್ಣುವರ್ಧನ್ ಅವರು ಒಪ್ಪಿಕೊಂಡು ಬಿಡುತ್ತಾರೆ ಯಾರಾದರೂ ಒಪ್ಪಿಕೊಳ್ಳುತ್ತಿರಲಿಲ್ಲ ನಾನು ಹೇಳುತ್ತೇನೆ.
ಏಕೆಂದರೆ ನಾಗರಹಾವು ಸಿನಿಮಾದಲ್ಲಿ ಸೂಪರ್ ಸ್ಟಾರ್ ಪಟ್ಟವನ್ನು ಗಿಟ್ಟಿಸಿಕೊಂಡವರು ಮೊದಲ ಸಿನಿಮಾ ಅವೇ ಸೂಪರ್ ಹಿಟ್ ಆದವರು ಎರಡನೇ ಸಿನಿಮಾದಲ್ಲಿ ವಿಲನ್ ಆಗಿ ಮಾಡಲು ಒಪ್ಪಿಕೊಳ್ಳುತ್ತಾರಾ ಆದರೆ ಅಣ್ಣಾವ್ರ ಮೇಲಿನ ವಿಪರೀತ ಗೌರವಕ್ಕೆ ವಿಷ್ಣುವರ್ಧನ್ ಅವರು ಒಪ್ಪಿಕೊಂಡು ಬಿಡುತ್ತಾರೆ ಆದರೆ ಶೂಟಿಂಗ್ ಸಂದರ್ಭದಲ್ಲಿ ಒಂದು ಘಟನೆ ನಡೆಯುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