ಕೇವಲ 22 ವರ್ಷಕ್ಕೆ ಐಎಎಸ್ ಅಧಿಕಾರಿ! ಹೇಗಿತ್ತು ಗೊತ್ತಾ ಇವರ ಓದುವ ಟ್ರಿಕ್ಸ್……ಈ ಐಎಎಸ್ ಪರೀಕ್ಷೆ ಎಂದರೆ ತುಂಬಾ ಕಷ್ಟಕರವಾದ ಪರೀಕ್ಷೆ ಆದರೆ ಈ ಮಹಿಳೆ ಐಐಟಿ ಇಂದ ಇಂಜಿನಿಯರಿಂಗ್ ಪಾಸಾದ ವರ್ಷವೇ ಆ ಒಂದು ಪರೀಕ್ಷೆಯಲ್ಲಿ ಕೂಡ ಯಶಸ್ವಿಯಾದರು ಆಗ ಕೇವಲ ಅವರ ವಯಸ್ಸು 22 ವರ್ಷ ಅಷ್ಟೇ ಐಎಎಸ್ ತರಬೇತಿಯ ಆರಂಭದಲ್ಲಿ ಅವರು.

WhatsApp Group Join Now
Telegram Group Join Now

ಉತ್ತಮ ಟ್ರೈನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು. ಸಿಮಿಕರನ್ ಅವರು ಅವರ 12ನೇ ತರಗತಿ ಮುಗಿದ ನಂತರ, ಇಂಜಿನಿಯರಿಂಗ್ ಮಾಡಲು ಐಟಿ ಬಾಂಬೆಯಲ್ಲಿ ಪ್ರವೇಶ ಪಡೆದರು ಆಗಲೇ ಅವರು ಐಎಎಸ್ ಆಗುವ ಇಚ್ಛೆ ಹೊಂದಿದ್ದರಿಂದ ಯು ಪಿ ಎಸ್ಸಿ ಪರೀಕ್ಷೆಯನ್ನು ನೀಡಲು ನಿರ್ಧರಿಸಿದ್ದರು.

ಬಾಂಬೆಯಲ್ಲಿ ಅವರು ಓದುತ್ತಿರುವಾಗ ಕೊಳೆಕರಂಡಿಗಳಲ್ಲಿ ವಾಸಿಸುವ ಮಕ್ಕಳಿಗೆ ಶಿಕ್ಷಣವನ್ನು ಕೊಡುವ ಅವಕಾಶ ಸಿಕ್ಕಿತು ಅಲ್ಲಿಂದ ಅವರಿಗೆ ಜನರ ಸೇವೆ ಮಾಡಬೇಕು ಎಂದು ಮನಸ್ಥಿತಿ ಬರುತ್ತದೆ ಅವರು ನಿಸ್ವಾರ್ಥವಾಗಿ ಜನರಿಗೆ ಸೇವೆ ಮಾಡಲು ನಿರ್ಧರಿಸಿದ್ದರು ಅದಾಗಲೇ ಯುಪಿಎಸ್ಸಿ ಪರೀಕ್ಷೆಯನ್ನು ಪೂರ್ಣಗೊಳಿಸಿ ನಾಗರಿಕ ಸೇವೆಗೆ ಸೇರಲು ನಿರ್ಧರಿಸಿದ್ದರು.

ಐಎಎಸ್ ವಿದ್ಯಾರ್ಥಿಗಳ ಸಂದರ್ಶವನ್ನು ನೋಡುವ ಮೂಲಕ ಸಿಮಿಕರನ್ ಅವರು ಅವರ ಗುರಿಯತ್ತ ಪ್ರಯಾಣ ಬೆಳೆಸುತ್ತಾರೆ ಇದರಿಂದ ಅವರಿಗೆ ಸರ್ಕಾರಿ ಕೆಲಸದ ಪರೀಕ್ಷೆಗಳಿಗೆ ತುಂಬಾ ಸುಲಭವಾಗುತ್ತದೆ ,ಅವರು ಯು ಪಿ ಎಸ್ ಸಿ ಪರೀಕ್ಷೆಗಳನ್ನು ಸಣ್ಣ ಸಣ್ಣ ಭಾಗವಾಗಿ ಗುರುತಿಸಿದ್ದಾರೆ ಎಂದು ಅವರು ಹೇಳುತ್ತಾರೆ, 2019 ರಲ್ಲಿ ಅವರು.

