ಈ ರೀತಿ ಪಟ್ಟಿ ಮಾಡಿದ್ರೆ ಹಬ್ಬದ ದಿನ ಯಾವ ವಸ್ತುಗಳನ್ನು ನೀವು ಮಿಸ್ ಮಾಡೊಲ್ಲ.. ವರಮಹಾಲಕ್ಷ್ಮಿ ಹಬ್ಬಕ್ಕೆ ಬೇಕಾಗುವ ಪೂಜಾ ಸಾಮಾಗ್ರಿಗಳು
ಎಲ್ಲರಿಗೂ ನಮಸ್ತೆ ನಾನು ಇವಾಗ ಆಗ್ಲೇನೇ ವರಮಹಾಲಕ್ಷ್ಮಿ ಹಬ್ಬಕ್ಕೆ ಯಾವ ರೀತಿ ನಾವು ಹಬ್ಬನ ಮಾಡಬೇಕು ಮತ್ತೆ ಕಳಸ ಪ್ರತಿಷ್ಠಾಪನೆನ ಯಾವ ರೀತಿ ಮಾಡಬೇಕು ಅನ್ನೋ ವಿಡಿಯೋನ ಹಾಕಿದೀನಿ.
ಅದಕ್ಕೆ ನಿಮ್ಮೆಲ್ಲರಿಂದ ತುಂಬಾ ಒಳ್ಳೆ ರೆಸ್ಪಾನ್ಸ್ ಬಂದಿದೆ ಅದಕ್ಕೆ ತುಂಬಾ ಥ್ಯಾಂಕ್ಸ್ ಇವಾಗ ಏನಂದ್ರೆ ಮೊದಲನೇ ಸಲ ಹಬ್ಬ ಮಾಡ್ತಿರೋವರು ಆಗಿರಬಹುದು ಇಲ್ಲ ಮುಂಚೆಯಿಂದ ಮಾಡ್ಕೊಂಡು ಬಂದಿರುವರು ಆಗಿರಬಹುದು.
ಕೆಲವೊಂದು ಸಲ ಕೆಲವೊಂದು ಸಾಮಾನನ್ನ ನಾವು ಮರೆಯುವಂತಹ ಚಾನ್ಸಸ್ ಇರುತ್ತೆ ಸೋ ಇವಾಗ ನಾನು ಒಂದು ಲಿಸ್ಟ್ ಮಾಡಿದೀನಿ ಅಂದ್ರೆ ಇವಾಗ ಪೂಜೆ ಸಾಮಾನುಗಳು ಯಾವುದು ಬೇಕಾಗುತ್ತೆ.
ಹಣ್ಣುಗಳು ಹೂವಗಳು ಕಳಸಕ್ಕೆ ಹಾಕುವಂತಹ ಸಾಮಾನು ಅದು ಆಮೇಲೆ ದೇವಿ ಅಲಂಕಾರಕ್ಕೆ ನಮಗೆ ಏನೇನು ಬೇಕಾಗುತ್ತೆ ಇದೆಲ್ಲದನ್ನು ನಾನು ಒಂದು ಲಿಸ್ಟ್ ಮಾಡ್ಕೊಂಡಿದೀನಿ ಅದು ಯಾವುದು ಯಾವುದು ಅಂತ ನಾನು ಇವಾಗ ಹೇಳ್ತಾ ಹೋಗ್ತೀನಿ.
ನೀವು ಬೇಕು ಅಂತ ಅಂದ್ರೆ ನೀವು ಒಂದು ಕಡೆ ಲಿಸ್ಟ್ ಮಾಡ್ಕೊಂಡು ಇಟ್ಕೊಳಿ ಸೋ ದಟ್ ನೀವು ಹಬ್ಬದ ದಿನ ಯಾವುದನ್ನು ಮರೆಯೋದಿಲ್ಲ ಸೊ ಇವಾಗ ಮೊದಲಿಗೆ ನಾವು ಪೂಜೆ ಸಾಮಾನನ್ನ ನಾವು ಯಾವುದು ಯಾವುದನ್ನೆಲ್ಲ ತಂದು ಇಟ್ಕೋಬೇಕು ಅಂತ ನೋಡೋಣ.
ಸೋ ಈ ತರದ್ದು ಮಣೆಯನ್ನು ತಗೊಂಡು ಇಟ್ಕೊಳಿ ನಾನು ಮೊದಲೇ ಹೇಳಿದ್ನಲ್ಲ ಈ ತರದಾದರೂ ಆಯ್ತು ಈ ತರದಾದರೂ ಆಯ್ತು ಇವೆರಡರಲ್ಲಿ ಯಾವುದು ಇರುತ್ತೆ ಅದನ್ನ ನೀವು ತೆಗೆದು ಇಟ್ಕೊಳ್ಳಿ ಯಾಕಂದ್ರೆ ಕಳಸ ಪ್ರತಿಷ್ಠೆ ಸ್ಥಾಪನೆ ಮಾಡೋದು.
ನಾವು ಇದರಿಂದ ಆಮೇಲೆ ನೋಡಿ ಈ ತರದ್ದು ಎರಡು ಕಬ್ಬಿಣದ ಸ್ಟ್ಯಾಂಡ್ ಸಿಗುತ್ತೆ ಇದು ಏನಕ್ಕೆ ಅಂತ ಅಂದ್ರೆ ನಾನು ಪೀಠ ಸ್ಥಾಪನೆ ಮಾಡಬೇಕು ಅಂತ ಹೇಳಿದ್ನಲ್ಲ ಸೋ ಇದು ಬಾಳೆದಿಂಡಿನ ಸಿಕ್ಸೋದಕ್ಕೆ ಈಸಿ ಆಗುತ್ತೆ.
