ನೀವೆಲ್ಲ ಪುರಾತನ ದೇವಸ್ಥಾನಗಳ ವಾಸ್ತು ಶಿಲ್ಪ ಕೆತ್ತನೆಗಳನ್ನ ನೋಡಿರ್ತೀರ. ಒಂದೊಂದು ಕೆತ್ತನೆಯೂ ಮನಮೋಹಕ ಅಷ್ಟು ಪರ್ಫೆಕ್ಟ್ ಆಗಿರುತ್ತೆ. ಅದರಲ್ಲೂ ನಮ್ಮ ಬೇಲೂರು ಹಳೇ ಬೀಡು, ಹಂಪಿಯಲ್ಲಿನ ಕಲ್ಲಿನ ಕೆತ್ತನೆಗಳು ಪ್ರವಾಸಿಗರನ್ನ ಕೈಬೀಸಿ ಕರೆಯುತ್ತವೆ. ಆದರೆ ಅದೇ ಕೆತ್ತನೆಯಲ್ಲಿ ಯೋಗ ಭಂಗಿಗಳ ಕೆತ್ತನೆಯನ್ನು ನೀವು ನೋಡಿರಬಹುದು. ಆದರೆ ದೇವಸ್ಥಾನಗಳಲ್ಲಿ ಇಂತಹ ಕೆತ್ತನೆಗಳು ಯಾಕೆ? ಅದು ಅಸಹ್ಯ ಅಂತೆಲ್ಲ ಕೆಲವರು ಹೇಳುತ್ತಾರೆ. ಆದರೆ ಈ ಕೆತ್ತನೆಗೆ ಒಂದು ಬಲವಾದ ಕಾರಣ ಇದೆ. ಅದೇನು ಅಂತ ಈ ಲೇಖನದಲ್ಲಿ ನೋಡೋಣ.
ನಮ್ಮ ದೇಶದಲ್ಲಿ ಸಾವಿರಾರು ದೇವಾಲಯಗಳಿವೆ. ಒಂದೊಂದು ದೇವಾಲಯವು ತನ್ನದೇ ಆದ ರಹಸ್ಯವನ್ನು ಬಚ್ಚಿಟ್ಟುಕೊಂಡಿದೆ. ಒಂದೊಂದು ದೇವಾಲಯಕ್ಕೂ ಅದರದೇ ಆದ ಇತಿಹಾಸ ಇದೆ. ಇಂದಿಗೂ ಕೂಡ ಸಾವಿರಾರು ವರ್ಷಗಳ ಹಿಂದೆ ಕೆತ್ತನೆ ಮಾಡಲಾದ ದೇವಾಲಯಗಳು ಟೂರಿಸ್ಟ್ ಪ್ಲೇಸ್ ಗಳಾಗಿವೆ. ಪ್ರತಿದಿನ ಸಾಕಷ್ಟು ಮಂದಿ ಇಂತಹ ದೇವಾಲಯಗಳಿಗೆ ಭೇಟಿ ಕೊಡ್ತಾನೇ ಇರ್ತಾರೆ. ಅವುಗಳಲ್ಲಿ ಕೆಲವು ದೇವಾಲಯ ಕಾಮ ಪ್ರಚೋದನೆಯ ಕೆತ್ತನೆಗಳು ಇರುತ್ತವೆ. ಅದೆಷ್ಟೋ ಜನರಿಗೆ ಈ ದೇವಾಲಯಕ್ಕೆ ಫ್ಯಾಮಿಲಿಗಳನ್ನ ಕರ್ಕೊಂಡು ಹೋಗುವುದಕ್ಕೆ ಮುಜುಗರ ಪಡ್ತಾರೆ. ಯಾಕಂದ್ರೆ ಈ ರೀತಿಯಾಗಿ ಚಿತ್ರದ ಭಂಗಿಗಳನ್ನ ಕೆತ್ತನೆ ಮಾಡಲಾಗಿದೆ.
ಬಾದಾಮಿ ಚಾಲುಕ್ಯರ ಕಾಲದಲ್ಲಿ ಇಂತಹ ವಿದಿತ ಕೆತ್ತನೆಯನ್ನು ಕಂಬದೊಳಗೆ ಮಾಡಿದ್ರು. ವಾಸ್ತು ಶಿಲ್ಪ ಶಾಸ್ತ್ರದ ಅಧ್ಯಯನದ ಪ್ರಕಾರ ಒಂದು ದೇವಾಲಯದ ರಚನೆ ಆಗ ಬೇಕಂದ್ರೆ 64 ಭಾಗಗಳು ಅಂದರೆ 64 ವಿದ್ಯೆಗಳು ಬಹಳ ಮುಖ್ಯ. ಸಾಮಾನ್ಯವಾಗಿ ಹಿಂದೆ ನಡೆದ ಹಾಗೂ ಕೆಲ ಕಥೆಗಳನ್ನ ಜನರಿಗೆ ತಿಳಿಸುವ ಸಲುವಾಗಿ ಹಿಂದಿನ ಕಾಲದಲ್ಲಿ ಕಲ್ಲಿನ ಮೇಲೆ ಕೆತ್ತನೆ ಮಾಡಲಾಗ್ತಾಯಿತ್ತು. ಚಿತ್ರಗಳ ಕೆತ್ತನೆಯ ನೋಡಿದ್ರೆ ಸಾಕು ಹಿಂದೆ ಏನಾಗಿತ್ತು ಅನ್ನೋದು ತಿಳಿದಿತ್ತು. ಇದೇ ಕಾರಣಕ್ಕೆ ಆಗಿನ ಕಾಲದಲ್ಲಿ ವಾಸ್ತುಶಿಲ್ಪಿಗಳಿಗೆ ಹೆಚ್ಚಿನ ಮಹತ್ವ ನೀಡಲಾಗ್ತಾ ಇತ್ತು. ಈ 64 ವಿದ್ಯೆಗಳಲ್ಲಿ ಮೈಥುನ ಅನ್ನೋದು.