ಅಖಿಲ ಭಾರತದ ಮಟ್ಟದಲ್ಲಿ 31ನೇ ರಾಂಕ್ ಅನ್ನು ಪಡೆಯುತ್ತಾರೆ ಇದರೊಂದಿಗೆ ಕೇವಲ 22 ವಯಸ್ಸಿನಲ್ಲಿಯೇ ಅವರು ಐಎಎಸ್ ಅಧಿಕಾರಿಯಾಗಿ ಹೊರಹೊಮ್ಮಿದರು. ಸಿಮಿಕರನ್ ಅವರಿಗೆ ಕ್ರೀಡೆ ಮತ್ತು ನೃತ್ಯದಲ್ಲಿ ಅವರಿಗೆ ಹೆಚ್ಚು ಆಸಕ್ತಿ ಹೊಂದಿದ್ದರು ಇದರಿಂದ ಅವರನ್ನು ದೆಹಲಿಯಲ್ಲಿ ಸಹಾಯಕ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.

ಬಿಲೈಸ್ ಟಿ ಕಂಪನಿಯಲ್ಲಿ ಅವರ ತಂದೆ ಕೆಲಸ ಮಾಡುತ್ತಿದ್ದರು ಹಾಗೂ ಅವರ ತಾಯಿ ಶಾಲೆಯ ಶಿಕ್ಷಕಿಯಾಗಿ ಇದ್ದರು ಒಡಿಸ್ಸಾದ ಸಿಮಿಕರನ್ ಅವರು ಚಿಕ್ಕವಯಸ್ಸಿನಿಂದಲೇ ಓದುವಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು ಹಾಗೆಯೇ ಅವರ ಶೈಕ್ಷಣಿಕ ಹಾಗೂ ಪ್ರಾಥಮಿಕ ಹಾಗೆ ಮುಂದೆ ಕಾಲೇಜುಗಳಲ್ಲಿ ಅವರ ಅಭ್ಯಾಸ ತೀವ್ರವಾಗಿ ಹೆಚ್ಚಾಗುತ್ತದೆ.

ಹಾಗಾಗಿಯೇ ಕೇವಲ 22 ವರ್ಷದಲ್ಲಿಯೇ ಅವರು ತುಂಬಾ ಕಷ್ಟಕರವಾದ ಪರೀಕ್ಷೆಯನ್ನು ಉತ್ತೀರ್ಣಗೊಳಿಸಿ, ಐಎಎಸ್ ಅಧಿಕಾರಿಯಾಗಿ ನಮ್ಮೆಲ್ಲರಿಗೂ ಪರಿಚಯ ಆದರೂ ಇವರು ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ಇವರು ಸ್ಫೂರ್ತಿ, ಈ ರೀತಿ ಪ್ರತಿಯೊಬ್ಬರು ಏನಾದರೂ ಸಾಧಿಸಲೇಬೇಕು ಎಂದು ಪ್ರಯತ್ನಪಟ್ಟು ಓದಿದರೆ ಅವರ ಜೀವನ ಉತ್ತಮವಾಗಿರುತ್ತದೆ.

ಹಾಗೂ ಅವರು ಮುಂದೊಂದು ದಿನ ಯಾರೊಬ್ಬರ ಕೈಯನ್ನು ನಂಬಿ ಇರಬೇಕಾದಂತ ಪರಿಸ್ಥಿತಿ ಬರುವುದಿಲ್ಲ ವಿದ್ಯೆ ಎಷ್ಟು ಮುಖ್ಯ ಹೆಣ್ಣು ಮಕ್ಕಳಿಗೆ ಎಂದು ಅವರು ತಿಳಿದಿದ್ದ ಕಾರಣ ಈ ರೀತಿ ಒಂದು ದೊಡ್ಡ ಸ್ಥಾನದಲ್ಲಿ ಈಗ ಅವರು ಕುಳಿತಿರುವುದೇ ಸಾಕ್ಷಿ.

ಇದೀಗ ಅವರ ಕ್ಷೇತ್ರಗಳಲ್ಲಿ ಅವರು ಅನೇಕ ಒಳ್ಳೆಯ ಕೆಲಸವನ್ನು ಮಾಡುತ್ತ ಹಾಗು ಜನರ ಪರವಾಗಿ ಅನೇಕ ನಿಯಮಗಳನ್ನು ತಂದು ಅಲ್ಲಿನವರಿಗೆ ಉತ್ತಮ ಅಧಿಕಾರಿಯಾಗಿ ಹೆಸರು ಮಾಡಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