ಅಂತ ಇದು ನಿಮಗೆ ಹಬ್ಬದ ಟೈಮಲ್ಲಿ ಎಲ್ಲಾ ಕಡೆನೂ ಸಿಗುತ್ತೆ ಇಲ್ಲ ನಿಮಗೆ ಅಮೆಜಾನ್ ಅಲ್ಲಿ ಆನ್ಲೈನ್ ಅಲ್ಲಿ ಕೂಡ ಸಿಗುತ್ತೆ ಸೋ ಇದೆರಡನ್ನು ರೆಡಿ ಮಾಡಿ ಇಟ್ಕೊಳಿ ಇದಾದ್ಮೇಲೆ ಅರಿಶಿನ ಕುಂಕುಮ ಬೇಕು ನೀವು ಇವಾಗ ಪ್ಯಾಕೆಟ್ ಅಲ್ಲಿ ತಗೊಳ್ಳೋದಾದ್ರೆ ಸಪರೇಟ್ ಸಪರೇಟ್ ಎರಡು ಪ್ಯಾಕೆಟ್ ತಗೊಳ್ಳಿ.
ಯಾಕಂದ್ರೆ ನೀವು ದೇವರಿಗೆ ಅರಿಶಿನ ಕುಂಕುಮ ಏನು ಹಾಕ್ತಿರಲ್ಲ ಅದನ್ನ ನೀವು ಯೂಸ್ ಮಾಡಿಕೊಳ್ಳೋಕೆ ಆಗ್ಲಿ ಇಲ್ಲ ಮುತ್ತೈದೆ ದೇವರು ಬಂದು ಬಂದಾಗ ಭಾಗನ ಎಲ್ಲ ಕೊಡ್ತೀರಲ್ಲ ಅವಾಗ ಯೂಸ್ ಮಾಡಬಾರದು ಹಾಗಾಗಿ ಸಪರೇಟ್ ಎರಡು ಅರಿಶಿನ ಕುಂಕುಮದ ಪ್ಯಾಕೆಟ್ ಗಳನ್ನ ಸಪರೇಟ್ ಆಗಿ ಇಟ್ಕೊಳಿ.
ಅದರ ಜೊತೆಗೆ ಪಚ್ಚ ಕರ್ಪೂರ ಬೇಕಾಗುತ್ತೆ ಆರತಿ ಮಾಡೋದಕ್ಕೆ ಸಾಂಬ್ರಾಣಿ ನಿಮ್ಮ ಮನೇಲಿ ಧೂಪ ಹಾಕೋ ಪದ್ಧತಿ ಇದ್ರೆ ಧೂಪಕ್ಕೆ ಸಪರೇಟ್ ಸಾಂಬ್ರಾಣಿ ಸಿಗುತ್ತೆ ಅದನ್ನ ಯೂಸ್ ಮಾಡ್ಕೊಳಿ ಮತ್ತೆ ಏನಂದ್ರೆ ಶ್ರೀಗಂಧ ಬಂದು ಎರಡು ರೀತಿ ಸಿಗುತ್ತೆ.
ನಿಮಗೆ ಈ ತರ ಪೇಸ್ಟ್ ಕೂಡ ಇರುತ್ತೆ ಇಲ್ಲ ಈ ಪೌಡರ್ ತರ ಕೂಡ ಸಿಗುತ್ತೆ ನಿಮಗೆ ಯಾವುದು ಕಂಫರ್ಟ್ ಅದನ್ನ ತಗೊಳ್ಳಿ ಇದಾದ್ರೆ ನಿಮಗೆ ನೀಟಾಗಿ ಬೇಗ ಹಚ್ಚಬಹುದು ಮತ್ತೆ ಯಾವಾಗ್ಲೂ ನೀರು ಕಲಸಿಕೊಂಡು ಡ್ರೈ ಆಗುತ್ತೆ .
ಅನ್ನೋದು ಇರಲ್ಲ ಸೊ ಇದನ್ನ ತಗೊಂಡು ಇಟ್ಕೊಳಿ ಆಮೇಲೆ ಇದು ನೋಡಿ ಈ ತರದ ಅಡಿಕೆಗಳನ್ನ ತಗೊಳ್ಳಿ ಇನ್ನೊಂದು ಓಪನ್ ಆಗಿರೋ ಹೊಡೆದಿರೋ ಅಡಿಕೆ ಬರುತ್ತಲ್ಲ ವಿಳೆಯದೆಲೆ ಹಾಕೊಳೋಕೆಲ್ಲ ಯೂಸ್ ಮಾಡ್ತಾರಲ್ಲ ಅದನ್ನ ಯೂಸ್ ಮಾಡ್ಬೇಡಿ ಈ ಅಡಿಕೆಗಳು ಬೇಕು.
ನಾವು ದೇವರಿಗೆ ಬಾಗಣ ಇಡೋದಕ್ಕೆ ಅದರ ಜೊತೆಗೆ ಅರಿಶಿಣದ ನೂಲು ಇದು ನಿಮಗೆ ವೈಟ್ ಕಲರ್ ಅಲ್ಲೂ ಸಿಗುತ್ತೆ ನೀವು ವೈಟ್ ಕಲರ್ ಅಲ್ಲಿ ತಗೊಂಡ್ರೆ ಅರಿಶಿಣನ ನೀರಲ್ಲಿ ಕಲಸಿಕೊಂಡು ಇದಕ್ಕೆ ಹಚ್ಕೊಂಡು ಬರಬೇಕು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