ಕರೆಂಟ್ ಫ್ರೀ ಅನ್ಕೊಂಡ್ರಾ……! ಕಂಡಿಷನ್ಸ್ ನೋಡಿ…….!?

WhatsApp Group Join Now
Telegram Group Join Now

ಈ ಬಾರಿ ನಡೆದಂತಹ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಜಯವನ್ನು ಪಡೆದುಕೊಂಡಿದೆ. ಒಟ್ಟಾರೆಯಾಗಿ 135 ಕ್ಷೇತ್ರಗಳಲ್ಲಿ ಗೆಲುವನ್ನು ಸಾಧಿಸಿದೆ. ಈ ಒಂದು ಗೆಲುವಿಗೆ ಪ್ರಮುಖವಾದಂತಹ ಕಾರಣಗಳು ಏನು ಎಂದು ಹೇಳಲು ಸಾಧ್ಯವಿಲ್ಲ ಅದಕ್ಕೆ ಹಲವಾರು ರೀತಿಯ ಕಾರಣಗಳು ಇದೆ. ಅದರಲ್ಲೂ ಐದು ಗ್ಯಾರೆಂಟಿಯನ್ನು ಕಾಂಗ್ರೆಸ್ ಘೋಷಣೆ ಮಾಡಿತ್ತು.

ಈ 5 ಪ್ರಮುಖ ಕಾರಣಗಳೇ ಈ ದಿನ ಬಹುಮತವನ್ನು ಪಡೆದು ಕಾಂಗ್ರೆಸ್ ಸರ್ಕಾರ ಗೆಲ್ಲುವುದಕ್ಕೆ ಬಹಳ ಪ್ರಮುಖವಾದಂತಹ ಕಾರಣ ಎಂದೇ ಹೇಳಬಹುದು. ಹೌದು ಜನರು ಇವರು ಕೊಟ್ಟಂತಹ ಐದು ಭರವಸೆಯನ್ನು ಕಡ್ಡಾಯವಾಗಿ ಮಾಡುತ್ತಾರೆ ಎನ್ನುವಂತಹ ಆಸೆಯಿಂದ ಎಲ್ಲಾ ಕಡೆಯಲ್ಲಿಯೂ ಕಾಂಗ್ರೆಸ್ ಗೆಲ್ಲುವುದಕ್ಕೆ ಬಹಳ ಪ್ರಮುಖವಾದ ಕಾರಣವಾಗಿದೆ. ಅದೇ ರೀತಿಯಾಗಿ ಜನರು ಆ ಒಂದು ಭರವಸೆಯನ್ನು ಇಟ್ಟುಕೊಂಡು ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಮತವನ್ನು ನೀಡಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ದಾರೆ.

ಹಾಗಾದರೆ ಅವರು ಕೊಟ್ಟಂತಹ ಐದು ಭರವಸೆಗಳು ಏನು ಹಾಗಾದರೆ ಅದರ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವೊಂದು ಮಾಹಿತಿಗಳನ್ನು ಈ ಕೆಳಗೆ ತಿಳಿದುಕೊಳ್ಳುತ್ತಾ ಹೋಗೋಣ. ಮೊದಲನೆಯ ಭರವಸೆ ಮಹಿಳೆಯರ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಮನೆಯಲ್ಲಿರುವಂತಹ ಹಿರಿಯ ಮಹಿಳಾ ಸದಸ್ಯೆಗೆ ಪ್ರತಿ ತಿಂಗಳು 2000 ಕೊಡುವ ಹಾಗೆ ಕಾಂಗ್ರೆಸ್ ಸರ್ಕಾರ ಘೋಷಣೆಯನ್ನು ಮಾಡಿತ್ತು.

ಇನ್ನು ಎರಡನೆಯ ಘೋಷಣೆ ನಾವು ಮೊದಲು ಪಕ್ಷದಲ್ಲಿ ಇದ್ದಾಗ ಪ್ರತಿಯೊಬ್ಬರಿಗೂ ಕೂಡ 10 ಕೆಜಿ ಅಕ್ಕಿಯನ್ನು ನೀಡುತ್ತಿದೆವು ಆನಂತರ ಬಿಜೆಪಿ ಸರ್ಕಾರ ಬಂದು ಅದನ್ನು 5 ಕೆಜಿ ಹಾಗೆಯೇ 4 ಕೆಜಿಗೆ ತಂದು ನಿಲ್ಲಿಸಿತ್ತು ಆದರೆ ನಾವು ಮತ್ತೆ ಪಕ್ಷಕ್ಕೆ ಬಂದರೆ ಕಡ್ಡಾಯವಾಗಿ ಪ್ರತಿಯೊಬ್ಬರಿಗೂ ಕೂಡ 10 ಕೆಜಿ ಅಕ್ಕಿಯನ್ನು ಕೊಡುತ್ತೇವೆ ಎಂಬ ಘೋಷಣೆಯನ್ನು ಸಹ ಮಾಡಿತ್ತು.

ಅದೇ ರೀತಿಯಾಗಿ ಪದವೀಧರರಿಗೆ ಪ್ರತಿ ತಿಂಗಳು 1000 ರೂಪಾಯಿ ಕೊಡುವುದಾಗಿಯೂ ಸಹ ಹೇಳಿತ್ತು. ಇನ್ನು ನಾಲ್ಕನೆಯದಾಗಿ ಮಹಿಳೆಗೆ ಉಚಿತ ಬಸ್ ಪ್ರಯಾಣ ಎಂದು ಸಹ ಹೇಳಿತ್ತು. ಇನ್ನು ಕೊನೆಯದಾಗಿ 200 ಯೂನಿಟ್ ವಿದ್ಯುತ್ ಅನ್ನು ನಾವು ಉಚಿತವಾಗಿ ಕೊಡುತ್ತೇವೆ ಎನ್ನುವಂತಹ ಘೋಷಣೆಯನ್ನು ಸಹ ಹೊರಡಿಸಿತು. ಆದರೆ ಈ ಒಂದು ವಿಚಾರವಾಗಿ ಈಗ ಹಲವಾರು ರೀತಿಯ ಗೊಂದಲಗಳು ಮೂಡುತಿದೆ.

ಹೌದು, 200 ಯೂನಿಟ್ ಉಚಿತವಾಗಿ ಕೊಡಬೇಕು ಎಂದರೆ ಕೆಲವೊಂದಷ್ಟು ರೂಲ್ಸ್ ಗಳನ್ನು ಸಹ ಹಾಕಿದ್ದಾರೆ ಅದನ್ನು ಕೇಳಿದರೆ ಪ್ರತಿಯೊಬ್ಬರೂ ಸಹ ಆಶ್ಚರ್ಯಗೊಳ್ಳುವುದರಲ್ಲಿ ತಪ್ಪಿಲ್ಲ ಅದು ಏನೆಂದರೆ 200 ಯೂನಿಟ್ ಮೇಲೆ ಇದ್ದರೆ ಆ ಹಣವನ್ನು ಸಂಪೂರ್ಣ ವಾಗಿ ನೀವು ಕಟ್ಟಲೇಬೇಕು ಅದರ ಒಳಗಿದ್ದರೆ ಮಾತ್ರ ಆ ಹಣವನ್ನು ನಾವು ಸರ್ಕಾರದ ವತಿಯಿಂದ ಕಟ್ಟುತ್ತೇವೆ ಎಂದು ಹೊರಡಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By god