ಕೂಡ ಒಂದು ಅಂದರೆ ಕೆತ್ತನೆ ಕೂಡ ಒಂದು. ಮಾನವನ ಬೆಳವಣಿಗೆ ಹೊಂದುವುದಕ್ಕೆ ದೇವಾಲಯಗಳಲ್ಲಿ ಆದ ಭಂಗಿಗಳ ಕೆತ್ತನೆ ಮಾಡಲಾಗ್ತಾಯಿತ್ತು. ಸಿಂಪಲ್ಲಾಗಿ ಹೇಳೋದಾದ್ರೆ ಅದ್ರ ಮೇಲೆ ಆಸಕ್ತಿ ಬರೀಸುವ ಸಲುವಾಗಿಯೇ ಈ ರೀತಿಯ ಕೆತ್ತನೆ ಮಾಡಲಾಗ್ತಾಯಿತ್ತು. ನಿಮಗೆಲ್ಲಾ ಗೊತ್ತಿರೋ ಹಾಗೆ ಅದರ ಬಗ್ಗೆ ಮುಕ್ತವಾಗಿ ಮಾತನಾಡಲು ಜನ ಹಿಂದೇಟು ಹಾಕುತ್ತಾರೆ. ಈಗಲೂ ಸಹ ಹಳ್ಳಿಗಳಲ್ಲಿ ಅನ್ನೋದು ತುಂಬಾ ಕೆಟ್ಟದು ಅಂತ ತಿಳ್ಕೊಂಡಿದ್ದಾರೆ. ಅದರ ಬಗ್ಗೆ ಹೆಚ್ಚಾಗಿ ಯಾರು ಮಾತಾಡೋದು ಇಲ್ಲ. ಈಗಲೇ ಹೀಗೆ ಅಂದ್ರೆ ಇನ್ನೂ ಹಿಂದಿನ ಕಾಲದಲ್ಲಿ ಅದೆಷ್ಟು ಮಡಿವಂತಿಕೆ ಇತ್ತು ಅಂತ ಒಮ್ಮೆ ನೀವೇ ಯೋಚನೆ ಮಾಡಿ ನೋಡಿ. ಇದೇ ಕಾರಣಕ್ಕೆ ಆಗಿನ ಕಾಲದಲ್ಲಿ ಅದರ ಬಗ್ಗೆ ಶಿಕ್ಷಣ ಕೊಡೋ ಸಲುವಾಗಿ ಈ ರೀತಿಯಾಗಿ ಪ್ರಚೋದಿತ ಭಂಗಿಯನ್ನ ಕೆತ್ತನೆ ಮಾಡಲಾಗ್ತಾಯಿತ್ತು.
ಹಳ್ಳಿಗಳಲ್ಲಿ ಹೊಸದಾಗಿ ಮದುವೆ ಮಾಡಿದಾಗ ಅವರನ್ನ ಪ್ರಸ್ತಕ್ಕೂ ಮುನ್ನ ದೇವಸ್ಥಾನಕ್ಕೆ ಹೋಗಿ ಬರುವುದಕ್ಕೆ ಹೇಳ್ತಾರೆ. ಅದು ಯಾಕಂದ್ರೆ ಆಲಯಗಳಲ್ಲಿ ಅಂತಹ ಭಂಗಿಗಳ ಕೆತ್ತನೆ ಮಾಡಲಾಗಿರುತ್ತೆ. ನವ ದಂಪತಿಗಳು ಅವುಗಳನ್ನ ನೋಡ್ಬೇಕು ನೋಡಿ ಉತ್ತೇಜನ ಪಡೆದುಕೊಳ್ಳಬೇಕು. ಈ ಮೂಲಕ ತಮ್ಮ ಸಂಸಾರಿಕ ಜೀವನವನ್ನ ಸಾಗಿಸಬೇಕು ಅಂತ ಈ ರೀತಿಯ ಕೆತ್ತನೆಗಳನ್ನು ಮಾಡುತ್ತಿದ್ದರು. ಆದರೆ ಈಗಂತೂ ಅಂಗೈಯಲ್ಲೇ ಪ್ರಪಂಚ ಇದೆ. ಮೊಬೈಲ್ ಫೋನ್ ಮಾಡಿ ಬೇಕಾದದ್ದನ್ನೆಲ್ಲ ನೋಡಿ ಕಳೀತಾರೆ. ಆದ್ರೆ ಆಗಿನ ಕಾಲದಲ್ಲಿ ಅಂತಹ ಯಾವುದು ಇರಲಿಲ್ಲ. ಮುಕ್ತವಾಗಿ ಮಾತನಾಡಿದ್ದು ಕೂಡ ಅಕ್ಷಮ್ಯ ಅಪರಾಧ ಅಂತ ಭಾವಿಸಿದ್ದರು. ಇದೇ ಕಾರಣಕ್ಕೆ ಇಂಥ ಭಂಗಿಗಳನ್ನ ನೋಡಿ ಮನುಷ್ಯ ಮಾಡೋದು ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.