ಏನೆ ಮಾಡಿದ್ರು ಮದುವೆ ಫಿಕ್ಸ್ ಆಗ್ತಿಲ್ವಾ ಚಿಂತೆ ಬಿಡಿ..ಹೀಗೆ ಮಾಡಿ ಬೇಗ ಕಂಕಣ ಭಾಗ್ಯ ಕೂಡಿ ಬರುತ್ತದೆ..

WhatsApp Group Join Now
Telegram Group Join Now

ಏನೇ ಮಾಡಿದರೂ ಮದುವೆ ಫಿಕ್ಸ್ ಆಗ್ತಿಲ್ಲ ಚಿಂತೆ ಬಿಡಿ ಹೀಗೆ ಮಾಡಿ… ಮದುವೆ ತಡ ಆಗುತ್ತಿದೆ ಎನ್ನುವುದಾದರೆ ಅದಕ್ಕೆ ಒಂದು ರೆಮಿಡಿಯನ್ನ ನಾನು ಇವತ್ತು ನಿಮಗೆ ತಿಳಿಸುತ್ತೇನೆ ಮೊದಲನೇದಾಗಿ ಮದುವೆ ತಡವಾಗುವುದಕ್ಕೆ ಏನು ಕಾರಣಗಳು ಬರುತ್ತವೆ ಎಂದರೆ ಸಪ್ತಮಾಧಿಪತಿ ಏನಾದರೂ ತೊಂದರೆಗೊಳಗಾದಾಗ ಸಪ್ತಮಕ್ಕೆ ಏನಾದರೂ ತೊಂದರೆಗಳು ಇದ್ದಾಗ.

ಅಥವಾ ಅಷ್ಟಕ ವರ್ಗದ ಸಪ್ತಮ ಸ್ಥಾನಕ್ಕೆ ಕಡಿಮೆ ಪಾಯಿಂಟ್ಸ್ ಇದ್ದಾಗ ಪಂಚಮ ಸ್ಥಾನ ಕೂಡ ಸಪ್ತಮಕ್ಕೆ ಸೇರಿಕೊಂಡಿರುವಂತಹ ಮನೆ ಏಕೆಂದರೆ ಸಂತಾನ ವಿವಾಹ ಎರಡು ನಮ್ಮ ದೇಶದಲ್ಲಿ ಒಟ್ಟೊಟ್ಟಿಗೆ ಸಾಗುವಂತದ್ದು ಬೇರೆ ದೇಶದಲ್ಲಿ ಸಂತಾನ ಮೊದಲು ಆಗಬಹುದು ಆದರೆ ಇಲ್ಲಿ ಸಂತಾನ ಮದುವೆ ಎರಡು ಕೂಡ ಒಟ್ಟಿಗೆ ಸಾಗುವಂತದ್ದು.

ಹಾಗಾಗಿ ನಾವು ಪಂಚವಸ್ಥಾನವನ್ನು ಕೂಡ ನೋಡಬೇಕಾಗುತ್ತದೆ ಇನ್ನು ಕುಟುಂಬ ಸ್ಥಾನವಾಗಿರುವಂತಹ ಎರಡನೇ ಮನೆ ಈ ರೀತಿ ಎಲ್ಲ ಮನೆಯನ್ನು ನಾವು ನೋಡುತ್ತಾ ಹೋಗಬೇಕಾಗುತ್ತದೆ ಆದರೆ ನಾನು ಇವತ್ತು ಗ್ರಹಗಳ ಸ್ಥಾನ ಯಾಕೆ ಮದುವೆ ನಿಧಾನವಾಗುತ್ತದೆ ಎನ್ನುವುದರ ಬಗ್ಗೆ ಮಾತನಾಡುತ್ತಿಲ್ಲ.

ಮದುವೆಗೆ ಸಂಬಂಧಿಸಿದಂತೆ ಒಂದು ಸಿಂಪಲ್ ಆದಂತಹ ನೀವೇ ಮಾಡಿಕೊಳ್ಳಬಹುದಾದಂತಹ ಒಂದು ಟ್ರಿಕ್ಕನ್ನು ಕೊಡುತ್ತಾ ಇದ್ದೇನೆ ಇದನ್ನು ನೀವು ಪ್ರಯತ್ನಿಸಿ ನೋಡಿ ತುಂಬಾನೇ ಸುಲಭವಾಗಿರುವಂತಹ ಟ್ರಿಕ್ ಎಲ್ಲಿಂದ ಬಂತು ಎನ್ನುವ ವಿಷಯ ನನಗೂ ಕೂಡ ಗೊತ್ತಿಲ್ಲ ನನ್ನ ಗುರುಗಳು ನನಗೆ ಹೇಳಿದ್ದರು ಅದನ್ನು ನಾನು ಎಲ್ಲರಿಗೂ ಉಪಯೋಗವಾಗಲಿ ಎಂದು.

