ರಿಯಲ್ ಸ್ಟಾರ್ ಉಪೇಂದ್ರ ಅವರ ಆರೋಗ್ಯದಲ್ಲಿ ಏರುಪೇರು ಸಿನಿಮಾ ನಟರ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಆದರೂ ಜನರು ಹೆಚ್ಚಾಗಿ ಆತಂಕ ಪಡುತ್ತಾರೆ ಏಕೆಂದರೆ ನಿಮಗೆಲ್ಲ ತಿಳಿದಿರುವ ಹಾಗೆ ಪುನೀತ್ ರಾಜಕುಮಾರ್ ಅವರ ಆರೋಗ್ಯ ಸ್ಥಿತಿಯು ಮೊದಲಿಗೆ ಚೇತರಿಕೆ ಹಂತದಲ್ಲಿಯೇ ಇತ್ತು ಆದರೆ ಅಂದು ಬೆಳಿಗ್ಗೆ ಬರಿ ಅದು ಸಾಮಾನ್ಯ ಸುದ್ದಿಯಾಗಿ ಹರಿದು ಬಂದಿತ್ತು ಪುನೀತ್ ರಾಜಕುಮಾರ್ ಅವರ ಆರೋಗ್ಯಕ್ಕೆ ತೊಂದರೆಯಾಗಿದೆ ಆಸ್ಪತ್ರೆಯಲ್ಲಿ ದಾಖಲು ಎಂದು ಸುದ್ದಿ ಬರುತ್ತದೆ ಪುನೀತ್ ರಾಜಕುಮಾರ್ ಅವರಿಗೆ ಹೃದಯಗತವಾಗಿದೆ ಎಂದು ಮತ್ತೊಂದು ಸುದ್ದಿಯು ಬರುತ್ತದೆ ಅದಾದ ಕೆಲವೇ ಕ್ಷಣಗಳಲ್ಲಿ ಪುನೀತ್ ರಾಜಕುಮಾರ್ ಅವರು ಇನ್ನಿಲ್ಲ ಎಂಬ ಅತಿ ದುಃಖಕರವಾದ ಸುದ್ದಿ ಕರುನಾಡನ್ನೇ ಬೆರಗುಗೊಳಿಸಿಬಿಟ್ಟಿತ್ತು, ಚೆನ್ನಾಗಿದ್ದ ಒಬ್ಬ ನಟನಿಗೆ ಈ ರೀತಿ ಆದರೆ ಅದು ಪ್ರತಿಯೊಬ್ಬರಿಗೂ ಆತಂಕದ ವಿಷಯವಾಗಿ ಪ್ರತಿಯೊಬ್ಬರನ್ನು ಕುಗ್ಗುವಂತೆ ಮಾಡಿತು, ಇದೇ ತರಹ ಇನ್ನೊಂದು ಸುದ್ದಿ ಕರುನಾಡನ್ನು ಮತ್ತೆ ಬೆಚ್ಚುವಂತೆ ಮಾಡಿತ್ತು ಅದು ರಿಯಲ್ ಸ್ಟಾರ್ ಉಪೇಂದ್ರ ಅವರು ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲು ಎಂಬ ಸುದ್ದಿ.

