ಒಂದು ಜಾಹೀರಾತು ಬರಲ್ಲ ಆದರೂ ಇದರ ಸಂಪಾದನೆ ಕೇಳಿದರೆ ನಿಮ್ಮ ತಲೆ ತಿರುಗುತ್ತೆ… ಮೊದಲು ಈ ಡೇಟಾವನ್ನು ನೋಡಿ 2023 ರಲ್ಲಿ ಗೂಗಲ್ ಮ್ಯಾಪ್ ಒಟ್ಟಾರೆಯಾಗಿ ಸುಮಾರು ಹನ್ನೊಂದು ಸಾವಿರ ಬಿಲಿಯನ್ ಆದಾಯವನ್ನು ಗಳಿಸಿದೆ ಹಾಗೂ ಗೂಗಲ್ನ ಕೇವಲ ಇದೊಂದೇ ಫ್ಲಾಟ್ ಫಾರ್ಮ್ ಸುಮಾರು 62 ಬಿಲಿಯನ್ ಡಾಲರ್ ನಷ್ಟು ವ್ಯಾಲ್ಯೂಯೇಷನ್ ಅನ್ನು ಹೊಂದಿದೆ.
ಇದರಿಂದಾಗಿಯೇ ಗೂಗಲ್ ಮ್ಯಾಪ್ ವಿಶ್ವದ ಟಾಪ್ 300 ಕಂಪನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ ತಮಾಷೆಯ ವಿಷಯವೇನು ಎಂದರೆ ಗೂಗಲ್ ಈ ಮ್ಯಾಪಿಂಗ್ ಫ್ಲಾಟ್ ಫಾರಂ ಅನ್ನ ಖರೀದಿಸಲು ಖರ್ಚು ಮಾಡಿದ ಹಣವನ್ನ ಕೇವಲ ಒಂದೇ ತಿಂಗಳಿನಲ್ಲಿ ಸಂಪಾದಿಸುತ್ತಾ ಇದೆ.
ಅಂದರೆ ಎಲ್ಲರೂ ಕೂಡ ಉಚಿತವಾಗಿ ಬಳಸಬಹುದಾದ ಗೂಗಲ್ ಮ್ಯಾಪ್ ಇಷ್ಟೊಂದು ಹಣವನ್ನ ಸಂಪಾದನೆ ಮಾಡುತ್ತಿರುವುದಾದರೂ ಹೇಗೆ ಮೊಬೈಲ್ ಬಳಕೆದಾರರ ಡೇಟಾಗಳನ್ನೇ ಅಸ್ತ್ರವಾಗಿ ಮಾಡಿಕೊಳ್ಳುತ್ತಾ ಇದೆಯಾ ಗೂಗಲ್ ಏನಿದು ಗೂಗಲ್ ಮ್ಯಾಪ್ ನ ಆದಾಯದ ಹಿಂದಿನ ರಹಸ್ಯ ಈ ಎಲ್ಲವನ್ನ ಸಂಪೂರ್ಣವಾಗಿ ತಿಳಿಯುತ್ತಾ ಹೋಗೋಣ.
2003 ರಲ್ಲಿ ಲಾರ್ಸ್ ಮತ್ತು ಜೆನ್ಸ್ ಎಂಬ ಇಬ್ಬರು ಸಹೋದರರು ಆಸ್ಟ್ರೇಲಿಯಾದ ಸಿಗ್ನಿಯಲ್ಲಿ ವೇರ್ ಟು ಟೆಕ್ನಾಲಜಿ ಎಂಬ ಕಂಪನಿಯನ್ನ ಆರಂಭಿಸಿದರು ಡೆಸ್ಕ್ ಟಾಪ್ ನಲ್ಲಿ ಮ್ಯಾಪಿಂಗ್ ಸಿಸ್ಟಮ್ ನ ಅಳವಡಿಸುವುದು ಅವರ ಪ್ಲಾನ್ ಆಗಿದ್ದು ಆದರೆ ಅದನ್ನ ಡೆವಲಪ್ ಮಾಡುವುದು ಸುಲಭದ ವಿಷಯವಾಗಿರಲಿಲ್ಲ ಹಾಗೂ ಅದರ ಬಳಕೆಯೂ ಕೂಡ ಕಷ್ಟವಾಗಲಿದೆ ಎನ್ನುವುದು ಅವರಿಗೆ ಅರಿವಿಗೆ ಬರುತ್ತದೆ.