ನಾನು ಕೂಡ ಅದನ್ನ ಎಲ್ಲರ ಹತ್ತಿರ ಹಂಚಿಕೊಳ್ಳೋಣ ಅಂತ ಅಂದುಕೊಂಡೆ ಹಾಗಾಗಿ ನಮ್ಮ ವೈದಿಕ ಪರಂಪರೆಯಲ್ಲಿ ಎಂದು ಬಾ ಅಂದಾಗ ಬೇಕಾದಷ್ಟು ರೆಮಿಡಿಗಳನ್ನು ನಾವು ನೋಡುತ್ತೇವೆ ಸ್ವಯಂವರ ಪಾರ್ವತಿ ಹೋಮ ಜಪವನ್ನ ಮಾಡಿಸಬಹುದು ಹಾಗೆ ಗಣೇಶ ಶಾಂತಿ ಕಾತ್ಯಾಯಿನಿ ವ್ರತ ಮತ್ತು ಶಕ್ತಿ ಗಣಪತಿ ಹೋಮ.

ಈ ರೀತಿಯಾಗಿ ಬೇಕಾದಷ್ಟು ವಿಚಾರಗಳನ್ನು ನೋಡುತ್ತೇವೆ ಇಷ್ಟೇ ಅಲ್ಲ ಯಂತ್ರ ಮಂತ್ರ ಗಳಿಂದ ಕೂಡ ಒಂದಷ್ಟು ಸಹಾಯವಾಗುತ್ತದೆ ಸ್ವಯಂವರ ಪಾರ್ವತಿ ಯಂತ್ರ ಸಿಗುತ್ತದೆ ಅದನ್ನು ಇಟ್ಟು ನಾವು ಪೂಜೆ ಮಾಡಬಹುದ ಅಥವಾ ಲಗ್ನ ಯಂತ್ರ ಸಿಗುತ್ತದೆ ಅದನ್ನು ಇಟ್ಟುಕೊಡ ಪೂಜೆ ಮಾಡಬಹುದು ಹೀಗೆ ಬೇಕಾದಷ್ಟು ವಿಧಾನಗಳು ನಮ್ಮ ವೈದಿಕ ಪರಂಪರೆಯಲ್ಲಿ ಇದೆ.

ಆದರೆ ಇದನ್ನೆಲ್ಲ ಬಿಟ್ಟು ತುಂಬಾ ಸುಲಭವಾದಂತಹ ಪರಿಹಾರ ಸಾಮಾನ್ಯ ಮನುಷ್ಯನು ಕೂಡ ಮಾಡಿಕೊಳ್ಳಬಹುದಾಗಿರುವಂತಹ ಒಂದು ಪರಿಹಾರವನ್ನು ಹೇಳುವುದಕ್ಕೆ ಎಂದು ಬಂದಿದ್ದೇನೆ ಇದು ಹೇಗೆ ಎಂದರೆ ನೀವು ಯಾರು ಇಲ್ಲದೆ ಇರುವಂತ ಸ್ಥಳ ಪಾರ್ಕ್ ಎಂದು ಹೇಳಬಹುದ ಅಥವಾ ಊರಿಂದ ಹೊರಗಡೆ ನೀವು ಇದ್ದರೆ.

ಹಳ್ಳಿಗಳಲ್ಲಿ ಕಾಡು ಎಂದು ಮಾಡಿರುತ್ತಾರೆ ಎಲ್ಲಾ ಊರುಗಳಲ್ಲಿಯೂ ಕೂಡ ಅದು ಇರುತ್ತದೆ ಅಂತಹ ಕಡೆಗೆ ಹೋಗಿ ಯಾರು ಇಲ್ಲದೆ ಇರುವಂತಹ ಸ್ಥಳದಲ್ಲಿ ನಿಂತುಕೊಂಡು ಒಂದು ಅದೋಮುಖ ತ್ರಿಕೋನವನ್ನು ರಚಿಸಬೇಕು ಎರಡು ಟ್ರಯಾಂಗಲ್ಸ್ ಅನ್ನ ಬರಿಬೇಕು ಅದೋ ಮುಖ ತ್ರಿಕೋನ ಉಲ್ಟಾ ಇರುವಂತಹ ತ್ರಿಕೋನ.

ಬರೆದು ಅದರ ಒಳಗಡೆ ನಿಮ್ಮ ಹೆಸರನ್ನ ಬರೆಯಬೇಕು ಯಾರು ಮದುವೆಯಾಗಬೇಕು ಎಂದು ಇರುತ್ತಾರೆ ಅವರ ಹೆಸರನ್ನು ಬರೆದುಕೊಳ್ಳಬೇಕು ಅದು ಕೂಡ ನೆಲದ ಮೇಲೆ ಅದನ್ನು ಬರೆದು ಅದಕ್ಕೆ ಒಳಗಡೆ ನಿಮ್ಮ ಹೆಸರನ್ನು ಬರೆಯಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god