ಉಪೇಂದ್ರ ಅವರು ತಾವೇ ನಿರ್ದೇಶನ ಮಾಡುತ್ತಿರುವ ಯುಐ ಎಂಬ ಚಿತ್ರದ ಚಿತ್ರೀಕರಣದ ವೇಳೆಯಲ್ಲಿ ನೈಜ್ಯವಾಗಿ ಚಿತ್ರೀಸಬೇಕು ಎಂದು ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಕೆಲವು ಸೆಟ್ಗಳನ್ನು ನಿರ್ಮಿಸಿದರು ಆಗ ಅಲ್ಲಿ ಅನೇಕ ಧೂಳು ಮತ್ತು ಹೊಗೆಯ ಕಾರಣ ಹಾಗೂ ಅಲ್ಲಿ ಸರಿಯಾದ ರೀತಿಯಲ್ಲಿ ಆಕ್ಸಿಜನ್ ಸಿಗುವುದಿಲ್ಲದ ಕಾರಣ ಉಪೇಂದ್ರ ಅವರಿಗೆ ಡೇಸ್ಟ್ ಅಲರ್ಜಿಯಾಗಿ ಸ್ವಲ್ಪ ಕೆಮ್ಮು ಶುರುವಾಯಿತು ಆಗ ಅಲ್ಲಿಯವರು ಸ್ವಲ್ಪ ಭಯಗೊಂಡು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ಸೇರಿಸುತ್ತಾರೆ. ಆಸ್ಪತ್ರೆಯಲ್ಲಿ ಅವರಿಗೆ ಪ್ರಾಥಮಿಕ ಚಿಕಿತ್ಸೆಯನ್ನು ಕೊಡುತ್ತಾರೆ ಅದಾದ ನಂತರ ಅಭಿಮಾನಿಗಳಿಗೆ ಹಾಗೂ ಅಲ್ಲಿಯವರಿಗೆ ಸಮಾಧಾನವಾಗುತ್ತದೆ ,ಅಂತಹ ಗಂಭೀರ ಸ್ಥಿತಿ ಏನು ಇಲ್ಲ ಅವರು ಆರೋಗ್ಯವಾಗಿದ್ದಾರೆ ಎಂದು
ಚಿಕಿತ್ಸೆಯ ನಂತರ ಉಪೇಂದ್ರ ಅವರು ಮರಳಿ ಚಿತ್ರೀಕರಣಕ್ಕೆ ಭಾಗವಹಿಸುತ್ತಾರೆ ಅದಾದ ನಂತರ ಮೊದಲಿನ ಹಾಗೆಯೇ ತುಂಬಾ ಉತ್ಸಹಕಾರಾಗಿ ತಮ್ಮ ಚಿತ್ರಿಕರಣವನ್ನು ಪ್ರಾರಂಭಿಸುತ್ತಾರೆ. ಆದರೆ ಅಭಿಮಾನಿಗಳಿಗೆ ಭಯವಂತೂ ಇದ್ದೇ ಇತ್ತು, ಆ ಸಮಯದಲ್ಲಿ ಏಕೆಂದರೆ ಸಾಮಾನ್ಯವಾಗಿ ಆ ರೀತಿ ಘಟನೆಗಳು ನಡೆದಾಗ ಅವರು ಸ್ವಲ್ಪ ಸುಧಾರಿಸಿ ನಂತರ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ ಸರಿ ಹೋಗುತ್ತಿತ್ತು.

WhatsApp Group Join Now
Telegram Group Join Now

ಆದರೆ ಅವರನ್ನು ಆಸ್ಪತ್ರೆಗೆ ದಾಖಲಿಸುವ ವರೆಗೂ ಹೋಗಿದೆ ಎಂದು ಅಭಿಮಾನಿಗಳು ತಿಳಿದಾಗ ಅವರಿಗೆ ತುಂಬಾ ಆತಂಕವಾಯಿತು, ಉಪೇಂದ್ರ ಅವರು ಚಿಕಿತ್ಸೆ ಮುಗಿದು ಬಂದ ನಂತರ ಅಭಿಮಾನಿಗಳಿಗೆ ಲೈವ್ ಮೂಲಕ ತಾನು ಚೆನ್ನಾಗಿದ್ದೇನೆ ಮತ್ತು ನನಗೆ ಅಂತ ಗಂಭೀರವಾದ ಅನಾರೋಗ್ಯ ಏನು ಆಗಿಲ್ಲ ಸಣ್ಣದಾದ ಡೇಸ್ಟ್ ಅಲರ್ಜಿ ಆಗಿತ್ತು ಅಷ್ಟೇ, ನಾನು ಈಗ ಆರೋಗ್ಯವಾಗಿದ್ದೇನೆ ಎಂದು ಅಲ್ಲಿರುವ ಪ್ರತಿಯೊಬ್ಬರ ಜೊತೆ ಲೈವಿನಲ್ಲಿ ಉಪೇಂದ್ರ ಅವರು ಅಭಿಮಾನಿಗಳಿಗೆ ಹೇಳುತ್ತಾರೆ. ಆಗ ಅವರ ಅಭಿಮಾನಿಗಳಿಗೆ ಸಮಾಧಾನವಾಗುತ್ತದೆ. ಸಾಮಾನ್ಯವಾಗಿ ಈ ಕೊರೋನಾ ಬಂದು ಹೋದ ನಂತರ ಅನೇಕರಿಗೆ ಉಸಿರಾಟದ ತೊಂದರೆ ಹೆಚ್ಚಾಗಿ ಕೇಳಿಬರುತ್ತಿದೆ ಅಂದರೆ ಪ್ರತಿಯೊಬ್ಬರ ಗಂಟಲು ತುಂಬಾ ಸೂಕ್ಷ್ಮವಾಗಿಬಿಟ್ಟಿದೆ ಅದರಿಂದ ಎದೆನೋವು ಕಾಣಿಸಿಕೊಳ್ಳುತ್ತದೆ ಹೀಗಾಗಿ ಪ್ರತಿಯೊಬ್ಬರಲ್ಲಿ ನಡುಕವನ್ನು ಹುಟ್ಟಿಸುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿರುವ ವಿಡಿಯೋವನ್ನು ವೀಕ್ಷಿಸಿ.