ಅದಕ್ಕಾಗಿಯೇ ಅವರು ಒಂದು ವೆಬ್ಸೈಟ್ ಬೇಸಿಕ್ ಪ್ಲಾಟ್ಫಾರ್ಮ್ ಅನ್ನ ತಯಾರಿಸಬೇಕು ಎಂದು ನಿರ್ಧರಿಸುತ್ತಾರೆ ಆದರೆ ಅದಕ್ಕೆ ಬೇಕಾದ ಹಣ ಹಾಗೂ ಇತರೆ ಸಲಕರಣೆಗಳನ್ನ ಒಂದುಗೂಡಿಸುವುದು ಅವರಿಂದ ಸಾಧ್ಯವಿರಲಿಲ್ಲ ಅದಕ್ಕಾಗಿಯೇ ಅಕ್ಟೋಬರ್ 2004ರಲ್ಲಿ ವೇರ್ ಟು ಟೆಕ್ನಾಲಜಿ ಕಂಪನಿಯನ್ನು ಕೇವಲ 50 ಮಿಲಿಯನ್ ಡಾಲರ್ ಗೆ ಗೂಗಲ್ ಗೆ ಮಾರಾಟ ಮಾಡುತ್ತಾರೆ.
ಅದೇ ವರ್ಷ ಗೂಗಲ್ ಮ್ಯಾಪ್ ಡೆವಲಪ್ಮೆಂಟ್ಗೆ ಸೇರಿದ ಕೀ ಹೋಲ್ ಮತ್ತು ಜಿಪ್ ಡ್ಯಾಶ್ ಎಂಬ ಎರಡು ಕಂಪನಿಗಳನ್ನು ಕೂಡ ಖರೀದಿಸುತ್ತದೆ ಹೀಗೆ ಒಟ್ಟು ಮೂರು ಸಣ್ಣ ಸಣ್ಣ ಕಂಪನಿಗಳು ಗೂಗಲ್ ನಾ ಕೈವಶವಾಗಿತ್ತು ಇದರಲ್ಲಿ ವೇರ್ ಟು ಟೆಕ್ನಾಲಜಿ ಹಳ್ಳಿಯ ಮ್ಯಾಪ್ ಗಳ ಮಾಹಿತಿ ಒಂದಿದ್ದರೆ.
ಕೀ ಹೋಲ್ ಕಂಪನಿ ನಗರಗಳ ವ್ಯಾಪ್ತಿಯ ಮ್ಯಾಪ್ ನ ಬಗ್ಗೆ ಮಾಹಿತಿಯನ್ನು ಹೊಂದಿತು ಇನ್ನು ಮತ್ತೊಂದು ಕಂಪನಿಯಾದ ಜಿಪ್ ಡ್ಯಾಶ್ ಗೂಗಲ್ ನ ಪಾಲಿನ ಬೆಸ್ಟ್ ಡೀಲ್ ಗಳಲ್ಲಿ ಒಂದಾಗಿತ್ತು ಏಕೆಂದರೆ ಇದು ಮೊಬೈಲ್ ಬಳಕೆದಾರರ ಲೈವ್ ಲೊಕೇಶನ್ ಅನ್ನು ಟ್ರ್ಯಾಕ್ ಮಾಡಿ ಅಲ್ಲಿನ ಟ್ರಾಫಿಕ್ ಸ್ಟೇಟಸ್ಅನ್ನ ತಿಳಿಸುತ್ತಾ ಇತ್ತು.
ಅಲ್ಲದೆ ಗೂಗಲ್ ಇದನ್ನ ಕೇವಲ ಎರಡು ಮಿಲಿಯನ್ ಡಾಲರ್ ಗೆ ತನ್ನದಾಗಿಸಿಕೊಂಡಿತು ಇದುವೇ ಗೂಗಲ್ನ ಪಾಲಿಗೆ ಗೇಮ್ ಚೇಂಜ್ ಆಗಿ ಹೊರಹೊಮ್ಮುತ್ತದೆ ಹೀಗೆ ಒಂದರ ಹಿಂದೆ ಒಂದರಂತೆ ಮ್ಯಾಪ್ ಡೆವಲಪ್ಮೆಂಟ್ ಗೆ ಸಂಬಂಧಿಸಿದ ಕಂಪನಿಗಳನ್ನು ಖರೀದಿ ಮಾಡಿದ ಗೂಗಲ್ ಗೆ ಈ ಕ್ಷೇತ್ರದಲ್ಲಿ ಪ್ರಾಬಲ್ಯ ಮೆರೆಯುವುದು ಸವಾಲಿನ ಕೆಲಸವಾಗಿತ್ತು.
ಏಕೆಂದರೆ ಆ ಸಮಯದಲ್ಲಿ ನೇವಿಗೇಷನ್ ಕ್ಷೇತ್ರದಲ್ಲಿ ಯಾಹೂ ಮಪ್ಸ್ ಮತ್ತು ಮಾಪಕ್ವೆಸ್ಟ್ ನಂತರ ಕಂಪನಿಗಳು ಭದ್ರವಾಗಿ ನೆಲೆ ಹೂರಿದವು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.